Breaking News

ಬಿಜೆಪಿಯವರೇ ನಿಯಮಾವಳಿ ಪಾಲಿಸದೇ ಗೂಂಡಾಗಿರಿ ಪ್ರದರ್ಶಿಸಿದ್ದಾರೆ: ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಕಾಂಗ್ರೆಸ್ ಗುಂಡಾವರ್ತನೆ ತೋರಿಲ್ಲ. ಬಿಜೆಪಿಯವರೇ ನಿಯಮಾವಳಿ ಪಾಲಿಸದೇ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿ ಗೂಂಡಾಗಿರಿಯನ್ನು ಸದನದಲ್ಲಿ ಪ್ರದರ್ಶಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ದ ಕಿಡಿ ಕಾರಿದ್ದಾರೆ. ವಿಧಾನಪರಿಷತ್ ನಲ್ಲಿನ ಗಲಾಟೆಯ ಕುರಿತಂತೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಇಂದಿನ ವಿಧಾನ ಪರಿಷತ್ ನಲ್ಲಿನ ಗಲಾಟೆಯ ಬಗ್ಗೆ ವಿಷಾದಿಸುತ್ತೇನೆ. ಆದ್ರೆ ಸಭಾಪತಿ ಇದ್ದಾಗ ಉಪಸಭಾಪತಿ ಹೇಗೆ ಬಂದ್ರು.? ಸಭಾಪತಿ ಬರುವ ಮೊದಲೇ ಉಪಸಭಾಪತಿ ಪೀಠ ಅಲಂಕಿರಿಸಿದ್ದೇಕೆ …

Read More »

ಬೆಳಗಾವಿ: ಹುಲಿಯ ಉಗುರು, ಆನೆ ದಂತದ ಕಡಗ ಮಾರಾಟ, ವ್ಯಕ್ತಿಯ ಬಂಧನ

ಬೆಳಗಾವಿ: ಹುಲಿ ಉಗುರುಗಳು ಮತ್ತು ಆನೆ ದಂತದಿಂದ ಮಾಡಿದ ಕಡಗಗಳನ್ನು ಮಾರುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದವರು ಬಂಧಿಸಿದ್ದಾರೆ. ನಗರದ ಶಹಾಪುರದ ಕಾಕೇರಿ ಚೌಕ್ ನಿವಾಸಿ ಶ್ರೀರಾಮ ಅರ್ಜುನಸಾ ಬಾಕಳೆ (46) ಬಂಧಿತ. ಅವರಿಂದ 2 ಕಡಗ ಹಾಗೂ 5 ಹುಲಿ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ರೋಹಿಣಿ ಪಾಟೀಲ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.ಆರೋಪಿ ವಿರುದ್ಧ …

Read More »

ಬೆಣಚಿನಮರಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಗೋಕಾಕ ತಾಲ್ಲೂಕಿನ 34 ಬೆಣಚಿನಮರಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ (1) ಸಾಮಾನ್ಯ ವರ್ಗ ಮಹಿಳೆ ವಾರ್ಡ್ ಸಂಖ್ಯೆ -03 ಶ್ರೀಮತಿ ಸುನಂದಾ ಪ್ರಕಾಶ ಬಂಡಿವಡ್ಡರ್ (2) ಸಾಮಾನ್ಯ ವರ್ಗ ಮಹಿಳೆ ವಾರ್ಡ್ ಸಂಖ್ಯೆ -05 ಶ್ರೀಮತಿ ಮಂಜುಳಾ ಲಕ್ಷ್ಮಣ್ ಪಾಟೀಲ್ (3) ಎಸ್.ಟಿ. ವರ್ಗ ಮಹಿಳೆ ವಾರ್ಡ್ ಸಂಖ್ಯೆ-01 ಶ್ರೀಮತಿ ಸುರೇಖಾ ಮಯೂರ್ ಕುರಿ     ಗೋಕಾಕ್ ತಾಲೂಕಿನ ಶಾಸಕರಾದ ಸನ್ಮಾನ್ಯ ಶ್ರೀ ರಮೇಶಣ್ಣ ಲಕ್ಷ್ಮಣರಾವ್ …

Read More »

ಕೇದನೂರು ಗ್ರಾಮದಲ್ಲಿ ಯುವಕನೊಬ್ಬ ನೇಣಿಗೆ ಶರಣಾದ ಘಟನೆ

      ಬೆಳಗಾವಿ : ತಾಲ್ಲೂಕಿನ  ಕೇದನೂರು ಗ್ರಾಮದಲ್ಲಿ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಮಂಗಳವಾರ ಬೆಳ್ಳಿಗೆ ನಡೆದಿದೆ. ಸಚಿನ ಶೆಟ್ಟು ಲೋಹಾರ (22) ಆತ್ಮಹತ್ಯೆ ಮಾಡಿಕೊಂಡ ಯುವಕ.  ಕೆಲಸವಿಲ್ಲದೆ ತಿರುಗಾಡುತ್ತಿದ್ದ ಯುವಕ ಮಾನಸಿಕವಾಗಿ ಕುಗ್ಗಿದ್ದನು. ಇದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಜೈಲರ್ ಮತ್ತು ಕಾರಾಗೃಹ ವೀಕ್ಷಕರು ಹೊಡೆದಾಡಿಕೊಂಡಿರುವ ಘಟನೆ

ಹಾವೇರಿ : ಜೈಲರ್ ಮತ್ತು ಕಾರಾಗೃಹ ವೀಕ್ಷಕರು ಹೊಡೆದಾಡಿಕೊಂಡಿರುವ ಘಟನೆ ನಗರದ ಸಮೀಪವಿರುವ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಜಿಲ್ಲಾ ಕಾರಾಗೃಹದ ಜೈಲರ್ ತಿಮ್ಮಣ್ಣ ಮತ್ತು ವೀಕ್ಷಕ ಪುಂಡಲೀಕ ಪವಾರ ನಿನ್ನೆ ಮಧ್ಯಾಹ್ನ ಬಡಿದಾಡಿಕೊಂಡಿದ್ದಾರೆ.  ಹೊಡೆದಾಟದ ವೇಳೆ ಇಬ್ಬರೂ ಗಾಯಗೊಂಡಿದ್ದು, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ವೈಯಕ್ತಿಕ ಕಾರಣ ಮತ್ತು ಕೆಲಸದ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಆರೋಪ ಪ್ರತ್ಯಾರೋಪ ಮಾಡಿಕೊಂಡು ಪರಸ್ಪರ ಇಬ್ಬರು ದೂರು ದಾಖಲಿಸಿದ್ದಾರೆ. ಘಟನೆ …

Read More »

ಕುಖ್ಯಾತ ರೌಡಿ ಲಿಂಗರಾಜನ ಕೊಲೆ ಪ್ರಕರಣ ಭೇದಿಸಿದ ಪೊಲೀಸರು : 16 ಆರೋಪಿಗಳು ಅಂದರ್

ಹಾಸನ,- ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಹಿರೀಸಾವೆ ಪೊಲೀಸ್ ಠಾಣಾ ಸರಹದ್ದಿನ ಕಮವರಳ್ಳಿಯಲ್ಲಿ ವಾರದ ಹಿಂದೆ ನಡೆದಿದ್ದ ಬೆಂಗಳೂರಿನ ಕುಖ್ಯಾತರೌಡಿ ಶೀಟರ್ ಲಿಂಗರಾಜನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, 16 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೋಹನ @ ಡಬ್ಬಲ್ ಮೀಟರ್ ಮೋಹನ, ನಂಜಪ್ಪ @ ನಂಜ @ ಕರಿಯ, ನಾಗರಾಜ @ ನಾಗ, ಗ್ರೇಸ್ ವಾಲ್ಟರ್ @ ವಾಲ್ಟರ್, ನವೀನ್‍ ಕುಮಾರ, ಪ್ರದೀಪ @ ದಾಸರಹಳ್ಳಿ ಪ್ರದೀಪ, ಸುನೀಲ್‍ಕುಮಾರ @ ಸುನೀಲ್, …

Read More »

ಸುದ್ದಿಗಳ ಸತ್ಯಾಸತ್ಯತೆ ಪರಾಮರ್ಶಿಸಿ ಪ್ರಕಟಿಸಬೇಕು: ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳು ವ್ಯಾಪಕವಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಯಾವುದೇ ಸುದ್ದಿ ಇರಲಿ ಪ್ರತ್ಯಕ್ಷವಾಗಿ ನೋಡಿದರೂ ಪ್ರಮಾಣಿಸಿ ನೋಡು ಎಂಬಂತೆ ಸುದ್ದಿಯ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕವೇ ಮಾಧ್ಯಮಗಳು ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಾಧ್ಯಮದವರಿಗಾಗಿ ಏರ್ಪಡಿಸಲಾಗಿದ್ದ “ಫ್ಯಾಕ್ಟ್ ಚೆಕ್” ಕುರಿತ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಸುದ್ದಿಗಳಿಂದ ಕೆಲವೊಮ್ಮೆ ಜನರಲ್ಲಿ …

Read More »

ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಪೋರ್ಟ್ಸ್ ಇಂಡೋರ್ ಸ್ಟೇಡಿಯಂ ನಿರ್ಮಿಸಲು ಶಾಸಕ ಅಭಯ ಪಾಟೀಲ ಪ್ರಸ್ತಾವನೆ

ಬೆಳಗಾವಿ: ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಪೋರ್ಟ್ಸ್ ಇಂಡೋರ್ ಸ್ಟೇಡಿಯಂ ನಿರ್ಮಿಸಲು ಶಾಸಕ ಅಭಯ ಪಾಟೀಲ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದ್ದಾರೆ. ಬೆಳಗಾವಿಯ ಯಳ್ಳೂರು ಗ್ರಾಮದ ಹದ್ದಿಯಲ್ಲಿರುವ 40 ಎಕರೆ ಸರ್ಕಾರಿ ಜಾಗದಲ್ಲಿ ಸುಧಾರಿತ ಶೈಲಿಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಉದ್ದೇಶದಿಂದ ಶಾಸಕ ಅಭಯ ಪಾಟಲ ಇಂದು ಕ್ರೀಡಾ ಇಲಾಖೆಯ ಆಯುಕ್ತ ಶ್ರೀನಿವಾಸ ಜೊತೆಗೆ ಯಳ್ಳೂರು ಗ್ರಾಮದಲ್ಲಿರುವ ಸರ್ಕಾರಿ ಜಾಗ ಪರಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕ ಅಭಯ ಪಾಟೀಲ, ಬೆಳಗಾವಿ ನಗರ …

Read More »

ಕಾಯಕಶ್ರೀ ಪ್ರಶಸ್ತಿಗೆ ಈ ಬಾರಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಧ್ಯಕ್ಷ ಶ್ರೀ ರವಿಶಂಕರ್ ಗುರೂಜಿ ಆಯ್ಕೆ

ಗೋಕಾಕ: ಪ್ರತಿ ವರ್ಷ ಶ್ರೀ ಮಠದಿಂದ ಕೊಡಮಾಡುವ ಕಾಯಕಶ್ರೀ ಪ್ರಶಸ್ತಿಗೆ ಈ ಬಾರಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಧ್ಯಕ್ಷ ಶ್ರೀ ರವಿಶಂಕರ್ ಗುರೂಜಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ರವಿವಾರದಂದು ಸಾಯಂಕಾಲ ನಗರದ ಶೂನ್ಯ ಸಂಪಾದನ ಮಠದ ೧೬ನೇ ಶರಣ ಸಂಸ್ಕೃತಿ ಉತ್ಸವ ಸಮಾರಂಭದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು. ಈ ಬಾರಿಯು ಲಿಂಗೈಕ್ಯ ಬಸವ …

Read More »

ಶೀಲ ಶೆಂಕಿಸಿ ಪತಿಯೇ ತನ್ನ ಪತ್ನಿಯನ್ನು ಸಲಾಕೆಯಿಂದ ಹೊಡೆದು ಕೊಲೆ

ಯಾದಗಿರಿ: ಶೀಲ ಶೆಂಕಿಸಿ ಪತಿಯೇ ತನ್ನ ಪತ್ನಿಯನ್ನು ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಯಾದಗಿರಿ ತಾಲೂಕಿನ ಮಾಧ್ವಾರ ಗ್ರಾಮದ ಜಮೀನಿನಲ್ಲಿ ಈ ಘಟನೆ ನಡೆದಿದೆ. ಮಾಧ್ವಾರ ಗ್ರಾಮದ ರೇಣುಕಾಳನ್ನು ಆಕೆಯ ಪತಿ ಚೌಡಪ್ಪ ಕೊಲೆ ಮಾಡಿದ್ದಾನೆ. ರೇಣುಕಾ ಮತ್ತು ಚೌಡಪ್ಪ ಕಳೆದ ಒಂಭತ್ತು ವರ್ಷದಿಂದ ದಾಂಪತ್ಯ ನಡೆಸುತ್ತಿದ್ದರು. ಈ ಇಬ್ಬರಿಗೆ ಒಬ್ಬ ಮಗ ಕೂಡ ಇದ್ದಾನೆ. ಆದರೆ ಮೊದಲಿಂದಲೂ ಚೌಡಪ್ಪ ರೇಣುಕಾಳ ಶೀಲ ಶೆಂಕಿಸಿ ಜಗಳ …

Read More »