ಬೆಂಗಳೂರು: ಜನ ಯಾರನ್ನು ನಂಬಬೇಕೋ? ಯಾವುದನ್ನು ನಂಬಬೇಕೋ ಗೊತ್ತಾಗುತ್ತಿಲ್ಲ. ಕೊರೊನಾ ಸಂಬಂಧ ವೈದ್ಯಕೀಯ ವಸ್ತು, ಔಷಧಿಗಳ ಖರೀದಿಯಲ್ಲಿ ಭಾರೀ ಗೋಲ್‍ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಆರೋಗ್ಯ ಇಲಾಖೆ ನೀಡುವ ಕೊರೋನಾ ಹೆಲ್ತ್ ಬುಲೆಟಿನ್‍ನಲ್ಲಿ ನಿತ್ಯ ನೀಡುವ ಅಂಕಿ ಸಂಖ್ಯೆಯನ್ನೂ ಅನುಮಾನದಿಂದ ನೋಡುವ ಸಂದರ್ಭ ಎದುರಾಗಿದೆ. ಯಾಕೆಂದರೆ ಕೊರೋನಾ ಸಾವು ನೋವುಗಳ ಲೆಕ್ಕವನ್ನು ಮುಚ್ಚಿಟ್ಟಿರೋದು ಕೂಡ ಇದೀಗ ಜಗಜ್ಜಾಹೀರಾಗಿದೆ. ಯಾವುದೋ ಕಾರಣಕ್ಕೆ, ಎಂದೋ ಸತ್ತವರನ್ನು ಕೊರೋನಾ ಸಾವಿನ ಪಟ್ಟಿಗೆ …
Read More »ನನ್ನ ಅಣ್ಣನ ಆಶೀರ್ವಾದಿಂದ ನನಗೂ, ನನ್ನ ಪತ್ನಿಗೂ ಕೊರೊನಾ ನೆಗೆಟಿವ್ ವರದಿ ಬಂದಿದೆ ಎಂದು ನಟ ಧ್ರುವ ಸರ್ಜಾ ಟ್ವೀಟ್
ಬೆಂಗಳೂರು: ನನ್ನ ಅಣ್ಣನ ಆಶೀರ್ವಾದಿಂದ ನನಗೂ, ನನ್ನ ಪತ್ನಿಗೂ ಕೊರೊನಾ ನೆಗೆಟಿವ್ ವರದಿ ಬಂದಿದೆ ಎಂದು ನಟ ಧ್ರುವ ಸರ್ಜಾ ಅವರು ಟ್ವೀಟ್ ಮಾಡಿದ್ದಾರೆ. ಜುಲೈ 15ರಂದು ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾಗೆ ಕೊರೊನಾಗೆ ದೃಢವಾಗಿತ್ತು. ತಕ್ಷಣ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೇ ತಮ್ಮ ಜೊತೆ ಸಂಪರ್ಕ ಹೊಂದಿದ್ದವರಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು. ಇಬ್ಬರಿಗೂ ಕೊರೊನಾ ಗುಣಲಕ್ಷಣ ಕಡಿಮೆ ಇದ್ದುದ್ದರಿಂದ ವೈದ್ಯರು ಮನೆಯಲ್ಲಿಯೇ ಕ್ವಾರಂಟೈನ್ …
Read More »ನನ್ನ ಕಣ್ಮುಂದೆ ನಮ್ಮ ಜನರು ಸೋಂಕಿತರಾಗೋದನ್ನು ನೋಡಲಾರೆ:ಒಂದೇ ದಿನ 10,576 ಪ್ರಕರಣಗಳು ವರದಿ
ಮುಂಬೈ: ಮಹಾರಾಷ್ಟ್ರ ಕೊರೊನಾ ಸೋಂಕಿತರಲ್ಲಿ ಮಹಾ ದಾಖಲೆಯನ್ನು ಬರೆದಿದ್ದು, ಬುಧವಾರ ಒಂದೇ ದಿನ 10,576 ಪ್ರಕರಣಗಳು ವರದಿಯಾಗಿವೆ. ಬುಧವಾರ ಕೊರೊನಾಗೆ ಮಹಾರಾಷ್ಟ್ರದಲ್ಲಿ 280 ಜನರನ್ನು ಬಲಿ ಪಡೆದುಕೊಂಡಿದೆ. ದೇಶದಲ್ಲಿ ಇದುವರೆಗೂ 11 ಲಕ್ಷಕ್ಕೂ ಅಧಿಕ ಜನರು ಕೊರೊನಾ ಪ್ರಕರಣಗಳಿವೆ. ಮಹಾರಾಷ್ಟ್ರ ಕೊರೊನಾ ಪೀಡಿತ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿದೆ. 24 ಗಂಟೆಯಲ್ಲಿ 10,576 ಪ್ರಕರಣ ಸೇರಿ ಸೋಂಕಿತರ ಸಂಖ್ಯೆ 3,37,607ಕ್ಕೆ ಏರಿಕೆಯಾಗಿದೆ. ಇದುವರೆಗೂ ಮಹಾರಾಷ್ಟ್ರದಲ್ಲಿ 12,556 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಮುಂಬೈನಲ್ಲಿ …
Read More »ಬೆಳಗಾವಿ ಜಿಲ್ಲಾ ಆಸ್ಪತ್ರೆ ಭೀಮ್ಸ್ ಸುತ್ತ ಮುತ್ತಲು ನಿಷೇದಾಜ್ಞೆ, ಮೂವರನ್ನು ವಶಕ್ಕೆ ಪಡೆದಪೋಲೀಸರು,
ಬೆಳಗಾವಿ- ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಕೋವೀಡ್ ವಾರ್ಡಿನಲ್ಲಿ ಕಿಡಗೇಡಿಗಳು ನಡೆಸಿದ ಹಲ್ಲೆ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಮಂಧಿಸಿದೆ ಪೋಲೀಸರು ಮೂವರನ್ನು ವಶಕ್ಕೆ ಪಡೆದು,ವಿಚಾರಣೆ ಆರಂಭಿಸಿದ್ದಾರೆ. ನಿನ್ನೆ ರಾತ್ರಿ ನಡೆದ ಕಿಡಗೇಡಿಗಳ ಪುಂಡಾಟಿಕೆಗೆ ಐವರು ಜನ ಗಾಯಗೊಂಡಿದ್ದು ಒಂದು ಅಂಬ್ಯುಲೆನ್ಸ್ ಸಂಪೂರ್ಣವಾಗಿ ಭಸ್ಮವಾಗಿ ಪೋಲೀಸ್ ವಾಹನ ಸೇರಿದಂತೆ ಒಟ್ಟು ಐದು ವಾಹನಗಳು ಜಖಂಗೊಂಡಿವೆ. ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೋಲೀಸರು, ಮೂವರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ,ಬೆಳಗಾವಿಯ ಎಪಿಎಂಸಿ ಪೋಲೀಸರು ಇಡೀ …
Read More »ಔಷಧಿ ಸಿಂಪಡಿಸಲು ತೆರಳುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು……
ಚಿಕ್ಕಮಗಳೂರು: ಅಡಕೆ ತೋಟಕ್ಕೆ ಔಷಧಿ ಸಿಂಪಡಿಸಲು ಕಬ್ಬಿಣದ ಏಣಿಯನ್ನು ತೋಟದಲ್ಲಿ ಹೊತ್ತುಯ್ಯುವಾಗ ತೋಟದಲ್ಲಿ ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕ ಸಾವನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ದುಗ್ಗಲಮಕ್ಕಿ ಗ್ರಾಮದಲ್ಲಿ ನಡೆದಿದೆ. ಮೃತ ಕಾರ್ಮಿಕನನ್ನ 28 ವರ್ಷದ ರಮೇಶ್ ಎಂದು ಗುರುತಿಸಲಾಗಿದೆ. ದಶಕಗಳ ಹಿಂದೆ ಕಾಫಿ-ಅಡಕೆ ತೋಟಗಳಲ್ಲಿ ಮರಗಸಿ, ಮೆಣಸು ಕೊಯ್ಯಲು ಹಾಗೂ ಔಷಧಿ ಸಿಂಪಡಿಸಲು ಬಿದಿರಿನ ಏಣಿಗಳನ್ನ ಬಳಸುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಬ್ಬಿಣದ ಏಣಿ …
Read More »ಗೇಮ್ ಆಡಬೇಡ ಎಂದು ತಾಯಿ ಮೊಬೈಲನ್ನು ಕಿತ್ತುಕೊಂಡಿದಕ್ಕೆ 12 ವರ್ಷದ ಮಗನೊಬ್ಬ ಆತ್ಮಹತ್ಯೆ
ಮುಂಬೈ: ಗೇಮ್ ಆಡಬೇಡ ಎಂದು ತಾಯಿ ಮೊಬೈಲನ್ನು ಕಿತ್ತುಕೊಂಡಿದಕ್ಕೆ 12 ವರ್ಷದ ಮಗನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಇತ್ತೀಚೆಗೆ ಯುವಜನತೆ ಮೊಬೈಲ್‍ಗೆ ಅಂಟಿಕೊಂಡೆ ಇರುತ್ತಾರೆ. ಅದರಲ್ಲಿ ಗೇಮ್ ಆಡುವ ಮತ್ತು ವಿಡಿಯೋ ಮಾಡುವ ಗೀಳಿಗೆ ಬಿದ್ದಿರುತ್ತಾರೆ. ಹೀಗೆ ಮೊಬೈಲ್ ಚಟಕ್ಕೆ ಬಿದ್ದ 12 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನ ಶಿವಾಜಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲೇ ಇದ್ದ ಬಾಲಕ …
Read More »ಹುಟ್ಟುಹಬ್ಬದ ದಿನವೇ ಭೀಮಾತೀರದ ನಟೋರಿಯಸ್ ಅರೆಸ್ಟ್
ವಿಜಯಪುರ: ಭೀಮಾತೀರದ ನಟೋರಿಯಸ್ ಮಹಾದೇವ ಸಾಹುಕಾರ್ ಹುಟ್ಟುಹಬ್ಬದ ದಿನದಂದೆ ಪೊಲೀಸರ ಅತಿಥಿಯಾಗಿದ್ದಾನೆ. ಜಿಲ್ಲೆಯ ಇಂಡಿ ತಾಲೂಕಿನ ಉದ್ಯಮಿಗೆ 5 ಕೋಟಿ ನಗದು ಅಥವಾ 3 ಕೆ.ಜಿ. ಚಿನ್ನಕ್ಕೆ ಬೇಡಿಕೆ ಇಟ್ಟಿದ ಆರೋಪದಡಿ ಬಂಧನವಾಗಿದ್ದಾನೆ. ಚಿನ್ನಾಭರಣದ ವ್ಯಾಪಾರಿಯಾಗಿರುವ ನಾಮದೇವ್ ಡಾಂಗೆ ಎಂಬವರಿಗೆ ಬೇಡಿಕೆ ಇಟ್ಟಿದ್ದನು. 5 ಕೋಟಿ ಕೊಡದೇ ಇದ್ರೇ ಕಾಲು, ತಲೆ ಕಟ್ ಮಾಡ್ತೀನಿ. ಯಾರಿಗಾದ್ರೂ ಹೇಳಿದ್ರೆ ಮನೆಗೆ ಹೊಕ್ಕು ತಲೆಗೆ ಗುಂಡು ಹೊಡೆಯುತ್ತೇನೆಂದು ಧಮ್ಕಿ ಹಾಕಿದ್ದನು. ಇನ್ನು ಈ …
Read More »ಐಸಿಯುನಲ್ಲಿದ್ದ ‘ಕೊರೊನಾ’ ರೋಗಿ ಸಾವು : ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಗೆ ಬೆಂಕಿ ಹಚ್ಚಿ ಕುಟುಂಬಸ್ಥರ ಆಕ್ರೋಶ
ಬೆಳಗಾವಿ : ಕೊರೊನಾ ಸೋಂಕಿತ ರೋಗಿಯೊಬ್ಬರು ಚಿಕಿತ್ಸೆ ಸಿಗದೇ ಮೃತಪಟ್ಟ ಹಿನ್ನೆಲೆ ರೊಚ್ಚಿಗೆದ್ದ ಕುಟುಂಬಸ್ಥರು ಆಸ್ಪತ್ರೆ ಮುಂದೆ ಗಲಾಟೆ ನಡೆಸಿದ ಘಟನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಐಸಿಯುನಲ್ಲಿದ್ದ ಕೊರೊನಾ ರೋಗಿ ಮೃತಪಟ್ಟ ಹಿನ್ನೆಲೆ ರೊಚ್ಚಿಗೆದ್ದ ಕುಟುಂಬಸ್ಥರು ಆಸ್ಪತ್ರೆ ಮುಂದೆ ಗಲಾಟೆ ನಡೆಸಿದ್ದಾರೆ, ಆಂಬುಲೆನ್ಸ್ ಗೆ ಬೆಂಕಿ ಹಚ್ಚಿ ಆಸ್ಪತ್ರೆ ಮುಂಭಾಗದ ಗಾಜು ಪುಡಿ ಪುಡಿ ಮಾಡಿದ್ದಾರೆ. ಬಳಿಕ ಆಸ್ಪತ್ರೆಯ ವೈದ್ಯರ ಮೇಲೂ ಕೂಡ ಹಲ್ಲೆ ನಡೆಸಲಾಗಿದೆ. ಘಟನೆ ನಡೆದ …
Read More »ಮಹಾಮಳೆಗೆ ಮನೆ ಕಳೆದುಕೊಂಡು 2 ವರ್ಷವಾದ್ರೂ ಸೂರು ಕೊಡದ ಜಿಲ್ಲಾಡಳಿತ
ಮಡಿಕೇರಿ: ಸ್ವರ್ಗದಂತಹ ಸ್ಥಳವಾಗಿರುವ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದಲ್ಲಿ 2018ರ ಆಗಸ್ಟ್ ತಿಂಗಳಲ್ಲಿ ಕಂಡು ಕೇಳರಿಯದಂತಹ ಭೀಕರ ಭೂಕುಸಿತ ಮತ್ತು ಜಲಪ್ರಳಯ ಸಂಭವಿಸಿತ್ತು. ಈ ವೇಳೆ ಮುಕ್ಕೋಡ್ಲಿನ ಪರಮೇಶ್ವರ್ ನಾಯಕ್ ಮತ್ತು ಜಯಮ್ಮ ದಂಪತಿ ನೆಲೆಸಿದ್ದ ಮನೆಯ ಪಕ್ಕದಲ್ಲೇ ಹರಿಯುತ್ತಿದ್ದ ಹೊಳೆ ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ಮನೆಯಿಂದ 30 ಅಡಿ ದೂರದಲ್ಲಿದ್ದ ಚಿಕ್ಕ ಹೊಳೆ ನೋಡನೋಡುತ್ತಿದ್ದಂತೆ ನದಿಯಾಗಿ ಪರಿವರ್ತನೆ ಆಗಿತ್ತು. ಇದರಿಂದ ಕಷ್ಟಪಟ್ಟು ಕಟ್ಟಿದ್ದ ಮನೆಯ ಒಂದೊಂದೇ ಭಾಗ …
Read More »ಬೆಳಗಾವಿ ಯಲ್ಲಿ ಒಟ್ಟು 219 ಜನ ಸೊಂಕಿತರು ಪತ್ತೆ..
ಬೆಳಗಾವಿ ಜಿಲ್ಲೆಯಲ್ಲಿ ಇಂದು ಬುಧವಾರ ಶಾಕಿಂಗ್ ಸುದ್ಧಿ ಹೊರಬಿದ್ದಿದೆ ಇವತ್ತು ಒಂದೇ ದಿನ ಬೆಳಗಾವಿ ಜಿಲ್ಲೆಯಲ್ಲಿ ಬರೊಬ್ಬರಿ 219 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಇಂದು ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಒಟ್ಟು 219 ಜನ ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಡಬಲ್ ಸಂಚ್ಯುರಿ ಬಾರಿಸಿ 1315 ಕ್ಕೆ ಏರಿಕೆಯಾಗಿದೆ ಬೆಳಗಾವಿ ಜಿಲ್ಲೆಯ 859 ಜನರಲ್ಲಿ ಸೊಂಕು ಸಕ್ರೀಯವಾಗಿದೆ.
Read More »