Breaking News

ಅನ್‍ಲಾಕ್-2 ಮಾರ್ಗಸೂಚಿ ಕೇಂದ್ರ ಸರ್ಕಾರ ಪ್ರಕಟಿಸಿದೆ.ಜುಲೈ 31ರವರೆಗೆ ಶಾಲಾ, ಕಾಲೇಜುಗಳು ಇಲ್ಲ

ನವದೆಹಲಿ: ಕೇಂದ್ರ ಸರ್ಕಾರ ಅನ್‍ಲಾಕ್-2 ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಜುಲೈ 31ರ ವರೆಗೆ ಶಾಲಾ, ಕಾಲೇಜು, ತರಬೇತಿ ಕೇಂದ್ರಗಳನ್ನು ತೆರೆಯುವಂತಿಲ್ಲ ಎಂದು ತಿಳಿಸಿದೆ. ಅನ್‍ಲಾಕ್-1 ಜೂನ್ 30ಕ್ಕೆ ಕೊನೆಗೊಳ್ಳುವ ಹಿನ್ನೆಲೆ ಇಂದು ಅನ್‍ಲಾಕ್-2 ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಮೆಟ್ರೋ ರೈಲು, ಸಿನಿಮಾ ಥೀಯೇಟರ್‍ಗಳು, ಜಿಮ್ ಹಾಗೂ ಸ್ವಿಮ್ಮಿಂಗ್ ಪೂಲ್, ಎಂಟರ್‍ಟೈನ್ಮೆಂಟ್ ಪಾರ್ಕ್‍ಗಳು, ಬಾರ್, ಸಭಾ ಭವನಗಳು ಹಾಗೂ ಹೆಚ್ಚು ಜನ ಸೇರುವ ಪ್ರದೇಶಗಳನ್ನು ತೆರೆಯುವಂತಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.ಸಾಮಾಜಿಕ, …

Read More »

ನಿಪ್ಪಾಣಿ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ!

ನಿಪ್ಪಾಣಿಯಲ್ಲಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿ, ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಅಮಿತ ಸಾಳವೆ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ರಾಯಗೌಡ ಕಲಗೌಂಡ ಕೆಳಗಿನಮಣಿ …

Read More »

ಅಥಣಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹಣ ನೀಡಿದರೆ ಮಾತ್ರ ಚಿಕಿತ್ಸೆ…….?

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹಣ ನೀಡಿದರೆ ಮಾತ್ರ ಚಿಕಿತ್ಸೆ?ಈಗಾಗಲೇ ಮಾಧ್ಯಮದಲ್ಲಿ ವರದಿ ಮಾಡಿದರು ಎಚ್ಚೆತ್ತುಕೊಂಡಿಲ್ಲ?ವೈದ್ಯರು ಸರಿಯಾಗಿ ಟೈಮಿನಲ್ಲಿ ಬರುವುದಿಲ್ಲ ಎಂದು ಕಿವಿ ಮಾತು ಕೂಡ ಕೇಳಿ ಬರುತ್ತದೆ?ವೈದ್ಯಾಧಿಕಾರಿಗಳು ಸರಿಯಾಗಿ ಮಾಹಿತಿ ನೀಡುವುದಿಲ್ಲವೆಂದು ಕೂಡ ಕೇಳಿಬರುತ್ತದೆ? ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿ ದೇವರೆಂದು ಸಾರ್ವಜನಿಕರು ವೈದ್ಯರ ಬಳಿ ಬರುತ್ತಾರೆ ಆದರೆ ಅದೇ ವೈದ್ಯರು ಈ ರೀತಿ ಮಾಡಿದರೆ ಹೇಗೆ ರೋಗಿಗಳು ಎಲ್ಲಿಗೆ ಹೋಗಬೇಕು? ಕೊರೊನಾ …

Read More »

ವಧುವನ್ನು ನೋಡಲು ಹೋದ 8 ಮಂದಿಗೆ ಕೊರೊನಾ ಪಾಸಿಟಿವ್

ಚಿಕ್ಕಮಗಳೂರು: ವಧುವನ್ನು ನೋಡಲು ಹೋದ 8 ಮಂದಿಗೆ ಕೊರೊನಾ ಪಾಸಿಟಿವ್ ಬಂದಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ತರೀಕೆರೆ ತಾಲೂಕಿನ ಗಡಿ ಗಿರಿಯಾಪುರ ಹಾಗೂ ದಂದೂರು ಸೇರಿದಂತೆ ಒಂದೇ ವಂಶದ ಮೂರು ಹಳ್ಳಿಯ ಸುಮಾರು 20 ಮಂದಿ ಭದ್ರಾವತಿ ಮೂಲದ ವ್ಯಕ್ತಿ ಜೊತೆ ತುಮಕೂರಿಗೆ ವಧುವನ್ನು ನೋಡಲು ಹೋಗಿದ್ದರು. ವಧುವನ್ನು ನೋಡಿ ಹಿಂದಿರುಗುವಾಗ ಹೆಮ್ಮಾರಿ ಕೊರೊನಾ ಜೊತೆ ವಾಪಾಸ್ ಆಗಿದ್ದಾರೆ. ವಧು ನೋಡಲು ತೆರಳಿದ್ದ ಸುಮಾರು 20 ಮಂದಿಯಲ್ಲಿ 8 …

Read More »

ಮಗಳ ಮದುವೆಗೆಂದು ಬಂದಿದ್ದ ತಂದೆ ಕೊರೊನಾಗೆ ವೈರಸ್ ಗೆ ಬಲಿಯಾಗಿರುವ ಘಟನೆ ನಡೆದಿದೆ.

ರಾಯಚೂರು/ಯಾದಗಿರಿ: ಮಗಳ ಮದುವೆಗೆಂದು ಬಂದಿದ್ದ ತಂದೆ ಕೊರೊನಾಗೆ ವೈರಸ್ ಗೆ ಬಲಿಯಾಗಿರುವ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ವನಕೇರಿ ಮೂಲದ ವ್ಯಕ್ತಿ(45) ರಾಯಚೂರಿನ ಸಿರವಾರ ಪಟ್ಟಣದ ವಿದ್ಯಾನಗರದಲ್ಲಿ ನಡೆದಿದ್ದ ಮದುವೆಗೆ ಆಗಮಿಸಿದ್ದರು. ಮಗಳ ಮದುವೆ ಮುಗಿಸಿದ್ದ ವ್ಯಕ್ತಿಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಕೂಡಲೇ ಅವರನ್ನು ಸಿರವಾರ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ರಾಯಚೂರು ರಿಮ್ಸ್ ಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಹಾಗೆಯೇ ರಿಮ್ಸ್ ಗೆ ಕರೆದುಕೊಂಡು ಹೋಗುತ್ತಿರುವಾಗಲೇ …

Read More »

ಕೇವಲ 3 ರೂಪಾಯಿ 46 ಪೈಸೆ ಸಾಲ ಕಟ್ಟಲು ರೈತ 15 ಕಿ.ಮೀ. ದೂರ ಕಾಲ್ನಡಿಗೆಯಲ್ಲಿಯೇ ತೆರಳಿ ಸಾಲ ಮರುಪಾವತಿ ಮಾಡಿ ಬಂದಿದ್ದಾರೆ.

ಶಿವಮೊಗ್ಗ: ಬ್ಯಾಂಕ್‍ಗಳಲ್ಲಿ ಲಕ್ಷ, ಕೋಟಿ ಲೆಕ್ಕದಲ್ಲಿ ಸಾಲ ಪಡೆದವರು ಪಡೆದ ಸಾಲ ಹಿಂದಿರುಗಿಸದೇ ಆರಾಮಾಗಿ ಇದ್ದಾರೆ. ಅಂತಹವರಿಗೆ ಯಾವ ಸರ್ಕಾರಗಳು ಆಗಲಿ, ಬ್ಯಾಂಕ್ ಗಳಾಗಲಿ ಏನು ಮಾಡಲು ಹೋಗಿಲ್ಲ. ಆದರೆ ಇಲ್ಲೊಬ್ಬ ಸ್ವಾಭಿಮಾನಿ ರೈತನನ್ನು ಬ್ಯಾಂಕ್ ಅವಮಾನವೀಯವಾಗಿ ನಡೆಸಿಕೊಂಡಿರುವುದು ಬೆಳಕಿಗೆ ಬಂದಿದೆ. ಹೌದು, ಬ್ಯಾಂಕ್‍ಗೆ ಕೇವಲ 3 ರೂಪಾಯಿ 46 ಪೈಸೆ ಸಾಲ ಕಟ್ಟಲು ರೈತ 15 ಕಿ.ಮೀ. ದೂರ ಕಾಲ್ನಡಿಗೆಯಲ್ಲಿಯೇ ತೆರಳಿ ಸಾಲ ಮರುಪಾವತಿ ಮಾಡಿ ಬಂದಿದ್ದಾರೆ. ಈ …

Read More »

ಭಾನುವಾರ ಲಾಕ್‍ಡೌನ್ ದಿನ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ.

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಕೊರೊನಾ ನಿಯಂತ್ರಣ ರಾಜ್ಯ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದ್ದು, ಇದೀಗ ಭಾನುವಾರ ಲಾಕ್‍ಡೌನ್ ದಿನ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ. ರಾಜ್ಯಾದ್ಯಂತ ಕೊರೊನಾ ಸ್ಫೋಟವಾಗುತ್ತಿದೆ. ಪ್ರತಿ ದಿನ ಸಾವಿರದ ಲೆಕ್ಕದಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಇನ್ನೊಂದೆಡೆ ಸಿಲಿಕಾನ್ ಸಿಟಿ ಕೊರೊನಾ ಹಬ್ ಆಗಿ ಮಾರ್ಪಟ್ಟಿದ್ದು, ಪ್ರತಿ ದಿನ ನೂರಾರು ಪ್ರಕರಣಗಳು ಕಂಡು ಬರುತ್ತಿವೆ. ಸರ್ಕಾರಕ್ಕೆ ಕೊರೊನಾ …

Read More »

ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 14,295 ತಲುಪಿದ್ದು, ಈವರೆಗೆ 226 ಮಂದಿ ಮೃತಪಟ್ಟಿದ್ದಾರೆ.

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಭಾರತದಲ್ಲಿ ಅಬ್ಬರಿಸುತ್ತಿದ್ದು, ಈವರೆಗೆ 16,796 ಮಂದಿ ಮೃತಪಟ್ಟಿದ್ದಾರೆ. ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಈಗ ಒಟ್ಟು ಸೋಂಕಿತರ ಸಂಖ್ಯೆ 5,62,198 ಕ್ಕೆ ತಲುಪಿದೆ. ಸೋಂಕು ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಕೆಲ ರಾಜ್ಯಗಳ ವಿವರ ಇಂತಿದೆ. ಮಹಾರಾಷ್ಟ್ರದಲ್ಲಿ 1,69,883 ಮಂದಿ ಸೋಂಕು ಪೀಡಿತರಿದ್ದು, ಈವರೆಗೆ 7,610 ಮಂದಿ ಮೃತಪಟ್ಟಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 83,077 ಮಂದಿ …

Read More »

ಬೆಂಗ್ಳೂರಲ್ಲಿ ಕೊರೊನಾ ಸ್ಫೋಟ- ಸೆಲ್ಫ್ ಲಾಕ್‍ಡೌನ್ ಹೇರಿಕೊಂಡ ಬಸವನಗುಡಿ ಜನ …..

ಬೆಂಗಳೂರು: ಕೊರೊನಾ ಎಂಬ ವೈರಸ್‍ನ ಕಾಟಕ್ಕೆ ಬೆಂಗಳೂರು ನಲುಗಿ ಹೋಗಿದೆ. ದಿನದಿಂದ ದಿನಕ್ಕೆ ಕೊರೊನಾ ತನ್ನ ಕಬಂದಬಾಹುಗಳನ್ನ ಚಾಚುತ್ತಾ ಸಿಕ್ಕ ಸಿಕ್ಕವರನೆಲ್ಲ ತನ್ನ ತೆಕ್ಕೆಗೆ ಹಾಕಿಕೊಂಡು ಮತ್ತಷ್ಟು ಮಗದಷ್ಟು ಜನರನ್ನ ಕಾಡತ್ತಿದೆ. ಹೆಮ್ಮಾರಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಲಾಕ್ ಡೌನ್ ಒಂದೇ ಅಸ್ತ್ರ. ಸರ್ಕಾರ ಲಾಕ್ ಡೌನ್ ಮಾಡಲಿಲ್ಲ ಅಂದ್ರೂ ನಾವೇ ಸ್ವಯಂ ಲಾಕ್ ಡೌನ್ ಮಾಡಿಕೊಳ್ಳುತ್ತೇವೆ ಎಂದು ಬೆಂಗಳೂರಿನ ಜನ ಹೇಳುತ್ತಿದ್ದಾರೆ. ಕೊರೊನಾ ಎಂಬ ಹೆಮ್ಮಾರಿ ವೈರಸ್‍ಗೆ ಬೆಂಗಳೂರಿನ ಜನರಲ್ಲಿ ಆತಂಕ …

Read More »

ರೇಣುಕಾ ಯಲ್ಲಮ್ಮದೇವಿ ಸೇರಿದಂತೆ ಮೂರು ದೇವಾಲಯಗಳಿಗೆ ಜುಲೈ 31ರ ತನಕ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಈ ಆದೇಶ ನೀಡಿದೆ.

ಬೆಳಗಾವಿ, ಜೂನ್ 30 : ಸವದತ್ತಿ ರೇಣುಕಾ ಯಲ್ಲಮ್ಮದೇವಿ ಸೇರಿದಂತೆ ಮೂರು ದೇವಾಲಯಗಳಿಗೆ ಜುಲೈ 31ರ ತನಕ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಈ ಆದೇಶ ನೀಡಿದೆ. ಬೆಳಗಾವಿ ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಕೊರೊನಾ ಸೋಂಕು ಹರಡುವ ಆತಂಕ ಮತ್ತು ಭಕ್ತರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಸವದತ್ತಿ …

Read More »