ಬೆಳಗಾವಿ(ಫೆ.27): ಕೊರೊನಾ ಸೋಂಕಿನ ಕಾರಣದಿಂದಗಾಗಿ ಜನರಿಗೆ ಕ್ವಾರಂಟೈನ್ ಮಾಡೋದು ಸಾಮಾನ್ಯವಾಗಿದೆ. ಬೇರೆ ಊರಿಂದ ಬಂದ್ರೆ ಅಥವಾ ರೋಗದ ಲಕ್ಷಣ ಇದ್ದವರಿಗೆ ಕ್ವಾರಂಟೈನ್ ಮಾಡುವುದು ಸಹಜ. ಆದರೆ ಬೆಳಗಾವಿಗೆ ಬಂದಿರೋ ಮೂರು ಕಾಡಿನ ರಾಜಗಳಿಗೆ ಅರಣ್ಯಾಧಿಕಾರಿಗಳು ಕ್ವಾರಂಟೈನ್ ಮಾಡಿದ್ದಾರೆ. ಸದ್ಯ ಅವರನ್ನು ನೋಡಲು ಯಾರಿಗೂ ಅವಕಾಶ ಇಲ್ಲ. ಕೇವಲ ಆಹಾರ ನೀಡುವ ಸಿಬ್ಬಂದಿಗೆ ಮಾತ್ರ ಅಲ್ಲಿಗೆ ಪ್ರವೇಶವಿದೆ. ಆದರೆ ಈ ಕಾಡಿನ ರಾಜಗಳನ್ನು ನೋಡಲು ಜನ ಕಾಯುತ್ತಿದ್ದಾರೆ. ಬೆಳಗಾವಿಯ ಭೂತರಾಮನಹಟ್ಟಿ ಗ್ರಾಮದ …
Read More »ರಸ್ತೆಗಿಳಿಯದ ಲಾರಿ, ಟ್ರಕ್: ಮತ್ತೆ ಮುಷ್ಕರದ ಎಚ್ಚರಿಕೆ
ಬೆಂಗಳೂರು: ತೈಲ ದರ ಇಳಿಕೆ, ಇ-ವೇ ಬಿಲ್ ನಿಯಮಾವಳಿ ರದ್ದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಾರಿ ಮತ್ತು ಟ್ರಕ್ ಸೇರಿದಂತೆ ಸರಕು ಸಾಗಾಣಿಕೆ ವಾಹನ ಮಾಲೀಕರು ದೇಶವ್ಯಾಪಿ ಶುಕ್ರವಾರ ಹಮ್ಮಿಕೊಂಡಿದ್ದ ಮುಷ್ಕರ ಬೆಂಬಲಿಸಿ ನಗರದಲ್ಲೂ ಲಾರಿ ಹಾಗೂ ಟ್ರಕ್ಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು. ಬೆಂಗಳೂರು-ತುಮಕೂರು ಹೆದ್ದಾರಿಯ ಮಾದನಾಯಕನಹಳ್ಳಿ ನೈಸ್ ರಸ್ತೆ ಜಂಕ್ಷನ್ನಲ್ಲಿ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘಗಳ ಒಕ್ಕೂಟದ ವತಿಯಿಂದ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಯಿತು. …
Read More »ಜಾನುವಾರು ಹತ್ಯೆ: ಸದ್ಯಕ್ಕೆ ಕಠಿಣ ಕ್ರಮ ಇಲ್ಲ
ಬೆಂಗಳೂರು: ‘ಜಾನುವಾರು ಸಾಗಣೆ ಮಾಡುವವರ ವಿರುದ್ಧ ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಕಾಯ್ದೆ-2020 ಅನ್ನು ಸದ್ಯಕ್ಕೆ ಕಠಿಣವಾಗಿ ಅನ್ವಯ ಮಾಡುವುದಿಲ್ಲ’ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ನೀಡಿರುವ ತನ್ನ ಭರವಸೆ ಮುಂದುವರಿಸಿದೆ. ಈ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿರುವುದನ್ನು ಗಮನದಲ್ಲಿ ಇಟ್ಟುಕೊಂಡು ತಿದ್ದುಪಡಿ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಮುಖ್ಯ ನ್ಯಾಯಮುರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಸಮಯ ನೀಡಿತು. ಇದೇ ವೇಳೆ ಆಕ್ಷೇಪಣೆ ಸಲ್ಲಿಸಲು ಹೆಚ್ಚಿನ ಸಮಯ ಬೇಕು …
Read More »ಯುಪಿಎಸ್ಸಿ ಮಾದರಿಯಲ್ಲಿಯೇ ಕೆಪಿಎಸ್ಸಿ ಪರೀಕ್ಷೆ!
ಬೆಂಗಳೂರು: ಪ್ರಶ್ನೆಪತ್ರಿಕೆ ಸೋರಿಕೆಯಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ), ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಇದೇ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆಗಳ ಮಾದರಿಯ ಭದ್ರತಾ ವ್ಯವಸ್ಥೆ ಮಾಡಿಕೊಂಡಿದೆ! ಜ. 24ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣಕ್ಕೆ ಮುಂದೂಡಲಾಗಿದ್ದು, ಭಾನುವಾರ (ಫೆ. 28) ನಡೆಯಲಿದೆ. 1,253 ಎಫ್ಡಿಎ ಹುದ್ದೆಗಳಿಗೆ 3.74 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ರಾಜ್ಯದಾದ್ಯಂತ 1,057 ಕೇಂದ್ರಗಳಲ್ಲಿ ಪರೀಕ್ಷೆ …
Read More »ಜಲ ವಿವಾದ ಇತ್ಯರ್ಥ. 26 ರಂದು ಉನ್ನತ ಮಟ್ಟದ ಸಭೆ
ಬೆಂಗಳೂರು. ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ, ಅಂತರ ರಾಜ್ಯ ಜಲವಿವಾದಗಳು, ಸರ್ವೋಚ್ಚ ನ್ಯಾಯಾಲಯದಲ್ಲಿರುವ ದಾವೆಗಳ ಕುರಿತಂತೆ ಉನ್ನತ ಮಟ್ಟದ ಸಭೆ ನಾಳೆ (ಫೆ.26) ಬೆಳಿಗ್ಗೆ ೧೧ ಕ್ಕೆ ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ನಡೆಯಲಿದೆ. ಈ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಹಿಸವರು. ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ …
Read More »ಗೋಕಾಕ ತಾಲೂಕಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜುಗೊಳ್ಳುತ್ತಿರುವ ರಂಗಕರ್ಮಿ
ಗೋಕಾಕ: ಇಲ್ಲಿಯ ಎನ್ಇಎಸ್ ಶಾಲಾ ಆವರಣದಲ್ಲಿ ಶನಿವಾರದಂದು ನಡೆಯಲಿರುವ ಗೋಕಾಕ ತಾಲೂಕಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜುಗೊಳ್ಳುತ್ತಿರುವ ರಂಗಕರ್ಮಿ ಬಸವಣ್ಣೆಪ್ಪ ಹೊಸಮನಿ ವೇದಿಕೆ.
Read More »ಗೋಕಾಕ: ನಗರದ ಶೂನ್ಯ ಸಂಪಾದನ ಮಠದ ಬಿಸಿಎ ಕಾಲೇಜಿನಲ್ಲಿ 16ನೇ ಶರಣ ಸಂಸ್ಕೃತಿ ಉತ್ಸವ
ಗೋಕಾಕ: ನಗರದ ಶೂನ್ಯ ಸಂಪಾದನ ಮಠದಿಂದ ಕಾಯಕಯೋಗಿ ಲಿಂಗೈಕ್ಯ ಬಸವ ಮಹಾಸ್ವಾಮಿಜಿಗಳವರ 16ನೇ ಪುಣ್ಯಸ್ಮರಣೋತ್ಸವ ಹಾಗೂ 16ನೇ ಶರಣ ಸಂಸ್ಕೃತಿ ಉತ್ಸವ ಸಮಾರಂಭವು ಮಾ-1 ರಿಂದ 4ರವರೆಗೆ ಅತೀ ವಿಜೃಂಭನೆಯಿಂದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಜರುಗಲಿದೆ ಎಂದು ಶರಣ ಸಂಸ್ಕೃತಿ ಉತ್ಸವ ಸಮಿತಿಯ ಕಾರ್ಯದರ್ಶಿ ವಿವೇಕ ಜತ್ತಿ ಹೇಳಿದರು. ಅವರು ಶುಕ್ರವಾರದಂದು ನಗರದ ಶೂನ್ಯ ಸಂಪಾದನ ಮಠದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಬಿಸಿಎ ಕಾಲೇಜಿನಲ್ಲಿ 16ನೇ ಶರಣ ಸಂಸ್ಕೃತಿ …
Read More »ಎಲ್ಪಿಜಿ ಗ್ರಾಹಕರಿಗೆ ಅವಳಿ ಆಘಾತ : ಸಬ್ಸಿಡಿಯೂ ರದ್ದು, ಸಿಲಿಂಡರ್ ಬೆಲೆ 25 ರೂ. ಏರಿಕೆ
ಬೆಂಗಳೂರು : ಕೇವಲ ಎರಡು ತಿಂಗಳುಗಳ ಅಂತರದಲ್ಲಿ ಅಡುಗೆ ಅನಿಲ ದರ ಸುಮಾರು 200 ರೂ. ಹೆಚ್ಚಳವಾಗಿದೆ. ಮತ್ತೂಂದೆಡೆ ಕೊರೊನಾ ಹಾವಳಿಯಿಂದಾಗಿ ಸಬ್ಸಿಡಿಯನ್ನೂ ಸರಕಾರ ಹಿಂಪಡೆದಿದ್ದು, ಅವಳಿ ಆಘಾತ ನೀಡಿದೆ. ಒಟ್ಟು 200 ರೂ. ಹೆಚ್ಚಳದಲ್ಲಿ ಫೆಬ್ರವರಿ ತಿಂಗಳಲ್ಲೇ 100 ರೂ. ಏರಿಕೆ ಆಗಿದೆ. ಡಿಸೆಂಬರ್ನಲ್ಲಿ ಕೂಡ 100 ರೂ. ಹೆಚ್ಚಳ ಆಗಿತ್ತು. ಈ ಮಧ್ಯೆ ಗ್ರಾಹಕರ ಖಾತೆಗೆ ನೇರವಾಗಿ ಬರುತ್ತಿದ್ದ ಸಬ್ಸಿಡಿ ಕೂಡ ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದೆ. ಫೆ. 4ರಂದು …
Read More »ಸುಧಾಕರ್ ಅವರ ಕಚೇರಿ ಮುಂದೆ ನಾನು ಪ್ರತಿಭಟನೆ ಮಾಡುತ್ತೇನೆ: ರೇಣುಕಾಚಾರ್ಯ
ಬೆಂಗಳೂರು (ಫೆ. 26): ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸಂಪುಟ ವಿಸ್ತರಣೆಯ ಸಮಯದಿಂದಲೂ ತಮ್ಮ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಮತ್ತೊಮ್ಮೆ ಸರ್ಕಾರದ ಕೆಲವು ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿರುವ ಅವರು ತಮ್ಮದೇ ಸರ್ಕಾರದ ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಚಿವರೆಂದರೆ ದೇವಲೋಕದಿಂದ ಇಳಿದು ಬಂದವರಾ? ನಾವೇನು ಬಿಟ್ಟಿ ಬಿದ್ದಿದ್ದೀವಾ? ಕೆಲವು ಸಚಿವರು ಕೈಗೇ ಸಿಗೋದಿಲ್ಲ. ಅವರ ಪಿ.ಎಗಳು, ಪಿ.ಎಸ್ಗಳು ಫೋನೇ …
Read More »ಮುಷ್ಕರ ಕೈಬಿಡಿ; ಸಚಿವ ಕೆ.ಎಸ್.ಈಶ್ವರಪ್ಪ ಮನವಿ
ಬೆಂಗಳೂರು: “ಡೀಸೆಲ್ ಬೆಲೆ ಇಳಿಕೆಗೆ 6 ತಿಂಗಳಿಂದ ಮನವಿ ಮಾಡುತ್ತಿದ್ದೇವೆ. ಆದರೂ ಸಿಎಂ ಬಿ.ಎಸ್.ಯಡಿಯೂರಪ್ಪ ಡೀಸೆಲ್ ಬೆಲೆಯನ್ನು ಏಕೆ ಇಳಿಸುತ್ತಿಲ್ಲ ಎಂಬುದು ತಿಳಿಯುತ್ತಿಲ್ಲ. ಇಂದು ನೈಸ್ ರಸ್ತೆಯಲ್ಲಿ ವಾಹನ ನಿಲ್ಲಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ,” ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಲಾರಿ ಮಾಲೀಕರ ಪ್ರತಿಭಟನಾ ಮೆರವಣಿಗೆ ಆರಂಭಗೊಂಡಿದೆ. ಈ ಮುನ್ನ ಹೇಳಿಕೆ ನೀಡಿದ ರಾಜ್ಯ ಲಾರಿ ಮಾಲೀಕರ …
Read More »