Breaking News

ಘಟಪ್ರಭಾ ನದಿಯಲ್ಲಿ ಈಜಿಗಿಳಿದಿದ್ದ ಯುವಕ ನೀರುಪಾಲು

ಬೆಳಗಾವಿ: ಘಟಪ್ರಭಾ ನದಿಯಲ್ಲಿ ಈಜಿಗಿಳಿದಿದ್ದ ಯುವಕ ನೀರುಪಾಲಾಗಿರುವ ಘಟನೆ ಜಿಲ್ಲೆಯ ಗೋಕಾಕ ತಾಲೂಕಿನ ಚಿಗಡೊಳ್ಳಿ ಗ್ರಾಮದ ಬ್ರಿಡ್ಜ್ ಕಂ ಬ್ಯಾರೇಜ್‌ ಬಳಿ ನಡೆದಿದೆ. ನೀರುಪಾಲಾದ ಯುವಕನನ್ನು ಮೆಳವಂಕಿಯ ರುದ್ರಪ್ಪ ವಕ್ಕುಂದ(19) ಎಂದು ಗುರುತಿಸಲಾಗಿದೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳದಲ್ಲಿ ಬೀಡು ಬಿಟ್ಟಿರುವ NDRF ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ.  

Read More »

ಪ್ರೀತಿ ಎಂಬ ಮಾಯೆಯಲ್ಲಿ.. ಪ್ರಿಯಕರನ ಜೊತೆಗೂಡಿ ಗಂಡನನ್ನೇ ಕೊಲೆಗೈದ ಪತ್ನಿ!

ಚಾಮರಾಜನಗರ: ಪ್ರೀತಿ ಅನ್ನೋದು ಮಾಯೆ. ಪ್ರೀತಿಯನ್ನು ಪಡೆದುಕೊಳ್ಳುವುದಕ್ಕೆ ಪ್ರೇಮಿಗಳು ಯಾವ ಮಟ್ಟಕ್ಕಾದ್ರು ಇಳಿತಾರೆ ಅನ್ನುವುದಕ್ಕೇ ಈ ಘಟನೆಯೇ ಸಾಕ್ಷಿ. ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಪತ್ನಿ ಕೊಲೆಗೈದ ಭೀಕರ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಾಘವಪುರ ಗ್ರಾಮದಲ್ಲಿ ನಡೆದಿದೆ. ನಾಗರಾಜು ನಾಯಕ್ ಹತ್ಯೆಯಾದ ವ್ಯಕ್ತಿ. ರಾಘವಪುರ ಗ್ರಾಮದ ನಿವಾಸಿ ನಾಗರಾಜು ನಾಯಕ್ ತೊಂಡವಾಡಿ ಗ್ರಾಮದ ನಿವಾಸಿ ಪದ್ಮ ಎಂಬ ಯುವತಿಯನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದರು.   ಆದರೆ ಪದ್ಮಳಿಗೆ ಮಣಿಕಂಠ ಎಂಬುವವನ …

Read More »

ಜಾಂಬೋಟಿ,ಕಣಕುಂಬಿ ಬಳಿ ಹುಲಿ…….

ಬೆಳಗಾವಿ ಜಿಲ್ಲೆಯ ಜಾಂಬೋಟಿ,ಕಣಕುಂಬಿ ಬಳಿ ಹುಲಿ ಓಡಾಡುತ್ತಿದೆ,ಎನ್ನುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜಾಂಬೋಟಿ ಕಣಕುಂಬಿ ಪರಿಸರದಲ್ಲಿ ಹುಲಿ ಓಡಾಡುವ ವಿಡಿಯೋ ಫೇಸ್ ಬುಕ್ ವ್ಯಾಟ್ಸಪ್ ಗಳಲ್ಲಿ ಫುಲ್ ವೈರಲ್ ಆಗಿದೆ. ಈ ವಿಡಿಯೋ ನಿಜವಾಗಿಯೂ ಜಾಂಬೋಟಿ,ಮತ್ತು ಕಣಕುಂಬಿ ಬಳಿ ಸೆರೆಹಿಡಿಯಲಾಗಿದೆಯಾ ? ಎನ್ನುವದು ದೃಡವಾಗಿಲ್ಲ. ಕೆಲವು ವರ್ಷಗಳ ಹಿಂದೆ ಇದೆ ಪರಿಸರದಲ್ಲಿ ನರಭಕ್ಷಕ ಹುಲಿಯೊಂದು ಹಕವಾರು ಜನರನ್ನು ಭೇಟೆಯಾಡಿತ್ತು . ಈಗ ಇದೇ ಪರಿಸರದಲ್ಲಿ ಹುಲಿ ಓಡಾಡುತ್ತಿದೆ …

Read More »

ಕಾರು ಸ್ಟಾರ್ಟ್‌ ಮಾಡುವ ವೇಳೆ ಅಜಾಗರೂಕತೆಯಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ

ಬೆಂಗಳೂರು: ಕಾರು ಸ್ಟಾರ್ಟ್‌ ಮಾಡುವ ವೇಳೆ ಅಜಾಗರೂಕತೆಯಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಬಿಇಎಲ್‌ ರಸ್ತೆಯಲ್ಲಿ ನಡೆದಿದೆ.ನಂದಿನಿ ರಾವ್‌ ಮೃತಪಟ್ಟ ಮಹಿಳೆ. ಇಂದು ಸಂಜೆ ನಂದಿನಿ ರಾವ್‌ ಡೋರ್‌ ಓಪನ್‌ ಮಾಡಿ ಹೊರಗಡೆಯಿಂದ ಟೊಯೊಟಾ ಕೊರೊಲಾ ಕಾರನ್ನು ಸ್ಟಾರ್ಟ್‌ ಮಾಡಿದ್ದಾರೆ. ಕಾರು ಸ್ಟಾರ್ಟ್ ಮಾಡುತ್ತಿದ್ದಂತೆ ರಿವರ್ಸ್‌ ಗೇರ್‌ನಲ್ಲಿದ್ದ ಕಾರು ಹಿಂದಕ್ಕೆ ಚಲಿಸಿದೆ. ಈ ವೇಳೆ ಕಾರಿನ ಡೋರ್‌ ಜೊತೆ ಅವರು ಮರಕ್ಕೆ ಸಿಕ್ಕಿ ಹಾಕಿಕೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ  ದಾಖಲಿಸಿದ್ದರೂ ಅಷ್ಟರಲ್ಲಿ …

Read More »

ಡಿ.ಕೆ.ಶಿವಕುಮಾರ್ ತಪ್ಪು ಮಾಡಿಲ್ಲವೆಂದರೆ ಸೀತೆಯಷ್ಟು ಪವಿತ್ರವಾಗಿ ಕೇಸ್ ನಿಂದ ಹೊರಗೆ ಬರಲಿ:ಈಶ್ಚರಪ್

ರಾಯಚೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಈ ಹಿಂದೆ ದಾಳಿ ಮಾಡಿದಾಗ ಹವಾಲಾ ಹಣ ಸಿಕ್ಕಿದೆ. ಈಗ ಡಿ.ಕೆ.ಶಿವಕುಮಾರ್ ತಪ್ಪು ಮಾಡಿಲ್ಲವೆಂದರೆ ಸೀತೆಯಷ್ಟು ಪವಿತ್ರವಾಗಿ ಕೇಸ್ ನಿಂದ ಹೊರಗೆ ಬರಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ಚರಪ್ಪ ಹೇಳಿದ್ದಾರೆ. ರಾಯಚೂರಿನಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಶಶಿಲ್ ನಮೋಶಿ ಪರ ಪಕ್ಷದ ಮುಖಂಡರ ಪ್ರಚಾರ ಸಭೆ ಬಳಿಕ ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ಕುರಿತು …

Read More »

ಕೋವಿಡ್ ವಾರ್ಡಿನಲ್ಲಿ ಗ್ರಂಥಾಲಯದ ಸೌಲಭ್ಯ

ಶಿವಮೊಗ್ಗ: ಕೊರೊನಾ ಸೋಂಕಿತರು ಮಾನಸಿಕ ಖಿನ್ನತೆ ಹಾಗೂ ಒಂಟಿತನದಿಂದ ಹೊರ ಬರುವ ಸಲುವಾಗಿ ಶಿವಮೊಗ್ಗ ಜಿಲ್ಲೆ ಸಾಗರದ ಕೋವಿಡ್ ವಾರ್ಡಿನಲ್ಲಿ ಆರೋಗ್ಯ ಸಿಬ್ಬಂದಿ ಸೋಂಕಿತರಿಗಾಗಿ ಗ್ರಂಥಾಲಯ ತೆರೆದಿದ್ದಾರೆ.ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಹಲವು ಮಂದಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಕೊರೊನಾ ತುತ್ತಾಗಿ ಚಿಕಿತ್ಸೆ ಪಡೆಯಬೇಕಾದರೆ ತಮ್ಮವರಿಂದ ದೂರವಿದ್ದು ಚಿಕಿತ್ಸೆ ಪಡೆಯುವ ಅನಿವಾರ್ಯತೆ ಇದೆ. ಹೀಗಾಗಿ ಸೋಂಕಿತರಿಗೆ ಒಂಟಿತನ ಕಾಡುತ್ತಿದೆ. ಈ ಮಾನಸಿಕ ಖಿನ್ನತೆ ಹಾಗೂ ಒಂಟಿತನದಿಂದ ಸೋಂಕಿತರು ಹೊರ …

Read More »

ಬೆಂಗಳೂರಿಗೆ ಬರುವಾಗ ದಾರಿ ಮಧ್ಯೆ ವಿಮಾನದಲ್ಲಿ ಯಶಸ್ವಿ ಹೆರಿಗೆ

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಗರ್ಭಿಣಿಯೊಬ್ಬರು ವಿಮಾನದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವೇಳೆ ವಿಮಾನದಲ್ಲಿ ಪ್ರಸೂತಿ ತಜ್ಞೆ ಬೆಂಗಳೂರಿನ ಕ್ಲೌಡ್‌ ನೈನ್‌ ಆಸ್ಪತ್ರೆಯ ಡಾ. ಶೈಲಜಾ ವಲ್ಲಭನಿ ಪ್ರಯಾಣಿಸುತ್ತಿದ್ದರು. ಹೆರಿಗೆ ನೋವಾಗುತ್ತಿದ್ದಂತೆ ಇಂಡಿಗೋ ಸಿಬ್ಬಂದಿ ಸಹಕಾರದಿಂದ ಡಾ. ಶೈಲಜಾ ಅವರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್‌ ಆಗುತ್ತಿದ್ದಂತೆ ಅಂಬುಲೆನ್ಸ್‌ ಸಿದ್ಧವಾಗಿ ನಿಂತಿತ್ತು. ಅಂಬುಲೆನ್ಸ್‌ ಮೂಲಕ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸಾಮಾಜಿಕ ಜಾಲತಾಣದಲ್ಲಿ ಈಗ ಪ್ರಯಾಣಿಕರು …

Read More »

ಮನೆಗೆ ಕನ್ನ ಹಾಕಿ ಮೋಜು-ಮಸ್ತಿ ಮಾಡುತ್ತಿದ್ದ ಯುವಕರನ್ನು ಬಂಧಿಸಿದ್ ಪೊಲೀಸರು

ಚಾಮರಾಜನಗರ: ಶೋಕಿಗಾಗಿ ವೃದ್ಧೆಯ ಮನೆಗೆ ಕನ್ನ ಹಾಕಿ ಮೋಜು-ಮಸ್ತಿ ಮಾಡುತ್ತಿದ್ದ ಯುವಕರನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಮನು (21), ಕಿರಣ್ (20) ಬಂಧಿತ ಆರೋಪಿಗಳು. ಗುಂಡ್ಲುಪೇಟೆಯ ನಾಯಕರ ಬೀದಿಯಲ್ಲಿ ವಾಸವಿದ್ದ ಬಸಮ್ಮ (70) ವೃದ್ಧೆಯ ಮನೆಗೆ ಕನ್ನ ಹಾಕಿ ಬೀರುವಿನ್ನಲ್ಲಿದ್ದ ಓಲೆ, ಕಾಸು, ಚಿನ್ನದ ಉಂಗುರ ಸೇರಿದಂತೆ 60 ಗ್ರಾಂ ಚಿನ್ನಾಭರಣವನ್ನು ಎಗರಿಸಿ ಪರಾರಿಯಾಗಿದ್ದರು. ಅಕ್ಟೋಬರ್ 6ರಂದು ವೃದ್ಧೆ ಪೊಲೀಸ್ ಠಾಣೆಗೆ …

Read More »

ಸಚಿವ ಪ್ರಹ್ಲಾದ್ ಜೋಶಿಯವರಿಗೆ ಕೊರೊನಾ ಪಾಸಿಟಿವ್

ಬೆಂಗಳೂರು: ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇತ್ತೀಚೆಗೆ ಕೊರೊನಾ ಸೋಂಕು ರಾಜಕಾರಣಿಗಳನ್ನು ಬೆನ್ನು ಬಿಡದೆ ಕಾಡುತ್ತಿದೆ. ಇತ್ತೀಚೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೂ ಕೂಡ ಕೊರೊನಾ ಪಾಸಿಟಿವ್ ಬಂದಿತ್ತು. ಈಗ ಕೇಂದ್ರ ಸಚಿವರಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ತಮಗೆ ಕೊರೊನಾ ಸೋಂಕು ತಗಲಿರುವ ಸುದ್ದಿಯನ್ನು ಸ್ವತಃ ಸಚಿವರೇ ಟ್ವೀಟ್ ಮಾಡಿ ಖಚಿತ ಪಡಿಸಿದ್ದಾರೆ. ಸೋಂಕು ತಗುಲಿರುವ ವಿಚಾರವಾಗಿ …

Read More »

ರಾಜ್ಯದಲ್ಲಿ ಮೊದಲ ಬಾರಿಗೆ 1 ಲಕ್ಷ ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ 1 ಲಕ್ಷ ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಒಟ್ಟು 48,658 ಮಂದಿಗೆ ಆಂಟಿಜನ್ ಟೆಸ್ಟ್ 55,690 ಮಂದಿಗೆ ಆರ್‌ಟಿಪಿಸಿಆರ್‌ ಮತ್ತು ಇತ್ಯಾದಿ ಪರೀಕ್ಷೆ ಸೇರಿದಂತೆ ಒಟ್ಟು 1,04,348 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 55,24,302 ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ರಾಜ್ಯದಲ್ಲಿ 10,947 ಮಂದಿಗೆ ಸೋಂಕು ಬಂದಿದ್ದು, ಆಸ್ಪತ್ರೆಯಿಂದ 9,832 ಮಂದಿ ಬಿಡುಗಡೆಯಾಗಿದ್ದಾರೆ. 113 ಮಂದಿ ಇಂದು ಕೊರೊನಾಗೆ ಬಲಿಯಾಗಿದ್ದಾರೆ. ಒಟ್ಟು ಸೋಂಕಿತರ …

Read More »