Breaking News

ಶಾಲಾ-ಕಾಲೇಜುಗಳು ನಾಳೆಯಿಂದ ಆರಂಭ

ಬೆಂಗಳೂರು, ಡಿ.31- ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಮಾರ್ಚ್‍ನಿಂದ ಮುಚ್ಚಲ್ಪಟ್ಟಿದ್ದ ಶಾಲಾ-ಕಾಲೇಜುಗಳು ನಾಳೆಯಿಂದ ಆರಂಭವಾಗಲಿದ್ದು, ಮೊದಲ ದಿನ ವಿದ್ಯಾರ್ಥಿಗಳಿಗೆ ಮೊದಲ ಒಂದು ಗಂಟೆ ಕಾಲ ಪಾಠ ಮಾಡಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ನಿರ್ಧರಿಸಿದೆ. 10 ಮತ್ತು 12ನೆ ತರಗತಿ ಮಕ್ಕಳಿಕೆ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವಂತೆ ಇಲಾಖೆ ಈಗಾಗಲೇ ರಾಜ್ಯದ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ ಧರಿಸುವುದು, ಜನದಟ್ಟಣೆ ಇರುವ ಪ್ರದೇಶಗಳಿಗೆ ತೆರಳದೆ …

Read More »

ಬಿಬಿಎಂಪಿ ರಸ್ತೆಗಳಿಗೆ ಕೇವಲ ಮುಸ್ಲಿಮರ ಹೆಸರು ನಾಮಕರಣ ವಿರೋಧಿಸಿ ಹೆಗಡೆಯಿಂದ ಆಯುಕ್ತರಿಗೆ ಪತ್ರ

ಬಿಬಿಎಂಪಿ ರಸ್ತೆಗಳಿಗೆ ಕೇವಲ ಮುಸ್ಲಿಮರ ಹೆಸರು ನಾಮಕರಣ ವಿರೋಧಿಸಿ ಹೆಗಡೆಯಿಂದ ಆಯುಕ್ತರಿಗೆ ಪತ್ರ ಕಾರವಾರ: ಬೆಂಗಳೂರು ಮಹಾನಗರ ಪಾಲಿಕೆಯ ಪಾದರಾಯನಪುರದ ವಾರ್ಡ್‌ನಲ್ಲಿರುವ ರಸ್ತೆಗಳಿಗೆ ಕೇವಲ ಮುಸ್ಲಿಮರ ಹೆಸರನ್ನು ನಾಮಕರಣ ಮಾಡುವುದುನ್ನು ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಪಾಲಿಕೆಯ ಆಯುಕ್ತರಿಗೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದಾರೆ. ಪಾದರಾಯನಪುರದ ವಾರ್ಡ್‌ ಸಂಖ್ಯೆ 135 ರಲ್ಲಿ ಬರುವ ಅಡ್ಡ ರಸ್ತೆಗಳಿಗೆ ಸಮಾಜ ಸೇವಕರ ಹೆಸರು ಇಡಲು ತೀರ್ಮಾನಿಸಿತ್ತು. ಈ ಸಂಬಂಧ …

Read More »

ಬಸ್ ಮೇಲೆ ಬಾಂಬ್ ದಾಳಿ; 28ಕ್ಕೂ ಹೆಚ್ಚು ಜನ ಸಾವು

ಸಿರಿಯಾ: ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಬಾಂಬ್ ದಾಳಿ ನಡೆಸಲಾಗಿದ್ದು, 28 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ಸಿರಿಯಾದಲ್ಲಿ ನಡೆದಿದೆ. ರಜೆ ಮುಗಿಸಿ ಸೈನಿಕರು ತಮ್ಮ ನೆಲೆಗಳಿಗೆ ಮರಳುತ್ತಿದ್ದಾಗ ಸೈನಿಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಮರಭೂಮಿ ಪ್ರದೇಶದ ಗುಹೆಗಳಲ್ಲಿ ಅಡಗಿಕೊಂಡಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರರು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಯಲ್ಲಿ ಸೈನಿಕರು ಸೇರಿದಂತೆ ಹಲವರು ಸಾವನಪ್ಪಿದ್ದಾರೆ.

Read More »

ಇಂದು ಮಧ್ಯಾಹ್ನ 12 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ 144 ಸೆಕ್ಷನ್ ಜಾರಿ

ಬೆಂಗಳೂರು: ಈ ವರ್ಷ ಹೊಸ ವರ್ಷದ ಪಾರ್ಟಿಗೆ ಮಹಾಮಾರಿ ಕೊರೊನಾ ಅಡ್ಡಿಪಡಿಸಿದೆ. ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದಲೇ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹೌದು. ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ 144 ಸೆಕ್ಷನ್ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಇಂದು ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೆ …

Read More »

ಬೆಳಗಾವಿಯಲ್ಲಿ ಮಹಿಳೆಯ ಭೀಕರ ಕೊಲೆ: ಕೊಲೆಗೆ ಕಾರಣವಾದರೂ ಏನು ?

ತಲವಾರಿನಿಂದ ಮಹಿಳೆಯನ್ನು ಕೊಚ್ಚಿ ಕೊಲೆಗೈದ ಘಟನೆ ಬುಧವಾರ ಬೆಳ್ಳಂಬೆಳಗ್ಗೆ ಬೆಳಗಾವಿ ಜಿಲ್ಲಾಸ್ಪತ್ರೆ ಕ್ಯಾಂಟೀನ್ ಬಳಿ ನಡೆದಿದೆ. ಬೈಲಹೊಂಗಲ ತಾಲೂಕಿನ ಮೂಗಬಸವ ಗ್ರಾಮದ ಸುಧಾರಾಣಿ ಕೊಲೆಯಾಗಿದ್ದು, ಇವರು ಜಿಲ್ಲಾಸ್ಪತ್ರೆಯಲ್ಲಿ ಸೆಕ್ಯುರಿಟಿಯಾಗಿದ್ದರು. ಈರಣ್ಣ ಬಾಬು ಜಗಜಂಪಿ ಕೊಲೆಗೈದವನು. ಹಣಕಾಸು, ಪ್ರೀತಿ-ಪ್ರೇಮವೇ ಈ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.

Read More »

ಪೂಜ್ಯನಿಯ ತಂದೆ ಹಾಗೂ ತಾಯಿ ಅವರಿಗೆ ಸ್ಮರಿಸಿದ ಸಚಿವ ರಮೇಶ ಜಾರಕಿಹೊಳಿ.

ಶ್ರೀ ಲಕ್ಷ್ಮಣರಾವ್ ರಾಮಪ್ಪ ಜಾರಕಿಹೊಳಿ ಹಾಗೂ ಶ್ರೀಮತಿ ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ ಅವರ ಪುಣ್ಯತಿಥಿ ; ಪೂಜ್ಯನಿಯ ತಂದೆ ಹಾಗೂ ತಾಯಿ ಅವರಿಗೆ ಸ್ಮರಿಸಿದ ಸಚಿವ ರಮೇಶ ಜಾರಕಿಹೊಳಿ ದೈವಿ ಸ್ವರೂಪಿಯಾಗಿದ್ದ ನೀವುಗಳು ನಮ್ಮನ್ನಗಲಿ 9 ವರ್ಷ ಕಳೆದವು. ನಿಮ್ಮ ಬದುಕು ಆಧರ್ಶಗಳು ನಮಗೆ ದಾರಿದೀಪವಾಗಿದ್ದು, ನಿಮ್ಮ ಸವಿ ನೆನಪು ನಮ್ಮ ಹೃದಯದಲ್ಲಿ ಸದಾ ಹಚ್ಚ್ ಹಸರಾಗಿದೆ. ನಿಮ್ಮ ಸರಳ ಸಜ್ಜನಕೆಯ ಜೀವನ, ಮಾರ್ಗದರ್ಶನ ಅವಿಸ್ಮರಣೇಯ. ಸಹಾಯ ಬಯಸಿದವರಿಗೆ ಪ್ರೀತಿ …

Read More »

ರಮೇಶ್ ಜಾರಕಿಹೊಳಿ ಅವರ ಬಲಗೈ ಬಂಟನಿಗೆ ಗೆಲುವು

ಗೋಕಾಕ ತಾಲೂಕಿನ ಗುಜನಾಳ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಭೀಮಗೌಡ ಪೊಲೀಸ್ ಗೌಡರ ಭರ್ಜರಿ ಜಯ ಸಾಧಿಸಿದ್ದಾರೆ.   ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಬೆಂಬಲಿಗರಾಗಿರುವ ಪೊಲೀಸ್ ಗೌಡರ ವಿಜಯ ಗ್ರಾಮದಲ್ಲಿ ನವೋತ್ಸಾಹ ತಂದಿದೆ.

Read More »

ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಡಿ.22 ರಂದು ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳು ಅರಭಾವಿ ಮತಕ್ಷೇತ್ರದ 33 ಗ್ರಾಮ ಪಂಚಾಯತಿಗಳಲ್ಲಿ ಮೇಲುಗೈ ಸಾಧಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ. ನಗರದಲ್ಲಿಂದು ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಮತ ಎಣಿಕೆಯಲ್ಲಿ ಅರಭಾವಿ ಮತಕ್ಷೇತ್ರದ ಎಲ್ಲ 33 ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿತ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದ ಬಣ ಸಂಪೂರ್ಣವಾಗಿ …

Read More »

ಎರಡು ವರ್ಷ ಕಳೆದರು ಮುಗಿಯದ ಚಿತ್ರದುರ್ಗ ನಗರದ ರಸ್ತೆಗಳು; ಅಪಘಾತಗಳಿಗೆ ಇನ್ನೆಷ್ಟು ಬಲಿ!

ಚಿತ್ರದುರ್ಗ : ಅದು ಐತಿಹಾಸಿಕ ಖ್ಯಾತಿ ಹೊಂದಿರೋ ಹೆಸರಾಂತ ನಗರ ಚಿತ್ರದುರ್ಗ. ಅಲ್ಲಿ ರಸ್ತೆಗಳ ಅಭಿವೃದ್ದಿ, ಅಗಲೀಕರಣ ಮಾಡೋಕೆ ಪ್ರಾರಂಭ ಮಾಡಿ ಎರಡು ವರ್ಷಗಳೇ ಕಳಿಯುತ್ತಿವೆ. ಆದರೇ ಆ ಕಾಮಗಾರಿಗಳು ಮಾತ್ರ  ಮುಗಿಯುವಂತೆ ಕಾಣುತ್ತಿಲ್ಲ. ಪರಿಣಾಮ ನಗರದ ಜನರು ಕಿರಿಕಿರಿ ಅನುಭವಿಸಿ ಸಾಕಾಗಿ ಹೋಗಿದ್ದಾರೆ. ಆ ರಸ್ತೆಗಳು ಬರು ಬರುತ್ತಾ ಸಾವಿನ ಕೂಪಗಳಾಗಿ ಜನರ ಪ್ರಣವನ್ನೇ ಬಲಿ ಪಡೆಯುವಂತಾಗಿವೆ. ಇದ್ರಿಂದ ಬೇಸತ್ತ ಜನರು ಜನರ ಹಿತ ಕಾಯದ ಜಿಲ್ಲಾಡಳಿತಕ್ಕೆ ಹಿಡಿ …

Read More »

70 ವರ್ಷ ಕಟ್ಟಿದ ದೇಶವನ್ನ 7 ವರ್ಷದಲ್ಲಿ ಹಾಳು ಮಾಡಿದ B.J.P.: ಸತೀಶ್ ಜಾರಕಿಹೊಳಿ

ಚಿಕ್ಕೋಡಿ ): ಬಿಜೆಪಿ ದೇಶದಲ್ಲಿ ಸುಳ್ಳಿನ ರಾಜಕೀಯ ಮಾಡುತ್ತಲೇ ದೇಶದ ಜನರ ದಾರಿ ತಪ್ಪಿಸುತ್ತಿದೆ. ಬಡವರನ್ನ ಉದ್ದಾರ ಮಾಡುತ್ತೇವೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ದೇಶದ ಬಡವರನ್ನ ಮತ್ತಷ್ಟು ಬಡವರನ್ನಾಗಿಸುತ್ತಿದೆ. ಇದೆ ಬಿಜೆಪಿಯವರ ಅಜೆಂಡಾ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಹೇಳುತ್ತಿರುವ ಬಿಜೆಪಿಯವರೆ ಅತಿ ಹೆಚ್ಚು ಗೋ ಮಾಂಸವನ್ನು ವಿದೇಶಗಳಿಗೆ ರಪ್ತು ಮಾಡುತ್ತಿದ್ದಾರೆ. …

Read More »