ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಸಿನಿಮಾವನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದ ಕಾಂಗ್ರೆಸ್ ಶಾಸಕ ನಿಲೇ ದಾಗ ಅವರ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿ ನಡೆದಿದೆ ಎಂದು ವರದಿಯಾಗಿದೆ. ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಹಾಗೂ ಆಯಿಲ್ ಉದ್ಯಮಿಗೆ ಸಂಬಂಧಪಟ್ಟ ಹದಿನೈದು ಕಡೆ ಹಾಗು ಮೂರು ರಾಜ್ಯಗಳಲ್ಲಿ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಬೈ, ಸೋಲಾಪುರ, ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಬೇತಲ್ ಮತ್ತು ಸತ್ನಾದಲ್ಲಿ ಐಟಿ …
Read More »ನಾವು ಎಚ್ಚರಿಕೆ ವಹಿಸ್ಬೇಕು ಇಲ್ಲವಾದ್ರೆ ಲಾಕ್ಡೌನ್ ಮಾಡುವ ಸ್ಥಿತಿ ಬರಬಹುದು: ಬಿಬಿಎಂಪಿ ಆಯುಕ್ತ
ಬೆಂಗಳೂರು: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿದ್ದು, ಹೀಗಾಗಿ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಮಾಡುತ್ತಿದ್ದಾರೆ. ಇಲ್ಲಿ ಲಾಕ್ಡೌನ್ ಮಾಡುವ ಸ್ಥಿತಿ ನಮಗೆ ಬರಬಾರದು ಅಂದ್ರೆ ಎಚ್ಚರವಾಗಿರಬೇಕು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ನಗರದಲ್ಲಿ ಇಂದು ಮಾತನಾಡಿದ ಬಿಬಿಎಂಪಿ ಆಯುಕ್ತರು, ‘ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಬಹುತೇಕ ಹೆಚ್ಚಳವಾಗ್ತಿದೆ. ಹಾಗಾಗಿ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಮಾಡುತ್ತಿದ್ದಾರೆ. ನಮಗೂ ಲಾಕ್ಡೌನ್ ಮಾಡುವ ಸ್ಥಿತಿ ನಮಗೆ ಬರಬಾರದೆಂದರೆ ಅಂದ್ರೆ ನಾವು ಎಚ್ಚರಿಕೆ ವಹಿಸಬೇಕು’ …
Read More »ಶಾಸಕ ಯತ್ನಾಳ್ಗೆ ಶಾಕ್ ಕೊಟ್ಟ ಹೈಕಮೆಂಡ್..!
ಬೆಂಗಳೂರು,ಫೆ.19- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾಡುತ್ತಿರುವ ಆರೋಪಗಳ ಬಗ್ಗೆ ಹೈಕಮಾಂಡ್ ನಿರ್ಲಕ್ಷಿಸಲು ಮುಂದಾಗಿದೆ. ಇನ್ನು ಮುಂದೆ ಯತ್ನಾಳ್ ಏನೇ ಹೇಳಿಕೆ ಕೊಟ್ಟರೂ ಅದನ್ನು ಪಕ್ಷವಾಗಲಿ, ಬೇರೆ ಯಾರೊಬ್ಬರೂ ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ. ಟೀಕೆಗಳನ್ನು ತಳ್ಳಿಹಾಕುವಂತೆ ರಾಜ್ಯ ಘಟಕದ ನಾಯಕರಿಗೆ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಯತ್ನಾಳ್ ಹೇಳಿಕೆಯನ್ನು ಬೆಳೆಸುತ್ತಾ ಹೋದರೆ ಸರ್ಕಾರ ಮತ್ತು ಪಕ್ಷದ ನಡುವೆ ವ್ಯತ್ಯಾಸಗಳು ಉಂಟಾಗುತ್ತವೆ. ಒಬ್ಬ …
Read More »ಮಿಜೋರಾಂನಲ್ಲಿ ಅಪಾರ ಪ್ರಮಾಣದ ಆಮೆ, ಸರೀಸೃಪಗಳ ವಶ
ಐಜ್ವಾಲ್, ಫೆ.19 (ಪಿಟಿಐ)- ಮಿಜೋರಾಂನ ಚಂಪಾಯ್ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಆಮೆಗಳು, ಸರೀಸೃಪಗಳು ಹಾಗೂ ವಿಲಕ್ಷಣ ರೀತಿಯ ಬೀಜಗಳನ್ನು ಅಸ್ಸಾಂ ರೈಫಲ್ಸ್ ವಶಪಡಿಸಿಕೊಂಡು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಕಸ್ಟಂಸ್ ಇಲಾಖೆ ಮತ್ತು ಅಸ್ಸಾಂ ರೈಫಲ್ಸ್ ಜಂಟಿ ಕಾರ್ಯಾಚರಣೆ ನಡೆಸಿ 20 ಚುಕ್ಕಿ ಆಮೆಗಳನ್ನು, 38 ಕೆಂಪು ಪಾದ ಆಮೆಗಳನ್ನು, 17 ಹಳದಿ, ಕಿತ್ತಳೆ, ಹಸಿರು ಇಗುವಾನಾ, ಮೂರು ಗಡ್ಡದ ಡ್ರಾಗನ್, 3 ಅಲ್ಬಿನೋ ಇಗುವಾನ, ವಿಲಕ್ಷಣ ಬೀಜಗಳು ಹಾಗೂ ಗೊಬ್ಬರವನ್ನು ಜಿಲ್ಲೆಯ …
Read More »ಒಂದುವರೆ ವರ್ಷದ ಕಂದನನ್ನೇ ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಿದ್ದ ತಂದೆ ಗಲ್ಲುಶಿಕ್ಷೆ ವಿಧಿಸಿರುವ ನ್ಯಾಯಾಲಯ
ಗದಗ: ಒಂದುವರೆ ವರ್ಷದ ಕಂದನನ್ನೇ ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಿದ್ದ ತಂದೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಅಪರಾಧಿ ರೋಣ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿ ಪ್ರಶಾಂತಗೌಡ ಎಂದು ತಿಳಿದುಬಂದಿದೆ. ಪ್ರೀತಿಯ ಹೆಸರಲ್ಲಿ ಮಹಿಳೆಯನ್ನು ನಂಬಿಸಿ ವಿವಾಹವಾಗಿದ್ದ. ಇಬ್ಬರ ಪ್ರೀತಿ ಸಂಕೇತವಾಗಿ ಮಗ ಹುಟ್ಟಿದ್ದ. ಆದರೆ ಪ್ರಶಾಂತನಿಗೆ ಪತ್ನಿ-ಮಗ ಬೇಕಿರಲಿಲ್ಲ. ಮಹಿಳೆಯನ್ನು ನಂಬಿಸಿ ಪ್ರೀತಿ ಹೆಸರಲ್ಲಿ ದೋಖಾ ಮಾಡಿದ್ದ ಈ …
Read More »ನನಗೆ ನೋಟಿಸ್ ಬಂದಿದೆ.ಯಡಿಯೂರಪ್ಪನವರ ಕುಟುಂಬದಿಂದ ಸರ್ಕಾರಕ್ಕೆ ಹೇಗೆ ಕೆಟ್ಟ ಹೆಸರು ಬರುತ್ತಿದೆ ಎಂದು 11 ಪುಟಗಳ ಉತ್ತರ ಬರೆದಿದ್ದೇನೆ.
ಬೆಂಗಳೂರು: ನಾನು ಪಕ್ಷದ ವಿರುದ್ಧವಾಗಲಿ ಅಥವಾ ನಮ್ಮ ನಾಯಕರಾದ ನರೇಂದ್ರ ಮೋದಿ ವಿರುದ್ಧವಾಗಲಿ ಯಾವುದೇ ಹೇಳಿಕೆ ನೀಡಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕುಟುಂಬ ರಾಜಕಾರಣ ಹಾಗೂ ವಿಜಯೇಂದ್ರರ ವರ್ಗಾವಣೆ ದಂಧೆ ಬಗ್ಗೆ ಮಾತ್ರ ಆರೋಪಿಸಿದ್ದೇನೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೈಕಮಾಂಟ್ನಿಂದ ನನಗೆ ನೋಟಿಸ್ ಬಂದಿದೆ. ನೋಟಿಸ್ಗೆ 11 ಪುಟಗಳ ಉತ್ತರ ಬರೆದಿದ್ದೇನೆ. ಯಡಿಯೂರಪ್ಪನವರ ಕುಟುಂಬದಿಂದ ಸರ್ಕಾರಕ್ಕೆ ಹೇಗೆ ಕೆಟ್ಟ ಹೆಸರು ಬರುತ್ತಿದೆ …
Read More »ರಾಮಮಂದಿರಕ್ಕೆ ದೇಣಿಗೆ ನೀಡಲ್ಲ ಅಂದ ಮಾತ್ರಕ್ಕೆ.. ಸಿದ್ದರಾಮಯ್ಯ ಹಿಂದೂ ವಿರೋಧಿ ಆಗಲ್ಲ -ಡಾ.ಯತೀಂದ್ರ
ಮೈಸೂರು: ದೇಣಿಗೆ ನೀಡಲ್ಲ ಅಂದ ಮಾತ್ರಕ್ಕೆ ಸಿದ್ದರಾಮಯ್ಯ ಹಿಂದೂ ವಿರೋಧಿ ಅಲ್ಲ. ಸಿದ್ದರಾಮಯ್ಯರನ್ನ ಹಿಂದೂ ವಿರೋಧಿ ಅನ್ನುವುದಕ್ಕೆ ಆಗಲ್ಲ ಎಂದು ರಾಮಮಂದಿರಕ್ಕೆ ದೇಣಿಗೆ ನೀಡಲ್ಲ ಎಂಬ ತಮ್ಮ ತಂದೆ ಸಿದ್ದರಾಮಯ್ಯರ ಹೇಳಿಕೆಗೆ ಶಾಸಕ ಡಾ.ಯತೀಂದ್ರ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯ ಟಿ.ನರಸೀಪುರದಲ್ಲಿ ಶಾಸಕ ಯತೀಂದ್ರ ಹೇಳಿದ್ದಾರೆ. ಜೊತೆಗೆ, ದೇಣಿಗೆ ಎಂಬುದು ಸ್ವಇಚ್ಛೆಯಿಂದ ನೀಡುವುದು ಎಂದು ಸಹ ಹೇಳಿದರು. ನಮ್ಮೂರಲ್ಲಿ ಕಟ್ಟುವ ರಾಮಮಂದಿರಕ್ಕೆ ದೇಣಿಗೆ ನೀಡ್ತೇನೆ ಎಂದು ಸಿದ್ದರಾಮಯ್ಯ ಅಂದಿದ್ದಾರೆ. ಅಂತೆಯೇ, ಅನೇಕ ದೇವಸ್ಥಾನಗಳಿಗೆ …
Read More »ಬಿಹಾರದಲ್ಲಿ ಬಿಜೆಪಿ ಸೋಲಿಸಲು ವಿಜಯೇಂದ್ರ ದುಡ್ಡು: ಯತ್ನಾಳ
ಬೆಂಗಳೂರು: ‘ಬಿಹಾರದ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿಜಯೇಂದ್ರ (ಯಡಿಯೂರಪ್ಪ ಪುತ್ರ) ತಮ್ಮ ಆಪ್ತರ ಮೂಲಕ ಹಣ ಕಳುಹಿಸಿದ್ದಾರೆ. ಪ್ರಧಾನಿ ಮೋದಿ ಶಕ್ತಿ ಕುಗ್ಗಿಸಲು ಹಣ ಸಂದಾಯ ಮಾಡಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಪಾದಿಸಿದರು. ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ಆರ್ಜೆಡಿ, ಕಾಂಗ್ರೆಸ್ಗೆ ವಿಜಯೇಂದ್ರ ಫಂಡಿಂಗ್ ಮಾಡಿದ್ದಾರೆ. ಈ ಬಗ್ಗೆಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ‘ಪಕ್ಷದಿಂದ ನೋಟಿಸ್ ಬಂದಿರುವುದು ನಿಜ. ಅದಕ್ಕೆ ಹನ್ನೊಂದು ಪುಟಗಳ …
Read More »ನಮ್ಮ ಭರವಸೆಗಳು ಸುಳ್ಳಾಗಿವೆ, ನೀವೂ ವಿಫಲರಾಗಿದ್ದೀರಿ: ಪ್ರಧಾನಿ ಮೋದಿ ಬಗ್ಗೆ ಶಂಕರ್ ಬಿದರಿ
ಬೆಂಗಳೂರು, ಫೆ,18: ಮೋದಿಯವರು 2014ರಲ್ಲಿ ಅಧಿಕಾರಕ್ಕೆ ಬಂದಾಗ ನಾನು ಉತ್ಸಾಹದಲ್ಲಿದ್ದೆ. ಮೋದಿ ಜನರನ್ನು ತನ್ನೊಂದಿಗೆ ಕೊಂಡೊಯ್ದು ದೇಶದ ಹಣೆಬರಹವನ್ನು ಬದಲಾಯಿಸುತ್ತಾರೆ ಎಂದು ನಂಬಿಕೊಂಡಿದ್ದೆ. ಈ ಕಾರಣಕ್ಕೇ ನಾನು ಅವರಿಗೆ ನೋಟ್ ಬ್ಯಾನ್ ಹಾಗೂ 370ರ ವಿಧಿ ಸಂಬಂಧ ಬೆಂಬಲ ವ್ಯಕ್ತಪಡಿಸಿದ್ದೆ. ಆದರೆ ಇಂದು ನನಗೆ ತುಂಬಾ ಬೇಸರವಾಗುತ್ತಿದೆ. ಮೋದಿ ಕೂಡ ಸೋತಿದ್ದಾರೆ” ಎಂದು ರಾಜ್ಯ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಫೇಸ್ಬುಕ್ನಲ್ಲಿ ಹಲವು …
Read More »ನಾನು ದೇವಾಲಯಗಳಿಗೆ ಹೋಗೋದು ಕಡಿಮೆ: ಕಷ್ಟಕ್ಕೆ ಸ್ಪಂದಿಸುವುದರಲ್ಲಿ ದೇವರಿದ್ದಾನೆ- ಸಿದ್ದರಾಮಯ್ಯ
ದೇವಾಲಯಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೇಳಿಕೆಗಳನ್ನು ನೀಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಈಗ ಅಂಥಹದ್ದೇ ಮತ್ತೊಂದು ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಫೆ.18 ರಂದು ಮೈಸೂರಿನ ಟಿ.ನರಸಿಪುರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿರುವ ಸಿದ್ದರಾಮಯ್ಯ, “ನಾನು ದೇವಸ್ಥಾನಗಳಿಗೆ ಹೋಗುವುದು ಕಡಿಮೆ, ಮನೆಯಲ್ಲಿ ಪೂಜೆ ಮಾಡುವುದಿಲ್ಲ ಹಾಗಂತ ದೇವರು ಇಲ್ಲ ಅಂತಲ್ಲ, ಕಷ್ಟಕ್ಕೆ ಸ್ಪಂದಿಸುವುದರಲ್ಲಿ ದೇವರಿದ್ದಾನೆ ಎಂದು ಹೇಳಿದ್ದಾರೆ. ಇದೇ ವೇಳೆ ಪೂಜಾರಿಗಳ ಬಗ್ಗೆಯೂ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಕೆಲವು ಪೂಜಾರಿಗಳು ತಟ್ಟೆ ಕಾಸಿಗಾಗಿ …
Read More »