ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯಿಂದ ಕೊರೊನಾ ಸೋಂಕಿತ (ರೋಗಿ-14,537) ಎಸ್ಕೇಪ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಉಪನಗರ ಠಾಣೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಆರೋಪಿತನಾಗಿದ್ದ ವ್ಯಕ್ತಿಗೆ ಸೋಂಕು ದೃಢಪಟ್ಟಿತ್ತು. ಹೀಗಾಗಿ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಗ್ಗೆ 5:30ಕ್ಕೆ ಕಿಮ್ಸ್ ಕೋವಿಡ್ ವಾರ್ಡಿನಿಂದ ಎಸ್ಕೇಪ್ ಆಗಿದ್ದಾನೆ. ಸೋಂಕಿತ ವ್ಯಕ್ತಿ ಕಿಮ್ಸ್ ನಿಂದ ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಪೊಲೀಸ್ ಸಿಬ್ಬಂದಿ ಕಾವಲಿಗಿದ್ದರೂ ಖದೀಮ ಎಸ್ಕೇಪ್ ಆಗಿದ್ದಾನೆ. …
Read More »ಕಂಪ್ಲಿ ಪಟ್ಟಣದ ಪೊಲೀಸ್ ಠಾಣೆಯ 51 ವರ್ಷದ ಸಿಪಿಐಗೆ ಕೊರೊನಾ ಸೋಂಕಿರುವುದು ದೃಢ
ಬಳ್ಳಾರಿ: ಜಿಲ್ಲೆಯ ಕಂಪ್ಲಿ ಪಟ್ಟಣದ ಪೊಲೀಸ್ ಠಾಣೆಯ 51 ವರ್ಷದ ಸಿಪಿಐಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಸೋಂಕಿತ ಸಿಪಿಐ ಅವರನ್ನು ಕೋವಿಡ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಳೆದ ಒಂದು ವಾರದ ಹಿಂದೆ ಕಂಪ್ಲಿ ಪೊಲೀಸ್ ಠಾಣೆ ಪಿಎಸ್‍ಐ ಅವರಿಗೆ ಗಂಡು ಮಗು ಜನಿಸಿತ್ತು. ಹೀಗಾಗಿ ನಗರದ ಹೊರ ವಲಯದ ಸಮುದಾಯ ಭವನದಲ್ಲಿ ಭರ್ಜರಿ ಪಾರ್ಟಿ ಕೊಟ್ಟಿದ್ದರು. ಅದೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಕಂಪ್ಲಿ ಪೊಲೀಸ್ ಠಾಣೆಯ ಪೇದೆಗೆ ಕೊರೊನಾ ಪಾಸಿಟಿವ್ ಬಂದಿತ್ತು. …
Read More »ತಮ್ಮ ಗ್ರಾಮದ ರಸ್ತೆಗಳಿಗೆ ಸ್ವಂತ ಖರ್ಚಿನಲ್ಲಿ ಸ್ಯಾನಿಟೈಸ್ ಮಾಡಿದ ಯುವಕರು
ಕೊಡಗು: ಕೊರೊನಾ ಮಹಾಮಾರಿ ಸೋಂಕು ತಡೆಯುವ ಉದ್ದೇಶದಿಂದ ಗ್ರಾಮದ ಯುವಕರೇ ಸ್ವಯಂ ಪ್ರೇರಿತರಾಗಿ ರಸ್ತೆಗಳಿಗೆ ಸ್ಯಾನಿಟೈಸರ್ ಮಾಡುತ್ತಿರುವ ಘಟನೆ ವಿರಾಜಪೇಟೆ ತಾಲೂಕಿನ ಚಯ್ಯನಕೋಟೆ ಗ್ರಾಮದಲ್ಲಿ ನಡೆದಿದೆ. ಕೊರೊನಾ ವೈರಸ್ ಹರಡುವ ಮುನ್ನ ಎಚ್ಚರಿಕೆ ವಹಿಸಿದ ಯುವಕರು, ಒಂದು ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಸ್ವಯಂ ಪ್ರೇರಿತರಾಗಿ ಗ್ರಾಮದ ಪ್ರತೀ ರಸ್ತೆಗಳಿಗೆ ಸ್ಯಾನಿಟೈಸರ್ ಸಿಂಪಡಿಸುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ಸ್ಯಾನಿಟೈಸರ್ ಮಾಡಿರುವ ಯುವಕರ ಸಾಮಾಜಿಕ ಕಾಳಜಿಯ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗ್ರಾಮಕ್ಕೆ …
Read More »ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಯೋಧ ಚಿಕಿತ್ಸೆ ಫಲಕಾರಿಯಾಗದೆ ನಿಧನ
ಬೆಳಗಾವಿ/ಚಿಕ್ಕೋಡಿ: ಅಸ್ಸಾಂ ಗಡಿಯಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಸುನೀಲ ಸದಾಶಿವ ಖಿಲಾರೆ (36) ಮೃತ ಯೋಧ. ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದವರಾಗಿದ್ದು, ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಬಳಿಕ ಇವರನ್ನು ಗುವಾಹಾಟಿಯ ಆರ್ಮಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಸುನೀಲ ಸದಾಶಿವ ಖಿಲಾರೆ ವಿಧಿವಶರಾಗಿದ್ದಾರೆ. ಕಳೆದ 17 ವರ್ಷಗಳಿಂದ ಸೈನಿಕ ಸೇವೆಯಲ್ಲಿದ್ದ ಇವರು ಕೊರೊನಾ ಹೆಮ್ಮಾರಿ ಹಿನ್ನೆಲೆಯಲ್ಲಿ ಕಳೆದ 3 …
Read More »ಮುಂದೆ ಯುದ್ಧ ಅಂತಹದ್ದೇನು ಜರುಗಲ್ಲ, ಗಾಬರಿಯಾಗುವ ಅವಶ್ಯಕತೆ ಇಲ್ಲ: ಕೋಡಿಮಠ ಶ್ರೀ
ಹಾಸನ: ಮುಂದೆ ಯುದ್ಧ ಅಂತಹದ್ದೇನು ಜರುಗಲ್ಲ, ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿರುವ ಕೋಡಿಮಠದಲ್ಲಿ ಮಾತನಾಡಿದ ಶ್ರೀಗಳು, ಜಗತ್ತಿನಾದ್ಯಂತ ಪ್ರಸಾರವಾಗಿರುವ ಈ ಮಾರಕ ರೋಗ ಮನುಕುಲಕ್ಕೆ ಕಂಟಕ ಪ್ರಾಯವಾಗಿದೆ. ಇದು ದಿನ ದಿನಕ್ಕೆ ಹೆಚ್ಚುತ್ತಿರುವುದು ಶೋಚನೀಯ ಪ್ರಸಂಗ ಎಂದು ಆತಂಕ ಹೊರಹಾಕಿದರು. ಮನುಷ್ಯ ಸ್ವಾರ್ಥದಿಂದ ತಂದುಕೊಳ್ಳುತ್ತಿರುವ ಈ ರೋಗ ಕೇವಲ ಮನುಕುಲ ಅಲ್ಲದೆ ಪ್ರಾಣಿ, ಪಕ್ಷಿ, ವೃಕ್ಷಗಳ ಮೇಲೆ …
Read More »ಸಾರಿಗೆ ಸಿಬ್ಬಂದಿ ಕರ್ತವ್ಯ ಪ್ರಜ್ಞೆ- ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಿದ ವಿದ್ಯಾರ್ಥಿಗಳು!
ಕಾರವಾರ: ಗಾಳಿ ಮಳೆಗೆ ದಾರಿಗೆ ಅಡ್ಡಲಾಗಿ ಬಿದ್ದಿದ್ದ ಮರವೊಂದನ್ನು ಸಾರಿಗೆ ಸಿಬ್ಬಂದಿಯೇ ತೆರವುಗೊಳಿಸಿದ್ದು, ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳನ್ನು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪುವಂತೆ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯಾಣ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಗುರುವಾರದಿಂದ ಜಿಲ್ಲೆಯಾದ್ಯಂತ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾಣ ಮೂಲಕ ಕುಮಟಾ ತೆರಳುವ ರಸ್ತೆಯಲ್ಲಿ ಬೃಹತ್ ಮರವೊಂದು ಅಡ್ಡಲಾಗಿ ಬಿದ್ದಿತ್ತು. ಈ ವೇಳೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಮಕ್ಕಳನ್ನು …
Read More »ಹಿಂಡಲಗಾ ಕೈದಿಗೆ ಕೊರೊನಾ ಸೋಂಕು……….
ಬೆಳಗಾವಿ: ಹಿಂಡಲಗಾ ಕೈದಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಹಿಂಡಲಗಾ ಹಾಗೂ ಕ್ಯಾಂಪ್ ಪೊಲೀಸ್ ಠಾಣೆಯ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ. ಈಚೇಗೆ ಕುಖ್ಯಾತ ರೌಡಿಯನ್ನು ಕ್ಯಾಂಪ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದರು. ಬಳಿಕ ಮೂರು ದಿನಗಳ ಹಿಂದೆಷ್ಟೇ ಹಿಂಡಲಗಾ ಜೈಲಿಗೆ ಕಳಿಸಲಾಗಿತ್ತು. ಆದ್ರೆ ಇಂದು ಕೈದಿಗೆ ಕೊರೊನಾ ಸೋಂಕು ಶಂಕೆ ವ್ಯಕ್ತವಾಗಿದೆ. ಇದರಿಂದ ಕ್ಯಾಂಪ್ ಹಾಗೂ ಹಿಂಡಲಗಾ ಪೊಲೀಸ ಸಿಬ್ಬಂದಿಗೆ ಆತಂಕ ಮನೆ ಮಾಡಿದೆ. ಜತೆಗೆ ಹಿಂಡಲಗಾ ಜೈಲಿನಲ್ಲಿ …
Read More »ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯೋಧ
ಬೆಳಗಾವಿ: ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಸಾಂಬ್ರಾದಲ್ಲಿರುವ ಏರ್ ಫೋರ್ಸ್ ನ ಟ್ರೇನಿಂಗ್ ಸ್ಕೂಲ್ ನಲ್ಲಿ ನಡೆದಿದೆ. ಹರಿಯಾಣ ಮೂಲದ ಅಮೀರ್ ಖಾನ್(24) ಆತ್ಮಹತ್ಯೆ ಮಾಡಿಕೊಂಡ ಯೋಧ. ಇನ್ಸಾಸ್ ರೈಫಲ್‌ನಿಂದ ಗುರುವಾರ ಬೆಳಿಗ್ಗೆ ತಾನೇ ಶೂಟ್ ಮಾಡಿಕೊಂಡಿದ್ದಾರೆ. ತಕ್ಷಣ ಅಲ್ಲಿನ ಹಿರಿಯ ಅಧಿಕಾರಿಗಳು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದ್ರೆ ಚಿಕಿತ್ಸೆಗೂ ಮುನ್ನ ಯೋಧ ಮೃತಪಟ್ಟಿದ್ದಾರೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »ತನ್ನ ಹಳೇ ಶಿಷ್ಯನ ಪರವಾಗಿ ಬ್ಯಾಟಿಂಗ್ ಮಾಡಿದ ಸಿದ್ದು,
ಬೆಂಗಳೂರು: ಸಿಎಂ ಫಂಡ್‍ಗೆ ಬಂದ 290 ಕೋಟಿಯಲ್ಲಿ ಒಂದು ರೂಪಾಯಿಯನ್ನಾದರೂ ಖರ್ಚು ಮಾಡಿದ್ದೀರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಯಡಿಯೂರಪ್ಪನವರಿಗೆ ಪ್ರಶ್ನೆ ಮಾಡಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಾಕ್‍ಡೌನ್‍ಗಿಂತ ಮುಂಚಿತವಾಗಿ ನಮ್ಮ ದೇಶದಲ್ಲಿ ಕಡಿಮೆ ಸೋಂಕಿತ್ತು. ಕಡಿಮೆ ಸೋಂಕು ಇದ್ದಾಗ ನಮಗೆ ಸಿದ್ಧತೆ ಮಾಡಿಕೊಳ್ಳಲು ದೇಶದಲ್ಲಿ ಮತ್ತು ರಾಜ್ಯದಲ್ಲಿ ಸಮಯ ಇತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯ, ತಪ್ಪು ನಿರ್ಧಾರಗಳಿಂದ …
Read More »ಟಿಕ್‍ಟಾಕ್‍ನಿಂದ ಪಿಎಂ ಕೇರ್ಸ್ ಫಂಡ್‍ಗೆ 30 ಕೋಟಿ ಬಂದಿದೆ: ಖಾದರ್
ಮಂಗಳೂರು: ಚೀನಾದ 59 ಆ್ಯಪ್ ಗಳನ್ನು ಬ್ಯಾನ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಶಾಸಕ ಯು.ಟಿ ಖಾದರ್ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ಆ್ಯಪ್ ಬಂದ್ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು. ಚೈನಾಗೆ ಆ್ಯಪ್‍ನಿಂದ ನಷ್ಟ ಇಲ್ಲ. ಭಾರತಕ್ಕೆ ಆ್ಯಪ್ ಬ್ಯಾನ್‍ನಿಂದ ಲಾಭ ಇಲ್ಲ. ಪಿಎಂ ಕೇರ್ಸ್ ಫಂಡ್‍ಗೆ ಟಿಕ್‍ಟಾಕ್‍ನಿಂದ 30 ಕೋಟಿ ಬಂದಿದೆ. ಆ ಹಣವನ್ನು ಸರ್ಕಾರ ವಾಪಸ್ ಕೊಡಲಿ. ಸರ್ಕಾರಕ್ಕೆ …
Read More »