ಬೆಂಗಳೂರು,ಡಿ.29- ಬ್ರಿಟನ್‍ನ ರೂಪಾಂತರಗೊಂಡ ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡಿದ್ದರೂ ಮತ್ತೆ ಲಾಕ್‍ಡೌನ್ ಅಥವಾ ಸೀಲ್‍ಡೌನ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಜನವರಿ ತಿಂಗಳಿಗೆ ಕೋವಿಡ್-19ಕ್ಕೆ ಲಸಿಕೆ ಲಭ್ಯವಾಗುವುದರಿಂದ ಜನರು ಆತಂಕಪಡುವ ಅಗತ್ಯವಿಲ್ಲ. ಇದು 2ನೇ ರೂಪಾಂತರಗೊಂಡ ಸೋಂಕು ಆಗಿರುವುದರಿಂದ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ಪುನಃ ಲಾಕ್‍ಡೌನ್ ಅಥವಾ ಸೀಲ್‍ಡೌನ್ ಮಾಡುವುದಿಲ್ಲ ಎಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ …
Read More »ಬ್ರಿಟನ್ ದೇಶದಿಂದ ಭಾರತಕ್ಕೆ ಮರಳಿರುವ ಜನರ ಪೈಕಿ ಆರು ಮಂದಿಯಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್
ಬೆಂಗಳೂರು(ಡಿ. 29): ಬ್ರಿಟನ್ ದೇಶದಿಂದ ಭಾರತಕ್ಕೆ ಮರಳಿರುವ ಜನರ ಪೈಕಿ ಆರು ಮಂದಿಯಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಪತ್ತೆಯಾಗಿದೆ. ಈ ಪೈಕಿ ಬೆಂಗಳೂರಿನ ಮೂವರು ಮಂದಿ ಇದ್ದಾರೆ. ಹೈದರಾಬಾದ್ನ ಇಬ್ಬರು ಹಾಗೂ ಪುಣೆಯ ಒಬ್ಬರೂ ಇದರಲ್ಲಿ ಸೇರಿದ್ದಾರೆ. ಬೆಂಗಳೂರಿನ ಮೂವರಲ್ಲಿ ನೂತನ ವೈರಸ್ ಮ್ಯೂಟೆಂಟ್ ಪತ್ತೆಯಾಗಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಅಧಿಕೃತ ಮಾಹಿತಿ ಪ್ರಕಾರ ಬ್ರಿಟನ್ ದೇಶದಿಂದ ಡಿಸೆಂಬರ್ 1ರಿಂದ 21ರವರೆಗೆ ಬೆಂಗಳೂರಿಗೆ ಬಂದವರ ಸಂಖ್ಯೆ 1,594 ಇದೆ. …
Read More »ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಕಠಿಣ ಸಂದೇಶ ರವಾನಿಸಿದ ನ್ಯಾಯಾಲಯ
ತುಮಕೂರು: ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆ -2012 ರಡಿ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 11 ಪ್ರಕರಣಗಳಿಗೆ ಸಂಬಂಧಿಸಿದಂತೆ 2019-20 ಹಾಗೂ 2020 21 ನೇ ಸಾಲಿನಲ್ಲಿ 18 ಆರೋಪಿಗಳಿಗೆ ಶಿಕ್ಷೆ ನೀಡಿ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ . ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಗಳಲ್ಲಿ ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಒಂದು ವರ್ಷದಿಂದ ಜೀವಾವಧಿಯವರೆಗೂ ಕಠಿಣ …
Read More »ಬಾಯಿಹುಣ್ಣಿಗೆ ಸೇವಿಸುವ ಔಷಧವೆಂದು ಕ್ರಿಮಿನಾಷಕ ಸೇವಿಸಿ ಗ್ರಾಮ ಪಂಚಾಯಿತಿ ಅಭ್ಯರ್ಥಿ ಮೃತ
ಮಂಗಳೂರು: ಔಷಧವೆಂದು ಭಾವಿಸಿ ಕ್ರಿಮಿನಾಷಕ ಸೇವಿಸಿ ಗ್ರಾಮ ಪಂಚಾಯಿತಿ ಅಭ್ಯರ್ಥಿಯೊಬ್ಬರು ಮೃತಪಟ್ಟಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳದ ಕಾವಳಮುಡೂರಿನ ಅರ್ಗತ್ಯಾರು ನಿವಾಸಿ ಜಯಂತ ಪ್ರಭು ಮೃತ ದುರ್ದೈವಿ. ಬಾಯಿಹುಣ್ಣಿಗೆ ಸೇವಿಸುವ ಔಷಧವೆಂದು ತಿಳಿದು ಕ್ರಿಮಿನಾಶಕ ಸೇವಿಸಿ ಜಯಂತ ತೀವ್ರ ಅಸ್ವಸ್ಥರಾಗಿದ್ದರು. ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
Read More »ಬೆಳಗಾವಿ ಚೆನ್ನಮ್ಮವೃತ್ತದಲ್ಲಿ ಪ್ರತಿಮೆ ಬಳಿಯಿರುವ ಕನ್ನಡ ಧ್ವಜ ಕಂಬ ಇದ್ದಕ್ಕಿದ್ದಂತೆ ಕಿರಿದಾದ ಘಟನೆ
ಬೆಳಗಾವಿ: ಬೆಳಗಾವಿ ಚೆನ್ನಮ್ಮವೃತ್ತದಲ್ಲಿ ಪ್ರತಿಮೆ ಬಳಿಯಿರುವ ಕನ್ನಡ ಧ್ವಜ ಕಂಬ ಇದ್ದಕ್ಕಿದ್ದಂತೆ ಕಿರಿದಾದ ಘಟನೆ ಹಲವು ಅನುಮಾನಕ್ಕೆ ಕಾರಣವಾಗಿತ್ತು. ಇದು ಕಿಡಿಗೇಡಿಗಳ ಕೃತ್ಯವಿರಬೇಕು ಎಂಬ ಶಂಕೆ ಮೂಡಿತ್ತು. ಆದರೆ ಇದೀಗ ಕಬ್ಬಿನ ವಾಹನ ಡಿಕ್ಕಿಯಾಗಿ ಧ್ವಜ ಕಂಭಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಚೆನ್ನಮ್ಮನ ಪ್ರತಿಮೆ ಬಳಿಯಿರುವ ಕನ್ನಡ ಧ್ವಜ ಕಂಬ ರಾತ್ರಿ ಬೆಳಗಾಗುವಷ್ಟರಲ್ಲಿ ಕಿರಿದಾಗಿದ್ದು, ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಕಿಡಿಗೇಡಿಗಳು ಕಂಭವನ್ನು ಕತ್ತರಿಸಿ ಅಪಮಾನ ಮಾಡಿದ್ದಾರೆ ಎಂಬ …
Read More »ನಮ್ಮಂಥ ರಾಜಕಾರಣಿಗಳ ತೆವಲುಗಳಿಗೆ ಧರ್ಮೇಗೌಡರು ಬಲಿ: ಕುಮಾರಸ್ವಾಮಿ ವಿಷಾದ
ಬೆಂಗಳೂರು(ಡಿ. 29): ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವ ಉಪಸಭಾಪತಿ ಎಸ್ ಎಲ್ ಧರ್ಮೇಗೌಡರ ನಿಧನಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತೀವ್ರ ನೋವು ವ್ಯಕ್ತಪಡಿಸಿದರು. ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಧರ್ಮೇಗೌಡರ ಸಾವು ಬರೀ ಸಾವಲ್ಲ, ಇವತ್ತಿನ ರಾಜಕಾರಣದ ಕೊಲೆ ಎಂದು ವಿಷಾದಿಸಿದರು. ನಮ್ಮಂಥ ರಾಜಕಾರಣಿಗಳ ತೆವಲುಗಳಿಗೆ ಸಜ್ಜನ ವ್ಯಕ್ತಿತ್ವದ ಧರ್ಮೇಗೌಡರು ಬಲಿಯಾಗಿದ್ಧಾರೆ ಎಂದೂ ಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಂಡಿದ್ದು, ಇವತ್ತಿನ ಎಲ್ಲಾ ರಾಜಕಾರಣಿಗಳೂ ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಕರೆ …
Read More »ಧರ್ಮೇಗೌಡರ ಹಠಾತ್ ನಿಧನ; ಸಹಕಾರಿ ಕ್ಷೇತ್ರವೂ ಬಡವಾಗಿದೆ; ಸಂತಾಪ ಸೂಚಿಸಿದ ಸಚಿವ ರಮೇಶ್ ಜಾರಕಿಹೊಳಿ
ಬೆಂಗಳೂರು(ಡಿ.29): ಕರ್ನಾಟಕ ವಿಧಾನಪರಿಷತ್ತಿನ ಉಪಸಭಾಪತಿಯಾಗಿದ್ದ ಎಸ್ ಎಲ್ ಧರ್ಮೇಗೌಡ ರ ಹಠಾತ್ ನಿಧನಕ್ಕೆ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಜ್ಜನ ವ್ಯಕ್ತಿಯಾಗಿದ್ದ ಧರ್ಮೇಗೌಡ ರು ಬೀರೂರು ಕ್ಷೇತ್ರದ ಶಾಸಕರಾಗಿಯೂ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಸಹಕಾರಿ ರಂಗದ ಹಿರಿಯ ಧುರೀಣರಾಗಿದ್ದರು. ಇತ್ತೀಚಿಗೆ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಉಪ ಸಭಾಪತಿಗಳಾಗಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೂಕ್ಷ್ಮ ಮನಸ್ಸಿನ ರಾಜಕಾರಿಣಿಯನ್ನು ಕಳೆದುಕೊಂಡ ನಾಡು ಬಡವಾಗಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ …
Read More »ಕೊರೆಯುವ ಚಳಿಯಲ್ಲೂ ರಾತ್ರಿಯಿಡೀ ಕನ್ನಡ ಧ್ವಜ ಕಾವಲು ಮಾಡಿದ ಕನ್ನಡ ಪರ ಹೋರಾಟಗಾರರು
ಬೆಳಗಾವಿ: ಮಹಾನಗರ ಪಾಲಿಕೆ ಪ್ರವೇಶ ದ್ವಾರ ಮುಂದೆ ಸೋಮವಾರ ಬೆಳಿಗ್ಗೆ ಸುಮಾರು11 ಗಂಟೆಗೆ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ನೇತೃತ್ವದಲ್ಲಿ ಧ್ವಜ ಸ್ತಂಭದ ಸಮೇತ ಕನ್ನಡ ಧ್ವಜ ಹಾರಿಸಿ ಕನ್ನಡ ಮಾತೆಗೆ ಜಯ ಘೋಷಣೆ ಕೂಗಿದರು. ಇನ್ನೊಂದು ಕಡೆ ಅದನ್ನು ತೆರವುಗೊಳಿಸುವಂತೆ ಪೊಲೀಸ್ ಅಧಿಕಾರಿಗಳ ಒತ್ತಡ ಹೇರಿದರು ಅದಕ್ಕೆ ಬಗ್ಗದ ಕನ್ನಡ ಪರ ಹೋರಾಟಗಾರರು ಅದನ್ನು ತೆರವುಗೊಳಿಸದಂತೆ ಇಡೀ ರಾತ್ರಿಯಲ್ಲ ಕೊರೆಯುವ ಚಳಿಯಲ್ಲೂ ಅದರ ಕಾವಲು ಮಾಡುವುದರ ಜೊತೆಗೆ …
Read More »ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ಎಂಇಎಸ್ ಯುವ ಮೋರ್ಚಾ ಪ್ರತಿಭಟನೆ, ಪೊಲೀಸರೊಂದಿಗೆ ಜಟಾಪಟಿ
ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಿರುವ ಕನ್ನಡಪರ ಸಂಘಟನೆಗಳ ಹೋರಾಟಗಾರರು, ಧ್ವಜವನ್ನು ತೆರವುಗೊಳಿಸದೇ ಅಲ್ಲಿಯೇ ಮುಂದುವರಿಸಬೇಕು ಎಂದು ಧರಣಿ ಮುಂದುವರಿಸಿದ್ದಾರೆ.. ಆದರೆ ಇನ್ನೊಂದೆಡೆ ಎಂಇಎಸ್ ಯುವ ಸಂಘಟನೆಯವರು ಧ್ವಜ ತೆರವುಗೊಳಿಸಬೇಕು ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಧ್ವಜ ತೆರವುಗೊಳಿಸಿ ಇಲ್ಲವೇ ಪರಿಣಾಮ ಎದುರಿಸಿ ಎಂದು ಸವಾಲು ಎಸೆದಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಪರ ಸಂಘಟನೆಗಳ …
Read More »ಧರ್ಮೇಗೌಡರ ಹಠಾತ್ ನಿಧನ ; ಸಂತಾಪ ಸೂಚಿಸಿದ ಸಚಿವ ರಮೇಶ್ ಜಾರಕಿಹೊಳಿ
ಬೆಂಗಳೂರು : ವಿಧಾನಪರಿಷತ್ತಿನ ಉಪ ಸಭಾಪತಿಯಾಗಿದ್ದ ಎಸ್. ಎಲ್ ಧರ್ಮೇಗೌಡ ರ ಹಠಾತ್ ನಿಧನಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಜ್ಜನ ವ್ಯಕ್ತಿಯಾಗಿದ್ದ ಧರ್ಮೇಗೌಡರು ಬೀರೂರು ಕ್ಷೇತ್ರದ ಶಾಸಕರಾಗಿಯೂ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಸಹಕಾರಿ ರಂಗದ ಹಿರಿಯ ಧುರೀಣರಾಗಿದ್ದರು. ಇತ್ತೀಚಿಗೆ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಉಪ ಸಭಾಪತಿಗಳಾಗಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸೂಕ್ಷ್ಮ ಮನಸ್ಸಿನ ರಾಜಕಾರಿಣಿಯನ್ನು ಕಳೆದುಕೊಂಡ ನಾಡು ಬಡವಾಗಿದೆ ಎಂದು ಸಂತಾಪ …
Read More »