Breaking News

60 ವರ್ಷ ಮೇಲ್ಪಟ್ಟವರು ಹೊರಬರದಂತೆ ರಾಜ್ಯದಲ್ಲಿ ಕಾನೂನು

ಬೆಂಗಳೂರು(ಜು.06): ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುವವರೆಗೂ ಕಿಡ್ನಿ, ಲಿವರ್‌, ಹೃದಯ ಸಂಬಂಧಿ ಸಮಸ್ಯೆ ಸೇರಿದಂತೆ ಪೂರ್ವ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಬರಬಾರದೆಂಬ ಕಾನೂನು ರೂಪಿಸುವ ಚಿಂತನೆ ನಡೆಸುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೆ ಕೋವಿಡ್‌ನಿಂದ ಮೃತಪಟ್ಟವರ ಪೈಕಿ ಬಹುತೇಕ ಮಂದಿ 60 ವರ್ಷ ಮೇಲ್ಪಟ್ಟವರು ಹಾಗೂ ಈಗಾಗಲೇ ಪೂರ್ವ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರಾಗಿದ್ದಾರೆ. …

Read More »

ಕೊಡಗು: ಭೂಕುಸಿತದಿಂದ ಮನೆ ಕಳೆದುಕೊಂಡಿದ್ದ ಕುಟುಂಬದ ಬದುಕು ಕಿತ್ತುಕೊಂಡು ಗಾಯದ ಮೇಲೆ ಬರೆ ಎಳೆದ ಕೊರೋನಾ…

ಕೊಡಗು(ಜು.06): ಮಾರಕ ಕೊರೋನಾ ವೈರಸ್​ ಪ್ರತಿಯೊಬ್ಬರ ಜೀವನನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಭೂಕುಸಿತದಲ್ಲಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಕುಟುಂಬ ಲಾಕ್ಡೌನ್​​ನಿಂದ ಕೂಲಿಯನ್ನು ಕಳೆದುಕೊಂಡು ಒಂದೊತ್ತಿನ ಗಂಜಿಗೂ ಪರಿಪಾಟಲು ಪಡುತ್ತಿದೆ. ಹಲವು ಕಾಯಿಲೆಗಳಿಂದ ನರಳುವ ತಂದೆ ತಾಯಿಯನ್ನು ಸಾಕೋದು ಪಿಯುಸಿ ಓದುತ್ತಿದ್ದ ಮಗನ ಹೆಗಲಿಗೆ ಬಿದ್ದಿದೆ. ಅಂತಹ ಮನಕಲಕುವ ಕಥೆ ವ್ಯವಸ್ಥೆಯನ್ನು ನೋವು ನೋಡ್ಲೇಬೇಕು. Ρ ಕಣ್ಣು ಕಾಣದೆ ತನ್ನ ಕೆಲಸವನ್ನು ತಾನು ಮಾಡಿಕೊಳ್ಳಲು ಸಾಧ್ಯವಾಗದ ತಂದೆ, ಸಂಧಿವಾತದಿಂದ ಕೈ …

Read More »

ಧಾರವಾಡ: ಕೊಲೆ ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಧಾರವಾಡ: ಇಲ್ಲಿನ ಮದಿಹಾಳದಲ್ಲಿ ನಿನ್ನೆ ನಡೆದ ಕೊಲೆಗೆ ಸಂಬಂಧಿಸಿದಂತೆ ರೌಡಿಶೀಟರ್ ಶ್ರೀಶೈಲ ಗಾಣಿಗೇರನನ್ನು ಬಂಧಿಸುವಲ್ಲಿ ಶಹರ ಠಾಣೆ ಪೊಲೀಸರ ಯಶಸ್ವಿಯಾಗಿದ್ದಾರೆ. ಶಿವಯೋಗಿ ಭಾವಿಕಟ್ಟಿ ಹಾಗೂ ಆರೋಪಿ ಶ್ರೀಶೈಲ ಗಾಣಿಗೇರ ಮಧ್ಯೆ ಆಸ್ತಿಗೆ ಸಂಬಂಧಿಸಿದ ವ್ಯವಹಾರವಿತ್ತು. ಈ ಸಂಬಂಧ ಮೊನ್ನೆ ತಡರಾತ್ರಿ ಶಿವಯೋಗಿ ಹಾಗೂ ಆತನ ಇನ್ನಿಬ್ಬರು ಸಹಚರರಾದ ಈರಪ್ಪ ಯಂಗಳ್ಳಿ ಹಾಗೂ ಸುನೀಲ ಕೋನಣ್ಣವರ ಅವರು ಶ್ರೀಶೈಲನ ಮನೆಗೆ ಹೋಗಿ ಕ್ಯಾತೆ ತೆಗೆದಿದ್ದರು. ಈ ಜಗಳ ವಿಕೋಪಕ್ಕೆ ಹೋಗಿದ್ದರಿಂದ ಶ್ರೀಶೈಲ …

Read More »

17 ದಿನಗಳ ಮಗುವಿನ ಅಂತ್ಯಕ್ರಿಯೆ ನಡೆಸಿ ಕಣ್ಣೀರು ಹಾಕಿದ್ರು ಆರೋಗ್ಯ ಸಿಬ್ಬಂದಿ…

ಬೆಂಗಳೂರು: ಒಂದು ಮಗುವಿನ ಆಗಮನ ಅಂದ್ರೆ ಆ ಮನೆ ತುಂಬಾ ಸಂತೋಷ ತುಂಬಿರುತ್ತದೆ. ಇನ್ನು ತಾಯಿಗಂತೂ ಅದು ಮರುಜನ್ಮ, ಒಂಬತ್ತು ತಿಂಗಳು ಹೊತ್ತು, ಹೆರಿಗೆ ನೋವು ಸಹಿಸಿಕೊಂಡ ಆಕೆಗೆ, ಬಳಿಕ ಆ ಮಗುವಿನ ಮುಕ ನೋಡಿ, ಒಮ್ಮೆ ಮಗುವನ್ನು ಮುದ್ದಾಡಿದರೇ ಎಲ್ಲ ನೋವು ಶಮನ. ಆದ್ರೆ ದುರಾದೃಷ್ಟವಶಾತ್​ ಈ ತಾಯಿಗೆ ಆ ಸಂತೋಷ ಸಿಗದಂತಾಗಿದೆ. ಈ ಕಥೆ ಓದಿದ್ರೆ ನಿಜಕ್ಕೂ ಕಣ್ಣೀರು ಬರುತ್ತದೆ. ಕೊರೊನಾ ತಂದಿಟ್ಟ ಪರಿಸ್ಥಿತಿ ನೋಡಿದರೆ ನಿಜಕ್ಕೂ …

Read More »

ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ : ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು : ಹವಾಮಾನ ಇಲಾಖೆಯು ಬಹುಮುಖ್ಯ ಮಾಹಿತಿಯೊಂದನ್ನು ನೀಡಿದ್ದು, ಇಂದಿನಿಂದ ಜುಲೈ 10 ರವರೆಗೆ ರಾಜ್ಯದ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.     ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಇಂದಿನಿಂದ ರಾಜ್ಯದ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈಗಾಗಲೇ …

Read More »

ಭೀಕರ ಅಪಘಾತದಲ್ಲಿ ವ್ಯಕ್ತಿ ಸಾವು; ಎದೆ ಝಲ್ಲೆನಿಸೋ ದೃಶ್ಯ ಸಿಸಿಟಿವಿಯಲ್ಲಿ ಸೆರೆ…

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿನ್ನೆ ಭೀಕರ ಅಪಘಾತಕ್ಕೀಡಾಗಿ, ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ದೈಹಿಕ ಶಿಕ್ಷಕ ಮಹಾಂತೇಶ್ ಮೃತ ದುರ್ದೈವಿ. ಕಡೂರು ತಾಲೂಕಿನ ಬೀರೂರು ಸಮೀಪ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಈ ಘಟನೆ ನಡೆದಿದೆ. ಕಡೂರಿನಿಂದ ಬಿರೂರಿಗೆ ಬರುತ್ತಿದ್ದ ಟಾಟಾ ಏಸ್​ ವಾಹನಕ್ಕೆ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್​ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್​ ಹಾರಿ ಹೋಗಿದ್ದು, ಮಹಂತೇಶ್​​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎದೆ ಝಲ್ಲೆನಿಸುವಂತಿದೆ. ಘಟನೆ …

Read More »

ದುಬೈನಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪನೆ, ಮಧ್ಯಪ್ರಾಚ್ಯ ರಾಷ್ಟ್ರಗಳಿಗೂ ಹರಡಿದ ವಿಶ್ವಗುರು ಚಿಂತನೆಗಳು

ಬೆಂಗಳೂರು,ಜು.5- ಇಂಗ್ಲೆಂಡ್ ನಲ್ಲಿರುವ ಲಂಡನ್ ನ ಥೇಮ್ಸ್ ನದಿ ದಂಡೆ ಮೇಲೆ ವಿಶ್ವ ಗುರು ಬಸವಣ್ಣನವರ ಪ್ರತಿಮೆ ಸ್ಥಾಪನೆಯಾಗಿದ್ದು ಇತಿಹಾಸ. ಈಗ ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ಬಸವಣ್ಣನರ ಪ್ರತಿಮೆ ಸ್ಥಾಪನೆಯಾಗುವ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳಿಗೂ ಬಸವಣ್ಣನವರ ಚಿಂತನೆಗಳು ಹರಡುವಂತಾಗಿದೆ. ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ದುಬೈ ಬಸವ ಸಮಿತಿ ವತಿಯಿಂದ ಬಸವಣ್ಣನವರ ಪಂಚಲೋಹದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ?ಅವರ ಸಹಾಯ ಮತ್ತು ಸಹಕಾರದಿಂದ ದುಬೈ ಬಸವ …

Read More »

ರಾಜ್ಯದ ಹಲವೆಡೆ ಮುಂಗಾರು ಮಳೆ ಆರಂಭ…………….

ರಾಜ್ಯದ ಹಲವೆಡೆ ಮುಂಗಾರು ಮಳೆ ಆರಂಭವಾಗಿದ್ದು, ಮೋಡ ಕವಿದ ವಾತಾವರಣ ಇರಲಿದೆ. ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಳೆಯಾಗುವ ಸಾಧ್ಯತೆ ಇದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ …

Read More »

ಪ್ರೀತಿಸಿ ಮದ್ವೆಯಾದ್ರು- ಪ್ರೀತಿಯ ಸಂಕೇತವಾದ ಮಗುವನ್ನೇ ಕೊಂದ ತಂದೆ

ಬೆಂಗಳೂರು: ಪತಿ-ಪತ್ನಿ ಜಗಳದ ಮಧ್ಯೆ ಮಗು ಅತ್ತಿತೆಂದು ಎಸೆದು ತಂದೆಯೇ ತನ್ನ ಮೂರು ತಿಂಗಳ ಹೆಣ್ಣು ಮಗುವನ್ನು ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ನಡೆದಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಯಡವನಹಳ್ಳಿಯಲ್ಲಿ ಘಟನೆ ನಡೆದಿದ್ದು, ಜನನಿ ಮತ್ತು ಶ್ರೀನಿವಾಸ್ ದಂಪತಿಯ ಮಗು ಸ್ಪಂದನ ಸಾವನ್ನಪ್ಪಿದ ದುರ್ದೈವಿ. ಈ ದಂಪತಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ನಿವಾಸಿಗಳಾಗಿದ್ದು, ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಪ್ರತಿ ದಿನ …

Read More »

ಮಾಜಿ ಸಚಿವ ಸಾ.ರಾ ಮಹೇಶ್ ಅವರನ್ನು ಕ್ವಾರಂಟೈನ್ ಮಾಡಲಾಗಿದೆ.

ಮೈಸೂರು: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಮಾಜಿ ಸಚಿವ ಸಾ.ರಾ ಮಹೇಶ್ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಹೌದು. ಮೈಸೂರಿನಲ್ಲಿ ತಾಲೂಕುಗಳೀಗೂ ಮಾಹಾಮಾರಿ ವ್ಯಾಪಿಸಿದೆ. ಕೆ.ಆರ್ ನಗರ ತಾಲೂಕಿನ ಮಹಿಳಾ ತಹಶೀಲ್ದಾರ್‍ಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಸಾ.ರಾ ಮಹೇಶ್‍ಗೆ ಆತಂಕ ಹೆಚ್ಚಾಗಿದೆ. ಸಾ.ರಾ ಮಹೇಶ್ ಅವರು ಎರಡು ದಿನಗಳ ಹಿಂದೆ ತಹಶೀಲ್ದಾರ್ ಜೊತೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಸೀಲ್‍ಡೌನ್ ಪ್ರದೇಶಗಳಿಗೆ ಭೇಟಿ …

Read More »