Breaking News

, ಕಾಂಗ್ರೆಸ್‌ನಲ್ಲಿ ಈಗಾಗಲೇ ಹತ್ತು ಜನ ಮುಖ್ಯಮಂತ್ರಿಯಾಗಲು ಸೂಟು-ಬೂಟು ಹೊಲಿಸಿಕೊಂಡು ಕಾದುಕುಳಿತಿದ್ದಾರೆ.: H.D.K.

ಬೆಂಗಳೂರು: “ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಆದರೆ, ಕಾಂಗ್ರೆಸ್‌ನಲ್ಲಿ ಈಗಾಗಲೇ ಹತ್ತು ಜನ ಮುಖ್ಯಮಂತ್ರಿಯಾಗಲು ಸೂಟು-ಬೂಟು ಹೊಲಿಸಿಕೊಂಡು ಕಾದುಕುಳಿತಿದ್ದಾರೆ. ಇದು ಆ ಪಕ್ಷದಲ್ಲಿ ಅಧಿಕಾರದ ದಾಹಕ್ಕೆ ಹಿಡಿದ ಕನ್ನಡಿ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು. ನಗರದ ಜೆಡಿಎಸ್‌ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೂರಾರು ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಹತ್ತು ಜನ ಈಗ ಸಿಎಂ ಗದ್ದುಗೆ ಏರಲು ತುದಿಗಾಲಲ್ಲಿ …

Read More »

ಮಗುವಿನ ಗಂಟಲಲ್ಲಿ ಸಿಲುಕಿದ್ದ ಡಬ್ಬಿ ಹೊರತೆಗೆದ ವೈದ್ಯರು

ಕೊಪ್ಪಳ: ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದ್ದ ಮೆಂತೋಪ್ಲಸ್ ಡಬ್ಬಿಯನ್ನು ಸರ್ಕಾರಿ ವೈದ್ಯರು ಯಶಸ್ವಿಯಾಗಿ ಹೊರತೆಗೆದು ಅಪಾಯದಿಂದ ಪಾರು ಮಾಡಿದ್ದಾರೆ. ಈ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದಲ್ಲಿ ನಡೆದಿದೆ. ಮಹಾಂತೇಶ ಎಂಬ (8) ತಿಂಗಳ ಮಗು ಆಟವಾಡುತ್ತಾ ಮೆಂತೋಪ್ಲಸ್ ಡಬ್ಬಿ ನುಂಗಿತ್ತು. ಕೂಡಲೇ ಇದನ್ನು ಅರಿತ ಮಗುವಿನ ಪೋಷಕರು, ಕೊಪ್ಪಳದ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ.ಮಗುವನ್ನು ಪರೀಕ್ಷಿಸಿದ ವೈದ್ಯರು, ಮಗುವಿನ ಗಂಟಲಿನಲ್ಲಿ ಡಬ್ಬಿ ಸಿಲುಕಿಕೊಂಡಿದೆ. ಹೀಗಾಗಿ ಉಸಿರಾಟಕ್ಕೆ …

Read More »

ಸಚಿವ ರಾಮುಲು ಪಿಎ ರಾಜಣ್ಣ ಅರೆಸ್ಟ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೆಸರೇಳಿಕೊಂಡು ಹಣ ವಸೂಲಿ ಆರೋಪದಲ್ಲಿ ಸಚಿವ ಶ್ರೀರಾಮುಲು ಪಿಎ ಅರೆಸ್ಟ್ ಆಗಿದ್ದಾರೆ. ಸ್ವತಃ ವಿಜಯೇಂದ್ರ ದೂರು ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಶ್ರೀರಾಮುಲು ಮನೆಯಲ್ಲೇ ಆರೋಪಿ ರಾಜಣ್ಣನನ್ನ ವಶಕ್ಕೆ ಪಡೆದಿದ್ದಾರೆ. ಕೆಲಸ ಕೊಡಿಸ್ತೀನಿ, ವರ್ಗಾವಣೆ ಮಾಡಿಸ್ತೀನಿ ಅಂತ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಿರೋ ಆರೋಪ ಕೇಳಿ ಬಂದಿದೆ. ರಾಜಣ್ಣ 8 ವರ್ಷದಿಂದ ರಾಮುಲು ಬಳಿ ಕೆಲಸ ಮಾಡ್ತಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ …

Read More »

ಬೆಳಗಾವಿಯಲ್ಲಿ ವಿಧಾನಮಂಡಳದ ಅಧಿವೇಶನ ನಡೆಯಲಿದೆಯೇ?

ಬೆಳಗಾವಿ – ಇದೇ ತಿಂಗಳಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಳದ ಅಧಿವೇಶನ ನಡೆಯಲಿದೆಯೇ? ವಿಧಾನ ಪರಿಷತ್ ಸಭಾಪತಿ, ವಿಧಾನಸಭಾಧ್ಯಕ್ಷ, ವಿಧಾನಪರಿಷತ್ ಮುಖ್ಯಸಚೇತಕ – ಈ ಮೂವರೂ ಬೆಳಗಾವಿಯ ಸುವ್ರಣ ವಿಧಾನಸೌಧದಲ್ಲಿ ಜುಲೈ ತಿಂಗಳಲ್ಲಿ ವಿಧಾನಮಂಡಳದ ಅಧಿವೇಶನ ನಡೆಸಲು ಸಹಮತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಇದೇ ತಿಂಗಳಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಳದ ಅಧಿವೇಶನ ನಡೆಸುವಂತೆ ಪತ್ರ ಬರೆದಿದ್ದಾರೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ …

Read More »

ಕೈ ಹಿಡಿದ ಪತ್ನಿಯನ್ನೇ ವೇಶ್ಯೆಯನ್ನಾಗಿ ಬಿಂಬಿಸಲು ಟೆಕ್ಕಿ ಪತಿ ಕುತಂತ್ರ

ಬೆಂಗಳೂರು: ಟೆಕ್ಕಿಯೊಬ್ಬ ಕೈ ಹಿಡಿದ ಪತ್ನಿಗೆ ಹಿಂಸೆ ನೀಡಲು ಆತ ಕಂಡುಕೊಂಡ ದಾರಿ ಕೇಳಿದ್ರೆ ಹಿಡಿಶಾಪ ಹಾಕ್ತೀರಿ. ಪತ್ನಿಯನ್ನ ವೇಶ್ಯೆ ಎಂದು ಬಿಂಬಿಸಲು ಅವಳ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ ತೆರೆದು ಅವಳ ಮೊಬೈಲ್ ನಂಬರ್ ಅನ್ನೂ ಹಾಕಿದ್ದ. ಹಲವು ಮೊಬೈಲ್​ ನಂಬರ್​ಗಳಿಂದ ಪತ್ನಿಗೆ ಅಶ್ಲೀಲ ಸಂದೇಶ ಕಳಿಸಿದ್ದ. ಸಾವಿರಕ್ಕೂ ಹೆಚ್ಚಿನ ಇ-ಮೇಲ್ ಸಂದೇಶಗಳನ್ನು ಕಳುಹಿಸಿ ಅಸಭ್ಯವಾಗಿ ಕಮೆಂಟ್ ಮಾಡಿ ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟಿದ್ದ 29 ವರ್ಷದ ಯುವಕ ಸ್ಟೋರಿ …

Read More »

ಚಿಕ್ಕೋಡಿಯಲ್ಲಿ ದೇವಿಯ ಮೂರ್ತಿಗೆ ಕಣ್ಣು ಅಂಟಿಸಿದ್ದ ಅರ್ಚಕ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಕೆಲ ದಿನಗಳಿಂದ ದೇವಿ ವಿಗ್ರಹ ಕಣ್ಣುಬಿಟ್ಟಿರುವುದೇ ಭಾರಿ ಸುದ್ದಿಯಾಗಿದೆ. ಸಂತೂಬಾಯಿ ದೇವಸ್ಥಾನದ ದೇವಿ ರಾತ್ರೋರಾತ್ರಿ ಕಣ್ಣುಬಿಟ್ಟಿದ್ದು ಅದೆಷ್ಟು ಶರವೇಗದಲ್ಲಿ ಹರಡಿತ್ತು ಎಂದರೆ ಗ್ರಾಮಸ್ಥರು ಮಾತ್ರವಲ್ಲದೇ ಅಕ್ಕಪಕ್ಕದ ಊರಿನವರೂ ಈ ಪವಾಡವನ್ನು ನೋಡಲು ತಂಡೋಪತಂಡವಾಗಿ ಬರತೊಡಗಿದರು. ಕರೊನಾ ತೊಲಗಿಸಲು ಈ ದೇವಿ ಕಣ್ಣು ಬಿಟ್ಟಿರುವುದಾಗಿ ಹೇಳಿದ್ದ ಅರ್ಚಕ, ಈ ದೇವಿಯನ್ನು ಪೂಜೆ ಮಾಡಿದರೆ ಕರೊನಾ ತೊಲಗುವುದಾಗಿ ಹೇಳಿದ್ದರು. ಆದ ಕಾರಣ …

Read More »

ಕೊರೋನಗೆ ಪೋಷಕರು ಬಲಿ ; ಬಾಲಕಿಯನ್ನು ದತ್ತು ಪಡೆಯಲು ನಿರ್ಧರಿಸಿದ ರೇಣುಕಾಚಾರ್ಯ

ದಾವಣಗೆರೆ: ಕೊರೊನಾ ಎರಡನೇ ಅಲೆಯಲ್ಲಿ ಸಾಕಷ್ಟು ಸಮಾಜ ಮುಖಿ ಕೆಲಸ ಮಾಡುವ ಮೂಲಕ ಮನೆ ಮಾತಾಗಿರುವ ಶಾಸಕ ಎಂ.ಪಿ ರೇಣುಕಾಚಾರ್ಯರವರು ಇದೀಗ ಅದೇ ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಬಾಲಕಿಯನ್ನು ದತ್ತು ಪಡೆಯಲು ನಿರ್ಧರಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ದೊಡ್ಡೇರಹಳ್ಳಿ ಗ್ರಾಮದ ಬಾಲಕಿ ಕೊರೊನಾದಿಂದ ತನ್ನ ಪೋಷಕರನ್ನು ಕಳೆದುಕೊಂಡಿದ್ದು, ಶಾಸಕ ಎಂಪಿ ರೇಣುಕಾಚಾರ್ಯ ಇಂದು ಅ ಗ್ರಾಮಕ್ಕೆ ಪತ್ನಿ ಸುಮಿತ್ರಾರವರೊಂದಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಕೆಲ …

Read More »

ಕಳ್ಳತನ ಮಾಡುವಾಗ ಮೊಬೈಲ್ ಬಳಸದ ಚಾಣಾಕ್ಷ

ಬೆಂಗಳೂರು: ಈತನ ಲವ್ವು ತನ್ನ ಲೈಫನ್ನೆ ಬದಲಿಸಿತ್ತು. ಪ್ರೀತಿಸೋದಳನ್ನ ರಾಯಲಾಗಿ ನೋಡಿಕೊಳ್ಳಬೇಕೆಂಬ ಆಸೆ ಮತ್ತು ನೆಪವೇ ಈತ ಅಫೆನ್ಸ್​ಗಳ ಮೇಲೆ ಅಫೆನ್ಸ್ ಮಾಡೋದಕ್ಕೆ ಕಾರಣವಾಯ್ತು. ಒಂದು ಬಾರಿ ಕಳ್ಳ ಎನಿಸಿಕೊಂಡವನು ಅದೇ ಚಟವಾಗಿದ್ದರಿಂದ ತನ್ನೀಡಿ ಜೀವನವನ್ನೇ ಕಳ್ಳತನಕ್ಕೆ ಮುಡಿಪಿಟ್ಟಿದ್ದ ಅಂತಹ ಕಳ್ಳನನ್ನ ಸಿಸಿಬಿ ಹೆಡೆಮುರಿ ಕಟ್ಟಿದೆ. ಬರೋಬ್ಬರಿ 80 ಲಕ್ಷ ಮೌಲ್ಯದ ಒಂದೂವರೆ ಕೆ.ಜಿ ಚಿನ್ನವನ್ನ ಈ ಕುಖ್ಯಾತ ಅಂತರ್ ರಾಜ್ಯ ಕಳ್ಳನಿಂದ ಸಿಸಿಬಿ ಅಧಿಕಾರಿಗಳು ರಿಕವರಿ ಮಾಡಿಕೊಂಡಿದ್ದಾರೆ. 2014 …

Read More »

ಕಟುಕರ ಕೈಯಿಂದ ರಕ್ಷಿಸಲ್ಪಟ್ಟ 11 ಒಂಟೆಗಳು ಮರಳಿ ರಾಜಸ್ಥಾನಕ್ಕೆ ವಾಪಾಸ್

ಮಂಡ್ಯ: ರಾಜಸ್ಥಾನದಿಂದ ರಾಜ್ಯಕ್ಕೆ ಬಕ್ರೀದ್ ವೇಳೆ ಮಾಂಸಕ್ಕೆ ಬಳಸಲು ತರುತ್ತಿದ್ದ 11 ಒಂಟೆಗಳನ್ನು ರಕ್ಷಿಸಿ, ನ್ಯಾಯಾಲಯದ ಆದೇಶದಂತೆ ಮರಳಿ ರಾಜಸ್ತಾನಕ್ಕೆ ಕಳುಹಿಸಲು ಬುಧವಾರ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಚಾಲನೆ ನೀಡಿ ಬಿಗಿ ಭದ್ರತೆಯಲ್ಲಿ ಕಳುಹಿಸಲಾಯಿತು. ಬಕ್ರೀದ್ ಸಂದರ್ಭದಲ್ಲಿ ರಾಜ್ಯಕ್ಕೆ ಮಾಂಸಕ್ಕೆ ಬಳಸಲು ಒಂಟೆಗಳನ್ನು ತರಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರದ ಚಿಂತಾಮಣಿ ಬಳಿ ಬರುತ್ತಿದ್ದಾಗ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ದಯಾನಂದ ಸ್ವಾಮೀಜಿ ಹಾಗೂ …

Read More »

ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಓಡಿದ ಆಸ್ಪತ್ರೆ ವೈದ್ಯ, ಸಿಬ್ಬಂದಿ

ಹುಬ್ಬಳ್ಳಿ: ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಯೊಬ್ಬರು ಮೃತಪಟ್ಟ ಪರಿಣಾಮ ಆಕ್ರೋಶಗೊಂಡ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ನಗರದ ಜನತಾ ಬಜಾರದಲ್ಲಿರುವ ಭಾಸ್ಕರ ರಾವ್ ಅವರ ಎಲುಬು ಕೀಲು ಮತ್ತು ಅಪಘಾತ ಚಿಕಿತ್ಸಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಉಣಕಲ್ ಗ್ರಾಮದ ಶಾಂತಮ್ಮ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ನಂತರ ಮಹಿಳೆಯ ಸಂಬಂಧಿಕರು ವೈದ್ಯರ ನಿರ್ಲಕ್ಷ ಕಾರಣ ಎಂದು ಆರೋಪಿಸಿ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಸಂಬಂಧಿಕರ ಆಕ್ರೋಶ …

Read More »