ಮೈಸೂರು: ಯಶಸ್ವಿಯಾಗಿ ದಸರಾ, ಜಂಬೂಸವಾರಿ ಮುಗಿಸಿದ ಅಭಿಮನ್ಯು ನೇತೃತ್ವದ ಗಜಪಡೆಗೆ ಅರಮನೆಯ ಅವರಣದಲ್ಲಿ ಇಂದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಶಿಬಿರಗಳಿಗೆ ಬೀಳ್ಕೊಡಲಾಯಿತು. 14 ಆನೆಗಳು ಅವುಗಳ ಮಾವುತರು, ಕಾವಾಡಿಗರನ್ನು ಕೋಡಿ ಸೋಮೇಶ್ವರ ದೇವಾಲಯದ ಬಳಿ ಅರಣ್ಯ ಇಲಾಖೆ ಬೀಳ್ಕೊಟ್ಟಿತು. ಆನೆಗಳನ್ನು ನೋಡಲು ಸೇರಿದ್ದ ಜನರು ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಆನೆಗಳು ನಿರ್ಗಮಿಸುತ್ತಿರುವುದನ್ನು ನೋಡುತ್ತಾ ಭಾವುಕರಾದರು. ಕಳೆದ 60 ದಿನಗಳಿಂದಲೂ ಗಜಪಯಣದ ಮೂಲಕ ಎರಡು ಹಂತಗಳಲ್ಲಿ ಆಗಮಿಸುವ ಆನೆಗಳು ಕೋಡಿ ಸೋಮೇಶ್ವರ …
Read More »ರಾಜ್ಯ ಹೈಕೋರ್ಟ್, ಇಸ್ರೇಲ್ ರಾಯಭಾರ ಕಚೇರಿಗೆ ಬೆದರಿಕೆ ಇ – ಮೇಲ್: ಪ್ರಕರಣ ದಾಖಲು
ಬೆಂಗಳೂರು: ಇಸ್ರೇಲ್ ರಾಯಭಾರ ಕಚೇರಿ ಹಾಗೂ ಹೈಕೋರ್ಟ್‌ನಲ್ಲಿ ಸ್ಫೋಟಕ ಇರಿಸಿರುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದ ಕಿಡಿಗೇಡಿ ವಿರುದ್ಧ ಹಲಸೂರು ಹಾಗೂ ವಿಧಾನಸೌಧ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 19 ರಂದು ಇ- ಮೇಲ್ ಸ್ವೀಕರಿಸಲಾಗಿದ್ದು, ಪೊಲೀಸರು ತಪಾಸಣೆ ನಡೆಸಿದಾಗ ಇದೊಂದು ಹುಸಿ ಬೆದರಿಕೆ ಎಂದು ದೃಢಪಟ್ಟಿದೆ. ಆರ್ಡಿಎಕ್ಸ್ ಇರಿಸಿರುವ ಬಗ್ಗೆ ಬೆದರಿಕೆ: ಇ-ಮೇಲ್ ಖಾತೆಯಿಂದ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಇಸ್ರೇಲ್ ರಾಯಭಾರ ಕಚೇರಿ ಹಾಗೂ ಹೈಕೋರ್ಟ್‌ಗೆ ಪ್ರತ್ಯೇಕವಾಗಿ ಮೇಲ್ ಕಳುಹಿಸಿರುವ ಕಿಡಿಗೇಡಿ, …
Read More »ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಅಹವಾಲು ಸ್ವೀಕಾರ: ಕರ್ನಾಟಕ ರಾಜ್ಯೋತ್ಸವಕ್ಕಾಗಿ 2 ಕೋಟಿ ಅನುದಾನಕ್ಕೆ ಬೇಡಿಕೆ..!
ಬೆಳಗಾವಿ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಬಳಿಕ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ, ಬೆಳಗಾವಿಯಲ್ಲಿ ಅದ್ಧೂರಿಯಾಗಿ ಆಚರಿಸುವ ಕರ್ನಾಟಕ ರಾಜ್ಯೋತ್ಸವಕ್ಕೆ 2 ಕೋಟಿ ಅನುದಾನ ಸೇರಿ ವಿವಿಧ ಬೇಡಿಕೆಗಳ ಪಟ್ಟಿಯನ್ನು ಕನ್ನಡ ಹೋರಾಟಗಾರರು ಮುಖ್ಯಮಂತ್ರಿಗಳ ಮುಂದಿಟ್ಟರು. ಬೇಡಿಕೆಗಳ ದೊಡ್ಡ ಪಟ್ಟಿಯನ್ನು ಸಿಎಂ ಮುಂದಿಟ್ಟ ಹೋರಾಟಗಾರರು: ಬೆಳಗಾವಿಯಲ್ಲಿ ನಡೆಯುವ ರಾಜ್ಯೋತ್ಸವ ರಾಜ್ಯದಲ್ಲಿಯೇ ಅತ್ಯಂತ ಅದ್ಧೂರಿಯಾಗಿ ನಡೆಯುವ ಉತ್ಸವವಾಗಿದ್ದು, ಬೆಳಗಾವಿ ರಾಜ್ಯೋತ್ಸವಕ್ಕೆ ಪ್ರತಿವರ್ಷ ಎರಡು ಕೋಟಿ …
Read More »ಅ.9ರಿಂದ ಹಾಸನಾಂಬೆ ದರ್ಶನ: ವಾಟ್ಸ್ಆ್ಯಪ್ ಮೂಲಕ ಟಿಕೆಟ್ ಬುಕ್ಕಿಂಗ್ಗೆ ಅವಕಾಶ
ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ನೀಡುವ ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ 5 ದಿನ ಮಾತ್ರವಿದ್ದು, ಈ ಬಾರಿ ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗಿವೆ. 13 ದಿನ ದರ್ಶನ ಭಾಗ್ಯ: ಅಕ್ಟೋಬರ್ 9ಕ್ಕೆ ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲು ತೆರೆಯಲಿದ್ದು, 23ರ ವರೆಗೂ ದೇವಿ ದರ್ಶನಕ್ಕೆ ಅವಕಾಶ ಸಿಗಲಿದೆ. 15 ದಿನ ದೇಗುಲದ ಬಾಗಿಲು ತೆರದಿರಲಿದೆ. ಆದರೆ, ಮೊದಲ ಮತ್ತು ಕೊನೆಯ ದಿನ ಹೊರತುಪಡಿಸಿ …
Read More »ಒಂಟಿ ಮನೆಯಲ್ಲಿ ದರೋಡೆ
ದಾವಣಗೆರೆ: ಅಪರಿಚಿತರನ್ನು ನಂಬಬೇಡಿ, ಒಂಟಿ ಮನೆ ಇದ್ದರೆ ಸಿಸಿ ಕ್ಯಾಮರಾ ಅಳವಡಿಕೆ ಮಾಡಿ ಎಂದು ಪೊಲೀಸರು ಮನವಿ ಮಾಡಿ ಜಾಗೃತಿ ಮೂಡಿಸಿದ್ರು, ಸುರಕ್ಷತೆ ಬಗ್ಗೆ ಜನರು ಜಾಗೃತರಾಗುತ್ತಿಲ್ಲ. ನಿರ್ಲಕ್ಷ್ಯ ವಹಿಸಿ ಅವರ ಪ್ರಾಣಕ್ಕೆ ಅಪಾಯ ತಂದೊಡ್ಡಿಕೊಳ್ಳುತ್ತಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಒಂಟಿಮನೆಗಳನ್ನೇ ದರೋಡೆಕೋರರು ಟಾರ್ಗೆಟ್ ಮಾಡುತ್ತಿದ್ದು, ಈ ಪ್ರಕರಣಗಳು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿವೆ. ದಾವಣಗೆರೆ ತಾಲೂಕಿನ ಕಾರಿನಗೂರು ಕ್ರಾಸ್ ಬಳಿ ಇರುವ ಒಂಟಿ ಮನೆಯಲ್ಲಿ ದರೋಡೆ ನಡೆದಿದೆ. ಗ್ರಾಮದ ಬೆಸ್ಕಾಂ ನಿವೃತ್ತ ಇಂಜಿನಿಯರ್ …
Read More »ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ: ಡಿಸಿಎಂ
ಬೆಂಗಳೂರು: ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ ಹಾಗೂ ಕಸವನ್ನು ಎಸೆಯುವರನ್ನು ಗುರುತಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಶನಿವಾರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಹಾಗೂ ರಸ್ತೆ ದುರಸ್ತಿಗಳನ್ನು ಅತ್ಯಂತ ವೇಗವಾಗಿ ಅಧಿಕಾರಿಗಳು ಮಾಡುತ್ತಿದ್ದಾರೆ. ದಸರಾ ರಜೆ ಇದ್ದ ಕಾರಣಕ್ಕೆ ಎಲ್ಲೆಂದರಲ್ಲಿ ಕಸದ ಸಮಸ್ಯೆ ಹೆಚ್ಚಿದೆ. ಇದಕ್ಕೂ …
Read More »ದಕ್ಷಿಣ ಕನ್ನಡ ಬಜರಂಗದಳ ಜಿಲ್ಲಾ ಮುಖಂಡ ಭರತ್ ಕುಮ್ಡೇಲು ಸೇರಿ 14 ಮಂದಿ ವಿರುದ್ಧ ಕೋಕಾ ಕೇಸ್ ದಾಖಲು
ಬಂಟ್ವಾಳ(ದಕ್ಷಿಣ ಕನ್ನಡ): ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಬಜರಂಗದಳ ಜಿಲ್ಲಾ ಮುಖಂಡ ಭರತ್ ಕುಮ್ಡೇಲು ಹಾಗೂ ಬಂಧಿತ 13 ಆರೋಪಿಗಳ ವಿರುದ್ಧ ಸಂಘಟಿತ ಅಪರಾಧ ತಡೆ ಕಾಯ್ದೆ(KCOCA Act) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ತಿಳಿಸಿದ್ದಾರೆ. ಮೇ 27ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ದುಲ್ ರಹಿಮಾನ್ ಎಂಬ ವ್ಯಕ್ತಿಯ ಕೊಲೆಯಾಗಿತ್ತು. ಈ ಪ್ರಕರಣದ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ …
Read More »ಸಾಮಾಜೀಕ ಉಪಕ್ರಮದೊಂದಿಗೆ ಅರ್ಥಪೂರ್ಣ ಪ್ರಥಮ ವಾರ್ಷಿಕೋತ್ಸವ ಆಚರಿಸಿದ ಜೋಸ್ ಆಲುಕ್ಕಾಸ್ ಆಭರಣಗಳ ಖರೀದಿ ಮೇಲೂ ಅ. 10 ವರೆಗೆ ವಿಶೇಷ ಆಫರ್…
ಸಾಮಾಜೀಕ ಉಪಕ್ರಮದೊಂದಿಗೆ ಅರ್ಥಪೂರ್ಣ ಪ್ರಥಮ ವಾರ್ಷಿಕೋತ್ಸವ ಆಚರಿಸಿದ ಜೋಸ್ ಆಲುಕ್ಕಾಸ್ ಆಭರಣಗಳ ಖರೀದಿ ಮೇಲೂ ಅ. 10 ವರೆಗೆ ವಿಶೇಷ ಆಫರ್… ಜೋಸ್ ಆಲುಕ್ಕಾಸ್ ಪ್ರಥಮ ವಾರ್ಷಿಕೋತ್ಸವ ಸಾಮಾಜೀಕ ಉಪಕ್ರಮದೊಂದಿಗೆ ಅರ್ಥಪೂರ್ಣ ಆಚರಣೆ ಆಭರಣಗಳ ಖರೀದಿ ಮೇಲೂ ಅ. 10 ವರೆಗೆ ವಿಶೇಷ ಆಫರ್… ವಿವಿಧ ಗಣ್ಯರಿಂದ ಶುಭ ಹಾರೈಕೆ ಬೆಳಗಾವಿಯಲ್ಲಿ ಕಳೆದ ಒಂದು ವರ್ಷದಿಂದ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ ಗ್ರಾಹಕರ ವಿಶ್ವಾಸಕ್ಕೆ ಕಾರಣವಾದ ಜೋಸ್ ಆಲುಕ್ಕಾಸ್ ತನ್ನ …
Read More »ಕೇಂದ್ರ ಸಚಿವ ಪ್ರಲ್ಹಾದ ಜೋಷಿಯವರನ್ನು ಭೇಟಿ ಮಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ- ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರನ್ನು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಭೇಟಿ ಮಾಡಿದರು. ನಗರದ ಕೆಎಲ್ಇ ನಿರ್ದೇಶಕ ಜಯಾನಂದ ಮುನವಳ್ಳಿಯವರ ನಿವಾಸದಲ್ಲಿ ಸಚಿವ ಜೋಷಿಯವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಇಬ್ಬರು ಸುದೀರ್ಘವಾದ ರಾಜಕೀಯ ಚರ್ಚೆಯನ್ನು ನಡೆಸಿದರು. ಬಾಲಚಂದ್ರ ಜಾರಕಿಹೊಳಿಯವರ ಸ್ವ- ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಾಲಚಂದ್ರ ಜಾರಕಿಹೊಳಿಯವರು ಪ್ರಲ್ಹಾದ ಜೋಷಿಯವರನ್ನು ಸತ್ಕರಿಸಿ ಗೌರವಿಸಿದರು. ಈ ಸಂದರ್ಭದಲ್ಲಿ …
Read More »ಮೂಡಲಗಿ ತಾಲ್ಲೂಕಿನ ಪಿಕೆಪಿಎಸ್ ಅಧ್ಯಕ್ಷರ ಸಭೆ:ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಶೀಘ್ರ- ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*
*ಬಿಡಿಸಿಸಿ ಬ್ಯಾಂಕಿನ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಶೀಘ್ರ- ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ* ಗೋಕಾಕ- ಅಕ್ಟೋಬರ್ 19 ರಂದು ನಡೆಯುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಕ್ಷೇತ್ರದಿಂದ ಮೂರ್ನಾಲ್ಕು ದಿನಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಗುವುದು. ನಾವು ಒಮ್ಮತದಿಂದ ಆಯ್ಕೆ ಮಾಡುವ ಅಭ್ಯರ್ಥಿಗಳಿಗೆ ತಮ್ಮೆಲ್ಲರ ಸಹಕಾರ ಅವಶ್ಯವಾಗಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ಇಲ್ಲಿನ ಎನ್ಎಸ್ಎಫ್ ಕಾರ್ಯಾಲಯದಲ್ಲಿ …
Read More »
Laxmi News 24×7