ಬೆಳಗಾವಿ : ಸಕ್ಕರೆ ಕಾರ್ಖಾನೆಯವರು ಕಳೆದ 6 ತಿಂಗಳ ವೇತನ ನೀಡಿಲ್ಲೆಂದು ಕಾರ್ಮಿಕನೊರ್ವ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡ ಮೇಲಿಂದ ಬಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಶುಕ್ರವಾರ ನಡೆದಿದೆ. ವಾಮದೇವ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ರಾಯಬಾಗ ರೇಣುಕಾ ಶುಗರ್ಸ್ ಸಕ್ಕರೆ ಕಾರ್ಖಾನೆ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದೆ. ಆದರೆ ಕೆಲವು ದಿನಗಳ ಹಿಂದೆಯಷ್ಟೇ ನನ್ನನ್ನು ಸೇರಿ ಹಲವರನ್ನು ಬೇರೆಡೆ ವರ್ಗಾವಣೆ ಮಾಡಿದ್ದರು. ನಾನು ವರ್ಗಾವಣೆ ಮಾಡದಂತೆ ಮನವಿ ಮಾಡಿಕೊಂಡಿದ್ದೆ. …
Read More »ಮುಷ್ಕರ ಕೈ ಬಿಡುವಂತೆ ಸಾರಿಗೆ ಸಿಬ್ಬಂದಿಗೆ ಸಿಎಂ ಮನವಿ
ಬೆಂಗಳೂರು:ಸಾರಿಗೆ ಇಲಾಖೆಯಲ್ಲಿ ನಾಲ್ಕು ಕಾರ್ಪೋರೇಶನ್ ಗಳು ಬಹುತೇಕ ಕೊರೋನಾ ಹೊಡೆತಕ್ಕೆ ಎಲ್ಲವೂ ನಷ್ಟದಲ್ಲಿವೆ. ಸಂಬಳಗಳ ಹಂಚಿಕೆಯಲ್ಲಿ ವಿಳಂಬವಾಗಿದೆ, ಇಲ್ಲ ಎಂದು ಯಾರೂ ಹೇಳುತ್ತಿಲ್ಲ, ದುಡ್ಡು ಬಂದ ಮೇಲೆ ಬಿಡುಗಡೆ ಮಾಡಿದ್ದು ಸುಳ್ಳಲ್ಲ, ಸಾರಿಗೆ ಮಂತ್ರಿ, ಮುಖ್ಯಮಂತ್ರಿಗಳು ನಿಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಅನ್ನುವವದು ಸರಿಯಲ್ಲ. ಪುಣ್ಯಕ್ಕೆ ಪಕ್ಕದ ತೆಲಂಗಾಣದ KCR ತರ 48000 ನೌಕರರನ್ನು ಮನೆಗೆ ಕಳಿಸಿಲ್ಲ. ನಿಮ್ಮ ಬೇಡಿಕೆಗಳ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರ ನ್ಯಾಯ ಸಮ್ಮತವಲ್ಲವೆಂದು ಯಾರೂ ಹೇಳುವದಿಲ್ಲ. …
Read More »ಹಗಲು ರಾತ್ರಿ ದುಡಿಯುವ ನಮಗೂ ಸರಕಾರಿ ನೌಕರರೆನ್ನಿ
ಗೋಕಾಕ : ಎಲ್ಲರಂತೆ ನಾವು ಸಹ ಕಷ್ಟಪಟ್ಟು ದುಡಿಯುವ ಮೂಲಕ ಜನಸಾಮಾನ್ಯರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಇದನ್ನು ಅರಿತು ರಾಜ್ಯ ಸರಕಾರ ತಮ್ಮನ್ನು ಸರಕಾರಿ ನೌಕರರು ಎಂದು ಪರಿಗಣಿಸುವಂತೆ ಸಾರಿಗೆ ನೌಕರರು ಗೋಕಾಕದಲ್ಲಿ ಬಸ್ಸುಗಳನ್ನು ಬಂದ್ ಮಾಡಿ ಆಗ್ರಹಿಸಿದರು. ಸಾರಿಗೆ ಸಂಸ್ಥೆಗಳು ಉತ್ತಮ ಲಾಭದೊಂದಿಗೆ ಚಲಿಸುತ್ತಲಿದೆ. ಹೀಗಾಗಿ ಸಂಸ್ಥೆಗೆ ಯಾವುದೇ ನಷ್ಟ ಇಲ್ಲ ನಮಗೆ ಸಂಬಳ, ಇನ್ನಿತರ ಸೌಲಭ್ಯ ನೀಡಿದರೆ ಸರಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ ಎನ್ನುವುದು ಸರಿಯಲ್ಲ.ಎಂದು ಪ್ರತಿಭಟನಾಕಾರರು …
Read More »ಮಾಂಸದೂಟ ಸೇವಿಸಿ ಅಸ್ವಸ್ಥವಾಗಿದ್ದ 6ವರ್ಷದ ಮಗು ಸಾವು
ರಾಮನಗರ: ಬುಧವಾರದಂದು ಚನ್ನಪಟ್ಟಣ ತಾಲ್ಲೂಕಿನ ಮೊಳೆದೊಡ್ಡಿ ಗ್ರಾಮದಲ್ಲಿ ಬೀಗರ ಔತಣ ಕೂಟದಲ್ಲಿ ಮಾಂಸದೂಟ ಸೇವಿಸಿ ಜನರು ಅಸ್ವಸ್ಥತಗೊಂಡ ಘಟನೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಅಸ್ಪತ್ರೆಯಲ್ಲಿ 6 ವರ್ಷದ ಹೆಣ್ಣುಮಗು ಮೃತಪಟ್ಟಿದೆ. ಬೀಗರ ಔತಣದಲ್ಲಿ ಊಟ ಮಾಡಿದ್ದ 6 ವರ್ಷದ ಹೆಣ್ಣು ಮಗು ಚೈತನ್ಯ ಚಿಕಿತ್ಸೆ ಫಲಿಸದೇ ಗುರುವಾರ ಮೃತಪಟ್ಟಿದ್ದು, ಗ್ರಾಮದ ವೆಂಕಟಭೈರ-ಸೌಮ್ಯ ದಂಪತಿಯ ಮಗು ಚೈತನ್ಯ ಬೀಗರೂಟದಲ್ಲಿ ಫುಡ್ ಪಾಯ್ಸನ್ ನಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ …
Read More »ಬಸ್ – ಕಾರು ಮುಖಾಮುಖಿ ಡಿಕ್ಕಿ : ಓರ್ವ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ
ಖಾನಾಪುರ : ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಕಾರು, ಸಾರಿಗೆ ಸಂಸ್ಥೆ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, 10 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಕಾರು ಚಾಲಕ ಮಹಾರಾಷ್ಟ್ರ ಮೂಲದ ಭಿಕಾಜಿ ಸಾವಂತ(46) ಮೃತರು. ತಾಲ್ಲೂಕಿನ ತೋರಾಳಿ ಗ್ರಾಮದ ನಿವಾಸಿ ಪ್ರಕಾಶ ಪಾಟೀಲ ಸೇರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಹತ್ತಕ್ಕೂ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. …
Read More »ಜೈಲಿನಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು, ಪತ್ನಿ, ಪುತ್ರ, ಪುತ್ರಿಯರು ಭೇಟೆ
ಬೆಳಗಾವಿ : ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು, ಪತ್ನಿ, ಪುತ್ರ, ಪುತ್ರಿಯರು ಇಂದು ಭೇಟೆಯಾದರು. ಧಾರವಾಡ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿನಯ್ ಕುಲಕರ್ಣಿಯನ್ನು ಭೇಟಿ ಮಾಡಲು ಕುಟುಂಬಸ್ಥರಿಗೆ ಅವಕಾಶ ನೀಡುವಂತೆ ಮಧ್ಯಾಹ್ನ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿಗೆ ಆಗಮಿಸಿದ ಕುಟುಂಬಸ್ಥರಿಗೆ ಸಂಜೆ 4 ರಿಂದ …
Read More »ಗುರುವಾರ ಸಂಜೆ ಕಾರು, ಸಾರಿಗೆ ಸಂಸ್ಥೆ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತ
ಖಾನಾಪುರ : ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಕಾರು, ಸಾರಿಗೆ ಸಂಸ್ಥೆ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, 10 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಕಾರು ಚಾಲಕ ಮಹಾರಾಷ್ಟ್ರ ಮೂಲದ ಭಿಕಾಜಿ ಸಾವಂತ(46) ಮೃತರು. ತಾಲ್ಲೂಕಿನ ತೋರಾಳಿ ಗ್ರಾಮದ ನಿವಾಸಿ ಪ್ರಕಾಶ ಪಾಟೀಲ ಸೇರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಹತ್ತಕ್ಕೂ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. …
Read More »ರಿಲಾಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅಜ್ಜನಾಗಿ ಬಡ್ತಿ ಪಡೆದಿದ್ದಾರೆ.
ನವದೆಹಲಿ: ಆಕಾಶ್ ಮತ್ತು ಶ್ಲೋಕಾ ದಂಪತಿಗೆ ಇಂದು ಗಂಡು ಮಗು ಜನಿಸಿದೆ. ಈ ಮೂಲಕ ಖ್ಯಾತ ಉದ್ಯಮಿ ರಿಲಾಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅಜ್ಜನಾಗಿ ಬಡ್ತಿ ಪಡೆದಿದ್ದಾರೆ.ಮುಂಬೈನ ಆಸ್ಪತ್ರೆಯಲ್ಲಿ ಶ್ಲೋಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಧೀರೂಬಾಯಿ ಹಾಗೂ ಕೋಕಿಲಾಬೆನ್ ಅಂಬಾನಿ ಕುಟುಂಬದ ಮರಿಮೊಮ್ಮಗನನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಈ ಮೂಲಕ ನೀತಾ ಮತ್ತು ಮುಕೇಶ್ ಅಂಬಾನಿ ಅಜ್ಜ, ಅಜ್ಜಿಯಾಗಿದ್ದಾರೆ. ಮುಂಬೈನ ಆಸ್ಪತ್ರೆಯಲ್ಲಿ ಶ್ಲೋಕಾ …
Read More »ತಂದೆಯನ್ನೇ ಕೊಂದಿದ್ದಾನೆ. ಬೇಸತ್ತ ಮಗ,
ಮಂಡ್ಯ: ಪತ್ನಿ ಶೀಲ ಶಂಕಿಸುತ್ತಿದ್ದ ಪತಿಯನ್ನು ಆತನ ಮಗನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.ಜಿಲ್ಲೆಯ ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿಯಲ್ಲಿ ಘಟನೆ ನಡೆದಿದ್ದು, 44 ವರ್ಷದ ದೇವರಾಜುನನ್ನು ಆತನ ಮಗ ಕೊಲೆ ಮಾಡಿದ್ದಾನೆ. ಕೂಲಿ ಮಾಡಿ ಬದುಕುತ್ತಿದ್ದ ಬಡ ಕುಟುಂಬದಲ್ಲಿ ಇದ್ದದ್ದು ಪತಿ, ಪತ್ನಿ ಹಾಗೂ ಒಬ್ಬನೇ ಮಗ. ಈ ನಡುವೆ ಮನೆಯ ಯಜಮಾನ ಎನಿಸಿಕೊಂಡ ಪತಿಗೆ ಪತ್ನಿ ನಡತೆ ಬಗ್ಗೆ ಅನುಮಾನ ಶುರುವಾಗಿತ್ತು. ಈ ವಿಚಾರಕ್ಕೆ ಮನೆಯಲ್ಲಿ ನಿತ್ಯ …
Read More »ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಯಲ್ಲಿ ಗ್ಯಾಸ್ ಸೋರಿಕೆ
ಮಂಗಳೂರು: ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಯಲ್ಲಿ ಗ್ಯಾಸ್ ಸೋರಿಕೆಯಾದ ಘಟನೆ ಮಂಗಳೂರಿನ ತೊಕ್ಕೊಟ್ಟು ಬಳಿ ನಡೆದಿದೆ. ನಗರದ ಬೈಕಂಪಾಡಿಯಿಂದ ಕೇರಳ ಕಡೆಗೆ ಅಡುಗೆ ಅನಿಲದ ಸಿಲಿಂಡರನ್ನು ಸಾಗಿಸುತ್ತಿದ್ದ ಲಾರಿಯಲ್ಲಿ ಏಕಾಏಕಿ ಗ್ಯಾಸ್ ಸೋರಿಕೆ ಕಾಣಿಸಿಕೊಂಡಿದೆ. ಈ ವಿಚಾರ ಗೊತ್ತಾದ ತಕ್ಷಣ ಚಾಲಕ ಪರಿಶೀಲಿಸಿದ್ದು, ಒಂದು ಸಿಲಿಂಡರ್ ಸೋರಿಕೆ ಆಗಿರೋದು ಬೆಳಕಿಗೆ ಬಂದಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ತುರ್ತು ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ 66 …
Read More »