ಯಾದಗಿರಿ: ರಾಜ್ಯದಲ್ಲಿ ಮಹಾಮಾರಿ ಕೊರೊನಾ ನರ್ತನಕ್ಕೆ ಜನರು ಸಂಪೂರ್ಣ ನಲುಗಿ ಹೋಗಿದ್ದಾರೆ. ಆದರೆ ಇತ್ತ ಯಾದಗಿರಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂತಹ ಹೊತ್ತಲ್ಲಿ ಈಗ ಯಾದಗಿರಿಗೆ ಮತ್ತೊಂದು ಮಹಾ ಕಂಟಕ ಎದುರಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ದಿನೇ ದಿನೇ ಮಿತಿ ಮೀರುತ್ತಿದೆ. ಇದರಿಂದ ಭೀತಿಗೊಳಗಾಗಿರುವ ಜನರು ನಮಗೆ ಜೀವನ ಮುಖ್ಯ, ಜೀವ ಇದ್ದರೆ ಕೂಲಿ ಮಾಡಿ ಆದ್ರೂ ಬದುಕಬಹುದು ಎಂದು ತಮ್ಮ ತಮ್ಮ ಊರುಗಳತ್ತ ಮುಖ …
Read More »ಶಿವಮೊಗ್ಗ ಜೈಲಿನಲ್ಲಿ ಸ್ಯಾನಿಟೈಸರ್ ಟನಲ್ ಅಳವಡಿಕೆ
ಶಿವಮೊಗ್ಗ: ಇಡೀ ರಾಜ್ಯದಲ್ಲಿಯೇ ಹಲವಾರು ಬಂಧೀಖಾನೆಗಳು ಕೊರೊನಾ ಪಾಸಿಟಿವ್ ಗಳಿಂದ ನಲುಗಿ ಹೋಗಿದ್ದರೂ, ಶಿವಮೊಗ್ಗದ ಜೈಲು ಮಾತ್ರ ಕೊರೊನಾ ಮುಕ್ತವಾಗಿದೆ. ಅಲ್ಲದೇ ಇದೀಗ ಈ ಜೈಲಿನಲ್ಲಿ ಸ್ಯಾನಿಟೈಸರ್ ಟನಲ್ ಅಳವಡಿಸಲಾಗಿದ್ದು, ಇದು ಕೂಡ ರಾಜ್ಯದಲ್ಲೇ ಪ್ರಪ್ರಥಮವಾಗಿದೆ. ರಾಜ್ಯದಲ್ಲಿ ಅಷ್ಟೇ ಅಲ್ಲ ಭಾರತದಲ್ಲಿಯೇ ಅತ್ಯಂತ ವಿಶೇಷತೆ ಹೊಂದಿರುವ ಇಲ್ಲಿ ಬಂದು ನಿಂತ್ರೆ ಸಾಕು ಸ್ವಚ್ಛಂದ ಗಾಳಿ, ಉತ್ತಮ ಪರಿಸರ, ಸ್ವಚ್ಛತೆ, ಸುಂದರ ಪಾರ್ಕ್, ನಮ್ಮ ಕಣ್ಮನ ಸೆಳೆಯುತ್ತೆ. ಇಂತಹ ಸುಸಜ್ಜಿತವಾದ ಜೈಲು …
Read More »ಕಿಲ್ಲರ್ ಕೊರೋನಾ ಹಾವಳಿಗೆ ವಿಶ್ವ ಹೈರಾಣ : 1.18 ಕೋಟಿ ಸೋಂಕಿತರು, ಮೃತರ ಸಂಖ್ಯೆ 5.41 ಲಕ್ಷ..!
ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ/ಮಾಸ್ಕೋ, ಜು.7- ಮಹಾಮಾರಿ ಕಿಲ್ಲರ್ ಕೊರೊನಾ ಕಬಂಧ ಬಾಹುಗಳಲ್ಲಿ ವಿಶ್ವವೇ ಹೈರಾಣಾಗಿದ್ದು, ರೋಗಿಗಳು ಮತ್ತು ಮೃತರÀ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲೇ ಮುಂದುವರಿದಿದೆ. ಜಗತ್ತಿನಾದ್ಯಂತ ಒಟ್ಟು ಸಾವಿನ ಸಂಖ್ಯೆ 5.41 ಲಕ್ಷ ಹಾಗೂ ಸೋಂಕಿತರ ಸಂಖ್ಯೆ 1.18 ಕೋಟಿ ದಾಟಿದೆ. ಇದರ ನಡುವೆಯೂ ವಿಶ್ವದಲ್ಲಿ ಸುಮಾರು 67.42 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದಾರೆ ಅಥವಾ ಗುಣಮುಖರಾಗಿದ್ದಾರೆ. ಜಗತ್ತಿನಾದ್ಯಂತ ನಿನ್ನೆ ಮಧ್ಯರಾತ್ರಿವರೆಗೆ 5,40,848 ಮಂದಿ ಸಾವಿಗೀಡಾಗಿದ್ದು, 1,17,48,938 ಸೋಂಕು ಪ್ರಕರಣಗಳು ವರದಿಯಾಗಿದೆ. ಸಕ್ರಿಯ ಪ್ರಕರಣಗಳ …
Read More »ಯೋಗದಲ್ಲಿ ವಿಶ್ವದಾಖಲೆ ಬರೆದ 6ರ ಬಾಲೆ …..
ಬೆಳೆಯುವ ಪೈರು ಮೊಳಕೆ ಯಲ್ಲೇ ಎಂಬಂತೆ ಮಕ್ಕಳ ಪ್ರತಿಭೆ ಕಿರುವಯಸ್ಸಿನಲ್ಲೇ ಪರಿಚಿತ ವಾಗುತ್ತದೆ ಅದಕ್ಕೆ ನಿದರ್ಶನ ಬೆಂಗಳೂರಿನ ಆರು ವರ್ಷದ ಬಾಲೆ ನಿಖಿತ. ಇಷ್ಟು ಸಣ್ಣ ವಯಸ್ಸಿನಲ್ಲೇ ಯೋಗದಲ್ಲಿ ನೋಬೆಲ್ ವರ್ಡ್‍ರೆಕಾರ್ಡ್ ಮಾಡುವ ಮೂಲಕ ತನ್ನಅಸಾಧಾರಣ ಪ್ರತಿಭೆ ಮೆರೆದ ಪೋರಿಗೆ ಯೋಗವೆಂದರೆ ಅಚ್ಚುಮೆಚ್ಚು. ಈ ಸಣ್ಣ ವಯಸ್ಸಿನಲ್ಲಿ ಅತ್ಯಂತ ಕ್ಲಿಷ್ಟಕರವಾದ ಆಸನಗಳಾದ ಗಂಡಬೇರುಂಡಾಸನ, ಪೂರ್ಣಶಲ ಭಾಸನ, ಮಯೂರಾಸನ, ದೀಪಾಸನ,ಚಕ್ರಬಂಧಾಸನದಂತಹ ಹಲವು ಆಸನ ಕ್ರಿಯೆಗಳನ್ನು ಸಲೀಸಾಗಿ ಮಾಡುವ ನಿಖಿತಾ ಈ ಸಾಧನೆಯಿಂದ …
Read More »ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 600 ವೈದ್ಯರ ಸೇವೆಯನ್ನು ಖಾಯಂಗೊಳಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ
ಬೆಂಗಳೂರು,ಜು.7- ಕಳೆದ ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 600 ವೈದ್ಯರ ಸೇವೆಯನ್ನು ಖಾಯಂಗೊಳಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ತಮ್ಮ ಸೇವೆಯನ್ನು ಖಾಯಂಗೊಳಿಸದಿದ್ದರೆ ನಾಳೆಯಿಂದಲೇ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ಪ್ರಾರಂಭಿಸುವುದಾಗಿ ಗುತ್ತಿಗೆ ವೈದ್ಯರುಎಚ್ಚರಿಕೆ ನೀಡಿದ ಬೆನ್ನಲ್ಲೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ 600 ವೈದ್ಯರ ಸೇವೆಯನ್ನು ಖಾಯಂಗೊಳಿಸಲು ಸೂಚನೆ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಮುಷ್ಕರ …
Read More »ಕೊರೊನಾ ನಿಗ್ರಹ ಕೊವ್ಯಾಕ್ಸಿನ್ ಲಸಿಕೆಯ ಮಾನವ ಪ್ರಯೋಗ ಶೀಘ್ರ ಆರಂಭ ………
ನವದೆಹಲಿ, ಜು.7- ಭಾರತದ ಕೊರೊನಾ ರೋಗಿಗಳಲ್ಲಿ ಭರವಸೆಯ ಆಶಾಕಿರಣ ಮೂಡಿಸಿರುವ ದೇಶದ ಪ್ರಪ್ರಥಮ ಕೋವಿಡ್-19 ವೈರಸ್ ನಿಗ್ರಹ ಲಸಿಕೆಯನ್ನು 375 ಜನರ ಮೇಲೆ ಪ್ರಯೋಗಿಸುವ ಹ್ಯೂಮನ್ ಟ್ರಯಲ್ (ಮಾನವ ಪ್ರಯೋಗ) ಶೀಘ್ರ ಆರಂಭವಾಗಲಿದೆ. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವಕ್ಕೆ ಮುನ್ನವೇ ದೇಶದ ಪ್ರಪ್ರಥಮ ಕೋವಿಡ್-19 ವೈರಸ್ ನಿಗ್ರಹ ಲಸಿಕೆ ಕೊವ್ಯಾಕ್ಸಿನ್ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿತ್ತು. ಈ ನಿಟ್ಟಿನಲ್ಲಿ ದೆಹಲಿಯಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಅಹರ್ನಿಷಿ ಕಾರ್ಯೋನ್ಮುಖವಾಗಿತ್ತು. …
Read More »ನಾಯಿ ಮಾಂಸ ಮಾರಾಟ ನಿಷೇಧಕ್ಕೆ ಭಕ್ಷಕರಿಂದ ಆಕ್ರೋಶ..!
ನವದೆಹಲಿ,ಜು.7- ನಾಗಾಲ್ಯಾಂಡ್‍ನಲ್ಲಿ ನಾಯಿ ಮತ್ತು ಅದರ ಮಾಂಸ ಮಾರಾಟವನ್ನು ನಿಷೇಧಿಸಿರುವುದರ ಬಗ್ಗೆ ಕುಪಿತಗೊಂಡಿರುವ ಸ್ಥಳೀಯರು, ಏಕಾಏಕಿ ನಾಯಿ ಮಾಂಸದೂಟವನ್ನು ನಿಷೇಧಿಸುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗಾಲ್ಯಾಂಡ್ ಅಲ್ಲದೆ ದೇಶದ ಹಲವೆಡೆ ನಾಯಿ ಮಾಂಸವನ್ನು ಹೆಚ್ಚು ಮಾರಾಟ ಮಾಡಲಾಗುತ್ತದೆ. ಮಣಿಪುರ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಕೆಲವು ಗುಡ್ಡಗಾಡು ಪ್ರದೇಶಗಳಲ್ಲಿ ನಾಯಿ ಮಾಂಸವನ್ನು ತಿನ್ನಲಾಗುತ್ತದೆ. ಇಡೀ ಈಶಾನ್ಯ ಪ್ರದೇಶಗಳಲ್ಲಿ ನಾಯಿಗಳ ಕಳ್ಳಸಾಗಣೆಯ ದಂಧೆಯೇ ನಡೆಯುತ್ತಿದೆ. ನಾಗಾಲ್ಯಾಂಡ್ ಮತ್ತು …
Read More »14 ವರ್ಷದ ಬಾಲಕಿಯ ಸುಟ್ಟ ಮೃತದೇಹ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಪತ್ತೆ
ಚೆನ್ನೈ: 14 ವರ್ಷದ ಬಾಲಕಿಯ ಸುಟ್ಟ ಮೃತದೇಹ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಪತ್ತೆಯಾಗಿರುವ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ. ತಿರುಚ್ಚಿಯ ಸೋಮರಸಂಪೆಟ್ಟಾಯ್ ಗ್ರಾಮದಲ್ಲಿ ಕಸದ ರಾಶಿಯ ಪಕ್ಕದಲ್ಲಿ ಬಾಲಕಿಯ ಸುಟ್ಟ ಶವ ಪತ್ತೆಯಾಗಿದೆ. ಸ್ಥಳೀಯರು ಕಸ ವಿಲೇವಾರಿ ಪ್ರದೇಶದ ಬಳಿ ಬಾಲಕಿಯ ಶವವನ್ನು ನೋಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯಕ್ಕೆ ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಬಾಲಕಿ ಸೋಮವಾರ …
Read More »ಬೀದರ್‍ನಲ್ಲಿ 5 ಜನರ ಬಲಿಯೊಂದಿಗೆ ಮತ್ತೆ 51 ಜನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು
ಬೀದರ್: ಗಡಿ ಜಿಲ್ಲೆ ಬೀದರಿನಲ್ಲಿ ಕೊರೊನಾ ಮರಣ ಕೇಕೆ ಮುಂದುವರಿದಿದೆ. ಬೀದರ್‍ನಲ್ಲಿ 5 ಜನರ ಬಲಿಯೊಂದಿಗೆ ಮತ್ತೆ 51 ಜನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದೆ. ಬೀದರಿನಲ್ಲಿ 4 ಹಾಗೂ ಬಸವಕಲ್ಯಾಣದಲ್ಲಿ ಒಬ್ಬರನ್ನು ಕೊರೊನಾಗೆ ಇಂದು ಬಲಿಯಾಗಿದ್ದಾರೆ. ಬೀದರ್, ಬಸವಕಲ್ಯಾಣ, ಭಾಲ್ಕಿ, ಔರಾದ್‍ನಲ್ಲಿ ಸೇರಿ ಒಟ್ಟು 51 ಜನಕ್ಕೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಅಸ್ತಮಾ, ಉಸಿರಾಟ, ಜ್ವರ, ಹೃದಯ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಐವರು ಇಂದು ಸಾವನ್ನಪ್ಪಿದ್ದಾರೆ. ಇಂದು 51 …
Read More »ಕನ್ನಡ ಹಿರಿಯ ನಟಿ ಜಯಂತಿಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರು: ಕನ್ನಡ ಹಿರಿಯ ನಟಿ ಜಯಂತಿ ಅವರು ಅನಾರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಯಂತಿ ಅವರು ಹಲವು ದಿನಗಳಿಂದ ಅಸ್ತಮ ಸಮಸ್ಯೆಯಿಂದ ಬಳಲುತ್ತಿದ್ದು, ಅವರನ್ನು ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅನಾರೋಗ್ಯದಿಂದ ಬಳುತ್ತಿರುವ ಜಯಂತಿ ಅವರಿಗೆ ವಿಕ್ರಂ ಆಸ್ಪತ್ರೆಯ ವೈದ್ಯ ಡಾ.ಸತೀಶ್ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಜಯಂತಿ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಅವರ ಮಗ ಕೃಷ್ಣಕುಮಾರ್, ಅಸ್ತಮ ಸಮಸ್ಯೆಯಿಂದ ಎರಡು …
Read More »