Breaking News

7.5 ಕೋಟಿ ಪ್ರಶಸ್ತಿ ಗೆದ್ದ ಶಿಕ್ಷಕ..!

ಲಂಡನ್, ಡಿ.4- ವಾರ್ಕಿ ಫೌಂಡೇಷನ್ ನೀಡುವ ಜಾಗತಿಕ ಶಿಕ್ಷಕ ಪ್ರಶಸ್ತಿಗೆ ಈ ಬಾರಿ ಮಹಾರಾಷ್ಟ್ರದ ಶಿಕ್ಷಕ ರಣಜಿತ್‍ಸಿನ್ಹಾ ದಿಸಾಲೆ ಪಾತ್ರರಾಗುವ ಮೂಲಕ 7.5 ಕೋಟಿ ರೂ.ಗಳನ್ನು ಪ್ರಶಸ್ತಿ ರೂಪದಲ್ಲಿ ಗೆದ್ದಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪರಿಟೆವಾಡಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ರಣಜಿತ್, ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ಸಿಗಬೇಕೆಂದು ಹೋರಾಟ ನಡೆಸಿದ್ದರಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ಕ್ಯು ಆರ್ ಕೋಡ್ ಮೂಲಕ ಸುಲಭ ರೀತಿಯಲ್ಲಿ ಪಠ್ಯಗಳನ್ನು ಪರಿಚಯಿಸಿದ ಖ್ಯಾತಿ ಹೊಂದಿದ್ದಾರೆ. …

Read More »

ಕೃಷಿ ಸಚಿವ ಬಿ.ಸಿ. ಪಾಟೀಲ್ ಗೆ  ಮಾಜಿ ಸಚಿವ ಬಸವರಾಜ ಹೊರಟ್ಟಿ ತಿರುಗೇಟು

ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಹೇಡಿಗಳು  ಎಂದು ಜರಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಗೆ  ಮಾಜಿ ಸಚಿವ ಬಸವರಾಜ ಹೊರಟ್ಟಿ ತಿರುಗೇಟು ನೀಡಿದ್ದು, ರೈತರು ಹೇಡಿಗಳಲ್ಲ. ರೈತರು ಹುಟ್ಟು ಸ್ವಾಭಿಮಾನಿಗಳು ಎಂದಿದ್ದಾರೆ. ಹೇಡಿತನ ಹೇಳಿಕೆ ವಿಚಾರವಾಗಿ  ಪ್ರತಿಕ್ರಿಯಿಸಿದ ಅವರು,  ರೈತರು ಎಂದು ಹೇಡಿಗಳಲ್ಲ, ಪರಸ್ಥಿತಿ ಮತ್ತು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.  ರೈತರು ಮರ್ಯಾದಸ್ತರು,   ಸಾಲ ಕೊಟ್ಟವರು ಪೀಡಿಸುವಾಗ ಮರ್ಯಾದೆಗೆ ಅಂಜಿ ದಿಕ್ಕು ತೋಚದಂತಾಗಿ ಆತ್ಮಹತ್ಯೆಗೆ ಶರಣಾಗುತ್ತಾನೆ, …

Read More »

ಚನ್ನಮ್ಮನ ಕಿತ್ತೂರಿನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು: ರಾಣಿ ಚನ್ನಮ್ಮ ನವಭಾರತ ಸೇನೆ

ಚನ್ನಮ್ಮನ ಕಿತ್ತೂರಿನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ. ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮುಖ್ಯಮಂತ್ರಿ ಅವರಿಗೆ. ರಾಣಿ ಚನ್ನಮ್ಮ ನವಭಾರತ ಸೇನೆ ಮತ್ತು ಹಿರಿಯರ ನಾಗರಿಕರ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತ್ತು. ಹಿರೇಬಾಗೇವಾಡಿ ಗ್ರಾಮಕ್ಕೆ ಸ್ಥಳಾಂತರಿಸಿ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದನ್ನು ಕೊಡಲೇ ರದ್ದು ಪಡಿಸಿ ಚನ್ನಮ್ಮನ ಕಿತ್ತೂರಿನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು. ಈ ಸಂದರ್ಭದಲ್ಲಿ …

Read More »

ಸಬ್ಸಿಡಿ ರಹಿತ ಎಲ್‍ಪಿಜಿ ಬೆಲೆ ಗುರುವಾರ ದೇಶಾದ್ಯಂತ 50 ರೂ.ಗೆ ಏರಿಕೆ

ನವದೆಹಲಿ : ಸಬ್ಸಿಡಿ ರಹಿತ ಎಲ್‍ಪಿಜಿ ಬೆಲೆ ಗುರುವಾರ ದೇಶಾದ್ಯಂತ 50 ರೂ.ಗೆ ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ) ತಿಳಿಸಿದೆ. ಸಬ್ಸಿಡಿ ರಹಿತ ಎಲ್‍ಪಿಜಿ ಗ್ಯಾಸ್ ಸಿಲಿಂಡ ರ್ ಗಳ ಬೆಲೆ ಏರಿಕೆ ಕಂಡಿರುವುದು ಐದು ತಿಂಗಳಲ್ಲಿ ಇದೇ ಮೊದಲ ಬಾರಿ. ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರ್ಧರಿಸುತ್ತವೆ ಮತ್ತು ಮಾಸಿಕ ಆಧಾರದ ಮೇಲೆ ಪರಿಷ್ಕರಿಸಲ್ಪಡುತ್ತವೆ. ಕಳೆದ ಬಾರಿ ದರ …

Read More »

ನಮ್ಮ ವರ್ತನೆಯಿಂದ, ತಪ್ಪಿನಿಂದ, ಭಾಷೆಯಿಂದ, ಏಕಪಕ್ಷೀಯ ನಿರ್ಧಾರದಿಂದ ಪಕ್ಷಕ್ಕೆ ಸೋಲಾಗುತ್ತಿದೆ:ಸತೀಶ್ ಜಾರಕಿಹೊಳಿ

ಬೆಳಗಾವಿ: ನಮ್ಮ ವರ್ತನೆಯಿಂದ, ತಪ್ಪಿನಿಂದ, ಭಾಷೆಯಿಂದ, ಏಕಪಕ್ಷೀಯ ನಿರ್ಧಾರದಿಂದ ಪಕ್ಷಕ್ಕೆ ಸೋಲಾಗುತ್ತಿದೆ. ಕೆಲ ಬದಲಾವಣೆ ತರುವ ಬಗ್ಗೆ ಸಭೆಯಲ್ಲಿ ನಾಯಕರು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಪುನರ್ ಕಟ್ಟುವ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಪಕ್ಷದಲ್ಲಿ ಭವಿಷ್ಯದಲ್ಲಿ ಬದಲಾವಣೆ ಮಾಡಿದರೆ ಮಾತ್ರ ಪಕ್ಷಕ್ಕೆ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಬೆಳಗಾವಿ-ಬೆಂಗಳೂರಿನ ಆತ್ಮಾವಲೋಕನ ಸಭೆಗೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ …

Read More »

ಬಿಜೆಪಿ ಪಕ್ಷಕ್ಕೆ ಹೊದ  ಬಳಿಕ ಬಿ.ಸಿ.ಪಾಟೀಲ್ ಅವರ ಸಂಸ್ಕೃತಿ ಬದಲಾಗಿದೆ:ಹೆಬ್ಬಾಳ್ಕರ್

ಬೆಳಗಾವಿ : ಮಡಿಕೇರಿಯಲ್ಲಿ ನಿನ್ನೆಅನ್ನದಾತರ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಹೇಳಿಕೆಗೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್  ವಾಗ್ದಾಳಿ ಮಾಡಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತನ ಮಗನಾಗಿದ್ದಾರೆ. ಕೃಷಿ ಮಂತ್ರಿಗಳಾಗಿ, ರೈತರ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ. ಬಿಜೆಪಿ ಪಕ್ಷಕ್ಕೆ ಹೊದ  ಬಳಿಕ ಅವರ ಸಂಸ್ಕೃತಿ ಬದಲಾಗಿದೆ ಎಂದಿದ್ದಾರೆ. ಈಚೆಗೆ ಗ್ರಾಮೀಣ ಕ್ಷೇತ್ರದಲ್ಲಿ ಆಪರೇಷನ್ ಕಮಲ ವಿಚಾರವಾಗಿ ಪ್ರತಿಕ್ರಿಯಿಸಿ,  …

Read More »

ಬಿಜೆಪಿಗೆ ಅತ್ಯಂತ ಗಟ್ಟಿ ನೆಲೆ ಎಂದೆನಿಸಿಕೊಂಡಿರುವ ನಾಗ್ಪುರದಲ್ಲಿ ಬಿಜೆಪಿ ಸೋಲುಂಡಿದೆ.

ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದ್ದು,  ಕೇವಲ ಒಂದು ಸ್ಥಾನದಲ್ಲಿ ಮಾತ್ರ ಜಯಗಳಿಸಿದೆ. ಆಡಳಿತದಲ್ಲಿರುವ ಶಿವಸೇನೆ, ಕಾಂಗ್ರೆಸ್​ ಮತ್ತು ಎನ್​ಸಿಪಿ ಮೈತ್ರಿ ನಾಲ್ಕು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಉಳಿದ ಒಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಗೆ ಅತ್ಯಂತ ಗಟ್ಟಿ ನೆಲೆ ಎಂದೆನಿಸಿಕೊಂಡಿರುವ ನಾಗ್ಪುರದಲ್ಲಿ ಬಿಜೆಪಿ ಸೋಲುಂಡಿದೆ. ಈ ಕ್ಷೇತ್ರದಲ್ಲಿ ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಾಜಿ ಮುಖ್ಯಮಂತ್ರಿ …

Read More »

ಕರ್ನಾಟಕ ಬಂದ್ ಗೆ ಕರೆ ಬಸ್ ಗಳ ಸೇವೆ ಎಂದಿನಂತೆ ಇರಲಿದೆ.

ಬೆಂಗಳೂರು : ಮರಾಠ ಅಭಿವೃದ್ಧಿ ನಿಮಗ ಸ್ಥಾಪನೆ ವಿರೋಧಿಸಿ ಕೆಲ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಆದರೆ  ಕೆಎಸ್ ಆರ್ ಟಿಸಿ , ಬಿಎಂಟಿಸಿ ಬಸ್ ಗಳ ಸೇವೆ ಎಂದಿನಂತೆ ಇರಲಿದೆ. ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್  ಹಿನ್ನಲೆ ಬಸ್ ಸಂಚಾರ ಬಂದ್ ಆಗಲಿದೆ ಎಂಬ ಅನುಮಾನ ಜನರಲ್ಲಿದೆ. ಆದರೆ ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಸಂಚಾರ ಎಂದಿನಂತೆ ಇರಲಿದೆ. 5 ಸಾವಿರ ಬಸ್ ಗಳು …

Read More »

ರಾಗಿಣಿ ದ್ವಿವೇದಿಗೆ ಇನ್ನೂ ಒಂದು ತಿಂಗಳು ಜೈಲು ಫಿಕ್ಸ್

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ದ್ವಿವೇದಿಗೆ ಇನ್ನೂ ಒಂದು ತಿಂಗಳು ಜೈಲು ಫಿಕ್ಸ್ ಆಗಿದೆ. ರಾಗಿಣಿ ದ್ವಿವೇದಿ ಜಾಮೀನು ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ಈ ಜಾಮೀನು ಅರ್ಜಿ ವಿಚಾರಣೆಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ಜನವರಿ ಮೊದಲ ವಾರಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷವನ್ನು ಕೂಡ ನಟಿ ಜೈಲಿನಲ್ಲಿ ಬರಮಾಡಿಕೊಳ್ಳಲಿದ್ದಾರೆ. ಇದೇ ವೇಳೆ ಕೋರ್ಟ್, ರಾಜ್ಯ ಸರ್ಕಾರ ಹಾಗೂ …

Read More »

ಪಲ್ಟಿ ಹೊಡೆದ ಲಾರಿ: ಭೀಕರ ಅಪಘಾತದಲ್ಲಿ ಚಾಲಕ ಸಾವು

ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದ್ದು, ರಸ್ತೆ ಪಕ್ಕ ನಿಂತಿದ್ದ ಓಮ್ನಿ ಚಾಲಕ ಬಲಿ ಪಡೆದಿದೆ. ಜಿಲ್ಲೆಯ ವಿರಾಜಪೇಟೆ ಮಡಿಕೇರಿ ರಸ್ತೆಯ ಭೇತ್ರಿ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಮೃತನನ್ನು ಮೂರ್ನಾಡುವಿನ ಹರೀಶ್ ಎಂದು ಗುರುತಿಸಲಾಗಿದೆ. ಲಾರಿ ಮುಗುಚಿಬಿದ್ದು, ನಾಲ್ಕೈದು ಬಾರಿ ಪಲ್ಟಿ ಹೊಡೆದಿದೆ. ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಬಿದ್ದ ಪರಿಣಾಮ ಓಮ್ನಿ ವಾಹನ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಮೂರ್ನಾಡು ಪೋಲಿಸರು …

Read More »