Breaking News

ಎರಡನೇ ಹಂತದ ಕೋವಿಡ್ ಸೋಂಕಿನ ಅಲೆ ಅಪ್ಪಳಿಸುವ ಆತಂಕದ ನಡುವೆಯೂ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿರುವ ಮಹಾರಾಷ್ಟ್ರ ಸರ್ಕಾರ

ಮುಂಬೈ, :- ಎರಡನೇ ಹಂತದ ಕೋವಿಡ್ ಸೋಂಕಿನ ಅಲೆ ಅಪ್ಪಳಿಸುವ ಆತಂಕದ ನಡುವೆಯೂ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿರುವ ಮಹಾರಾಷ್ಟ್ರ ಸರ್ಕಾರ ಸುರಕ್ಷತೆ ದೃಷ್ಟಿಯಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಹಾಗೂ ಸ್ಯಾನಿಟೈಸರ್ ಬಳಸಬೇಕು. ದೇವರ ಪ್ರತಿಮೆ, ಪವಿತ್ರ ಗ್ರಂಥಗಳು ಸೇರಿದಂತೆ ಯಾವುದೇ ವಸ್ತುಗಳನ್ನು ಮುಟ್ಟುವಂತಿಲ್ಲ. ತೀರ್ಥ, ಪ್ರಸಾದ ವಿತರಣೆಯನ್ನು ನಿಷೇಸಲಾಗಿದೆ. ಪಾದರಕ್ಷೆಗಳನ್ನು ಧಾರ್ಮಿಕ ಕೇಂದ್ರಗಳಿಂದ …

Read More »

ಶ್ರೀಭೋಗನಂದೀಶ್ವರ ಆಲಯದಲ್ಲಿ ಭಕ್ತರು ದೀಪ ಹಚ್ಚುವಂತಿಲ್

ಚಿಕ್ಕಬಳ್ಳಾಪುರ: ಇತಿಹಾಸ ಪ್ರಸಿದ್ಧ ದಕ್ಷಿಣ ಕಾಶೀ ಕ್ಷೇತ್ರವೆಂದೇ ಪ್ರತೀತಿಯಾಗಿರೋ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಶ್ರೀಭೋಗನಂದೀಶ್ವರ ದೇಗುಲ ಹಾಗೂ ಆವರಣದಲ್ಲಿ ಈ ಬಾರಿ ದೀಪ ಹಚ್ಚುವಂತಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದ್ದಾರೆ. ನಾಳೆ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಶ್ರೀಭೋಗನಂದೀಶ್ವರನಿಗೆ ವಿಶೇಷ ಪೂಜಾ ಕೈಂಕರ್ಯಗಳು ನೇರವೇರಲಿವೆ. ಪ್ರತಿ ವರ್ಷದಂತೆ ಈ ವರ್ಷವೂ ಕಾರ್ತಿಕ ಸೋಮವಾರದ ಪ್ರಯುಕ್ತ ಸಾವಿರಾರು ಮಂದಿ ಭಕ್ತರು ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಕೊರೊನಾ ಭೀತಿ ಆತಂಕದಿಂದ …

Read More »

ಹಿಂಡಲಗಾ ಜೈಲಿನಲ್ಲಿ ನಾಳೆ ದೀಪಾವಳಿಯ ವಿಶೇಷ ಪೂಜೆ ಜೈಲಿನಿಂದಲೇ ಸಾರ್ವಜನಿಕರಿಗೆ ಶುಭಾಶಯ: ವಿನಯ್ ಕುಲಕರ್ಣಿ

ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ದೀಪಾವಳಿ ಹಬ್ಬದ ಸಂಭ್ರಮವಿಲ್ಲ. ಆದರೂ ಜೈಲಿನಿಂದಲೇ ಸಾರ್ವಜನಿಕರಿಗೆ ಶುಭಾಶಯ ತಿಳಿಸಿದ್ದಾರೆ. ಈ ಸಂಬಂಧ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಶನಿವಾರ ಬರೆದುಕೊಂಡಿರುವ ಅವರು, ದೀಪಾವಳಿಯ ದೀಪವು ನಮ್ಮೆಲ್ಲಾ ತೊಂದರೆಗಳನ್ನು, ಸಮಸ್ಯೆಗಳನ್ನು ಮತ್ತು ದುಃಖಗಳನ್ನು ಸುಡಲಿ. ಈ ಅದ್ಭುತ ದೀಪಾವಳಿಯಿಂದ ನಮ್ಮೆಲ್ಲರ ಜೀವನದಲ್ಲಿ ಸಂತೋಷ, ಸಂಭ್ರಮ, ಸಡಗರ ಮನೆ ಮಾಡಲಿ. …

Read More »

ಬಾಲಕಿ- ಕಂದಮ್ಮಗಳಿಗೆ ದೀಪಾವಳಿ ಗಿಫ್ಟ್ ಕೊಟ್ಟ ಸಿಎಂ

ಲಕ್ನೋ: ಕಂದಮ್ಮನ ಆಕ್ರಂದನವನ್ನು ನೋಡಲಾರದೆ ಬಡ ಪಟಾಕಿ ವ್ಯಾಪಾರಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಬಂಧನದಿಂದ ಬಿಡುಗಡೆಗೊಳಿಸಿ ಬಾಲಕಿಗೆ ದೀಪಾವಳಿ ಗಿಫ್ಟ್ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಉತ್ತರ ಪ್ರದೇಶದ ಬುಲಾಂದ್‍ಶಹರ್ ನ ಖುರ್ಜಾದಲ್ಲಿ ಈ ಘಟನೆ ನಡೆದಿದ್ದು, ರಾಜ್ಯದಲ್ಲಿ ಅಕ್ರಮವಾಗಿ ಪಟಾಕಿಗಳನ್ನು ಮಾರುವಂತಿಲ್ಲ. ಆದರೆ ಈ ಮಾರುಕಟ್ಟೆಯಲ್ಲಿ ಕದ್ದು ಮುಚ್ಚಿ ಪಟಾಕಿ ಮಾರಲಾಗುತ್ತಿತ್ತು. ಅಂತಹವರನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ ಬಾಲಕಿಯ ತಂದೆಯನ್ನೂ ಬಂಧಿಸಲಾಗಿದೆ. ಅಪ್ಪನನ್ನು ಎಳೆದುಕೊಂಡು ಹೋಗುವುದನ್ನು ನೋಡಲಾಗದೆ …

Read More »

ಸಿಲಿಕಾನ್ ಸಿಟಿ ಸುತ್ತಮುತ್ತ ನಿಮ್ಮದು ಜಮೀನು ಇಲ್ಲವೇ ಸೈಟ್ ಇದೆಯಾ?

ದೇವನಹಳ್ಳಿ: ಸಿಲಿಕಾನ್ ಸಿಟಿ ಸುತ್ತಮುತ್ತ ನಿಮ್ಮದು ಜಮೀನು ಇಲ್ಲವೇ ಸೈಟ್ ಇದೆಯಾ? ಅದು ನಿಮ್ಮ ಬಳಿಯೇ ಇದೆ ಅಂತ ನೀವು ನೆಮ್ಮದಿಯಾಗಿದ್ದೀರಾ? ಹಾಗಾದ್ರೆ ನಿಮ್ಮ ನೆಮ್ಮದಿಗೆ ದಿಢೀರ್ ಭಂಗ ಬಂದರೂ ಬರಬಹುದು. ಅದಕ್ಕೂ ಮುನ್ನ ನೀವು ಬೆಚ್ಚಿಬೀಳುವ ಸಂಗತಿಯೊಂದು ಇಲ್ಲಿದೆ ನೋಡಿ. ಬಸವರಾಜ್, ಪ್ರಸನ್ನಕುಮಾರ್ ಮತ್ತು ಉಮೇಶ್. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ತಾಲೂಕು ಕಛೇರಿಯಲ್ಲಿ ಕಂಪ್ಯೂಟರ್ ಆಪರೇಟರ್ಸ್. ಇವರು ಸುಲಭವಾಗಿ ಹಣ ಮಾಡಿ ಕೋಟಿ ಕೋಟಿ ಸಂಪಾದನೆ ಮಾಡೋದಕ್ಕೆ …

Read More »

800ಗ್ರಾಂ ಚಿನ್ನ, ದಾಖಲೆ ಕಳವು ಮಾಡಿರುವ ಆರೋಪದ ಮೇಲೆ ಹಲಸೂರು ಗೇಟ್‌ ಪೊಲೀಸರು

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು 800ಗ್ರಾಂ ಚಿನ್ನ, ದಾಖಲೆ ಕಳವು ಮಾಡಿರುವ ಆರೋಪದ ಮೇಲೆ ಹಲಸೂರು ಗೇಟ್‌ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಹಲಸೂರು ಗೇಟ್‌ನ ನಗರ್ತಪೇಟೆಯಲ್ಲಿ ನಡೆದಿದೆ. ಚಿನ್ನಭಾರಣ ಪಾಲಿಶ್ ಮಾಡುವ ಗೀತಾ ಜುವೆಲ್ಲರ್ಸ್​ಗೆ ನುಗ್ಗಿದ ಆರು ಜನ ಪೊಲೀಸ ವೇಷಧರಿಸಿದ್ದ ಕಳ್ಳರು ದೀಪಾವಳಿ ಹಬ್ಬಕ್ಕೆ ನಕಲಿ‌ ಚಿನ್ನ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿರುವುದರಿಂದ ನಿಮ್ಮ ಅಂಗಡಿಯನ್ನು ರೇಡ್ ಮಾಡುತ್ತಿದ್ದೇವೆ ಎಂದು ಹೇಳಿ ವಂಚನೆ ಮಾಡಿದ್ದಾರೆ. …

Read More »

ನಾಳೆಯಿಂದ ಶಬರಿಮಲೆ ಅಯ್ಯಪ್ಪ ದೇವಾಲಯ ಓಪನ್; ಭಕ್ತರಿಗಾಗಿ ಇಲ್ಲಿದೆ ಮಾಹಿತಿ

  ಕೋವಿಡ್ ನಿಯಮ ಪಾಲನೆ ಕಡ್ಡಾಯ : ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಬಾಗಿಲು ನಾಳೆಯಿಂದ ತೆರೆಯಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಕಟ್ಟುನಿಟ್ಟಿನ ತಪಾಸಣೆ ಮೂಲಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಮಂಡಲಂ ಮಕರವಿಲಕ್ಕು ಅವಧಿಕಾಗಿ ನಾಳೆಯಿಂದ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ತೆರೆಯಲಾಗುತ್ತಿದ್ದು, ಕೋವಿಡ್ ನೆಗೆಟಿವ್ ಬಂದವರನ್ನು ಮಾತ್ರ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಇದೇ ಮೊದಲ ಬಾರಿಗೆ ಯಾತ್ರಾಸ್ಥಳ ವರ್ಚುವಲ್ ಸರದಿ ವ್ಯವಸ್ಥೆಗೆ …

Read More »

ಬಿಹಾರ ಎಫೆಕ್ಟ್ – ದೊಡ್ಡ ಪಕ್ಷಗಳ ಜೊತೆಗಿನ ಮೈತ್ರಿಗೆ ನೋ ಎಂದ ಅಖಿಲೇಶ್ ಯಾದವ್

ಲಕ್ನೋ: ರಾಷ್ಟ್ರೀಯ ಪಕ್ಷಗಳು ಸೇರಿದಂತೆ ದೊಡ್ಡವರ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ. ಪ್ರಾದೇಶಿಕ ಪಕ್ಷವಾಗಿರುವ ಬಿಎಸ್‍ಪಿ ಜೊತೆಗೂ ತಾವು ಹೋಗಲ್ಲ ಎಂಬುದನ್ನ ಅಖಿಲೇಶ್ ಯಾದವ್ ಸ್ಪಷ್ಟಪಡಿಸಿದ್ದಾರೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ನೇತೃತ್ವದ ಪ್ರಗತಿಶೀಲ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಉತ್ಸಾಹ ತೋರಿಸಿದ್ದಾರೆ. ಚುನಾವಣೆಯಲ್ಲಿ ಜಸ್ವಂತ್ ನಗರದ ವಿಧಾನಸಭಾ ಕ್ಷೇತ್ರಗಳನ್ನ ಬಿಟ್ಟುಕೊಡಲು …

Read More »

ಹೆಚ್‍ಡಿಕೆ -C.M. ಭೇಟಿಯಾದ್ರೆ ಏನು ತಪ್ಪು?- ಮಾಧುಸ್ವಾಮಿ

ಹಾಸನ: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿದರೆ ಏನು ತಪ್ಪು, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಇಬ್ಬರೂ ಲೀಡರ್ಸ್. ರಾಜ್ಯದ ಹಿತಾಸಕ್ತಿಗಾಗಿ ಭೇಟಿ ಮಾಡಿದರೆ ಬೇರೆ ತಿಳಿಯಬಾರದು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಹಾಸನ ಜಿಲ್ಲೆಯ ಹಳೇಬೀಡು ಕೆರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಸಿಎಂ ಮತ್ತು ಮಾಜಿ ಸಿಎಂ ಭೇಟಿ ವಿಷಯ ಕೇಳಿದ್ದಕ್ಕೆ ಕೈಮುಗಿದರು. ಬಳಿಕ ಮಾತನಾಡಿ ಶಿರಾ ಮತ್ತು ಆರ್.ಆರ್ ನಗರ ಉಪ …

Read More »

ಕೆಲಸ ಮಾಡಿದ ಕೂಲಿಯನ್ನೂ ಉದ್ಯಾನ ಅಭಿವೃದ್ಧಿಗೆ ವಿನಿಯೋಗ ನೀಡಿದ ಯುವಕರು

ಮಡಿಕೇರಿ: ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಂದ ಕೆಲಸಗಳನ್ನು ಮಾಡಿಸುವುದಕ್ಕಿಂತ ಯಂತ್ರೋಪಕರಣಗಳ ಬಳಸಿ ಕಾಮಗಾರಿ ಮಾಡಿಸುವವರೇ ಹೆಚ್ಚು. ಆದರೆ ಇಲ್ಲೊಂದು ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಅನುದಾನವನ್ನು ಬಳಸಿ ಶಾಲೆ, ಅಂಗನವಾಡಿಗಳ ಉದ್ಯಾನವನ್ನು ಅಭಿವೃದ್ಧಿ ಮಾಡಲಾಗಿದೆ. ಈ ಶಾಲೆಗಳು ಇದೀಗ ಖಾಸಗಿ ಶಾಲೆಗಳಿಗಿಂತಲೂ ಅಚ್ಚುಕಟ್ಟಾಗಿವೆ.ಕೊರೊನಾ ಲಾಕ್‍ಡೌನ್‍ನಿಂದ ಜನರು ದುಡಿಮೆ ಇಲ್ಲದೆ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಜನರಿಗೆ …

Read More »