Breaking News

ವೇಶ್ಯೆ ಸೋಗಲ್ಲಿ ಯುವಕರ ಕೋಣೆಗೆ ಆಂಟಿ ಎಂಟ್ರಿ!

ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ವೇಶ್ಯೆ ಸೋಗಿನಲ್ಲಿ ಗಿರಾಕಿಗಳ ಮನೆಗೆ ಕಳುಹಿಸಿ, ದಿನಕ್ಕೆ 1.5 ಲಕ್ಷ ಹಣ ಪೀಕುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 3 ವರ್ಷದಿಂದ ಹಲವು ಯುವಕರಿಗೆ ಗಾಳ ಹಾಕಿದ್ದ ಈ ದಂಪತಿ, ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಉಲ್ಲಾಳ ಉಪನಗರ ವಿಶ್ವೇಶ್ವರ ಲೇಔಟ್​ನ ಭಾಸ್ವತಿ ದತ್ತಾ (26) ಮತ್ತು ಕಿರಣ್​ ರಾಜ್​ (33) ಬಂಧಿತ ದಂಪತಿ. ನಾಗಮಂಗಲದ ಕಿರಣ್​ ಮತ್ತು ಪಶ್ಚಿಮ ಬಂಗಾಳದ ಭಾಸ್ವತಿ ದತ್ತಾ 2018ರಂದು …

Read More »

ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

ಗದಗ: ಹಾವನ್ನ ಕಂಡ್ರೆ ಸಾಕು ಮಾರುದ್ದ ಓಡುವ ಜನರ ಸಂಖ್ಯೆಯೇ ಹೆಚ್ಚು. ‘ಹಾವು’ ಅಂದ್ರೆ ನಿದ್ರೆಯಲ್ಲೂ ಹಲವರು ಬೆಚ್ಚಿಬೀಳ್ತಾರೆ. ಆದರೆ, ಇಲ್ಲೊಬ್ಬ ವೃದ್ಧ ಹಾವಿನ ಜೊತೆ ಚೆಲ್ಲಾಟವಾಡುತ್ತ ಆ ಹಾವಿನಿಂದಲೇ ಪ್ರಾಣಬಿಟ್ಟಿದ್ದಾನೆ. ಇಂತಹ ಘಟನೆ ರೋಣ ಪಟ್ಟಣದಲ್ಲಿ ಸೋಮವಾರ ಸಂಭವಿಸಿದೆ. ಮಕ್ತುಮ್ ಸಾಬ ರಾಜೆಖಾನ್ (75) ಮೃತ ದುರ್ದೈವಿ. ಡಾ.ರಾಜ್​ ಅಪಹರಣ: ರಾಜ್ಯ ಸರ್ಕಾರ ಮುಚ್ಚಿಟ್ಟಿದ್ದ ಸ್ಫೋಟಕ ರಹಸ್ಯ ಬಯಲು ಹಲವು ವರ್ಷಗಳಿಂದ ಹಾವು ಹಿಡಿಯುವದರಲ್ಲಿ ಈ ವೃದ್ಧ ನಿಪುಣನಾಗಿದ್ದ. …

Read More »

ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರ..!

ಹಾಸನ: ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರವಾಗಿರುವ ಆರೋಪ ಜಿಲ್ಲೆಯ ಬೇಲೂರು ತಾಲೂಕಿನ ಸಿ.ಹೊಸಳ್ಳಿಯಲ್ಲಿ ಕೇಳಿಬಂದಿದೆ. ಈ ನಡುವೆ, ಪ್ರಕರಣದಿಂದ ಮನನೊಂದು ವಿಷ ಸೇವಿಸಿದ್ದ 30 ವರ್ಷದ ಮಹಿಳೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಇಂದು ಅಸುನೀಗಿದ್ದಾರೆ. Rape ಏನಿದು ಪ್ರಕರಣ? 6 ವರ್ಷಗಳ ಹಿಂದೆ ಪುಟ್ಟರಾಜು ಎಂಬಾತನ ಜೊತೆ ಮಹಿಳೆ ವಿವಾಹವಾಗಿದ್ದರು. ಕಳೆದ ಡಿಸೆಂಬರ್ 21 ರಂದು ಮಹಿಳೆಯ ಮಾವ ವೆಂಕಟೇಶ್ ಜೋಗಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದನಂತೆ. ಇದರಿಂದ, ಮನನೊಂದ …

Read More »

ಎಸ್.ಆರ್.ಪಾಟೀಲ್ ಆಸ್ಪತ್ರೆಗೆ ದಾಖಲು

ಬೆಂಗಳೂರು : ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್. ಈ ಬಗ್ಗೆ ಟ್ವಿಟ್ ಮೂಲಕ ತಿಳಿಸಿರುವ ಪಾಟೀಲ್ ಅವರು , ಸಣ್ಣ ಪ್ರಮಾಣದ ಅನಾರೋಗ್ಯದ ಕಾರಣ ವೈದ್ಯರು ಒಂದು ವಾರ ವಿಶ್ರಾಂತಿಗೆ ಸೂಚಿಸಿದ್ದರಿಂದ ನನಗೆ ಸದನಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಅದರೊಂದಿಗೆ, ವೈದ್ಯರ ಚಿಕಿತ್ಸೆಯಿಂದ ಅವರು ಚೇತರಿಸಿಕೊಳ್ಳುತ್ತಿರುವದಾಗಿಯೂ,ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ ಹಾಗೂ ಶೀಘ್ರದಲ್ಲೇ ಗುಣಮುಖನಾಗಲಿದ್ದೇನೆ ಎಂದು ತಿಳಿಸಿದ್ದಾರೆ.

Read More »

ಶಾಲೆಗಳ ಬೇಸಗೆ ರಜೆ ಮೊಟಕುಗೊಳಿಸಲಾಗಿದೆ: ಸುರೇಶ್ ಕುಮಾರ್

ಬೆಂಗಳೂರು: ಈ ವರ್ಷದ ಬೇಸಗೆ ರಜೆಯನ್ನು ಮೊಟಕುಗೊಳಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದರು. 2020ರಲ್ಲಿ ಬೇಸಗೆ ರಜೆಯನ್ನು ಕೋವಿಡ್-19ನಿಂದಾಗಿ ಮುಂದೂಡಲಾಯಿತು. ಇದರಿಂದ ಶೈಕ್ಷಣಿಕ ವರ್ಷದ ಮೇಲೆ ತುಂಬಾ ಪರಿಣಾಮ ಬೀರಿದೆ. ಶಾಲೆಗಳು ದೀರ್ಘ ಅವಧಿಯಿಂದ ಮುಚ್ಚಲ್ಪಟ್ಟಿದೆ. ಇದರಿಂದಾಗಿ ಬೇಸಗೆ ರಜೆ ಮೊಟಕುಗೊಳಿಸಲು ನಿರ್ಧರಿಸಿದ್ದೇವೆ ಎಂದರು. ಶಾಲೆ ಮುಚ್ಚಿರುವುದರಿಂದ ತುಂಬಾ ಸಮಸ್ಯೆಗಳು ಎದುರಾಗಿದೆ ಮತ್ತು ಆದಷ್ಟು ಬೇಗ ತರಗತಿಗಳನ್ನು ತೆರೆಯುವ ಅಗತ್ಯವಿದೆ ಎಂದು …

Read More »

ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೆ

ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆಯು ಪ್ರತೀ ಲೀಟರ್ ಗೆ 35 ಪೈಸೆಯಷ್ಟು ಹೆಚ್ಚಾಗಿದ್ದು, ದಾಖಲೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆಯು 87.30, ಮುಂಬಯಿಯಲ್ಲಿ 93.83 ರೂ. ಆಗಿದೆ. ದೆಹಲಿಯಲ್ಲಿ ಡೀಸೆಲ್ ಪ್ರತೀ ಲೀಟರ್ ಗೆ 77.48 ರೂ. ಮತ್ತು ಮುಂಬಯಿಯಲ್ಲಿ 84.36 ರೂ. ಆಗಿದೆ. ಸೋಮವಾರ ಕಚ್ಚಾ ತೈಲವು ಪ್ರತೀ ಬ್ಯಾರಲ್ ಗೆ 60 ಡಾಲರ್ ಆಗಿದ್ದು, ಇದು ಈ ವರ್ಷದ ಗರಿಷ್ಠ ಬೆಲೆಯಾಗಿದ್ದು, ಇದರಿಂದಾಗಿ …

Read More »

OLX ನಲ್ಲಿ ಸೋಫಾ ಮಾರಲು ಹೋಗಿ ಹಣ ಕಳೆದುಕೊಂಡ ಕೇಜ್ರಿವಾಲ್‌ ಪುತ್ರಿ

ಓಎಲ್‌ಎಕ್ಸ್ ನಲ್ಲಿ ಹಳೆಯ ಸೋಫಾ ಮಾರಲು ಹೋಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪುತ್ರಿ ಮೋಸ ಹೋದ ಪ್ರಸಂಗ ನಡೆದಿದೆ. ಆನ್ ಲೈನ್ ವಂಚನೆ ವಿರುದ್ಧ ದೂರೂ ದಾಖಲಾಗಿದೆ. ಹರ್ಷಿತಾ ಕೇಜ್ರಿವಾಲ್ ಅವರು ಒಎಲ್‌ಎಕ್ಸ್ ನಲ್ಲಿ ಹಳೆಯ ಸೋಫಾ ಒಂದನ್ನು ಮಾರಾಟಕ್ಕಿಟ್ಟಿದ್ದರು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ವ್ಯವಹಾರ ಕುದುರಿಸಿದ್ದಾನೆ. ಕ್ಯುಆರ್ ಕೋಡ್ ಕಳುಹಿಸಿದ ಆತ, ಸ್ಕ್ಯಾನ್ ಮಾಡಿದರೆ ಹಣ ಜಮೆಯಾಗುತ್ತದೆ ಎಂದಿದ್ದಾನೆ. ಇದನ್ನು ನಂಬಿದ ಹರ್ಷಿತಾ ಅದನ್ನು ಸ್ಕ್ಯಾನ್ ಮಾಡಿದ್ದಾರೆ. …

Read More »

BIG NEWS: ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ಹಿಂಸಾಚಾರ, ನಟ ದೀಪ್ ಸಿಧು ಅರೆಸ್ಟ್

ನವದೆಹಲಿ: ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ಹಿಂಸಾಚಾರ ಪ್ರಕರಣ ಹಾಗೂ ಕೆಂಪುಕೋಟೆ ಮೇಲೆ ಧ್ವಜ ಹಾರಿಸಲು ಪ್ರೇರಣೆ ನೀಡಿದ ಪ್ರಕರಣ ಸಂಬಂಧ ಪಂಜಾಬಿ ನಟ ದೀಪ್ ಸಿಧುರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಜನವರಿ 26ರಂದು ರೈತರು ದೆಹಲಿಯಲ್ಲಿ ನಡೆಸಿದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿತ್ತು. ಅಲ್ಲದೇ ಕೆಂಪುಕೋಟೆಯ ಮೇಲೆ ಧಾರ್ಮಿಕ ಧ್ವಜ ಹಾರಿಸುವ ಮೂಲಕ ದೀಪ್ ಸಿಧು ವಿವಾದಕ್ಕೆ ಕಾರಣರಾಗಿದ್ದರು. ರೈತರಿಗೆ ಬೆಂಬಲ ನೀಡುವ ಹೆಸರಲ್ಲಿ ಹಿಂಸಾಚಾರಕ್ಕೆ ಪ್ರೇರಣೆ …

Read More »

ನಾಳೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವುದಿಲ್ಲ : ಡಿಸಿಎಂ ಲಕ್ಷ್ಮಣ ಸವದಿ

ಬೆಂಗಳೂರು,ಫೆ.9-ಸಾರಿಗೆ ನೌಕರರ ವೇತನ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಅವರ ವೇತನದಲ್ಲಿ ಯಾವುದೇ ತೊಂದರೆ ಮಾಡುವುದಿಲ್ಲ. ನಾಳೆ ಬಸ್ ಸಂಚಾರದಲ್ಲಿಯೂ ವ್ಯತ್ಯಯವಾಗುವುದಿಲ್ಲ ಎಂದು ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಸ್ಪಷ್ಟಪಡಿಸಿದ್ದಾರೆ.ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಸಂಷ್ಟದಿಂದ ವೇತನದಲ್ಲಿ ಕೊಂಚ ಏರುಪೇರಾಗಿತ್ತು. ಈಗ ಸಾರಿಗೆ ನೌಕರರ ವೇತನವನ್ನು ನೀಡಲಾಗುವುದು. ಡಿಸೆಂಬರ್‍ನಲ್ಲಿ ನೌಕರರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದರು. ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಪರಮಾರ್ಶೆ ಮಾಡುತ್ತಿದೆ. ಕೆಲವು ಕಾರ್ಯಸಾಧು ಬೇಡಿಕೆಗಳನ್ನು ಈಡೇರಿಸಿದೆ. …

Read More »

ಸಭಾಪತಿ ಸ್ಥಾನಕ್ಕೆ ಮುಸ್ಲಿಂ ಅಭ್ಯರ್ಥಿ : ಸಿ.ಎಂ.ಇಬ್ರಾಹಿಂ ಅಸಮಾಧಾನ

ಬೆಂಗಳೂರು, ಫೆ.9- ನಾನು ಕಾಂಗ್ರೆಸಿಗ, ಪಕ್ಷ ಏನು ಹೇಳುತ್ತದೋ ಅದಕ್ಕೆ ನಾನು ಬದ್ಧ. ಇತರ ಪಕ್ಷಗಳ ರಾಜಕೀಯ ಮುಖಂಡರೊಂದಿಗಿನ ಸಂಬಂಧ ನನ್ನ ವೈಯಕ್ತಿಕ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಕಳೆದ ತಿಂಗಳು ಜೆಡಿಎಸ್‍ನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ಇಬ್ರಾಹಿಂ ಅವರು ಜೆಡಿಎಸ್ ಪಕ್ಷ ಸೇರಿದಲಿದ್ದಾರೆ ಎಂಬ ಮಾಹಿತಿಗಳು ಹರಿದಾಡಿದ್ದವು. ಈ ಬಗ್ಗೆ ಕೆಲವು ನಾಯಕರು ಹೇಳಿಕೆ …

Read More »