Breaking News

ಐಎಂಎ ಹಗರಣದ ಮನ್ಸೂರ್ ಖಾನ್ ಗೆ ಜಾಮೀನು

ಬೆಂಗಳೂರು: ಐಎಂಎ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಿದೆ. ಮನ್ಸೂರ್ ಖಾನ್ ಜುಲೈ19,2019ರಿಂದ ಜೈಲಿನಲ್ಲಿದ್ದಾನೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಹೈಕೋರ್ಟ್ ಆತನಿಗೆ ಜಾಮೀನು ಮಂಜೂರು ಮಾಡಿದೆ. ಫೆ. 12ರಂದು ಜಾಮೀನಿನ ಮೇಲೆ ಬಿಡುಗಡೆ ಆಗಬಹುದಾಗಿದೆ. ಫೆ.12ಕ್ಕೆ ಮೊದಲು ಸಿಬಿಐ ತಂಡವು ತನ್ನ ಎಲ್ಲಾ ತನಿಖೆಗಳನ್ನು ಪೂರೈಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.

Read More »

ಉಪಚುನಾವಣೆಯಲ್ಲೂ ಗೆಲುವು ನಮ್ಮದೇ : ಮತ್ತೊಮ್ಮೆ ಚಾಲೆಂಜ್ ಹಾಕಿದ ಸಿಎಂ

ಬೆಂಗಳೂರು,ಫೆ.5- ಬೆಂಗೂರು,ಫೆ.5- ಮುಂಬರುವ ಎರಡು ವಿಧಾನಸಭಾ ಕ್ಷೇತ್ರ ಹಾಗೂ ಒಂದು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿದೆ. ಇದನ್ನು ಇದಂದೇ ಬರೆದಿಟ್ಟುಕೊಳ್ಳಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸವಾಲು ಹಾಕಿದರು. ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಪಕ್ಷ ಗೆದ್ದೇ ಗೆಲ್ಲುತ್ತದೆ. ಯಾವುದೇ ಕಾರಣಕ್ಕೂ ಕಾಂಗ್ರೆಸಿಗರು ಗೆಲ್ಲುವುದಿಲ್ಲ. ಇದನ್ನು ಈ ಸದನದಲ್ಲಿ ನಾನು ಹೇಳುತ್ತೇನೆ ಎಂದರು. ಜನರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಮುಂದೆ ಯಾವ ಚುನಾವಣೆಯನ್ನು …

Read More »

ಎಲ್ಲಾ ಧರ್ಮಗಳ ವಿವಾಹಗಳ ನೋಂದಣಿ ಕಡ್ಡಾಯ

ಬೆಂಗಳೂರು, ಫೆ.5- ಬಾಲ್ಯ ವಿವಾಹ, ಬಲವಂತದ ಮದುವೆಗಳನ್ನು ತಪ್ಪಿಸಲು ಪ್ರತಿಯೊಂದು ಮದುವೆಯನ್ನು ಕಡ್ಡಾಯವಾಗಿ ನೋಂದಣಿ ಮಾಡುವ ಬೇಡಿಕೆಯ ಬಗ್ಗೆ ಪರಿಶೀಲಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದರು. ವಿಧಾನಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‍ನ ಶಾಸಕ ಕೆ.ಎ.ತಿಪ್ಪೇಸ್ವಾಮಿ ಅವರು, ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮಗಳಲ್ಲಿರುವ ವಿವಾಹ ಕಾಯ್ದೆಯನ್ನು ತಿದ್ದುಪಡಿ ಮಾಡಿ ಪ್ರತಿಯೊಂದು ಮದುವೆಯನ್ನು ನೋಂದಣಿ ಮಾಡಿಸಬೇಕು. ಆಗ ಬಾಲ್ಯವಿವಾಹ ಮತ್ತು ಬಲವಂತದ ಮದುವೆಗಳು …

Read More »

ವಕಿಲರನ್ನು ಅವಾಚ್ಯ ಶಬ್ಧಗಳೀಂದ ನಿಂದಿಸಿದ್ದ ಸಿಪಿಐ ವಕೀಲರ ಸಂಘದ ಮುಖಂಡರು ಪ್ರತಿಭಟನೆ

ಬೆಳಗಾವಿ: ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋಗಿದ್ದ ವಕೀಲರನ್ನು ಸಿಪಿಐ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದನ್ನು ಖಂಡಿಸಿ ಬೆಳಗಾವಿ ವಕೀಲರ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು. ಕೋರ್ಟ್ ಬಳಿ ಬ್ಯಾರಿಕೇಡ್ ಗಳನ್ನು ಹಾಕಿ, ರಸ್ತೆ ತಡೆ ನಡೆಸಿ ಸಿಪಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಪಿಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಕ್ಷಿದಾರರೊಬ್ಬರ ಪರ ದೂರು ದಾಖಲಿಸಲೆಂದು ಠಾಣೆಗೆ ಹೋಗಿದ್ದ ವಕೀಲ ಚೇತನ ಈರಣ್ಣ ಗೆ ಸಿಪಿಐ …

Read More »

ಕಾರವಾರದ ಈ ಇಬ್ಬರು PUC ವಿದ್ಯಾರ್ಥಿಗಳ ಸ್ಮಾರ್ಟ್ ಐಡಿಯಾ ಎಲ್ಲಾ ಕಡೆ ಸಖತ್ ವೈರಲ್..

ಮಾನವ ತನ್ನ ಸ್ಮಾರ್ಟ್ ಬುದ್ದಿಯನ್ನು ಉಪಯೋಗಿಸಿಕೊಂಡು ಹೊಸ ಹೊಸ ಅವಿಷ್ಕಾರ ಐಡಿಯಾಗಳನ್ನ ಮಾಡಿ ಈಗ ಎಲ್ಲವನ್ನೂ ಸುಲಲಿತವಾಗಿ ಮಾಡಿಕೊಂಡಿದ್ದಾನೆ.. ಅಮೇರಿಕಾವನ್ನು ಕೂಡ ಪಕ್ಕದವರು ಅನ್ನುವಷ್ಟು ಹತ್ತಿರ ಮಾಡಿಕೊಂಡಿದ್ದಾನೆ. ಈ ಪಿ.ಯು.ಸಿ ವಿದ್ಯಾರ್ಥಿಗಳು ಕೂಡ ಎಲ್ಲರಂತೆ ಎನಾದ್ರೂ ಓದಿ ಒಂದಷ್ಟು ಅಂಕ ಪಡೆದುಕೊಂಡು ಮುಂದೆ ಹೋಗೋಣ ಎಂದು ಆಲೋಚಿಸದೆ ತಮ್ಮ ಬುದ್ದಿವಂತಿಕೆಗೆ ಕೈ ಹಾಕಿ ಒಂದು ಸ್ಮಾರ್ಟ್ ಐಡಿಯಾ ಮಾಡಿ ಇವತ್ತು ಇವರ ಐಡಿಯಾ ಈಗ ಎಲ್ಲಾ ಕಡೆ ವೈರಲ್ ಆಗುವಂತೆ …

Read More »

ತಮಿಳುನಾಡಿನಲ್ಲಿ ಎರಡಂಕೆ ಪಡೆಯುತ್ತೇವೆ: ಸಿ.ಟಿ.ರವಿ

ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡು ಉಸ್ತುವಾರಿ ಸಿ.ಟಿ. ರವಿ ಅವರು ತಮಿಳುನಾಡು ಚುನಾವಣೆ ಹಿನ್ನೆಲೆಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ್ದಾರೆ. – ತಮಿಳುನಾಡಿನಲ್ಲಿ ಶೂನ್ಯದಿಂದ ಪಕ್ಷ ಕಟ್ಟಲು ಹೋಗಿದ್ದೀರಿ, ಪರಿಸ್ಥಿತಿ ಹೇಗಿದೆ? ಅಲ್ಲಿ ಪಕ್ಷ ಕಟ್ಟಲು ಶ್ರಮಿಸುತ್ತಿರುವ ಕಾರ್ಯಕರ್ತರಿದ್ದಾರೆ. ರಿಸಲ್ಟ್ ಬಂದಿಲ್ಲ ಅಂತ ಶೂನ್ಯ ಎಂದು ಹೇಳಲಾಗದು. ಈ ಬಾರಿ ಎರಡಂಕೆಯ ಶಾಸಕರನ್ನು ನಾವು ವಿಧಾನಸಭೆಗೆ ಕಳುಹಿಸುವುದು ಖಚಿತ. – ಏಕಾಂಗಿಯಾಗಿ …

Read More »

ವೇತನ ಸಹಿತ ರಜಾ ದಿನ ಏರಿಕೆ, ಸ್ವಾಗತಾರ್ಹ ಹೆಜ್ಜೆ

ಕಾರ್ಮಿಕರ ವೇತನ ಸಹಿತ ರಜೆ ದಿನಗಳನ್ನು 30-45 ದಿನಗಳಿಗೆ ಹೆಚ್ಚಿಸಲು ಹಾಗೂ ಬಳಕೆಯಾಗದ ವೇತನಸಹಿತ ರಜೆ ದಿನಗಳನ್ನು ಮುಂದಿನ ವರ್ಷಕ್ಕೆ ವಿಸ್ತರಿಸಲು ಅವಕಾಶ ಕಲ್ಪಿಸುವಂಥ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ತಿದ್ದುಪಡಿ ಮಸೂದೆಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿದೆ. ಅನ್ಯ ರಾಜ್ಯಗಳಲ್ಲಿ ಕಾರ್ಮಿಕರ ರಜೆ ದಿನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ರಾಜ್ಯದ ಉದ್ಯೋಗ ವರ್ಗಕ್ಕೂ ಅನುಕೂಲ ಕಲ್ಪಿಸುವುದು ಇದರ ಉದ್ದೇಶ, ಖಾಸಗಿ ಕಂಪೆನಿಗಳ ಮಾಲಕರೊಂದಿಗೂ ಈ ವಿಚಾರದಲ್ಲಿ ಚರ್ಚಿಸಿ ತೀರ್ಮಾನಕ್ಕೆ …

Read More »

ಎಲ್‌ಪಿಜಿ ದರ 25 ರೂ. ಏರಿಕೆ : ಪೆಟ್ರೋಲ್‌, ಡೀಸೆಲ್‌ ಪ್ರತೀ ಲೀ.ಗೆ 35 ಪೈಸೆ ತುಟ್ಟಿ

ಹೊಸದಿಲ್ಲಿ: ಸರಕಾರಿ ತೈಲ ಮಾರಾಟ ಸಂಸ್ಥೆ (ಒಎಂಸಿ)ಗಳು ದೇಶಾದ್ಯಂತ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 25 ರೂ. ಏರಿಸಿದ್ದು, ಗುರುವಾರದಿಂದಲೇ ಪರಿಷ್ಕೃತ ದರ ಜಾರಿಗೊಂಡಿದೆ. ದಿಲ್ಲಿಯಲ್ಲಿ ಸಿಲಿಂಡರ್‌ಗೆ (14.2 ಕೆಜಿ) 694 ರೂ. ಬದಲಾಗಿ 719 ರೂ. ನಿಗದಿಯಾಗಿದೆ. ಬೆಂಗಳೂರಿನಲ್ಲಿ 697 ರೂ. ಇದ್ದ ಗ್ಯಾಸ್‌ ಸಿಲಿಂಡರ್‌ ಬೆಲೆ 722 ರೂ. ತಲುಪಿದೆ. ಮುಂಬಯಿಯಲ್ಲಿ 719 ರೂ., ಚೆನ್ನೈಯಲ್ಲಿ 735 ರೂ.ವರೆಗೆ ಏರಿಕೆಯಾಗಿದೆ. ಗ್ಯಾಸ್‌ ಸಿಲಿಂಡರ್‌ಗಳ ದರ ಏರಿಕೆ …

Read More »

ಚಿನ್ನದ ಬೆಲೆಯಲ್ಲಿ ಇಳಿಕೆ

2021ರ ಬಜೆಟ್ ನ ನಂತರ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಚಿನ್ನದ ಮೇಲಿನ ಕಸ್ಟಮ್ ಸುಂಕವನ್ನು ಕಡಿತಗೊಳಿಸುವ ಘೋಷಣೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇಂದೂ ಇಳಿದಿದ್ದು, 322 ರೂಪಾಯಿಗೆ ತಲುಪಿದೆ. ಗುರುವಾರ ಚಿನ್ನದ ಬೆಲೆ 10 ಗ್ರಾಂಗೆ 47,457 ರೂಪಾಯಿಯಾಗಿತ್ತು. ಇಂದು 322 ರೂಪಾಯಿ ಇಳಿಕೆಯೊಂದಿಗೆ ಬಂಗಾರದ ಬೆಲೆ 47,137 ರೂಪಾಯಿಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 1,825 ಡಾಲರ್ …

Read More »

ಚನ್ನಮ್ಮ ನಗರ ಶಾಲೆಯಲ್ಲಿ ಚನ್ನಮ್ಮ ನಗರ ಶಾಲೆಯಲ್ಲಿ

ಬೆಳಗಾವಿ :  ನಿವೃತ್ತರಾದ ಶಿಕ್ಷಕ ವಸಂತ ಕಟ್ಟಿಯವರ ಬೀಳ್ಕೊಡುಗೆ ಹಾಗೂ ಸತ್ಕಾರ ಸಮಾರಂಭವನ್ನು ರಾಣಿ ಚೆನ್ನಮ್ಮ ನಗರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಟಿಳಕವಾಡಿ ಕ್ಲಸ್ಟರ್ ವತಿಯಿಂದ  ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಹಿತೈಷಿ ಹಾಗೂ ಮಾಜಿ ನಗರಸೇವಕಿ ಶೀಲಾ ದೇಶಪಾಂಡೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಈ ಶಾಲೆಯಿಂದ ಇಬ್ಬರು ಶಿಕ್ಷಕರು ನಿವೃತ್ತಿ ಹೊಂದಿದ್ದಾರೆ. ಈ ವರ್ಷದ ಆರಂಭದಲ್ಲೇ ಕಟ್ಟಿ ಗುರುಗಳು ನಿವೃತ್ತರಾಗಿದ್ದಾರೆ. …

Read More »