Breaking News

ತಹಸೀಲ್ದಾರ್ ಗೆ 3 ತಿಂಗಳ ಜೈಲು!

ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ವಿಶೇಷ ತಹಸೀಲ್ದಾರ್ ಎಸ್.ಬಿ. ಕಾಂಬಳೆಯವರಿಗೆ ಬನಹಟ್ಟಿ ಹಿರಿಯ ದಿವಾಣಿ ನ್ಯಾಯಾಧೀಶ ಕಿರಣಕುಮಾರ ವಡಿಗೇರಿ 3 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ. ಹೌದು, ನಾವಲಗಿ ಗ್ರಾಮದ ಅಣ್ಣಪ್ಪ ಹಣಮಂತ ಮಾಂಗ ಹಾಗು ಇತರರು ಸೇರಿ ನ್ಯಾಯಾಲಯದ ನಿಂದನೆ ಪ್ರಕರಣವನ್ನು ಜಮಖಂಡಿಯಲ್ಲಿ ದಾಖಲಿಸಿದ್ದರು. ನಂತರದ ದಿನಗಳಲ್ಲಿ ಬನಹಟ್ಟಿಯಲ್ಲಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಲಯ ಸ್ಥಾಪನೆಗೊಂಡ ಕಾರಣ ಪ್ರಕರಣ ವರ್ಗಾವಣೆಗೊಂಡಿತ್ತು. ಮಾಂಗ ಎಂಬುವರು …

Read More »

ಕಳೆದ 15 ವರ್ಷದಲ್ಲಿ ಪರಪ್ಪನ ಅಗ್ರಹಾರ ಕಾರಗೃಹದಲ್ಲಿದ್ದ 11 ಕೈದಿಗಳು ಎಸ್ಕೇಪ್‌

ಬೆಂಗಳೂರು: ಕಳೆದ 15 ವರ್ಷಗಳಲ್ಲಿ ಬೆಂಗಳೂರು ಕೇಂದ್ರ ಪರಪ್ಪನ ಅಗ್ರಹಾರ ಕಾರಗೃಹದಲ್ಲಿದ್ದ ಸುಮಾರು 11 ಮಂದಿ ಕೈದಿಗಳು ಪೆರೋಲ್‌ ನೆಪದಲ್ಲಿ ಹೊರಹೋದವರು ಇದುವರೆಗೂ ಪತ್ತೆಯಾಗಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ. ಈ ಸಂಬಂಧ ಪ್ರಕರಣ ಪ್ರಕರಣ ದಾಖಲಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಕೊಲೆ, ಸುಲಿಗೆ, ಕೊಲೆ ಯತ್ನ, ದರೋಡೆ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಕೈದಿಗಳು ಪೆರೋಲ್‌ …

Read More »

ನಾಳೆಯಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್​ಸಿ ಪರೀಕ್ಷೆ ಆರಂಭ; ಕೆಲ ಮಾಹಿತಿಗಳು ಇಲ್ಲಿದೆ

ಬೆಂಗಳೂರು: ನಾಳೆಯಿಂದ (ಜುಲೈ 19) ರಾಜ್ಯಾದ್ಯಂತ ಎಸ್‌ಎಸ್‌ಎಲ್​ಸಿ (SSLC) ಪರೀಕ್ಷೆ ಆರಂಭವಾಗುತ್ತಿದೆ. ನಾಳೆ ಗಣಿತ, ವಿಜ್ಞಾನ, ಸಮಾಜ ವಿಷಯಗಳಿಗೆ ಪರೀಕ್ಷೆ ನಡೆಯುತ್ತದೆ. ಪರೀಕ್ಷೆ ಬರೆಯಲು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ ಸಮಯವಿರುತ್ತದೆ. ಪರೀಕ್ಷೆಗೆ ಒಟ್ಟು 8,76,581 ವಿದ್ಯಾರ್ಥಿಗಳ ನೊಂದಣಿಯಾಗಿದ್ದು, ಇದರಲ್ಲಿ 4,72,643 ಬಾಲಕರು ಮತ್ತು 40,39,38 ಬಾಲಕಿಯರು ಪರೀಕ್ಷೆ ಬರೆಯುತ್ತಾರೆ. 22 ರಂದು ಭಾಷಾ ವಿಷಯಗಳಿಗೆ ಪರೀಕ್ಷೆ ನಡೆಯುತ್ತದೆ. ಪ್ರತಿದಿನ ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತು ನಂತರ …

Read More »

ನಿಮ್ಮ ತಂದೆಗೆ ಹುಟ್ಟಿದ್ದರೆ ಧರ್ಮಸ್ಥಳಕ್ಕೆಹೋಗಿ ಆಣೆ ಮಾಡಿ:ದರ್ಶನ್ಗೆ ಇಂದ್ರಜಿತ್ ಮರು ಸವಾಲು

ಬೆಂಗಳೂರು : ನೀವು ನಿಮ್ಮ ತಂದೆಗೆ ಹುಟ್ಟಿದ್ದರೆ ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡೋಣ. ನೀವು ವೇಟರ್ ಗೆ ಹೊಡೆದಿಲ್ಲ ಎಂದು ಆಣೆ ಮಾಡಿ ಎಂದು ನಟ ದರ್ಶನ್ ಅವರಿಗೆ ಪತ್ರಕರ್ತ ಇಂದ್ರಜಿತ್ ಲಂಕೇಶ್ ಮರು ಸವಾಲು ಹಾಕಿದರು. ಇಂದು ಸಂಜೆ ಮಾಧ್ಯಮಗೋಷ್ಠಿ ನಡೆಸಿದ ನಟ ದರ್ಶನ್ ಅವರು ಇಂದ್ರಜಿತ್ ಲಂಕೇಶ್ ವಿರುದ್ಧ ಹರಿಹಾಯ್ದರು. ನಿಮ್ಮಪ್ಪನಿಗೆ ಹುಟ್ಟಿದ್ದರೆ ನನ್ನ ವಿರುದ್ಧದ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಇಂದ್ರಜಿತ್ ಅವರಿಗೆ ನೇರ ಸವಾಲು …

Read More »

ಅಂಗಡಿಗಳ ಮೇಲೆ ದಾಳಿ: ಪ್ರಕರಣ ದಾಖಲು

ದಾವಣಗೆರೆ: ಜಿಲ್ಲೆಯ ತಂಬಾಕು ನಿಯಂತ್ರಣ ತನಿಖಾ ದಳವು ಶುಕ್ರವಾರ ಜಿಲ್ಲೆಯ ಜಗಳೂರು ತಾಲೂಕಿನ ಬಿದರಕೆರೆಯ ಬಳಿ ಇರುವ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ 16 ಪ್ರಕರಣಗಳನ್ನುದಾಖಲಿಸಿ, 2,800 ರೂ. ದಂಡ ಸಂಗ್ರಹಿಸಿದೆ. ತಂಡವು ಜಗಳೂರು ತಾಲೂಕಿನ ಬಿದರಕೆರೆಯಹೋಟೆಲ್‌, ಬಾರ್‌, ಪಾನ್‌ಶಾಪ್‌, ಬಸ್‌ ನಿಲ್ದಾಣ ಇತ್ಯಾದಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿತಂಬಾಕು ಉತ್ಪನ್ನಗಳನ್ನು ಮಾರುವವರು ಹಾಗೂಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನುಸೇವಿಸುವವರಿಗೆ ಸ್ಥಳದಲ್ಲಿಯೇ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಿದರು. ಪ್ರಾಥಮಿಕ ಆರೋಗ್ಯ …

Read More »

ಒಂದೇ ಶ್ವಾನದಿಂದ 2 ಗಂಟೆ ಅವಧಿಯಲ್ಲಿ 15 ಜನರ ಮೇಲೆ ದಾಳಿ.. ಬೆಚ್ಚಿಬಿದ್ದ ಜನರು

ಬೆಳಗಾವಿ: ಒಂದೇ ನಾಯಿಯಿಂದ 15 ಜನರ ಮೇಲೆ ದಾಳಿ ನಡೆದಿರೋ ಘಟನೆ ಸವದತ್ತಿ ತಾಲೂಕಿನ ಮೂರು ಗ್ರಾಮಗಳಲ್ಲಿ ನಡೆದಿದೆ. ಎರಡು ಗಂಟೆ ಅವಧಿಯಲ್ಲಿ ಮೂರು ಗ್ರಾಮಗಳ 15ಜನರ ಮೇಲೆ ದಾಳಿ ನಡೆದಿದೆ. ಯರಝರವಿ, ಮಳಗಲಿ, ಹೊಸೂರ ಗ್ರಾಮಗಳಲ್ಲಿ ಹುಚ್ಚುನಾಯಿಯ ದಾಳಿ ನಡೆದಿದ್ದು.. ಮಲ್ಲವ್ವ, ಬಾಳಯ್ಯ, ಲಲಿತಾ, ಮಲ್ಲಯ್ಯ, ಸಿದ್ಧಪ್ಪ, ಸವಿತಾ ಎಂಬುವವರಿಗೆ ನಾಚಿ ಕಚ್ಚಿದೆ. ಗಾಯಗೊಂಡವರಿಗೆ ಯರಗಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಹುಚ್ಚು ನಾಯಿಯ ದಾಳಿಯಿಂದ ಗ್ರಾಮಸ್ಥರು …

Read More »

ಶಾಸಕಾಂಗ ಸಭೆ ರದ್ದು ಮಾಡಿ, ಪಕ್ಷದ ಶಾಸಕರಿಗೆ ಔತಣಕೂಟ ಆಯೋಜಿಸಿದ ಸಿಎಂ ಬಿಎಸ್ ವೈ!

ಬೆಂಗಳೂರು: ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಬೆಂಗಳೂರಿಗೆ ಬಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಜುಲೈ 26 ಕ್ಕೆ ಶಾಸಕಾಂಗ ಸಭೆ ಕರೆದಿರುವುದಾಗಿ ಈ ಹಿಂದೆ ತಿಳಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಇದೀಗ ತಮ್ಮ ಯೋಜನೆಯನ್ನು ದಿಢೀರ್ ಬದಲಿಸಿದ್ದಾರೆ. ಜುಲೈ 26ಕ್ಕೆ ಬಿ ಎಸ್ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿ ಎರಡು ವರ್ಷವಾಗುತ್ತದೆ. ಸದ್ಯ ಶಾಸಕಾಂಗ ಸಭೆಯನ್ನು ರದ್ದು ಮಾಡಿರುವ ಸಿಎಂ ಬಿಎಸ್ ವೈ ಜುಲೈ 25 ರಂದು ಸಂಜೆ ಪಕ್ಷದ …

Read More »

ಭಾರತದ ಮೊದಲ ತಂಡ ಟೋಕಿಯೊದತ್ತ ; 88 ಸದಸ್ಯರಿಗೆ ಬೀಳ್ಕೊಡುಗೆ

ಹೊಸದಿಲ್ಲಿ: ದೇಶದ ಕ್ರೀಡಾಭಿಮಾನಿಗಳ ನಿರೀಕ್ಷೆ, ಕನಸನ್ನು ಹೊತ್ತ ಭಾರತದ ಒಲಿಂಪಿಕ್ಸ್‌ ಸದ ಸ್ಯರ ಮೊದಲ ತಂಡ ಶನಿವಾರ ರಾತ್ರಿ ಟೋಕಿಯೊಗೆ ಪ್ರಯಾಣ ಬೆಳೆಸಿತು. ಇಲ್ಲಿನ “ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದಲ್ಲಿ ಇವರಿಗೆ ಯಶಸ್ಸು ಕೋರಿ ಬೀಳ್ಕೊಡಲಾಯಿತು. ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌, ಸಹಾಯಕ ಸಚಿವ ನಿಶಿತ್‌ ಪ್ರಾಮಾಣಿಕ್‌, ಐಒಎ ಅಧ್ಯಕ್ಷ ನರೀಂದರ್‌ ಬಾತ್ರಾ, ಕಾರ್ಯದರ್ಶಿ ರಾಜೀವ್‌ ಮೆಹ್ತಾ, ನಿರ್ದೇಶಕ ಸಂದೀಪ್‌ ಪ್ರಧಾನ್‌ ಮೊದಲಾ ದವರು ಈ ಸಂದರ್ಭದಲ್ಲಿ …

Read More »

ಒಲಿಂಪಿಕ್ಸ್‌ ಆರಂಭಕ್ಕೆ ಐದು ದಿನ ಬಾಕಿ ಒಟ್ಟು 44 ಮಂದಿಗೆ COVID ಸೋಂಕು

ಟೋಕಿಯೊ: ಜಾಗತಿಕ ಕ್ರೀಡಾ ಕೂಟವಾದ ಒಲಿಂಪಿಕ್ಸ್‌ ಆರಂಭಕ್ಕೆ ಐದು ದಿನ ಬಾಕಿ ಉಳಿದಿರುವಂತೆ ಒಲಿಂಪಿಕ್ಸ್‌ ಕ್ರೀಡಾ ಗ್ರಾಮದಲ್ಲಿ ಮೊದಲ ಕೋವಿಡ್‌ ಪ್ರಕರಣ ದಾಖಲಾಗಿದೆ. ಶನಿವಾರ ಕೂಟದ ಸಂಘಟಕರು ಈ ಕುರಿತು ಮಾಹಿತಿ ನೀಡಿದ್ದಾರೆ. “ಕ್ರೀಡಾ ಗ್ರಾಮದಲ್ಲಿ ಒಬ್ಬ ವ್ಯಕ್ತಿಗೆ ಸ್ಕ್ರೀನಿಂಗ್‌ ಪರೀಕ್ಷೆ ವೇಳೆ ಕೋವಿಡ್‌ ದೃಢಪಟ್ಟಿದೆ. ಇದು ಇಲ್ಲಿ ಪತ್ತೆಯಾದ ಮೊದಲ ಪ್ರಕರಣವಾಗಿದೆ’ ಎಂದು ಟೋಕಿಯೊ ಒಲಿಂಪಿಕ್ಸ್‌ ಸಂಘಟನಾ ಸಮಿತಿಯ ವಕ್ತಾರ, ಮಾಸ ಟಕಾಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸೋಂಕಿತ ವ್ಯಕ್ತಿಯ …

Read More »

ಡ್ರೋನ್‌ ನಿಯಂತ್ರಣಕ್ಕೆ ಸ್ವದೇಶಿ ವ್ಯವಸ್ಥೆ : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ

ಹೊಸದಿಲ್ಲಿ: ಜಮ್ಮು ವಿಮಾನ ನಿಲ್ದಾಣದ ವಾಯುನೆಲೆಯ ಮೇಲೆ ಪಾಕ್‌ ಪ್ರಾಯೋಜಿತ ಡ್ರೋನ್‌ ದಾಳಿಯನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಸ್ವದೇಶಿ ಡ್ರೋನ್‌ ಪ್ರತಿರೋಧ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. “ರುಸ್ತುಮ್‌ಜಿ ಸ್ಮಾರಕ ಉಪನ್ಯಾಸ’ದಲ್ಲಿ ಮಾತನಾಡಿದ ಅಮಿತ್‌ ಶಾ, ಡಿಆರ್‌ಡಿಒ ಅಥವಾ ಇತರ ಸಂಸ್ಥೆಗಳು ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. ನರೇಂದ್ರ ಮೋದಿ ಪ್ರಧಾನಿ ಆಗುವವರೆಗೆ ದೇಶಕ್ಕೆ ಸ್ವತಂತ್ರ ರಕ್ಷಣ ನೀತಿ ಇರಲಿಲ್ಲ. ಮೋದಿ ಚುಕ್ಕಾಣಿ ವಹಿಸಿದ ಬಳಿಕ …

Read More »