Breaking News

ಗದಗ್​​​ನಲ್ಲಿ ಮೂಲಭೂತ ಸೌಕರ್ಯವಿಲ್ಲದೇ ಪರದಾಡುತ್ತಿರುವ ಸ್ಥಳೀಯರು: ಕ್ಯಾರೇ ಎನ್ನದ ಜನಪ್ರತಿನಿಧಿಗಳು

ಗದಗ(ಜು.23): ಗದಗ ಜಿಲ್ಲೆ ನರಗುಂದ ತಾಲೂಕಿನ ಮೂಗನೂರು ಎನ್ನುವ ಗ್ರಾಮದಲ್ಲಿ ಸಾಕಷ್ಟು ವರ್ಷಗಳ ನಂತರ ಸುಮಾರು ನಲವತ್ತು ಕುಟುಂಬಗಳಿಗೆ ಇಂದಿರಾ ಆವಾಸ್ ಯೋಜನೆಯಡಿ ಅರ್ಹ ಫಲಾನುಭವಿಗಳ ಅನ್ವಯ ಆಶ್ರಯ ಮನೆ ದೊರೆತಿವೆ. ಮೂಲಭೂತ ಸೌಕರ್ಯಗಳ ಸಮೇತ ಆಶ್ರಯ ಕಾಲೋನಿ ನಿರ್ಮಿತವಾಗಬೇಕಾಗಿತ್ತು. 1995ರಲ್ಲಿಯೇ ಜನತಾ ಮನೆಗಳು ನಿರ್ಮಾಣವಾಗಿವೆ. ಆದರೆ ಅಂದಿನಿಂದ ಈವರೆಗೂ ಸರಿಯಾದ ಮೂಲಭೂತ ಸೌಕರ್ಯಗಳು ಇಲ್ಲಿನ ನಿವಾಸಿಗಳಿಗೆ ಸಿಕ್ಕಿಲ್ಲ. ಮಳೆಗಾಲ ಬಂತೆಂದರೆ ಸಾಕು ಇಲ್ಲಿನ ರಸ್ತೆಗಳೆಲ್ಲ ಕೆಸರುಗದ್ದೆಗಳಾಗಿ ಮಾರ್ಪಾಡಾಗುತ್ತವೆ. ಇಂತಹ …

Read More »

ಬೈಕ್ ಡಿಕ್ಕಿ – ಕರ್ತವ್ಯಕ್ಕೆ ತೆರಳುತ್ತಿದ್ದ ಎಎಸ್‍ಐ ಸಾವು

ಕೋಲಾರ: ಎರಡು ಬೈಕ್‍ಗಳ ನಡುವೆ ನಡೆದ ಅಪಘಾತದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಎಎಸ್‍ಐ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಶ್ರೀನಿವಾಸಪುರ ಪೊಲೀಸ್ ಠಾಣೆಯ ಎಎಸ್‍ಐ ಮಂಜುನಾಥ್ (52) ಮೃತಪಟ್ಟವರು. ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಶಿವಪುರ ಗ್ರಾಮದ ಬಳಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಕರ್ತವ್ಯಕ್ಕೆ ತೆರಳುವ ವೇಳೆ ಎದುರಿಗೆ ಬಂದ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಎಎಸ್‍ಐ ಸಾವನ್ನಪ್ಪಿದ್ದಾರೆ.ಬುಧವಾರ ರಾತ್ರಿ ಕೋಲಾರದಿಂದ ಶ್ರೀನಿವಾಸಪುರಕ್ಕೆ ಕರ್ತವ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಈ ಘಟನೆ …

Read More »

ಡಿಸೆಂಬರ್ 31ರವರೆಗೆ ವರ್ಕ್ ಫ್ರಂ ಹೋಂ……

ನವದೆಹಲಿ: ಡಿಸೆಂಬರ್ 31ರವರೆಗೆ ವರ್ಕ್ ಫ್ರಂ ಹೋಂ ಮುಂದುವರಿಸುವಂತೆ ಖಾಸಗಿ ಕಂಪನಿಗಳಿಗೆ ಸರ್ಕಾರ ತಿಳಿಸಿದೆ. ದೇಶದಲ್ಲಿ ಕೊರೊನಾ ಆರ್ಭಟ ಹೆಚ್ಚಳವಾಗ್ತಿದ್ದಂತೆ ಸರ್ಕಾರದ ಸಲಹೆ ಮೇರೆಗೆ ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ತಿಳಿಸಿದ್ದವು. ಐಟಿ ಕಂಪನಿಗಳ ಶೇ.85 ರಷ್ಟು ಉದ್ಯೋಗಿಗಳು ಸದ್ಯ ಮನೆಯಿಂದ ಕೆಲಸ ಮಾಡುತ್ತಿದ್ದಾರೆ.ದೇಶವು ಅನ್‍ಲಾಕ್ ಆಗಿದ್ದರೂ ಕೊರೊನಾ ಆತಂಕ ಮಾತ್ರ ಕಡಿಮೆಯಾಗಿಲ್ಲ. ಸರ್ಕಾರ ಜನದಟ್ಟಣೆ ತಡೆಯುವ ಉದ್ದೇಶದಿಂದ ಐಟಿ, ಬಿಪಿಓ ಸೇರಿದಂತೆ ಖಾಸಗಿ ಕಂಪನಿಗಳು …

Read More »

ಕರ್ಮ ಹಿಂದಿರುಗುತ್ತದೆ’- ಕಂಗನಾ ರನೌತ್ ಹೋರಾಟಕ್ಕೆ ಟೀಂ ಇಂಡಿಯಾ ಆಟಗಾರನ ಬೆಂಬಲ

ಮುಂಬೈ: ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ಸಾವನ್ನಪ್ಪಿದ ಬಳಿಕ ಬಾಲಿವುಡ್‍ನಲ್ಲಿ ನೆಪೋಟಿಸಂ ಕುರಿತು ಮತ್ತೊಮ್ಮೆ ಭಾರೀ ಚರ್ಚೆ ನಡೆಯುತ್ತಿದೆ. ನಟಿ ಕಂಗನಾ ರನೌಟ್ ಹಲವು ಬಾಲಿವುಡ್‍ನ ಕೆಲ ಗಣ್ಯರ ಮೇಲೆ ವಿಮರ್ಶೆಗಳನ್ನು ಮಾಡಿದ್ದರು. ಸದ್ಯ ರಂಗನಾ ಅವರಿಗೆ ಟೀಂ ಇಂಡಿಯಾ ಕ್ರಿಕೆಟಿಗ ಮನೋಜ್ ತಿವಾರು ಬೆಂಬಲ ನೀಡಿ ಟ್ವೀಟ್ ಮಾಡಿದ್ದಾರೆ. ಸುಶಾಂತ್ ಸಿಂಗ್ ಸಾವಿಗೆ ಬಾಲಿವುಡ್‍ನಲ್ಲಿರುವ ನೆಪೋಟಿಸಂ ಕಾರಣ ಎಂದು ರಂಗನಾ ಆರೋಪಿಸಿದ್ದರು. ಇದಕ್ಕೆ ಬಾಲಿವುಡ್‍ನ ಹಲವರು ಬೆಂಬಲ …

Read More »

ಖಲೀಸ್ಥಾನ ಚಳುವಳಿಗಾರರ ವಿರುದ್ಧ ಅನಂತಕುಮಾರ್ ಹೆಗಡೆ ದೂರು ದಾಖಲು

ಕಾರವಾರ: ರಾಷ್ಟ್ರೀಯ ಏಕಾಗ್ರತೆ ಹಾಗೂ ಅಸ್ತಿತ್ವಕ್ಕೆ ಭಂಗ ತರುವಂತಹ ಚಟುವಟಿಕೆಯಲ್ಲಿ ತೊಡಗಿರುವ ಖಲೀಸ್ಥಾನ ಚಳುವಳಿಗಾರರನ್ನು ದೇಶದ್ರೋಹದ ಆರೋಪದ ಅಡಿಯಲ್ಲಿ ಶಿಕ್ಷಿಸಬೇಕು ಎಂದು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ ಹೆಗಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಖಲೀಸ್ಥಾನ ಚಳುವಳಿಯ ಹೋರಾಟಗಾರ ಗುರುಪಥವಂತ ಸಿಂಗ್ ಪನೂನ ಆರೋಪಿತನಾಗಿದ್ದಾನೆ. ಈ ಹಿಂದೆ ಸಂಸದ ಹೆಗಡೆ ಖಲೀಸ್ಥಾನದ ಕುರಿತು ಟ್ವಿಟ್ಟರ್ ಮೂಲಕ ಖಲೀಸ್ಥಾನ ಚಳುವಳಿಗಾರರ ವಿರುದ್ಧ ಜಾಹಿರಾತನ್ನು ಪ್ರಕಟಿಸಿದ್ದರು. ಈ ಕಾರಣಕ್ಕೆ ಚಳುವಳಿಗಾರರು ದೂರವಾಣಿ …

Read More »

ಸಂಕಷ್ಟದಲ್ಲಿ ಐಟಿಬಿಟಿ ಕಂಪೆನಿಗಳು, ಬಿಬಿಎಂಪಿಗೆ 2 ಸಾವಿರ ಕೋಟಿ ತೆರಿಗೆ ನಷ್ಟದ ಆತಂಕ..!

ಬೆಂಗಳೂರು, ಜು.22- ಲಾಕ್‍ಡೌನ್‍ನಿಂದ ಐಟಿಬಿಟಿ ಕಂಪೆನಿಗಳು ತೀವ್ರವಾಗಿ ಕಂಗೆಟ್ಟಿದ್ದು, ಇದರಿಂದ ಬಿಬಿಎಂಪಿಗೆ ಬರೋಬ್ಬರಿ 2 ಸಾವಿರ ಕೋಟಿ ರೂ.ಗಳಷ್ಟು ತೆರಿಗೆ ನಷ್ಟವಾಗುವ ಆತಂಕ ಎದುರಾಗಿದೆ. ಮೊದಲ ಲಾಕ್‍ಡೌನ್ ಹಾಗೂ ರಾಜ್ಯಸರ್ಕಾರದಿಂದ ಮತ್ತೊಂದು ಸುತ್ತಿನ ಲಾಕ್‍ಡೌನ್ ಜಾರಿಗೊಳಿಸಿದ ಪರಿಣಾಮ ಐಟಿಬಿಟಿ ಕಂಪೆನಿಗಳು, ವಾಣಿಜ್ಯ ಮಳಿಗೆಗಳು, ಕೈಗಾರಿಕಾ ಕ್ಷೇತ್ರ ಕಂಗೆಟ್ಟು ಹೋಗಿವೆ. ಕಳೆದ ಮಾರ್ಚ್‍ನಿಂದ ಎಲ್ಲ ವಹಿವಾಟುಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ 2020-21ನೆ ಸಾಲಿನ ವಾಣಿಜ್ಯ ತೆರಿಗೆ ಮನ್ನಾ ಮಾಡಬೇಕೆಂದು ಐಟಿಬಿಟಿ ಕಂಪೆನಿಗಳು, …

Read More »

ಅಬಕಾರಿ ಇಲಾಖೆಯಲ್ಲಿ ಜೇಷ್ಠತೆ ಕಡೆಗಣಿಸಿ ಪ್ರಭಾರಿ ಹುದ್ದೆಗಳಿಗೆ ನೇಮಕ

ಬೆಂಗಳೂರು, :- ಅಬಕಾರಿ ಇಲಾಖೆಯಲ್ಲಿ ನಿಯಮ ಬಾಹಿರವಾಗಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ-68ರನ್ವಯ ಜ್ಯೇಷ್ಠತೆಯಲ್ಲಿ ಹಿರಿಯರನ್ನು ಕಡೆಗಣಿಸಿ ಕಿರಿಯ ಅಬಕಾರಿ ಅಧೀಕ್ಷಕರಿಗೆ ಅಬಕಾರಿ ಉಪ ಆಯುಕ್ತರ ಹುದ್ದೆಗೆ ಹೆಚ್ಚುವರಿ ಪ್ರಭಾರಿ ಹುದ್ದೆಗಳನ್ನು ಈ ಹಿಂದೆ ನೀಡಲಾಗಿದೆ. ಶಿವಮೊಗ್ಗ ಮತ್ತು ಗದಗ ಜಿಲ್ಲೆಗಳಲ್ಲಿ ಈಗಾಗಲೇ ಉಪ ಆಯುಕ್ತರು ಹಾಗೂ ಹಿರಿಯ ಅಧೀಕ್ಷಕರು ಇದ್ದರೂ ಕೂಡ ಅತ್ಯಂತ ಕಿರಿಯ ಅಬಕಾರಿ ಅಧೀಕ್ಷಕರಾಗಿದ್ದ ಮೋತಿಲಾಲ್ ಮತ್ತು ಅಜಿತ್‍ರನ್ನು ಈಗಾಗಲೇ ಹೆಚ್ಚುವರಿ ಪ್ರಭಾರಿಯಾಗಿ ಉಪ …

Read More »

ದರೋಡೆ ಕಥೆಕಟ್ಟಿ 7.5 ಲಕ್ಷ ಹಣ ಲಪಾಟಿಯಿಸಿದ್ದ ಆಸಾಮಿಗಳು ಅರೆಸ್ಟ್..!

ತುಮಕೂರು, ಜು.23- ಪೊಲೀಸರಿಗೆ ಕಥೆ ಕಟ್ಟಿ ಹಣ ದರೋಡೆ ಅಗಿದೆ ಎಂದು ಕಥೆ ಕಟ್ಟಿ 7.53 ಲಕ್ಷ ರೂ.ಗಳನ್ನು ಲಪಾಟಿಯಿಸಿದ್ದ ಕೋಟಕ್ ಮಹೇಂದ್ರ ಬ್ಯಾಂಕ್‍ನ ರಿಕವರಿ ಎಕ್ಸಿಕ್ಯುಟಿವ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಟರಾಜು.ಸಿ (31), 2) ಅಶೋ.ಬಿ.ಹೆಚ್ (32) ಬಂಧಿತ ಆರೋಪಿಗಳು.ಜು.15ರಂದು ರಾತ್ರಿ 10.30ರ ಸಮಯದಲ್ಲಿ ಶಿರಾ ತಾಲ್ಲೂಕಿನ ಚಿಕ್ಕದಾಸರಹಳ್ಳಿಯವನಾದ ಕೋಟಕ್ ಮಹೇಂದ್ರ ಬ್ಯಾಂಕಿನ ರಿಕವರಿ ಎಕ್ಸಿಕ್ಯುಟೀವ್ ನಟರಾಜು.ಸಿ ಎಂಬಾತ ದರೋಡೆ ಕಥೆ ಕಟ್ಟಿ ಪೊಲೀಸರಿಗೆ ದೂರು ನೀಡಿದ್ದನು.ಅಂದು …

Read More »

ಖಿನ್ನತೆಗೆ ಮತ್ತು ಈ ಜಗತ್ತಿಗೆ ಗುಡ್ ಬೈ” ಎಂದು ಜಯಶ್ರೀ ರಾಮಯ್ಯ ಬರೆದುಕೊಳ್ಳುವ ಮೂಲಕ ಆತಂಕ

ಬೆಂಗಳೂರು: ‘ಬಿಗ್‍ಬಾಸ್ ಸೀಸನ್ 3’ ರಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ರಾಮಯ್ಯ “ಖಿನ್ನತೆಗೆ ಮತ್ತು ಈ ಜಗತ್ತಿಗೆ ಗುಡ್ ಬೈ” ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಆತಂಕ ಸೃಷ್ಟಿಸಿದ್ದರು ನಟಿ ಜಯಶ್ರೀ ರಿಯಾಲಿಟಿ ಶೋ ಬಿಗ್‍ಬಾಸ್ ಮೂಲಕವೇ ಖ್ಯಾತಿ ಪಡೆದುಕೊಂಡಿದ್ದರು. ಆದರೆ ಇಂದು ಫೇಸ್‍ಬುಕ್‍ನಲ್ಲಿ “ಖಿನ್ನತೆಗೆ ಹಾಗೂ ಈ ಜಗತ್ತಿಗೆ ವಿದಾಯ ಹೇಳುತ್ತಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು. ಜಯಶ್ರೀ ಟ್ವೀಟ್ ಕಂಡು ಆತಂಕಕ್ಕೆ ಒಳಗಾದ ಸ್ನೇಹಿತರು ಕೂಡಲೇ ಜಯಶ್ರೀ ಅವರನ್ನು …

Read More »

ವೈದ್ಯನೊಬ್ಬ ಕೊರೊನಾ ಸೋಂಕಿತೆ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಲಕ್ನೋ: ಕೊರೊನಾ ಸೋಂಕಿತ ರೋಗಿಗಳನ್ನು ಮಹಾಮಾರಿಯಿಂದ ರಕ್ಷಿಸಲು ವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ ವೈದ್ಯನೊಬ್ಬ ಕೊರೊನಾ ಸೋಂಕಿತೆ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಉತ್ತರ ಪ್ರದೇಶದ ಅಲಿಘಡದಲ್ಲಿ ಈ ನೀಚ ಕೃತ್ಯ ಜರುಗಿದೆ. 28 ವರ್ಷದ ಕೊರೊನಾ ಸೋಂಕಿತೆ ಮೇಲೆ ಆಫ್ ಡ್ಯೂಟಿ ವೈದ್ಯನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸೋಂಕಿತೆ ಮೇಲೆ ಆಸ್ಪತ್ರೆಯಲ್ಲಿಯೇ ಎರಡು ಬಾರಿ ವೈದ್ಯ ಈ ಹೀನಾಯ ಕೃತ್ಯವೆಸೆಗಿದ್ದಾನೆ ಕೊರೊನಾ ಸೋಂಕು ತಗುಲಿ ಮಹಿಳೆ …

Read More »