ಬೆಂಗಳೂರು, ಡಿ.- ಆಸ್ತಿ ತೆರಿಗೆ ಹೆಚ್ಚಳಕ್ಕೆ ಸದ್ದಿಲ್ಲದೆ ತಯಾರಿ ನಡೆದಿದೆ. ವಸತಿ ಕಟ್ಟಡಗಳಿಗೆ ಶೇ.25 ಹಾಗೂ ವಸತಿಯೇತರ ಕಟ್ಟಡಗಳಿಗೆ ಶೇ.30ರಷ್ಟು ಆಸ್ತಿ ತೆರಿಗೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಲಯವಾರು ಗೈಡ್ಲೈನ್ಸ್ ಆಧಾರದಲ್ಲಿ ಆಸ್ತಿ ತೆರಿಗೆ ವಿಧಿಸುವ ಕುರಿತಂತೆ ಟಿಪ್ಪಣಿ ತಯಾರಿಸಿ ನೀಡುವಂತೆ ಗೌರವ್ ಗುಪ್ತ ಆದೇಶ ನೀಡಿದ್ದು ಜನವರಿಯಿಂದ ಬೆಂಗಳೂರಿನ ನಾಗರಿಕರು ಹೆಚ್ಚುವರಿ ಆಸ್ತಿ ತೆರಿಗೆ ಪಾವತಿಸಬೇಕಾಗುವುದು ಬಹುತೇಕ ಖಚಿತಪಟ್ಟಿದೆ. …
Read More »ಬಿಜೆಪಿಯು ಸಮುದಾಯಗಳಲ್ಲಿ ಗಲಭೆ ಮತ್ತು ದ್ವೇಷದ ಹೊಸ ಧರ್ಮವನ್ನು ಸೃಷ್ಟಿಸಿದೆ’:
ಜಲ್ಪೈಗುರಿ: ‘ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಹುನ್ನಾರವನ್ನು ನಡೆಸುತ್ತಿರುವ ಕೇಂದ್ರ ಸರ್ಕಾರವು, ಪಶ್ಚಿಮ ಬಂಗಾಳವನ್ನು ಗಲಭೆಪೀಡಿತ ಗುಜರಾತ್ ರೀತಿಯಾಗಿ ಮಾರ್ಪಡಿಸಲು ಹೊರಟಿದೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ನಡೆದ ರ್ಯಾಲಿಯೊಂದರಲ್ಲಿ ಆರೋಪಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬೆಂಗಾವಲು ಪಡೆಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ರಾಜ್ಯದ ಐಪಿಎಸ್ ಅಧಿಕಾರಿಗಳಿಗೆ ಸಮನ್ಸ್ ನೀಡುವ ಮೂಲಕ ಕೇಂದ್ರ ಸರ್ಕಾರವು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ …
Read More »ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಜನ ವಿರೋಧಿ: ಸತೀಶ ಜಾರಕಿಹೊಳಿ
ರಾಯಬಾಗ: ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಜನ ವಿರೋಧಿ ಕಾಯ್ದೆಗಳ ಜಾರಿಗೆ ತರುವ ಮೂಲಕ ಜನ ಸಾಮಾನ್ಯರಿಗೆ ತೊಂದರೆಗೀಡು ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ತಾಲಕಿನ ಕುಡಚಿಯಲ್ಲಿ ಮಂಗಳವಾರ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಇತ್ತೀಚಿಗೆ ಗೋ ಹತ್ಯೆ ನಿಷೇಧ ಜಾರಿಗೆ ತಂದಿದೆ. ಇದರಿಂದ ರೈತಾಪಿ ವರ್ಗಕ್ಕೆ ತುಂಬ ನಷ್ಟವಾಗಲಿದೆ ಅಂತಾ ಹೇಳಿದರು. ಕೃಷಿ …
Read More »ಹುಲಿ ಉಗುರುಗಳು ಮತ್ತು ಆನೆ ದಂತದಿಂದ ಮಾಡಿದ ಕಡಗಗಳನ್ನು ಮಾರುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದವರು ಬಂಧಿಸಿದ್ದಾರೆ.
ಬೆಳಗಾವಿ: ಹುಲಿ ಉಗುರುಗಳು ಮತ್ತು ಆನೆ ದಂತದಿಂದ ಮಾಡಿದ ಕಡಗಗಳನ್ನು ಮಾರುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದವರು ಬಂಧಿಸಿದ್ದಾರೆ. ನಗರದ ಶಹಾಪುರದ ಕಾಕೇರಿ ಚೌಕ್ ನಿವಾಸಿ ಶ್ರೀರಾಮ ಅರ್ಜುನಸಾ ಬಾಕಳೆ (46) ಬಂಧಿತ. ಅವರಿಂದ 2 ಕಡಗ ಹಾಗೂ 5 ಹುಲಿ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ರೋಹಿಣಿ ಪಾಟೀಲ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.ಆರೋಪಿ ವಿರುದ್ಧ …
Read More »ಗೋಕಾಕ್ ಶಹರ ಪೊಲೀಸ್ ಠಾಣೆಯಿಂದ ಭರ್ಜರಿ ಬೇಟೆ
ಗೋಕಾಕ ಶಹರ ನಗರದಲ್ಲಿ ಜರುಗುತ್ತಿದ್ದ ಬೈಕ್ ಕಳ್ಳತನಗಳ ಪ್ರಕರಣದ ತನಿಖೆಯನ್ನು ಬೆಳಗಾವಿ ಎಸ್,ಪಿ, ಲಕ್ಷ್ಮಣ ನಿಂಬರಗಿ ಮತ್ತು ಹೆಚ್ಚುವರಿ ಎಸ್,ಪಿ, ಅಮರನಾಥ ರೆಡ್ಡಿ, ಗೋಕಾಕ ಡಿ,ಎಸ್,ಪಿ, ಜಾವೇದ ಇನಾಮದಾರ,ಸಿ,ಪಿ,ಆಯ್,ಗೋಪಾಲ ರಾಠೋಡ,ಇವರ ಮಾರ್ಗದರ್ಶನದಲ್ಲಿ ಪಿ,ಎಸ್,ಆಯ್,ಶ್ರೀ ಕೆ,ಬಿ,ವಾಲಿಕಾರ (ಕಾಸು) ,ಪಿ,ಎಸ್,ಆಯ್,ಶ್ರೀ ಅಮಿನಬಾಂವಿ,(ಸಿಬಿ)ಗೋಕಾಕ. ಶಹರ ಠಾಣೆಯ ಸಿಬ್ಬಂದಿಗಳಾದ ಬಿ,ಎಸ್,ಸಿದ್ನಾಳ, ಎಲ್,ಎಸ್ನಾಡಗೌಡರ,ಕೆ,ಬಿ,ಹಕ್ಯಾಗೋಳ,ಸಿ,ಎಸ್,ಬೀರಾದರ,ಆರ್,ಆರ್,ಮುರನಾಳ,ಎಸ್,ವಾಯ್,ಕುರಿ,ಎಂ,ಆರ್,ಅಂಬಿ,ಇವರು ಕಾರ್ಯಾಚರಣೆ ನಡೆಸಿ ಒರ್ವನನ್ನು ವಿಚಾರಣಗೆ ಒಳಪಡಿಸಿದಾಗ ಅವನಿಂದ ಕಳ್ಳತನ ಮಾಡಿದ 4 ಮೋಟಾರ್ ಬೈಕ್, 2 ಸೈಕಲ್ ಹಾಗೂ 4 ಮೊಬೈಲ್ಗಳನ್ನು …
Read More »ಮೂಡಲಗಿಯಲ್ಲಿ ಅರಭಾವಿ ಮಂಡಲದ ನೂತನ ಬಿಜೆಪಿ ಕಾರ್ಯಾಲಯವನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಡಿ.22 ರಂದು ನಡೆಯುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅರಭಾವಿ ಮತ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಎಲ್ಲ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಇದರಿಂದ ಎಲ್ಲ 33 ಗ್ರಾಮ ಪಂಚಾಯತಿಗಳಲ್ಲಿಯೂ ನಮ್ಮ ಗುಂಪು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಮಂಗಳವಾರದಂದು ಪಟ್ಟಣದ ಕರೆಮ್ಮಾದೇವಿ ವೃತ್ತದಲ್ಲಿ ಅರಭಾಂವಿ ಮಂಡಲ ಭಾರತೀಯ ಜನತಾ ಪಕ್ಷದ ನೂತನ ಕಾರ್ಯಲಯವನ್ನು ಉದ್ಘಾಟಿಸಿ ಮಾತನಾಡಿದ …
Read More »ತಿರುಮಲ ತಿಮ್ಮಪ್ಪನ ದರ್ಶನ ಪಡೆದ ಸಚಿವ ರಮೇಶ್ ಜಾರಕಿಹೊಳಿ
ಆಂಧ್ರಪ್ರದೇಶ : ರಾಜ್ಯ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಮಂಗಳವಾರ ತಿರುಮಲ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಚಿತ್ತೂರು ಜಿಲ್ಲೆಯ ತಿರುಮಲ ಬೆಟ್ಟದ ಪಟ್ಟಣದಲ್ಲಿನ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿದ್ದರೆ, ಸಚಿವ ರಮೇಶ್ ಜಾರಕಿಹೊಳಿ ಅವರು, ತಿಮ್ಮಪ್ಪ ದರ್ಶನಕ್ಕೆ ತೆರಳಿದ್ದಾರೆ. ಜತೆಗೆ ಶಾಸಕ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ಕುಮಠಳ್ಳಿ, ಬಿಜೆಪಿ ಮುಖಂಡರು …
Read More »ಸಭಾಪತಿ ರಾಜ್ಯಪಾಲರ ಮಾತು ಕೇಳಬೇಕೆಂದಿಲ್ಲ: ಬಿ.ಕೆ. ಹರಿಪ್ರಸಾದ್
ಬೆಂಗಳೂರು: ಸದನದಲ್ಲಿ ನಡೆದ ಘಟನೆ ಸರಿಯಲ್ಲ. ಈ ರೀತಿಯಾಗಿ ನಡೆಯಬಾರದಿತ್ತು ಅಂತಾ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ವಿಧಾನ ಪರಿಷತ್ ನ ಕಲಾಪದಲ್ಲಿ ನಡೆದ ಗಲಾಟೆ, ನೂಕಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಭಾಪತಿಗಳು ಸದನಕ್ಕೆ ಬರುವ ಮೊದಲೇ ಬಾಗಿಲು ಹಾಕಿದ್ದು, ಕಾನೂನು ಬಾಹಿರ. ಸಭಾಪತಿಗಳಿಗೆ ಅಪಮಾನ ಇತಿಹಾಸದಲ್ಲಿಯೇ ಇಲ್ಲ. ಎಂದರು. ಸಭಾಪತಿ ಇರುವಾಗಲೇ ಉಪ ಸಭಾಪತಿ ಪೀಠ ಅಲಂಕರಿಸಿರುವುದು ತಪ್ಪು. ರಾಜಭವನದ ಗೌರವ ಹಾಳು ಮಾಡಿದ್ದಾರೆ. ರಾಜ್ಯಪಾಲರು ನಿರ್ದೇಶನ …
Read More »ತುಮಕೂರಿನ ಬಳಿ ರಸ್ತೆ ಅಪಘಾತ: ಮಹಿಳೆ ಸಾವು, ನಾಲ್ವರ ಸ್ಥಿತಿ ಗಂಭೀರ
ತುಮಕೂರು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ತೊಡಗಿದ್ದ ವಾಹನ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಮಹಿಳೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಕಾರಿನಲ್ಲಿದ್ದ ಶಶಿಕಲಾ(50) ಅಪಘಾತದಲ್ಲಿ ಮೃತಪಟ್ಟ ಮಹಿಳೆ. ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ತೀಮ್ಲಾಪುರ ಗ್ರಾಮದ ಬಳಿ ರಸ್ತೆ ಕಾಮಗಾರಿ ನಡೆಯುತ್ತಿತ್ತು. ನೀರು ತುಂಬಿದ ಟ್ಯಾಂಕರ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ತಾಲೂಕಿನ ಸೂಗೂರು ಮತ್ತಿಘಟ್ಟ ಗ್ರಾಮದವರಾಗಿದ್ದು, ದೇವಾಲಯಕ್ಕೆ ತೆರಳಿ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಇನ್ನೂ ನಾಲ್ವರ …
Read More »ಬಿಜೆಪಿಯವರೇ ನಿಯಮಾವಳಿ ಪಾಲಿಸದೇ ಗೂಂಡಾಗಿರಿ ಪ್ರದರ್ಶಿಸಿದ್ದಾರೆ: ಸಿದ್ದರಾಮಯ್ಯ ಕಿಡಿ
ಬೆಂಗಳೂರು: ಕಾಂಗ್ರೆಸ್ ಗುಂಡಾವರ್ತನೆ ತೋರಿಲ್ಲ. ಬಿಜೆಪಿಯವರೇ ನಿಯಮಾವಳಿ ಪಾಲಿಸದೇ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿ ಗೂಂಡಾಗಿರಿಯನ್ನು ಸದನದಲ್ಲಿ ಪ್ರದರ್ಶಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ದ ಕಿಡಿ ಕಾರಿದ್ದಾರೆ. ವಿಧಾನಪರಿಷತ್ ನಲ್ಲಿನ ಗಲಾಟೆಯ ಕುರಿತಂತೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಇಂದಿನ ವಿಧಾನ ಪರಿಷತ್ ನಲ್ಲಿನ ಗಲಾಟೆಯ ಬಗ್ಗೆ ವಿಷಾದಿಸುತ್ತೇನೆ. ಆದ್ರೆ ಸಭಾಪತಿ ಇದ್ದಾಗ ಉಪಸಭಾಪತಿ ಹೇಗೆ ಬಂದ್ರು.? ಸಭಾಪತಿ ಬರುವ ಮೊದಲೇ ಉಪಸಭಾಪತಿ ಪೀಠ ಅಲಂಕಿರಿಸಿದ್ದೇಕೆ …
Read More »