ಕಲಬುರಗಿ : ಕೊರೋನಾ ಮಹಾಮಾರಿ ಎಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಹೋರಾಟಗಾರ ಮಾರುತಿ ಮಾನ್ಪಡೆ (65) ಮಹಾಮಾರಿಗೆ ಬಲಿಯಾಗಿದ್ದಾರೆ ಕಮ್ಯುನಿಸ್ಟ್ ಪಾರ್ಟಿ ಮುಖಂಡರು ಆಗಿದ್ದ ಮಾನ್ಪಡೆ ಕಳೆದ ಎರಡು ವಾರದ ಹಿಂದೆ ಆಸ್ಪತ್ರೆಗೆ ಸೇರಿದ್ದರು. ಚಿಕಿತ್ಸೆ ಫಲಿಸದೆ ಇಂದು ಅವರು ನಿಧನರಾಗಿದ್ದಾರೆ. ಕೊರೋನಾ ಪಾಸಿಟಿವ್ ಹಿನ್ನೆಲೆ ಅಕ್ಟೋಬರ್ 5 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮಹಾಮಾರಿ ಕೊರೋನಾದಿಂದ ನಿಧನರಾಗಿದ್ದು ಪತ್ನಿ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ ಇಂದು ಬೆಳಗ್ಗೆ 9.30ಕ್ಕೆ ಮಾರು ಅವರು …
Read More »ಅಣ್ಣನ ಮಗುವಿಗಾಗಿ 10 ಲಕ್ಷ ಮೌಲ್ಯದ ಬೆಳ್ಳಿ ತೊಟ್ಟಿಲನ್ನು ಧ್ರುವ ಖರೀದಿ
ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಸರ್ಜಾ ಕುಟುಂಬದಲ್ಲಿ ಸಂಭ್ರಮ ಮೂಡಲಿದೆ. ಚಿರು ಅಗಲಿಕೆಯ ನಂತರ ದುಃಖದಲ್ಲಿಯೇ ಇದ್ದ ಇಡೀ ಕುಟುಂಬ ಇದೀಗ ವಿಶೇಷ ಅತಿಥಿಯನ್ನು ಬರಮಾಡಿಕೊಳ್ಳಲು ಸಿದ್ಧವಾಗಿದೆ. ಅಂದರೆ, ಇನ್ನು ಕೆಲ ದಿನಗಳಲ್ಲಿ ಮೇಘನಾ ಹೆರಿಗೆ ಆಗಲಿದ್ದು, ಈಗಾಗಲೇ ಆ ದಿನಕ್ಕೆ ಇಡೀ ಕುಟುಂಬ ಎದುರು ನೋಡುತ್ತಿದೆ. ಹೀಗಿರುವಾಗಲೇ ಅಣ್ಣನ ಮಗುವಿಗೆ ಅಂತಾನೇ ವಿಶೇಷ ಉಡುಗೊರೆಯೊಂದನ್ನು ಖರೀದಿಸಿದ್ದಾರೆ ಸಹೋದರ ಧ್ರುವ ಸರ್ಜಾ.ಹೌದು, ಬರೋಬ್ಬರಿ 10 ಲಕ್ಷ ಮೌಲ್ಯದ ಬೆಳ್ಳಿ ತೊಟ್ಟಿಲನ್ನು …
Read More »ಕೋವಿಡ್ 19 ಸೋಂಕಿಗೆ ಮೂವರು ಕೋವಿಡ್ ವಾರಿಯರ್ ಮೃತ
ರಾಮನಗರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿಗೆ ಮೂವರು ಕೋವಿಡ್ ವಾರಿಯರ್ ಮೃತಪಟ್ಟಿದ್ದು, ವಾರಿಯರ್ಸ್ ಗೆ ಸರ್ಕಾರ ಘೋಷಿಸಿರುವ ಪರಿಹಾರದ ಮೊತ್ತ ಮೃತರ ಕುಟುಂಬವನ್ನು ಇನ್ನಷ್ಟೇ ತಲುಪಬೇಕಾಗಿದೆ. ವಾರಿಯರ್ಸ್ ಗೆ 50 ಲಕ್ಷ ರೂ. ವರೆಗೆ ಪರಿಹಾರ: ಇಬ್ಬರು ಸರ್ಕಾರಿ ವೈದ್ಯರು, ಒಬ್ಬ ಪೊಲೀಸ್ ಪೇದೆ ಸೇರಿ ಜಿಲ್ಲೆಯಲ್ಲಿ ಮೂವರು ಕೋವಿಡ್ ವಾರಿಯರ್ಸ್ ಮೃತ ಪಟ್ಟಿದ್ದಾರೆ. ಕೋವಿಡ್ ವಾರಿಯರ್ಸ್ ಗೆ ಸಿಗಬೇಕಾದ ಪರಿಹಾರದ ಮೊತ್ತಕ್ಕೆ ಸಂಬಂಧಿಸಿದ ಇಲಾಖೆಗಳು ಅರ್ಜಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ಇನ್ನಷ್ಟೇ ಈ …
Read More »ನೋ ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿದ ವಿಷಯಕ್ಕೆ ಪೊಲೀಸರೊಂದಿಗೆ ಗಲಾಟೆ ಮಹಿಳೆಯೊಬ್ಬರು ಪೊಲೀಸನಿಗೆ ಕಪಾಳ ಮೋಕ್ಷ
ಬಾಗಲಕೋಟೆ: ನೋ ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿದ ವಿಷಯಕ್ಕೆ ಪೊಲೀಸರೊಂದಿಗೆ ಗಲಾಟೆ ನಡೆದ ವೇಳೆ ಮಹಿಳೆಯೊಬ್ಬರು ಪೊಲೀಸನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ಸೋಮವಾರ ನಗರದ ಬಸವೇಶ್ವರ ವೃತ್ತದಲ್ಲಿ ನಡೆದಿದೆ. ನವನಗರದ ಗರ್ಭಿಣಿ ತನ್ನ ಮೈದುನನ ಜತೆಗೆ ಬಸವೇಶ್ವರ ವೃತ್ತದ ಬಳಿ ಇರುವ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಬೈಕ್ ನಿಲ್ಲಿಸಿದ್ದರಿಂದ ಸಂಚಾರಿ ಪೊಲೀಸರು ಬೈಕ್ನ ಪ್ಲಗ್ ಕಿತ್ತುಕೊಂಡಿದ್ದರು. ಬೈಕ್ ಪ್ಲಗ್ ಕೊಡಲು ಒತ್ತಾಯಿಸಿದ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆದಿದೆ. ಈ …
Read More »ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಕೊರೊನಾ ಲಸಿಕೆ ಲಭ್ಯವಾಗುವಂತೆ ಮಾಡಲು ಈಗಿನಿಂದಲೇಸಿದ್ಧತಾ ಕಾರ್ಯ:W.H.O.
ವಿಶ್ವಸಂಸ್ಥೆ, ಅ.20- ಕಿಲ್ಲರ್ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಸಹಕಾರ ನೀಡುತ್ತಿರುವ ವಿಶ್ವಸಂಸ್ಥೆಯ ಪ್ರಮುಖ ಅಂಗ ಸಂಸ್ಥೆಗಳಲ್ಲಿ ಒಂದಾದ ಯೂನಿಸೆಫ್ (ಸಂಯುಕ್ತ ರಾಷ್ಟ್ರಗಳ ಮಕ್ಕಳ ನಿಧಿ) ವರ್ಷಾಂತ್ಯದ ವೇಳೆಗೆ ಕೋವಿಡ್-19 ಲಸಿಕೆಗೆ ಪೂರ್ವಭಾವಿಯಾಗಿ 52 ಕೋಟಿ ಸಿರಿಂಜ್ಗಳನ್ನು ಸಿದ್ಧವಾಗಿಟ್ಟುಕೊಳ್ಳಲಿದೆ.ಮುಂದಿನ ವರ್ಷದ ಆರಂಭದಲ್ಲಿ ಕೊರೊನಾ ಲಸಿಕೆ ಮತ್ತು ಔಷಧಿಗಳು ಲಭ್ಯವಾಗಲಿದ್ದು, ಇವುಗಳ ಪೂರೈಕೆ ಮತ್ತು ನಿರ್ವಹಣೆಯಲ್ಲಿ ಯಾವುದೇ ರೀತಿಯ ಅಡಚಣೆಯಾಗದಂತೆ ಈ ವರ್ಷದ ಅಂತ್ಯದ ವೇಳೆಗೆ 52 ದಶಲಕ್ಷ ಸಿರಿಂಜ್ಗಳನ್ನು ದಾಸ್ತಾನು …
Read More »ಶಿಕಾರಿಪುರ ತಾಲೂಕಿನ ಉಡುತಡಿಯ ಸಮಗ್ರ ಅಭಿವೃದ್ಧಿಗೆ ಸರ್ಕಾರ 30 ಕೋಟಿ ರೂ………
ಶಿವಮೊಗ್ಗ: ಅಕ್ಕಮಹಾದೇವಿ ಜನ್ಮಸ್ಥಳವಾದ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಈಗಾಗಲೇ 30 ಕೋಟಿ ರೂ.ಗಳನ್ನು ಮೀಸಲಾಗಿರಿಸಿದ್ದು, ಜಿಲ್ಲೆಯ ಆಕರ್ಷಕ ಪ್ರವಾಸಿ ತಾಣಗಳಲ್ಲೊಂದನ್ನಾಗಿ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಉಡುಗುಣಿ ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದ ಸಿಎಂ ಶರಣೆ ಅಕ್ಕಮಹಾದೇವಿಯವರ ಹಾಗೂ 12ನೇ ಶತಮಾನದ ಶಿವಶರಣರ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸುವ ಸದುದ್ದೇಶ ಹೊಂದಲಾಗಿದೆ ಎಂದರು. ಈ ಕ್ಷೇತ್ರವು ಕರ್ನಾಟಕ ಮಾತ್ರವಲ್ಲದೇ …
Read More »ಅಂದಾಜು ಸುಮಾರು ನೂರು ಬಾಕ್ಸ್ ನಷ್ಟು ಬಿಯರ್ವ್ಯರ್ಥವಾಗಿ ಹರಿದು ಹೋದ ಘಟನೆ
ಹಾಸನ: ಬಿಯರ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿ ರಸ್ತೆ ಬದಿ ಬಿಯರ್ ವ್ಯರ್ಥವಾಗಿ ಹರಿದು ಹೋದ ಘಟನೆ ಹಾಸನ ಜಿಲ್ಲೆಯ, ಹೊಳೆನರಸೀಪುರದಲ್ಲಿ ನಡೆದಿದೆ. ಹಾಸನದಿಂದ ಕೇರಳಕ್ಕೆ ಲಾರಿಯಲ್ಲಿ ಸುಮಾರು 900 ಬಾಕ್ಸ್ ಬಿಯರ್ ಸಾಗಿಸಲಾಗುತ್ತಿತ್ತು. ಆದರೆ ಹೊಳೆನರಸೀಪುರ ಬಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಬಿಯರ್ ತುಂಬಿದ ಲಾರಿ ರಸ್ತೆ ಬದಿಯಲ್ಲಿ ಒಂದು ಕಡೆ ವಾಲಿಕೊಂಡಿದೆ. ಇದರಿಂದ ಒಂದಷ್ಟು ಬಿಯರ್ ಬಾಟಲಿ ಲಾರಿಯೊಳಗೇ ಒಡೆದು ಹೋದರೆ, ಮತ್ತಷ್ಟು …
Read More »ಸಚಿವ ರಮೇಶ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ,ನೀಡಬೇಕೆಂದು ಭಾರತೀಯ ದಲಿತ ಪ್ಯಾಂಥರ್ ಸಂಘದ ಜಿಲ್ಲಾಧ್ಯಕ್ಷ ಡಾ. ಮಹಾಲಿಂಗಪ್ಪ ಕೋಲಕಾರ ಆಗ್ರಹಿಸಿದ್ದಾರೆ.
ಬೆಳಗಾವಿ : ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ , ಹಾವೇರಿ ಜಿಲ್ಲೆಯ ನೆಹರು ಓಲೆಕಾರ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಭಾರತೀಯ ದಲಿತ ಪ್ಯಾಂಥರ್ ಸಂಘದ ಜಿಲ್ಲಾಧ್ಯಕ್ಷ ಡಾ. ಮಹಾಲಿಂಗಪ್ಪ ಕೋಲಕಾರ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಪ್ರಮುಖ ಪಾತ್ರವಿದೆ. ಅಂತಹ ಪ್ರಭಾವಿ ನಾಯಕರಿಗೆ ಈಗ ಸಿಎಂ ಬಿಎಸ್ ಯಡಿಯೂರಪ್ಪನವರು …
Read More »ಯಡಿಯೂರಪ್ಪ ಸಿಎಂ ಆಗಿರಲ್ಲ ಎಂಬ ಮಾತು ಸದ್ಯ ಹೆಚ್ಚಾಗಿ ಕೇಳಿ ಬರುತ್ತಿದೆ. ಶಾಸಕ ಯತ್ನಾಳ ಹೇಳಿಕೆಗೆ ಬಾದಾಮಿಯಲ್ಲಿ ಪ್ರತಿಕ್ರಿಯೆ
ಬಾಗಲಕೋಟೆ : ನಾವಂತೂ ಸರ್ಕಾರವನ್ನು ಬೀಳಿಸೋಕೆ ಹೋಗಲ್ಲ. ಒಂದು ವೇಳೆ ಅವರ ತಿಕ್ಕಾಟದಿಂದಲೇ ಸರ್ಕಾರ ಬಿದ್ದು ಹೋದರೆ ನಾವು ಚುನಾವಣೆ ಎದುರಿಸಲು ಸಿದ್ದರಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಶಾಸಕ ಯತ್ನಾಳ ಹೇಳಿಕೆಗೆ ಬಾದಾಮಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಹಳ ದಿನ ಯಡಿಯೂರಪ್ಪ ಸಿಎಂ ಆಗಿರಲ್ಲ ಎಂಬ ಮಾತು ಸದ್ಯ ಹೆಚ್ಚಾಗಿ ಕೇಳಿ ಬರುತ್ತಿದೆ. ಯಡಿಯೂರಪ್ಪನವರನ್ನು ತೆಗೆಯಬೇಕೆಂದು ಬಹಳ ದೊಡ್ಡ ಚರ್ಚೆ ನಡೆದಿದೆ. ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸುವ …
Read More »ಜಿಲ್ಲೆಯಲ್ಲಿ 14 ಸಾವಿರ ರೈತರಿಗೆ 6.40 ಕೋಟಿ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಲಾಗಿರುತ್ತದೆ:ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ
ಬೆಳಗಾವಿ: ಜಿಲ್ಲೆಯಲ್ಲಿ 14 ಸಾವಿರ ರೈತರಿಗೆ 6.40 ಕೋಟಿ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಪ್ರಗತಿ ಪರಿಶೀನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೆ ಅತಿವೃಷ್ಟಿಯಿಂದ 4 ಜನರು 13 ಜಾನುವಾರಗಳ ಜೀವಹಾನಿಯಾಗಿದ್ದು, ಸಂಬಂಧಿಸಿದ ಕುಟುಂಬದವರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ ಪೂರ್ಣ ಹಾಗೂ ಭಾಗಶಃ ಸೇರಿದಂತೆ ಒಟ್ಟಾರೆ 4619 ಮನೆಗಳ ಹಾನಿಯಾಗಿದೆ. ಅದೇ ರೀತಿ …
Read More »