Breaking News

ದಟ್ಟ ಕಾನನನದ ನಡುವೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಫ್ಯಾಂಟನ್ ನಿರ್ಮಾಣ

ಬೆಂಗಳೂರು: ದಟ್ಟ ಕಾನನನದ ನಡುವೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಫ್ಯಾಂಟನ್ ನಿರ್ಮಾಣವಾಗುತ್ತಿದೆ. ಈ ದಟ್ಟ ಕಾನನಕ್ಕಾಗಿ ಫ್ಯಾಂಟಮ್ ಅಖಾಡದಲ್ಲಿ ರಾಜಮಂಡ್ರಿಯಿಂದ ಗಿಡ-ಮರಗಳನ್ನು ತುಂಬಿಕೊಂಡ 22 ಲಾರಿಗಳು ಆಗಮಿಸಿವೆ. ಫ್ಯಾಂಟಮ್ ನಿರ್ಮಾಪಕರು ಸುಮಾರು 30 ರಿಂದ 40 ಲಕ್ಷ ಬಂಡವಾಳ ಹಾಕಿ ಈ ಗಿಡಮರಗಳನ್ನು ಖರೀದಿಸಿದ್ದಾರಂತೆ. ಲಾಕ್‍ಡೌನ್ ಮುನ್ನ ಈ ಗಿಡಗಳನ್ನು ತರಿಸಲಾಗಿತ್ತು. ಶೇಕಡ 70ರಷ್ಟು ಸೆಟ್ ವರ್ಕ್ ಕೂಡ ನಡೆದಿತ್ತು. ಈ ನಡುವೆ ಲಾಕ್‍ಡೌನ್ ಆಗಿದ್ರಿಂದ ಶೂಟಿಂಗ್ ಕ್ಯಾನ್ಸಲ್ …

Read More »

ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೊನಾ ದಿನೇ ದಿನೇ ಸ್ಫೋಟ,ಶನಿವಾರ ಬರೋಬ್ಬರಿ 596 ಪ್ರಕರಣ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೊನಾ ದಿನೇ ದಿನೇ ಸ್ಫೋಟವಾಗಿದೆ. ಇಷ್ಟು ದಿನ 100 ರಿಂದ 150 ಹೊಸ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಶನಿವಾರ ಬರೋಬ್ಬರಿ 596 ಪ್ರಕರಣ ದಾಖಲಾಗಿವೆ. ಈ ಮೂಲಕ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 2,592ಕ್ಕೆ ಏರಿಕೆ ಆಗಿದೆ. ಜೂನ್ 6 ರವರೆಗೂ ನಿಯಂತ್ರಣದಲ್ಲಿದ್ದ ಕೊರೊನಾ ಜೂನ್ 6 ನಂತರ ಬೆಂಗಳೂರಿನಲ್ಲಿ ಸ್ಫೋಟವಾಗುತ್ತಿದೆ. ವಯಸ್ಸಾದವರಲ್ಲಿ, ಉಸಿರಾಟದ ಸಮಸ್ಯೆ ಇದ್ದವರಲ್ಲಿ, ನಾನಾ ಕಾಯಿಲೆಗಳಿಂದ ಬಳಲುತ್ತಾ ಇದ್ದವರಲ್ಲಿ ಸೋಂಕು ಪತ್ತೆಯಾಗುತ್ತಿದೆ. …

Read More »

ಸೋಮವಾರದಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿ………….

ಬೆಂಗಳೂರು: ಸೋಮವಾರದಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆಯವರೆಗೆ ಬಂದ್ ಆಗಲಿದೆ. ಶನಿವಾರ ಒಂದೇ ದಿನ ಕೊರೊನಾ ಮಹಾಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಮತ್ತೆ ಜಾರಿಯಾಗಿದೆ. ಇವತ್ತು ಒಂದೇ ದಿನ ಮಾತ್ರ ರಾತ್ರಿ 9 ಗಂಟೆ ತನಕ ವ್ಯವಹಾರ ನಡೆಸಬಹುದಾಗಿದ್ದು ನಾಳೆಯಿಂದ ರಾತ್ರಿ 8 ಗಂಟೆಯಿಂದ 5 ರ ತನಕ ಕರ್ಫ್ಯೂ ಇರಲಿದೆ. ಏನು ಇರುತ್ತೆ? – ಆಸ್ಪತ್ರೆ ಸೇವೆಗಳು, ಮೆಡಿಕಲ್ …

Read More »

ಸೀರಿಯಲ್ ಚಿತ್ರೀಕರಣಕ್ಕೆ ಕುತ್ತು ತಂದ ಕೊರೊನಾ.!

ಕೊರೊನಾ ಮಹಾಮಾರಿ ಯಾವ ವಲಯವನ್ನೂ ಬಿಡದೆ ಕಾಡುತ್ತಿದೆ. ಸ್ವಲ್ಪ ಯಾಮಾರಿದರೂ ಎಲ್ಲಿ ಸೋಂಕು ತಗುಲುತ್ತದೆಯೋ ಎಂಬ ಭಯ ಆವರಿಸಿಕೊಂಡಿದೆ. ಲಾಕ್‌ಡೌನ್ ಸಡಿಲದ ನಂತರ ಕೊರೊನಾ ಸೋಂಕು ತನ್ನ ಆರ್ಭಟವನ್ನು ಹೆಚ್ಚು ಮಾಡಿದೆ. ಲಾಕ್‌ಡೌನ್‌ನಿಂದಾಗಿ ಸೀರಿಯಲ್ ಹಾಗು ಸಿನಿಮಾ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಆದರೆ ಲಾಕ್‌ಡೌನ್ ಸಡಿಲಿಕೆಯ ನಂತರ ಮತ್ತೆ ಶೂಟಿಂಗ್‌ಗೆ ಅನುಮತಿ ನೀಡಲಾಗಿತ್ತು. ಇದೀಗ ಶೂಟಿಂಗ್ ಸ್ಥಳಕ್ಕೂ ಕೊರೊನಾ ದಾಂಗುಡಿ ಇಟ್ಟಿದೆ. ಹೌದು, ಇದು ಹೈದರಾಬಾದ್‌ನಲ್ಲಿ ನಡೆದಿರುವ ಘಟನೆ. ಇಲ್ಲಿನ ಸೀರಿಯಲ್ …

Read More »

ತಡರಾತ್ರಿ ಬೀದಿ ದೀಪದ ಬೆಳಕಲ್ಲಿ SSLC ಪರೀಕ್ಷೆಗೆ ಓದುತ್ತಿದ್ದ ವಿದ್ಯಾರ್ಥಿನಿ, ಬಳಿಗೆ ಬಂದ ವಿವಾಹಿತನಿಂದ ಆಘಾತಕಾರಿ ಕೃ

ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲೂಕಿನ ತಾಂಡಾವೊಂದರಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಜೂನ್ 24 ರಂದು ತಡರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೀದಿ ದೀಪದ ಬೆಳಕಲ್ಲಿ ವಿದ್ಯಾರ್ಥಿನಿ ಓದಿಕೊಳ್ಳುತ್ತಿದ್ದ ವೇಳೆ ಮಾತನಾಡಿಸುವ ನೆಪದಲ್ಲಿ ಸಮೀಪಕ್ಕೆ ಬಂದಿದ್ದ ವಿವಾಹಿತ, ವಿದ್ಯಾರ್ಥಿನಿ ಬಾಯಿಗೆ ಬಟ್ಟೆ ತುರುಕಿ ಎಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ಜೋರಾಗಿ ಕೂಗಾಡಿದ್ದರಿಂದ ಅಕ್ಕಪಕ್ಕದವರು ಧಾವಿಸಿ ಬಂದಿದ್ದಾರೆ. …

Read More »

ರಾಜ್ಯದಲ್ಲಿ 918 ಪಾಸಿಟಿವ್, ಬೆಂಗಳೂರಿನಲ್ಲಿ 596 ಕೊರೊನಾ ಸೋಂಕು ದೃಢ

ರಾಜ್ಯದಲ್ಲಿ ಶನಿವಾರ ಕೊರೊನಾ ಸೋಂಕಿತರ ಸಂಖ್ಯೆ ಸ್ಫೋಟಗೊಂಡಿದ್ದು, ಒಂದೇ ದಿನ 918 ಸೋಂಕು ಪ್ರಕರಣಗಳು ವರದಿಯಾಗಿದ್ದು, 11 ಮಂದಿ ಬಲಿಯಾಗಿದ್ದಾರೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಸಂಜೆ ಮಾಹಿತಿ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಇದೇ ಮೊದಲ ಬಾರಿ ಸಾವಿರ ಸಮೀಪ ಸೋಂಕು ಪ್ರಕರಣ ದಾಖಲಾಗಿದೆ. ಮತ್ತಷ್ಟು ಆಘಾತಕಾರಿ ವಿಷಯ ಅಂದರೆ ರಾಜಧಾನಿ ಬೆಂಗಳೂರಿನಲ್ಲಿ 596 ಸೋಂಕು ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 11 …

Read More »

ನಾಳೆಯಿಂದಲೇ ನೈಟ್ ಕರ್ಫ್ಯೂ, ಸಂಡೇ ಕಂಪ್ಲೀಟ್ ಲಾಕ್ ಡೌನ್, ವಾರದಲ್ಲಿ 5 ದಿನ ಕೆಲಸ :ಸರ್ಕಾರದಿಂದ ಕಠಿಣ ನಿರ್ಧಾರ

ಬೆಂಗಳೂರು: ಕೊರೊನಾ ಸೋಂಕು ತಡೆಗೆ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು ರಾಜ್ಯವ್ಯಾಪಿ ಭಾನುವಾರ ಕಂಪ್ಲೀಟ್ ಲಾಕ್ ಡೌನ್ ಜಾರಿ ಮಾಡಲಾಗುವುದು. ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಮಾತ್ರ ಕೆಲಸ ಇರುತ್ತದೆ. ನಾಳೆಯಿಂದ ರಾತ್ರಿ 8ರಿಂದ ಬೆಳಗ್ಗೆ 8 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಜುಲೈ 5 ರ ಮುಂದಿನ ಭಾನುವಾರದಿಂದ ಸಂಡೇ …

Read More »

ಬೆಳಗಾವಿ ಜಿಲ್ಲೆಯಲ್ಲಿ 500 ಕ್ಕೂ ಹೆಚ್ಚು ಕಡೆ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದೇವೆ.ಸತೀಶ್ ಜಾರಕಿಹೊಳಿ

ಬೆಳಗಾವಿ:ರಾಜ್ಯದಲ್ಲಿ ಕೆಲವು ಜಿಲ್ಲಾ ಕಾಂಗ್ರೆಸ್ ಸಮೀತಿಗಳ ಅವಧಿ ಮುಗಿದಿದೆ.ಪ್ರತಿಜ್ಞಾವಿಧಿ ಕಾರ್ಯಕ್ರಮ ಮುಗಿದ ಬಳಿಕ,ಅವಧಿ ಮುಗಿದ ಬಳಿಕ ಜಿಲ್ಲಾ ಕಾಂಗ್ರೆಸ್ ಸಮೀತಿಗಳ ಪುನರ್ರಚನೆ ಮಾಡುತ್ತೇವೆ,ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲಾ ಪಕ್ಷಗಳಲ್ಲೂ ಕ್ರೆಡಿಟ್ ವಾರ್ ಇದ್ದೇ ಇರುತ್ತೆ, ಇದು ಸಾಮಾನ್ಯ, ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೆಪಿಸಿಸಿ ನೂತನ ಕಚೇರಿ ಪೂಜಾ ಕಾರ್ಯಕ್ರಮಕ್ಕೆ ಹೋಗದ …

Read More »

ದಾವಣಗೆರೆ:ಕಟ್ಟಿಕೊಂಡ ಹೆಂಡತಿ ಮತ್ತು ಮುದ್ದಾದ ಎರಡು ಮಕ್ಕಳನ್ನು ಬೀದಿಗೆ ತಳ್ಳಿ ಮತ್ತೊಂದು ಹುಡ್ಗಿಯನ್ನು ಮದುವೆಯಾಗಿ ಚಕ್ಕಂದವಾಡುತ್ತಿದ್ದ ಖತರ್ನಾಕ್

ದಾವಣಗೆರೆ:ಕಟ್ಟಿಕೊಂಡ ಹೆಂಡತಿ ಮತ್ತು ಮುದ್ದಾದ ಎರಡು ಮಕ್ಕಳನ್ನು ಬೀದಿಗೆ ತಳ್ಳಿ ಮತ್ತೊಂದು ಹುಡ್ಗಿಯನ್ನು ಮದುವೆಯಾಗಿ ಚಕ್ಕಂದವಾಡುತ್ತಿದ್ದ. ಖತರ್ನಾಕ್ ಚಾಲಕಿ‌ ಹೆಸರು ನಿಂಗರಾಜ್ ಅಂತ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬಸವಪಟ್ಟಣ ಗ್ರಾಮದವನು. ಅಂಬ್ಯುಲೆನ್ಸ್ ಚಾಲಕನಾಗಿದ್ದ ಈತ ಕಳೆದ 2014 ರಲ್ಲಿ ಹೊನ್ನಾಳಿಯ ಬೀರಗೊಂಡನಹಳ್ಳಿ ಗ್ರಾಮದ ನೀಲಮ್ಮ ಎನ್ನುವ ಯುವತಿಯನ್ನು ಮದುವೆಯಾಗಿದ್ದ. ಬಳಿಕ ಇಬ್ಬರ ದಾಂಪತ್ಯದಿಂದ ಮುದ್ದಾದ ಇಬ್ಬರು ಗಂಡು ಮಕ್ಕಳಿದ್ದಾರೆ.. ಆದರೆ ಈತನ ತಾಯಿ ಹಾಸ್ಟೆಲ್ ಒಂದರಲ್ಲಿ‌ ಕೆಲಸ ಮಾಡುತ್ತಿದ್ದು, …

Read More »

ವಿಶ್ವ ಮಾದಕ ದ್ರವ್ಯಗಳ ಸೇವನೆ ಹಾಗು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಜನ ಜಾಗೃತಿ ಪದಾಯತ್ರೆ: ಹಾವೇರಿ

ಸವಣೂರ: ಇಂದಿನ ಯುವ ಜನಾಂಗ ಮಾಧಕ ವ್ಯಸನಗಳಿಗೆ ದಾಸರಾಗುವ ಮೂಲಕ ಆರೋಗ್ಯದ ಜೊತೆ ಉತ್ತಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಯೋಗಿಶ್ವರ ಎಸ್. ಕಳವಳ ವ್ಯಕ್ತಪಡಿಸಿದರು. ಹಾವೇರಿ ಜಿಲ್ಲಾ ಪೊಲೀಸ್ ಶಿಗ್ಗಾಂವ ಉಪ ವಿಭಾಗದ ಹಾಗೂ ಸವಣೂರ ಪೊಲೀಸ್ ಠಾಣೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾದಕ ದ್ರವ್ಯಗಳ ಸೇವನೆ ಹಾಗು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಜನ ಜಾಗೃತಿ ಪದಾಯತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಾದಕ ದ್ರವ್ಯಗಳ ಸೇವನೆಯಿಂದ ಆರೋಗ್ಯದ …

Read More »