Breaking News

ಜನತಾ ಕರ್ಫ್ಯೂ: ಬಾಗಲಕೋಟೆ ಸಂಪೂರ್ಣ ಬೆಂಬಲ

ಬಾಗಲಕೋಟೆ: ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್‌ ಮಹಾಮಾರಿಗೆ ತಡೆಯೊಡ್ಡಲು ಪ್ರಧಾನಿ ನರೇಂದ್ರ ಮೋದಿಜನತಾ ಕರ್ಫ್ಯೂ ಆಚರಿಸುವಂತೆ ನೀಡಿದ್ದ ಕರೆಗೆ ಬಾಗಲಕೋಟೆಯಲ್ಲಿ ಬೆಳಿಗ್ಗೆಯಿಂದಲೇ ಹೋಟೆಲ್ ಗಳು, ಅಂಗಡಿಗಳು ಸಂಪೂರ್ಣ ಮುಚ್ಚಿ ಬೆಂಬಲ ಸೂಚಿಸಿದೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದು, ವ್ಯಾಪಾರ ವಹಿವಾಟುಗಳು ಬಂದ್ ಆಗಿವೆ. ಕೆಎಸ್ ಆರ್ ಟಿಸಿ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕಪ್ಯೂ೯ ಹಿನ್ನೆಲೆಯಲ್ಲಿ ಮನೆಯಿಂದ ಹೊರಗಡೆ ಜನ ಬರುತ್ತಿಲ್ಲ. ಟ್ಯಾಕಿ ಚಾಲಕರ ಸಂಘ, ಹೊಟೇಲ್, ಉಪಹಾರ …

Read More »

ಎಸ್ಎಸ್ಎಲ್ ಸಿ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗುವುದು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ರಾಜ್ಯದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಎಸ್ಎಸ್ಎಲ್ ಸಿ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ. ಭಾನುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡುದ ಅವರು, ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರಕಾರ ಎಲ್ಲ ರೀತಿಯ ಕ್ರಮ ತೆಗೆದುಕೊಂಡಿದೆ. ಯಾರೂ ಹೆದರುವ ಅಗತ್ಯವಿಲ್ಲ. ಸಧ್ಯ ನಿಗದಿಯಾಗಿದ್ದ ಚುನಾವಣೆ, ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿದರು. ಬಾಲಬ್ರೂಯಿ ಅತಿಥಿಗ್ರಹವನ್ನು ಕೊರೋನಾ ವಾರ್ ಹೌಸ್ ಆಗಿ ಪರಿವರ್ತಿಸಲಾಗುವುದು. ಪಡಿತರ ಆಹಾರ ಧಾನ್ಯವನ್ನು 2 ತಿಂಗಳದ್ದನ್ನು ಒಮ್ಮೆಲೇ ನೀಡಲಾಗುವುದು. …

Read More »

ಕೊರೊನಾ ವಿರುದ್ಧ ಭಾರತದ ಯುದ್ಧ- ಪ್ರಧಾನಿ ಮೋದಿ ಕರೆಗೆ ಓಗೊಟ್ಟ ಜನ

ದೇಶದಲ್ಲಿ ಕೊರೊನಾ ಸೋಂಕು 300ರ ಗಡಿದಾಟಿದೆ. ಸೋಂಕು ತಡೆಗಟ್ಟಲು ನಮಗೆ ನಾವೇ ಮುಂಜಾಗ್ರತೆ ವಹಿಸಿ ಮಹಾಮಾರಿ ಹಬ್ಬುವುದನ್ನ ನಿಯಂತ್ರಿಸಬೇಕಿದೆ. ಪ್ರಧಾನಿ ಮೋದಿ ದೇಶದ ಜನತೆಗೆ ಸ್ವಯಂ ಗೃಹಬಂಧನ ವಿಧಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ಇದಕ್ಕೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ದೇಶದ ಮೇಲೆ ಪರಕೀಯರು ದಾಳಿ ಮಾಡಿದ್ರೆ ಭಾರತೀಯರೆಲ್ಲರೂ ಹೇಗೆ ಎದೆಕೊಟ್ಟು ಹೋರಾಟ ಮಾಡಲು ಸಿದ್ಧವಾಗುವಿರೋ ಹಾಗೇ ಇಂದು ಕಾಣದ ಶತ್ರುವಿನ ವಿರುದ್ಧ ಜನತಾ ಕಫ್ರ್ಯೂ ವಿಧಿಸಿಕೊಂಡು ಹೋರಾಡಬೇಕಿರೋದು ದೇಶದ ಪ್ರಜೆಯಾಗಿ …

Read More »

ಮಹಾಮಾರಿ ಕರೋನಾ ವಿರುದ್ಧ ದೇಶಾದ್ಯಂತ ಜನತಾ ಕಫ್ರ್ಯೂ ಜಾರಿ, ಮನೆಸೇರಿದ ಜನ

ಬೆಂಗಳೂರು,ಮಾ.22- ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೋನ ಸೋಂಕು ಹಬ್ಬದಂತೆ ನಾಳೆ ಜನತಾ ಕಫ್ರ್ಯೂ(ಸ್ವಯಂ ನಿರ್ಬಂಧ) ಹಾಕಿಕೊಳ್ಳಲು ಪ್ರಧಾನಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಈಡಿ ಭಾರತವೇ ಸ್ತಬ್ಧವಾಗಿದೆ. ದಿನದ ವಹಿವಾಟು ಸ್ಥಗಿತಗೊಂಡರೂ 8 ಗಂಟೆಗೂ ಅಧಿಕ ಕಾಲ ನಿರ್ಬಂಧ ವಿಧಿಸುವುದರಿಂದ ಸೋಂಕು ಹರಡುವಿಕೆಗೆ ಕಡಿವಾಣ ಹಾಕಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನತಾಕಫ್ರ್ಯೂ ಘೋಷಿಸಿ ರಾಷ್ಟ್ರದ ಜನತೆ ಸಹಕರಿಸುವಂತೆ ಮನವಿ ಮಾಡಿದ್ದರು. ಪ್ರಧಾನಿ ಮನವಿಗೆ …

Read More »

ಇಂದು ವಿಶ್ವಜಲ ದಿನ: ನೀರು ಜೀವ ಸಂಕುಲಕ್ಕೆ ಸಂಜೀವಿನಿ, ಜೀವಜಲ ರಕ್ಷಿಸಿ-ಮನುಕುಲ ಉಳಿಸಿ

ಸೃಷ್ಟಿಯ ಮೂಲವೇ ಪಂಚಭೂತಗಳು. ಪಂಚಭೂತಗಳಿಲ್ಲದೆ ಯಾವುದೇ ಜೀವಿಯೂ ಜೀವಿಸಲು ಸಾಧ್ಯವಿಲ್ಲ. ಆಕಾಶ, ಜಲ, ಭೂಮಿ, ಅಗ್ನಿ ಮತ್ತು ವಾಯು ಈ ಪಂಚಭೂತಗಳಿಂದಲೇ ಪ್ರಕೃತಿಯ ಸೃಷ್ಟಿಯಾಗಿದೆ. ನೀರು ಪ್ರಕೃತಿಯ ಅವಿಭಾಜ್ಯ ಅಂಗವಾಗಿದ್ದು, ಪ್ರತಿ ಜೀವ ಸಂಕುಲಕ್ಕೂ ಸಂಜೀವಿನಿ. ಕ್ರಿಮಿಕೀಟಾದಿ, ಗಿಡ-ಮರಗಳಿಗೂ ನೀರು ಅತ್ಯಗತ್ಯ. ಇತಿಹಾಸ ಕೆದಕಿದಾಗ ಈಜಿಫ್ಟ್ ಸಿಂಧೂ, ಹರಪ್ಪ, ಮಹೆಂಜೊದಾರೊನಂತಹ ನಾಗರೀಕತೆಗಳು ಹುಟ್ಟಿದ್ದು ನದಿಯ ಪಾತ್ರಗಳಲ್ಲೇ. ನೀರಿನ ಮೂಲಗಳಿಲ್ಲದಿದ್ದರೆ ನಾಗರಿಕತೆಗಳೇ ಇಲ್ಲ. ಭೂಮಿಯ ಮುಕ್ಕಾಲು ಭಾಗ ನೀರಿನಿಂದ ಅವರಿಸಿದ್ದರೂ ಇಡೀ …

Read More »

ನನ್ನ ಮಾಧ್ಯಮ ಗೆಳೆಯ #ಗೋವಿಂದ್ ಇಂದು ನನಗೆ ಹೇಳಿದ ವಿಷಯ ಇಲ್ಲಿ ಹಂಚಿಕೊಳ್ಳುವುದಕ್ಕೆ ಅತ್ಯಂತ ಯೋಗ್ಯವೆನಿಸಿದೆ.

ನನ್ನ ಮಾಧ್ಯಮ ಗೆಳೆಯ #ಗೋವಿಂದ್ ಇಂದು ನನಗೆ ಹೇಳಿದ ವಿಷಯ ಇಲ್ಲಿ ಹಂಚಿಕೊಳ್ಳುವುದಕ್ಕೆ ಅತ್ಯಂತ ಯೋಗ್ಯವೆನಿಸಿದೆ. ಗೋವಿಂದ್ #ಪ್ರಜಾಟಿವಿಚಾನೆಲ್ ನ ಅನುಭವೀ ವರದಿಗಾರ. ಕಳೆದ ಶುಕ್ರವಾರ 13,3,2020 ದಂದು ಬೆಂಗಳೂರಿನ ಬಾಣಸವಾಡಿಯಲ್ಲಿರುವ ತನ್ನ ಮನೆಯನ್ನು ಬೆಳಿಗ್ಗೆ 5.30 ಗೆ ಬಿಟ್ಟ ಗೋವಿಂದ್ ಕೇವಲ ಎರಡೂವರೆ ದಿನಗಳಲ್ಲಿ ಮೈಸೂರಿಗೆ ನಡೆದು 15.3.2020, ಭಾನುವಾರದಂದು ಸಂಜೆ 5.30 ಗಂಟೆಗೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ತನ್ನ ಮನದಾಳದ ಪ್ರಾರ್ಥನೆ ಸಲ್ಲಿಸಿ ಬಂದಿದ್ದಾರೆ. ಮೊದಲ …

Read More »

104 ಸಹಾಯವಾಣಿ ಕೇಂದ್ರಕ್ಕೆ ಶ್ರೀ ರಾಮುಲು ಭೇಟಿ

ಹುಬ್ಬಳ್ಳಿ : 104 ಆರೋಗ್ಯ ಸಹಾಯವಾಣಿ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲನೆ ನಡೆಸಿ ಉದ್ಯೋಗಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಇಲ್ಲಿ ಸುಮಾರು 336 ಉದ್ಯೋಗಿಗಳು 104 ಕಾಲ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೊರೋನಾ ವೈರಸ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಬಗೆ, ಅವರ ಆತಂಕ ನಿವಾರಣೆಯ ಚಾಣಾಕ್ಷತನ ನೋಡಿ ಸಂತಸವಾಯಿತು. ಇದೇ ವೇಳೆ ಕಾಲ್ ಸೆಂಟರ್ ಗೆ ಕರೆ ಮಾಡಿದ ಇಬ್ಬರು ವ್ಯಕ್ತಿಗಳ ಜೊತೆಗೆ ಮಾತನಾಡಿ ಸ್ಥೈರ್ಯ ತುಂಬುವ ಕೆಲಸ …

Read More »

ಬೆಂಗಳೂರು, ಮಾ.21: ಸಾರ್ವತ್ರಿಕ ರಜಾ ದಿನಗಳು ಸೇರಿದಂತೆ ಮಾ.31 ರವರೆಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಯಾವ ಅಧಿಕಾರಿಯೂ ರಜೆ ತೆಗೆದುಕೊಳ್ಳುವಂತಿಲ್ಲ ಎಂದು ಇಲಾಖೆ ಸೂಚನೆ ನೀಡಿದೆ. ಈ ಹಿಂದೆ ಎರಡು ವಾರಗಳಿಗೆ ಸೀಮಿತವಾಗಿದ್ದ ನಿರ್ಬಂಧ ಹೇರಲಾಗಿತ್ತು. ಆದರೆ, ಕೊರೋನ ಮಹಾಮಾರಿ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದ್ದು, ಈ ತಿಂಗಳ ಅಂತ್ಯದವರೆಗೂ ಆರೋಗ್ಯ ಸೇವೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ರಜೆ ನೀಡಲಾಗುವುದಿಲ್ಲ ಎಂದು ಸೂಚನೆಯಲ್ಲಿ ಹೇಳಲಾಗಿದೆ.

Read More »

ಗಮನಿಸಿ: ನಾಳೆ ಖಾಸಗಿ ಆಸ್ಪತ್ರೆ ಒಪಿಡಿಯೂ ಬಂದ್.!

ನಾಳೆ ದೇಶಾದ್ಯಂತ ಜನತಾ ಕರ್ಪ್ಯೂಗೆ ಪ್ರಧಾನಿ ಮೋದಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ ಒಪಿಡಿಗಳನ್ನು ಬಂದ್ ಮಾಡಲಾಗುವುದು. ತುರ್ತು ಚಿಕಿತ್ಸೆ ಮಾತ್ರ ಇರುತ್ತದೆ. ಕೊರೋನಾ ಸೋಂಕು ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ನಾಳೆ ಜನತಾ ಕರ್ಫ್ಯೂಗೆ ಮೋದಿ ಕರೆ ನೀಡಿದ್ದು, ಹೀಗಾಗಿ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡುವಂತೆ ಐಎಂಎ ಸೂಚನೆ ನೀಡಿದೆ. ತುರ್ತು ಚಿಕಿತ್ಸೆ ಮಾತ್ರ ನೀಡಲಾಗುವುದು. ಹೊರರೋಗಿಗಳ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದು ಸೋಂಕು ತಗುಲುವ ಸಾಧ್ಯತೆ …

Read More »

ಮೂಡಲಗಿಯಲ್ಲಿ ಜನತಾ ಕರ್ಫ್ಯೂ ಜಾಗೃತಿ ಆಂದೋಲನಕ್ಕೆ ಚಾಲನೆ

ಮೂಡಲಗಿ : ಪ್ರಪಂಚಾದ್ಯಂತ ವ್ಯಾಪಿಸಿರುವ ಕೊರೋನಾ ವೈರಸ್ ಹರಡುವದನ್ನು ತಡೆಯಲು, ನಾಗರಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿರುವ ನಾಳಿನ ರವಿವಾರದ ‘ಜನತಾ ಕಫ್ರ್ಯೂ’ ಜಾಗೃತಿ ಆಂದೋಲನಕ್ಕೆ ಶಾಸಕ ಹಾಗೂ ಕ.ಹಾ.ಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮೂಡಲಗಿಯಲ್ಲಿಂದು ಚಾಲನೆ ನೀಡಲಾಯಿತು. ಅರಭಾವಿ ಮಂಡಲ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪೂರ್ವ ಭಾವಿ ಜಾಗೃತಿ ಆಂದೋಲನಕ್ಕೆ ಬಿಜೆಪಿ ಪದಾಧಿಕಾರಿಗಳು ಹಾಗೂ …

Read More »