Breaking News

ಮಾರಕ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿರುವಂತೆಯೇ ಇತ್ತ ರಾಜ್ಯ ಸರ್ಕಾರ ಸ್ವಾತಂತ್ರ್ಯೋತ್ಸವ ನಿಮಿತ್ತ ನಡೆಯಬೇಕಿದ್ದ ಫಲಪುಷ್ಪ ಪ್ರದರ್ಶನವನ್ನು ರದ್ದುಪಡಿಸಲು ಮುಂದಾಗಿದೆ.

ಬೆಂಗಳೂರು: ಮಾರಕ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿರುವಂತೆಯೇ ಇತ್ತ ರಾಜ್ಯ ಸರ್ಕಾರ ಸ್ವಾತಂತ್ರ್ಯೋತ್ಸವ ನಿಮಿತ್ತ ನಡೆಯಬೇಕಿದ್ದ ಫಲಪುಷ್ಪ ಪ್ರದರ್ಶನವನ್ನು ರದ್ದುಪಡಿಸಲು ಮುಂದಾಗಿದೆ. ಹೌದು.. ದಿನೇ ದಿನೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಇದೇ ಕಾರಣಕ್ಕೆ ತೋಟಗಾರಿಕೆ ಇಲಾಖೆ ಲಾಲ್ ಭಾಗ್ ನಲ್ಲಿ ನಡೆಯಬೇಕಿದ್ದ ಫಲಪುಷ್ಪ ಪ್ರದರ್ಶನವನ್ನು ರದ್ದು ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಲಾಲ್ ಭಾಗ್ ನ ಫಲಪುಷ್ಪ ಪ್ರದರ್ಶನ ವ್ಯಾಪಕ ಖ್ಯಾತಿ ಗಳಿಸಿದ್ದು, …

Read More »

ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ಚಾರ್ಟರ್ಡ್ ಅಕೌಂಟೆಂಟ್ಸ್(ಸಿಎ) ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ.

ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ಚಾರ್ಟರ್ಡ್ ಅಕೌಂಟೆಂಟ್ಸ್(ಸಿಎ) ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ ಮೇ/ಜುಲೈ ತಿಂಗಳಿನಲ್ಲಿ ನಡೆಯಬೇಕಿತ್ತು. ಮೇ ಮತ್ತು ನವೆಂಬರ್ ನಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಸಂಯೋಜಿಸಿ ಈ ವರ್ಷದ ನವೆಂಬರ್ ನಲ್ಲಿ ನಡೆಸಲಾಗುವುದು. ಚಾರ್ಟರ್ಡ್ ಅಕೌಂಟೆಂಟ್ಸ್ ಪರೀಕ್ಷೆ ರದ್ದು ಮಾಡಿರುವ ಕುರಿತಾಗಿ ಐಸಿಎಐ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಮೊದಲು ಸಿಎ ಪರೀಕ್ಷೆಯನ್ನು ಮೇ …

Read More »

ಭಾನುವಾರ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಇಂದು ಜಿಲ್ಲೆ ಸಂಪೂರ್ಣ ಸ್ಥಬ್ದವಾಗಿದೆ….

ಬೆಳಗಾವಿ: ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಭಾನುವಾರ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಇಂದು ಜಿಲ್ಲೆ ಸಂಪೂರ್ಣ ಸ್ಥಬ್ದವಾಗಿದೆ. ಶನಿವಾರ ರಾತ್ರಿ 8 ಗಂಟೆಯಿಂದಲೆ ಲಾಕ್ ಡೌನ್ ಜಾರಿಗಿದ್ದರು ಸಹ ಸ್ವಲ್ಪ ಮಟ್ಟಿಗೆ ವಾಹನಗಳು ರಸ್ತೆ ಇಳಿದಿದ್ದವು. ಆದ್ರೆ ಭಾನುವಾರ ಬೆಳಗಿನ ಜಾವದಿಂದ ಬೆಳಗಾವಿ ಸ್ಥಬ್ಧವಾಗಿದೆ. ಪ್ರತಿ ದಿನ ಜನದಟ್ಟನೆ ಯಿಂದ ಕೂಡಿರುವ ಸಂಗೋಳಿ ರಾಮಣ್ಣ ವೃತ್ತ, ಬಸ್ ನಿಲ್ದಾಣ ರಸ್ತೆ, ಚನ್ನಮ್ಮ ವೃತ್ತ, ಖಡೇಬಜಾರ …

Read More »

ಮೊದಲ ಸಂಡೇ ಲಾಕ್‍ಡೌನ್ ಜಾರಿ ರಸ್ತೆಗಳು ಖಾಲಿ ಖಾಲಿ…………..

ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊ ನಾ ಸ್ಫೋಟವಾಗುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಇದೇ ಮೊದಲ ಸಂಡೇ ಲಾಕ್‍ಡೌನ್ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮೆಜೆಸ್ಟಿಕ್, ಮಲ್ಲೇಶ್ವರಂ, ತುಮಕೂರು, ಮೈಸೂರು ರಸ್ತೆ ಸೇರಿದಂತೆ ಬೆಂಗಳೂರಿನ ಬಹುತೇಕ ರಸ್ತೆಗಳು ಖಾಲಿ ಖಾಲಿರಸ್ತೆಗಳು ಖಾಲಿ ಖಾಲಿಯಾಗಿವೆ. ಬಳ್ಳಾರಿ ರೋಡ್ ಮತ್ತು ಮೇಕ್ರಿ ಸರ್ಕಲ್ ಸುತ್ತಮುತ್ತ ರಸ್ತೆಗಳು ಫುಲ್ ಖಾಲಿ ಖಾಲಿಯಾಗಿವೆ. ಪ್ರಮುಖ ಪ್ಲೈಓವರ್‌ಗೆ ಬ್ಯಾರಿಕೇಡ್ ಹಾಕಿ ಪೊಲೀಸರು ಮುಚ್ಚಿದ್ದಾರೆ. ಹೀಗಾಗಿ ರಸ್ತೆಗಳು ಖಾಲಿ ಖಾಲಿ …

Read More »

ಸಂಡೇ ಲಾಕ್‍ಡೌನ್ ಸಂಚಾರ ಸಂಪೂರ್ಣ ಸ್ತಬ್ಧ ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ ಆರಂಭ

ಸಂಡೇ ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಲವೆಡೆ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಈ ಮಧ್ಯೆ ಹಾಸನ ಮತ್ತು ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ ಆರಂಭವಾಗಿದೆ. ಹಾಸನ ನಗರ ಸೇರಿದಂತೆ ಹಲವೆಡೆ ಬೆಳಗ್ಗೆಯಿಂದಲೇ ಸೋನೆ ಮಳೆ ಆರಂಭವಾಗಿದೆ. ಈ ಮೂಲಕ ಸಂಡೇ ಲಾಕ್‍ಡೌನ್‍ಗೆ ಹಾಸನದಲ್ಲಿ ಮಳೆಯ ಸಪೋರ್ಟ್ ನೀಡಿದಂತಾಗಿದೆ. ಬೆಳ್ಳಂಬೆಳಗ್ಗೆಯೇ ಜಿಟಿಜಿಟಿ ಮಳೆ ಆರಂಭವಾಗಿರುವುದರಿಂದ ಮನೆಯಿಂದ ಜನರು ಹೊರಬರುತ್ತಿಲ್ಲ. ಇನ್ನೂ ಅಗತ್ಯ ವಸ್ತುಕೊಳ್ಳಲು ಮನೆಯಿಂದ ಹೊರಬಂದವರು ಮಳೆಯಿಂದಾಗಿ ಅಂಗಡಿಗಳ ಬಳಿಯೇ ವಾಸ್ತವ್ಯ ಮಾಡುತ್ತಿದ್ದಾರೆ. ಕೆಲವರು …

Read More »

ಬೀದರ್‌ನಲ್ಲಿ ಕೊರೊನಾ  ಸಾವಿನ ರಣಕೇಕೆ ಹಾಕಿದೆ. ಒಂದೇ ದಿನ 6 ಜನ ಬಲಿ…….

ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ ಕೊರೊನಾ  ಸಾವಿನ ರಣಕೇಕೆ ಹಾಕಿದೆ. ಒಂದೇ ದಿನ 6 ಜನರನ್ನು ಬಲಿ ಪಡೆದಿದ್ದು, ಜಿಲ್ಲೆಯ ಜನರನ್ನು ಭಯಭೀತರನ್ನಾಗಿಸಿದೆ. ಬೀದರ್ ನ ಹಳೆ ನಗರದ 55 ವರ್ಷದ ವ್ಯಕ್ತಿ ಹಾಗೂ 70 ವರ್ಷದ ವೃದ್ಧೆ ಕೊರೊನಾಗೆ ಬಲಿಯಾಗಿದ್ದಾರೆ. ಭಾಲ್ಕಿ ಪಟ್ಟಣದ 50 ಹಾಗೂ 31 ವರ್ಷದ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಬಸವಕಲ್ಯಾಣ ಪಟ್ಟಣದ 24 ವರ್ಷದ ಯುವತಿ ಹಾಗೂ ಹುಮ್ನಬಾದ್ ಪಟ್ಟಣದ 70 ವರ್ಷದ ವೃದ್ಧೆ ಕೊರೊನಾ …

Read More »

ಚಾರ್ಮಾಡಿ ಘಾಟ್‍ನಲ್ಲಿ ವಾಹನ ನಿಲುಗಡೆ ನಿಷೇಧ…………

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‍ನಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ಹೀಗಾಗಿ ಇನ್ನು ಮುಂದೆ ಚಾರ್ಮಾಡಿ ಘಾಟಿಯಲ್ಲಿ ವಾಹನಗಳನ್ನು ನಿಲ್ಲಿಸಿದರೆ ಕೇಸ್ ಬೀಳೋದು ಗ್ಯಾರಂಟಿಯಾಗಿದೆ. ಈ ಸಂಬಂಧ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಬಣಕಲ್ ಪೊಲೀಸರು ಸೂಚನೆ ನೀಡುತ್ತಿದ್ದಾರೆ. ಅಲ್ಲದೆ ಜಿಲ್ಲಾಡಳಿತ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ನಾಮಫಲಕ ಕೂಡ ಹಾಕಿದೆ. ಮಳೆಯ ನಡುವೆ ವಾಹನ ನಿಲ್ಲಿಸಿ ಅಪಾಯ ಸ್ಥಳಗಳಲ್ಲಿ ಜನ ಓಡಾಟ ಮಾಡುವುದು ಹೆಚ್ಚಾಗಿದೆ. ಈ ಹಿಂದೆ …

Read More »

ವೈದ್ಯ, ಕಂಡಕ್ಟರ್, ಪೇದೆಗೆ ಕೊರೊನಾಜನರ ಆತಂಕ ಕೂಡ ಹೆಚ್ಚಾಗುತ್ತಿದೆ.

ಚಿಕ್ಕಮಗಳೂರು: ಕಳೆದ 45 ದಿನಗಳಿಂದ ಬರುತ್ತಿರುವ ಒಂದು-ಎರಡು ಕೇಸ್ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 85ರ ಗಡಿ ತಲುಪಿದ್ದು, ದಿನ ಕಳೆದಂತೆ ಜಿಲ್ಲೆಯ ಜನರ ಆತಂಕ ಕೂಡ ಹೆಚ್ಚಾಗುತ್ತಿದೆ. ಇಂದು ಜಿಲ್ಲೆಯಲ್ಲಿ ಮೂರು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಮೂರು ಹೊಸ ಪ್ರಕರಣಗಳಲ್ಲಿ ಓರ್ವ ವೈದ್ಯ, ಮತ್ತೋರ್ವ ಸರ್ಕಾರಿ ಬಸ್ ಕಂಡಕ್ಟರ್, ಮಗದೊಬ್ಬ ಬೆಂಗಳೂರಿನಿಂದ ಹಿಂದಿರುಗಿದ ಪೇದೆ. ವೈದ್ಯ ಹಾಗೂ ಕಂಡಕ್ಟರ್ ಈ ಎರಡೂ ಪ್ರಕರಣಗಳು ಜಿಲ್ಲಾಡಳಿತ ಹಾಗೂ ಜನರ …

Read More »

ಸಿಲಿಕಾನ್ ಸಿಟಿಯ ಸ್ಥಿತಿ ದಿನದಿನಕ್ಕೆ ಘನಘೋರು, ಒಂದೇ 24 ಮಂದಿ ಕೊರೊನಾಗೆ ಬಲಿ

ಬೆಂಗಳೂರು: ಸಿಲಿಕಾನ್ ಸಿಟಿಯ ಸ್ಥಿತಿ ದಿನದಿನಕ್ಕೆ ಘನಘೋರವಾಗುತ್ತಿದೆ. ದೆಹಲಿ, ಮುಂಬೈನಂತೆ ಬೆಂಗಳೂರು ಕೂಡ ಕೊರೊನಾ ಸಾವಿನ ಕೂಪವಾಗುತ್ತಾ ಅನ್ನೊ ಅನುಮಾನ ಶುರುವಾಗಿದೆ. ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆಯಲ್ಲಿ ಬೆಂಗಳೂರೇ ಬಹುಪಾಲು ಪಡೆದಿದೆ. ಮಹಾನಗರಿ ಬೆಂಗಳೂರಲ್ಲಿ ಶತಕದಾಚೆಗೆ ಜಿಗಿದಿರೋ ಕೊರೊನಾ ಹೆಮ್ಮಾರಿ ಬರೋಬ್ಬರಿ 1,172 ಮಂದಿಗೆ ವಕ್ಕರಿಸಿದೆ. ಸಾವುಗಳ ಸಂಖ್ಯೆ ಸಹ ಎಲ್ಲಾ ದಾಖಲೆ ಮುರಿದಿದೆ. ಬೆಂಗಳೂರಲ್ಲಿಂದು 24 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾಗೆ ಹೆದರಿ ಜನ ಬೆಂಗಳೂರು ಬಿಡುತ್ತಿರುವಾಗಲೇ ಕೊರೊನಾ …

Read More »

ಪ್ರಸಕ್ತ ವರ್ಷದ ಮೂರನೇ ಚಂದ್ರಗ್ರಹಣ

ಬೆಂಗಳೂರು: ಪ್ರಸಕ್ತ ವರ್ಷದ ಮೂರನೇ ಚಂದ್ರಗ್ರಹಣ ಅಂದ್ರೆ ಗುರು ಪೂರ್ಣಿಮೆ ದಿನವೇ ಸಂಭವಿಸಲಿದೆ. ಅರೆನೆರಳಿನ ಚಂದ್ರಗ್ರಹಣ ಬೆಳಗ್ಗೆ 8.37ಕ್ಕೆ ಆರಂಭವಾಗಿ, ಬೆಳಗ್ಗೆ 9.59ಕ್ಕೆ ಪೂರ್ಣ ಗೋಚರ ಕಂಡು, ಬೆಳಗ್ಗೆ 11.37ಕ್ಕೆ ಗ್ರಹಣ ಮೋಕ್ಷ ಕಾಣಲಿದೆ. ಒಟ್ಟು 2 ಗಂಟೆ 45 ನಿಮಿಷಗಳ ಕಾಲ ಚಂದ್ರನಿಗೆ ಗ್ರಹಣ ಹಿಡಿಯಲಿದೆ. ಆದರೆ ಭಾರತದಲ್ಲಿ ಈ ಚಂದ್ರಗ್ರಹಣ ಗೋಚರಿಸುವುದಿಲ್ಲ. ಇದು ಆಫ್ರಿಕಾ, ಉತ್ತರ ಅಮೆರಿಕಾ, ಫೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾದಲ್ಲಿ ಹೆಚ್ಚು ಗೋಚರವಾಗಲಿದೆ. ಜೋತಿಷ್ಯ ಶಾಸ್ತ್ರದ …

Read More »