Breaking News

ಗೋವಿನ ಗೆಜ್ಜೆಯಲ್ಲಿ ನಿರ್ಮಾಣವಾಗಿರುವ ಗಣೇಶನ ಮೂರ್ತಿ

ದಾವಣಗೆರೆ : ಗಣೇಶ ಹಬ್ಬ ಬಂತು ಎಂದರೆ ಸಾಕು ತರಹೇವಾರಿ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪನೆ ಮಾಡಿ ವಿಘ್ನ ನಿವಾರಕ, ವಿಘ್ನ ವಿನಾಶಕನಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ದಾವಣಗೆರೆ ಹಿಂದೂ ಯುವ ಶಕ್ತಿ ವೇದಿಕೆ, ಕಳೆದ 33 ವರ್ಷಗಳಿಂದ ಪೂಜಾ ಸಾಮಗ್ರಿಗಳನ್ನ ಬಳಸಿಕೊಂಡು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದೆ. ಈ ಬಾರಿ ಸ್ವಲ್ಪ ಬದಲಾವಣೆಯಂತೆ ಹಿಂದೂ ಯುವ ಶಕ್ತಿ ವೇದಿಕೆಯಿಂದ ಯುವಕರು ವಿಶೇಷವಾಗಿ ಗೋವಿನ ಗೆಜ್ಜೆ ಬಳಸಿ ಗಣೇಶ ಮೂರ್ತಿ ಪ್ರತಿಷ್ಠಾಪನೆ …

Read More »

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಆರೋಪಿಯನ್ನು ಇಂದು ಜನಪ್ರತಿನಿಧಿಗಳ ನ್ಯಾಯಾಲಯ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್, ವೀರೇಂದ್ರ ಅವರನ್ನು ಮತ್ತೆ 6 ದಿನಗಳ ಕಾಲ ಇ.ಡಿ ವಶಕ್ಕೆ ನೀಡಿ ಆದೇಶಿಸಿತು. ಕೆ.ಸಿ.ವೀರೇಂದ್ರ ಅವರು ಆನ್​​ಲೈನ್ ಹಾಗೂ ಆಫ್​ಲೈನ್ ಮೂಲಕ ಅಕ್ರಮ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ನಡೆದ ದಾಳಿ ವೇಳೆ ಅಪಾರ ಪ್ರಮಾಣ …

Read More »

ರಾಯಚೂರು ಎಪಿಎಂಸಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ ದಿಢೀರ್ ಭೇಟಿ

ರಾಯಚೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ತರಕಾರಿ ಮಾರುಕಟ್ಟೆಗೆ ಇಂದು ಬೆಳಗ್ಗೆ ದಿಢೀರ್ ಆಗಿ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಭೇಟಿ ನೀಡಿ, ಎಪಿಎಂಸಿ ಅಧಿಕಾರಿಗಳ ವಿರುದ್ಧ ಎರಡು ಸುಮೊಟೊ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇಂದಿನಿಂದ ಮೂರು ದಿನಗಳ ಕಾಲ ಉಪ ಲೋಕಾಯುಕ್ತರ ಪ್ರವಾಸವಿದೆ. ಮೊದಲ ದಿನವಾದ ಇಂದು ಬೆಳಗ್ಗೆ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ ಅವರು, ವ್ಯಾಪಾರಸ್ಥರು, ರೈತರು, ಕೂಲಿ ಕಾರ್ಮಿಕರನ್ನು …

Read More »

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಸಿಎ 2ನೇ ಹಂತದ ಮಾನ್ಯತೆ ಸಿಕ್ಕಿದೆ.

ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸುಗಮ ಪ್ರಯಾಣಸ್ನೇಹಿ ಸೌಲಭ್ಯಗಳು ಮತ್ತು ತಂತ್ರಜ್ಞಾನ ಬಳಕೆಗಾಗಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಸಿಎ 2ನೇ ಹಂತದ ಮಾನ್ಯತೆ ಸಿಕ್ಕಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿಯು (ಎಸಿಐ) ಪ್ರವೇಶ ವರ್ಧಕ ಮಾನ್ಯತೆ (ಎಇಎ) ಕಾರ್ಯಕ್ರಮದಡಿ ವಿಮಾನ ನಿಲ್ದಾಣಗಳಲ್ಲಿನ ಸೌಲಭ್ಯ, ತಂತ್ರಜ್ಞಾನ ಬಳಕೆ, ಪ್ರಯಾಣಿಕಸ್ನೇಹಿ ಸೌಕರ್ಯಗಳನ್ನು ಆಧರಿಸಿ ಮಾನ್ಯತೆಯನ್ನು ನೀಡುತ್ತದೆ. ಈ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಎಸಿಐನ 2ನೇ ಹಂತದ ಮಾನ್ಯತೆ ಪಡೆದ …

Read More »

ಕಲಬುರಗಿಯಲ್ಲಿ ವರುಣಾರ್ಭಟ: ರಾಶಿ ಮಾಡಿದ್ದ 300 ಕ್ವಿಂಟಾಲ್ ಹೆಸರು ನೀರುಪಾಲು, ರೈತರು ಕಂಗಾಲು

ಕಲಬುರಗಿ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ರೈತರು ನಲುಗಿ ಹೋಗಿದ್ದಾರೆ. ಅತಿವೃಷ್ಠಿ ಮತ್ತು ಭೀಮಾ ನದಿ ಪ್ರವಾಹದಿಂದ ಬೆಳೆ ಹಾನಿಯಾಗಿದ್ದರೆ, ಇನ್ನೊಂದೆಡೆ ಮನೆಗಳಿಗೆ ನೀರು ನುಗ್ಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದಡೆ ರಾಶಿ ಮಾಡಿ ಒಣಗಲು ಹಾಕಿದ್ದ ಅಪಾರ ಪ್ರಮಾಣದ ಹೆಸರು ನೀರು ಪಾಲಾಗಿದ್ದು, ರೈತರು ಕಂಗಾಲಾಗಿದ್ದಾರೆ. ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನೂರಾರು ರೈತರು ಹೆಸರು ಫಸಲು ರಾಶಿ ಮಾಡಿ ದರ್ಗಾ ಆವರಣದಲ್ಲಿ ಒಣಗಲು ಹಾಕಿದ್ದರು. …

Read More »

ಜುಲೈ ಅಂತ್ಯದವರೆಗೆ 8,69,284 ರೈತರಿಗೆ 8362 ಕೋಟಿ ರೂ ಸಾಲ ವಿತರಣೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 37 ಲಕ್ಷ ರೈತರಿಗೆ 28 ಸಾವಿರ ಕೋಟಿ ಸಾಲ ವಿತರಣೆ ಗುರಿ ಹೊಂದಲಾಗಿದ್ದು, ಜುಲೈ ಅಂತ್ಯದವರೆಗೆ 8,69,284 ರೈತರಿಗೆ 8362.68 ಕೋಟಿ ರೂ ಸಾಲ ವಿತರಣೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣ ಪದಚ್ಯುತಿಗೊಳಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಸಹಕಾರ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ, ರೈತರಿಗೆ ಸಕಾಲದಲ್ಲಿ ಕೃಷಿ ಸಾಲವನ್ನು ಸಿಗುವುದನ್ನು ಖಾತ್ರಿಪಡಿಸಬೇಕು. …

Read More »

BA, BScಗೂ ಕೌಶಲ್ಯಾಧಾರಿತ ಅಪ್ರೆಂಟಿಶಿಪ್ ಎಂಬೆಡೆಡ್ ಪ್ರೊಗ್ರಾಂ ಪರಿಚಯಿಸಲು ಚಿಂತನೆ: ಸಚಿವ ಎಂ.ಸಿ.ಸುಧಾಕರ್

ಬೆಂಗಳೂರು: ಕೌಶಲ್ಯಾಧಾರಿತ ಎಇಡಿಪಿ (ಅಪ್ರೆಂಟಿಶಿಪ್ ಎಂಬೆಡೆಡ್ ಡಿಗ್ರಿ ಪ್ರೋಗ್ರಾಮ್)ಯನ್ನು ಮುಂಬರುವ ದಿನಗಳಲ್ಲಿ ಡಿಪ್ಲೊಮಾ ಜತೆಗೆ ವಿಜ್ಞಾನ ಮತ್ತು ಕಲಾ ಪದವಿ ವಿಭಾಗಕ್ಕೂ ಪರಿಚಯಿಸುವ ಚಿಂತನೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ವಿಕಾಸಸೌಧದಲ್ಲಿ ಗುರುವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಬಿಕಾಂ ಓದುತ್ತಿರುವ ವಿದ್ಯಾರ್ಥಿಗಳಿಗೆ ನೇರವಾಗಿ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ 2024-25ನೇ ಸಾಲಿನಲ್ಲಿ ಕೌಶಲ್ಯಾಧಾರಿತ ಎಇಡಿಪಿ ಶೈಕ್ಷಣಿಕ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಇದರಡಿ ರಾಜ್ಯದ 44 ಪ್ರಥಮದರ್ಜೆ ಕಾಲೇಜುಗಳ …

Read More »

ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆ ಕಣದಿಂದ ಹಿಂದೆ ಸರಿದ ಸಚಿವೆ ಹೆಬ್ಬಾಳ್ಕರ್ ಸಹೋದರ

ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಇನ್ನೂ 52 ದಿನ ಬಾಕಿ ಇದೆ. ಆದರೆ, ಚುನಾವಣಾ ಕಣ ಈಗಲೇ ರಂಗೇರಿದೆ. ಜಾರಕಿಹೊಳಿ ಸಹೋದರರು ಶತಾಯಗತಾಯ ಈ ಬಾರಿ ಡಿಸಿಸಿ ಬ್ಯಾಂಕ್ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಜಿಲ್ಲೆಯಾದ್ಯಂತ ಓಡಾಡುತ್ತಿದ್ದಾರೆ. ಇನ್ನು ವಿರೋಧಿ ಬಣ ಸೈಲೆಂಟ್ ಆಗಿಯೇ ರಣತಂತ್ರ ರೂಪಿಸುತ್ತಿದೆ. ಈ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಚುನಾವಣಾ ಕಣದಿಂದ ಹಿಂದೆ ಸರಿದಿರುವುದು …

Read More »

ಗಂಗಾಧರ ಶಿವಪ್ಪ ಟೋಪಣ್ಣನವರ ನಿಧನ

ಗಂಗಾಧರ ಶಿವಪ್ಪ ಟೋಪಣ್ಣನವರ ನಿಧನ ಬೆಳಗಾವಿಯ ನಾನಾವಾಡಿ ಕೆ.ಎಚ್.ಬಿ ಕಾಲನಿಯ ರಹಿವಾಸಿ ಗಂಗಾಧರ ಶಿವಪ್ಪ ಟೋಪಣ್ಣನವರ (83) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾದರು. ಮೃತರು ಪತ್ನಿ, ಸುಪುತ್ರ, ಸೊಸೆ, ಮೂವರು ಸುಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯೂ ಗುರುವಾರಬೆಳಗಾವಿಯ ಸದಾಶಿವನಗರದ ಕಲ್ಮಠ ಸ್ಮಶಾನಭೂಮಿಯಲ್ಲಿ ನಡೆಯಲಿದೆ.

Read More »

ಸಕಾರಣ ಇಲ್ಲದೆ ಕಾಂಗ್ರೆಸ್ ಅಧಿವೇಶನ ನಡೆಯಲು ಬಿಡಲಿಲ್ಲ. ಅತ್ಯಂತ ಮಹತ್ವದ ಬಿಲ್ ಗಳಿದ್ದವು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆರೋಪ

ಸಕಾರಣ ಇಲ್ಲದೆ ಕಾಂಗ್ರೆಸ್ ಅಧಿವೇಶನ ನಡೆಯಲು ಬಿಡಲಿಲ್ಲ. ಅತ್ಯಂತ ಮಹತ್ವದ ಬಿಲ್ ಗಳಿದ್ದವು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆರೋಪ ಮಾಡಿದರು. ನಗರದಲ್ಲಿ ಮಾತನಾಡಿದ ಅವರು. ಕೆಲ ಬಿಲ್ ಗಳನ್ನು ಸಾರ್ವಜನಿಕವಾಗಿ. ಸುದೀರ್ಘವಾದ ಚರ್ಚಗೆ ಬಿಟ್ಟಿದ್ದೆವು ಆದಾಯ ತೆರಿಗೆ ಇಲಾಖೆಯ ಹೊಸ ಬಿಲ್ ಸೇರಿ ವಿವಿಧ ಪಾಸ್ ಆದವು ಸುಳ್ಳು ಸಬೂಬು ಹೇಳಿ ಕಾಂಗ್ರೆಸ್ ಚರ್ಚೆಗೆ ಅವಕಾಶ ನೀಡಲಿಲ್ಲ ಎಂದರು. ಪ್ರಜಾಪ್ರಭುತ್ವದಲ್ಲಿ ಕಾಂಗ್ರೆಸ್ ಗೆ ವಿಶ್ವಾಸವಿಲ್ಲ ಆಪರೇಷನ್ …

Read More »