Breaking News

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ.. ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲ್ಲೂಕಿನ ಶಿಂಗಳಾಪುರ ಗ್ರಾಮದ ಶ್ರೀ ಸದ್ಗುರು ಸಿದ್ಧಾರೂಢ ಮಹಾರಾಜರು ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ …

Read More »

ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ, ₹10 ಲಕ್ಷ ದಂಡ

ಚಿಕ್ಕೋಡಿ: ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಅಪರಾಧಿಗೆ 10 ಲಕ್ಷ ರೂಪಾಯಿ ದಂಡದ ಜೊತೆಗೆ ಮರಣದಂಡನೆ ಶಿಕ್ಷೆ ವಿಧಿಸಿ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ಶೀಘ್ರಗತಿ ಪೊಕ್ಸೊ ನ್ಯಾಯಾಲಯ-1 ಇಂದು ಮಹತ್ವದ ತೀರ್ಪು ನೀಡಿದೆ. ನ್ಯಾಯಾಧೀಶರಾದ ಸಿ.ಎಂ.ಪುಷ್ಪಲತಾ ಅವರು ತೀರ್ಪು ನೀಡಿದ್ದಾರೆ. ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಭರತೇಶ ಮಿರ್ಜಿ(28) ಎಂಬಾತ ಕಠಿಣ ಶಿಕ್ಷೆಗೆ ಗುರಿಯಾದ ಅಪರಾಧಿ. 2019ರ ಸೆಪ್ಟೆಂಬರ್ 10ರಂದು ಕುಡಚಿ ಪೊಲೀಸ್ …

Read More »

ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ದಂಪತಿಗಳು

ಮೈಸೂರು: ಸಾಂಪ್ರದಾಯಿಕ‌ ಉಡುಗೆ ತೊಟ್ಟು ನವ ವಧುವರರಂತೆ‌ ಕಂಗೊಳಿಸುತ್ತಿದ್ದ ಜೋಡಿಗಳು ಬೆಳ್ಳಂಬೆಳಿಗ್ಗೆ ಟಾಂಗಾ ಸವಾರಿ ಮಾಡಿ, ಇತಿಹಾಸ ಸಾರುವ ಪಾರಂಪರಿಕ‌ ಕಟ್ಟಡಗಳನ್ನು ವೀಕ್ಷಿಸಿದರು. ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ರಂಗಚಾರ್ಲು ಪುರಭವನದಲ್ಲಿ ಪಾರಂಪರಿಕ‌ ಕಟ್ಟಡ ಮತ್ತು ಇತಿಹಾಸದ ಮಾಹಿತಿ, ಪಾರಂಪರಿಕ‌ ಉಡುಗೆಗಳನ್ನು ಪ್ರಚಲಿತಗೊಳಿಸುವುದು ಹಾಗೂ ನಶಿಸಿ ಹೋಗುತ್ತಿರುವ ಪಾರಂಪರಿಕ ಟಾಂಗಾಗಳ ಉಳಿಸುವಿಕೆ ಉದ್ದೇಶದಿಂದಾಗಿ ಟಾಂಗಾ ಸವಾರಿ ಆಯೋಜಿಸಲಾಗಿತ್ತು. …

Read More »

ಸಿಲಿಂಡರ್​ ಸ್ಫೋಟಕ್ಕೆ ಮನೆ ಧ್ವಂಸ; 8 ಮಂದಿಗೆ ಗಾಯ

ವಿಜಯನಗರ: ಹೊಸಪೇಟೆ ತಾಲೂಕಿನ ಗಾದಿಗನೂರಿನಲ್ಲಿ ಇಂದು ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ 8 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಸ್ಫೋಟಕ್ಕೆ ಮನೆ ಕುಸಿದು ಬಿದ್ದಿದೆ. ಮನೆಯ ಯಜಮಾನಿ ಕವಿತಾ ಅವರ ಸ್ಥಿತಿ ಗಂಭೀರವಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ. ಹೊಸಪೇಟೆ ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ವಕೀಲ ಹಾಲಪ್ಪ ಅವರಿಗೆ ಸೇರಿದ ಮನೆ ಇದು. ಮನೆಯಲ್ಲಿ ಸುಮಾರು 10 ಮಂದಿ ಇದ್ದರು. ಬೆಳಗ್ಗೆ …

Read More »

ಭುವನೇಶ್ವರಿ ಉತ್ಸವದ ಸಮಾರೋಪ…

ಭುವನೇಶ್ವರಿ ಉತ್ಸವದ ಸಮಾರೋಪ… ವಿವಿಧ ರಾಜ್ಯಗಳ ಹಬ್ಬದಾಚರಣೆಯ ನೃತ್ಯಗಳ ಪ್ರಸ್ತುತಿ ಭುವನೇಶ್ವರಿ ಉತ್ಸವದ ಸಮಾರೋಪ… ವಿವಿಧ ರಾಜ್ಯಗಳ ಹಬ್ಬದಾಚರಣೆಯ ನೃತ್ಯಗಳ ಪ್ರಸ್ತುತಿ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವಿವಿಧ ಗಣ್ಯರಿಂದ ಶ್ಲಾಘನೆ ಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲಿ ನಡೆಯುತ್ತಿದ್ದ ಭುವನೇಶ್ವರಿ ಉತ್ಸವ ಇಂದು ಸಮಾರೋಪಗೊಂಡಿತು. ಮೂರನೇಯ ದಿನವಾದ ಇಂದು ವಿವಿಧ ರಾಜ್ಯಗಳ ಹಬ್ಬಗಳನ್ನು ಆಧರಿಸಿದ ನೃತ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ನವರಾತ್ರಿಯ ನಿಮಿತ್ಯ ಆಯೋಜಿಸಿದ್ದ ನಡೆಯುತ್ತಿದ್ದ ಭುವನೇಶ್ವರಿ ಉತ್ಸವ ಇಂದು ಸಮಾರೋಪಗೊಂಡಿತು. ಸಮಾರೋಪ …

Read More »

ಶ್ರೀ ಸಂತ ಸೇನಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅಂಗವಾಗಿ ಕುಂಕುಮಾರ್ಚನೆ ಬೆಳಗಾವಿಯಲ್ಲಿ ಕುಂಕುಮಾರ್ಚಣೆ ಕಾರ್ಯಕ್ರಮ

ಶ್ರೀ ಸಂತ ಸೇನಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅಂಗವಾಗಿ ಕುಂಕುಮಾರ್ಚನೆ ಬೆಳಗಾವಿಯಲ್ಲಿ ಕುಂಕುಮಾರ್ಚಣೆ ಕಾರ್ಯಕ್ರಮ ನವರಾತ್ರಿ ಉತ್ಸವ ಅಂಗವಾಗಿ ಆಯೋಜನೆ ನೂರಾರು ಮಹಿಳೆಯರು ಭಾಗಿ ಶ್ರೀ ಸಂತ ಸೇನಾ ದೇವಸ್ಥಾನದ ಸಹಯೋಗ ಶ್ರೀ ಸಂತ ಸೇನಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅಂಗವಾಗಿ ಕುಂಕುಮಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಸಂತ ಸೇನಾ ಮಹಾರಾಜ ಸಮಾಜೋನ್ನತಿ ಸಂಘ ಮತ್ತು ಮಹಿಳಾ ಸಮಾಜೋನ್ನತಿ ಸಂಘದ ವತಿಯಿಂದ ನವರಾತ್ರಿ ಉತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಕುಂಕುಮಾರ್ಚನೆ ಕಾರ್ಯಕ್ರಮವು …

Read More »

ಮರಾಠಾ ಮಂಡಳ ಪಾಲಿಟೆಕ್ನಿಕ್‌ನಲ್ಲಿ ‘ಎ.ಎಸ್.ಎಮ್’ ಕಾರ್ಯಾಗಾರದ ಯಶಸ್ವಿ ಸಮಾರೋಪ ಎಎಸ್ಎಮ್ ಕಾರ್ಯಾಗಾರ ಯಶಸ್ವಿ

ಮರಾಠಾ ಮಂಡಳ ಪಾಲಿಟೆಕ್ನಿಕ್‌ನಲ್ಲಿ ‘ಎ.ಎಸ್.ಎಮ್’ ಕಾರ್ಯಾಗಾರದ ಯಶಸ್ವಿ ಸಮಾರೋಪ ಎಎಸ್ಎಮ್ ಕಾರ್ಯಾಗಾರ ಯಶಸ್ವಿ ಮೆಟಲರ್ಜಿಯಲ್ಲದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೌಢಶಿಕ್ಷಣ ಕರ್ನಾಟಕದಲ್ಲಿ ಎಎಸ್ಎಮ್ ಚಾರ್ಟರ್ ಪಡೆದ ಮೊದಲ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ತಜ್ಞರ ಮಾರ್ಗದರ್ಶನ ಅಮೆರಿಕನ್ ಸೋಸೈಟಿ ಫಾರ್ ಮೆಟಲರ್ಜಿಯ ಆಶ್ರಯದಲ್ಲಿ, ಮರಾಠಾ ಮಂಡಳ ಪಾಲಿಟೆಕ್ನಿಕ್, ಬೆಳಗಾವಿಯಲ್ಲಿ ‘ಮೆಟಲರ್ಜೀ ಫಾರ್ ನಾನ್ ಮೆಟಲರ್ಜಿಸ್ಟ್’ ವಿಷಯದ ಮೇಲೆ ಮೂರು ದಿನಗಳ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. ಕರ್ನಾಟಕದಲ್ಲಿ ಎಎಸ್ಎಮ್ ಚಾರ್ಟರ್ ಪಡೆದ ಮೊದಲ ಪಾಲಿಟೆಕ್ನಿಕ್ ಎಂಬ …

Read More »

ಇಂದಿನಿಂದ ಸಮೀಕ್ಷೆ ಚುರುಕು, ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಇಲ್ಲ: ಸಿಎಂ

ಬೆಂಗಳೂರು: ಇವತ್ತಿನಿಂದ ಸರ್ವೆ ಕಾರ್ಯ ಚುರುಕಾಗಿ ಆಗಲಿದೆ. ಯಾವುದೇ ಕಾರಣಕ್ಕೂ ಸಮೀಕ್ಷೆಯ ಅವಧಿ ವಿಸ್ತರಣೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿ ಬಗ್ಗೆ ಕೃಷ್ಣಾದಲ್ಲಿಂದು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು. ಸಮೀಕ್ಷೆ ವಿಚಾರಕ್ಕೆ ಡಿಸಿ, ಸಿಇಒಗಳ ಜೊತೆಗೆ ಸಭೆ ನಡೆಸಿದ್ದೇವೆ. ರಾಜ್ಯದ ಏಳು ಕೋಟಿ ಜನರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮಾಡುತ್ತಿದ್ದೇನೆ. ಆರಂಭಿಕ ನಾಲ್ಕು ದಿನಗಳಲ್ಲಿ ತಾಂತ್ರಿಕ …

Read More »

ಸಚಿವ ಬೈರತಿ ಸುರೇಶ್​ PA ಸೋಗಿನಲ್ಲಿ ದಾವಣಗೆರೆ DCಗೇ ವಂಚನೆ: ಆರೋಪಿ ಸೆರೆ

ದಾವಣಗೆರೆ: ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಜಿಲ್ಲಾಧಿಕಾರಿಗೆ ವಂಚಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮೂರ್ತಿ ಅಲಿಯಾಸ್ ಅಭಿಷೇಕ್ ದೊಡ್ಡಮನಿ (20) ಬಂಧಿತ ಆರೋಪಿ. ತಾನು ಸಚಿವ ಬೈರತಿ ಸುರೇಶ್ ಆಪ್ತ ಸಹಾಯಕ ಎಂದು ಡಿಸಿಗೆ ಕರೆ ಮಾಡಿದ್ದ ಅಭಿಷೇಕ್ ದೊಡ್ಡಮನಿ, ಸರ್ಕಾರಿ ಸೌಲಭ್ಯ ದುರುಪಯೋಗ ಪಡಿಸಿಕೊಂಡ ಹಿನ್ನೆಲೆ ಬಂಧಿಸಲಾಗಿದೆ.‌ ಬಂಧಿತ ಆರೋಪಿ ಕಾರವಾರದವನಾಗಿದ್ದು, ದಾವಣಗೆರೆಗೆ ಆಗಮಿಸಿ ಈ ಕೃತ್ಯ ಎಸಗಿದ್ದ. ಆಗಿದ್ದೇನು? ಜಿಲ್ಲಾಧಿಕಾರಿ ಡಾ. ಜಿ.ಎಂ. …

Read More »

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಮೇಲೆ ಅಧಿಪತ್ಯ ಸಾಧಿಸಲು ಎರಡು ಪ್ರಬಲ ರಾಜಕೀಯ ಕುಟುಂಬಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.

ಬೆಳಗಾವಿ: ಇದು ಭಾರತದ ಮೊಟ್ಟ ಮೊದಲ ಮತ್ತು ಕರ್ನಾಟಕದ ಏಕೈಕ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ. ಕಳೆದ 56 ವರ್ಷಗಳಿಂದ ಸಹಕಾರ ತತ್ವದಡಿ ಸಂಘ ಮುನ್ನಡೆಯುತ್ತಿದೆ. ಇದನ್ನು ಹುಟ್ಟು ಹಾಕಿದ್ದು, ಓರ್ವ ಸಹಕಾರಿ ಭೀಷ್ಮ. ಆ ಮಹಾನಾಯಕನ ದೂರದೃಷ್ಟಿಯ ಫಲದಿಂದ ಲಕ್ಷಾಂತರ ಕುಟುಂಬಗಳಿಗೆ ಬೆಳಕು ಸಿಕ್ಕಿದೆ. ಸಾವಿರಾರು ಕುಟುಂಬಗಳಿಗೆ ಉದ್ಯೋಗದ ಆಸರೆ ದಕ್ಕಿದೆ. ಈಗ ಸಂಘದ ಮೇಲೆ ಅಧಿಪತ್ಯ ಸಾಧಿಸಲು ಎರಡು ಪ್ರಬಲ ರಾಜಕೀಯ ಕುಟುಂಬಗಳ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ರಾಜ್ಯದ …

Read More »