Breaking News

: ಪರಿಹಾರ ಹಣಕ್ಕಾಗಿ ಪಂಚ ಗ್ಯಾರಂಟಿ, ಐಪಿ ಸೆಟ್ ಸಹಾಯಧನ ಕಡಿತ?

ಬೆಂಗಳೂರು: ಕೃಷ್ಣ ಮೇಲ್ದಂಡೆ ಯೋಜನೆ ಹಂತ-3ರ ಯೋಜನೆಯಡಿಯ ಭೂಸ್ವಾಧೀನ, ಪುನರ್ವಸತಿಗಾಗಿ ಪರಿಹಾರ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ವಾರ್ಷಿಕ 18,000 ಕೋಟಿ ರೂ.ರಂತೆ ನಾಲ್ಕು ವರ್ಷದ ಬಜೆಟ್​ನಲ್ಲಿ ಅನುದಾನ ಹಂಚಿಕೆ ಮಾಡಿ ಪರಿಹಾರ ನೀಡಲು ತೀರ್ಮಾನಿಸಿದೆ. ಆದರೆ, ಈ ಹಣ ಹೊಂದಿಸಲು ಪಂಚ ಗ್ಯಾರಂಟಿ, ಕೃಷಿ ಐಪಿ ಸೆಟ್ ಸಹಾಯಧನಕ್ಕೆ ಕತ್ತರಿ ಹಾಕುವ ಆಯ್ಕೆ ಸೇರಿದಂತೆ ಮೂರು ಕಠಿಣ ಆಯ್ಕೆಗಳನ್ನು ಹಣಕಾಸು ಇಲಾಖೆ ಸರ್ಕಾರದ ಮುಂದಿಟ್ಟಿದೆ.‌ ಮಹತ್ವಾಕಾಂಕ್ಷೆಯ ಕೃಷ್ಣ …

Read More »

ಸ ಸಂಗ್ರಹಿಸುವ ವಾಹನದಿಂದ ಆದಾಯ: ಟಿಪ್ಪರ್​ಗಳ ಮೂಲಕ ಜಾಹೀರಾತು ಪ್ರಸಾರಕ್ಕೆ ಮುಂದಾದ ಹುಬ್ಬಳ್ಳಿ-ಧಾರವಾಡ ಪಾಲಿಕೆ

ಹುಬ್ಬಳ್ಳಿ (ಧಾರವಾಡ): ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ನಿತ್ಯವೂ ಮನೆ ಮನೆಯಿಂದ ಕಸ ಸಂಗ್ರಹಿಸಲು ಆಟೋ ಟಿಪ್ಪರ್‌ಗಳನ್ನು ನಿಯೋಜನೆ ಮಾಡಲಾಗಿದೆ. ಈ ಟಿಪ್ಪರ್​ಗಳು ನಿತ್ಯ ನಗರದ ಎಲ್ಲ ಮಾರ್ಕೆಟ್ ಹಾಗೂ ಬಡಾವಣೆಯಲ್ಲಿ ಕಸ ಸಂಗ್ರಹ ಮಾಡುತ್ತವೆ‌. ಈ ಟಿಪ್ಪರ್ ಗಳಿಂದ ವಾಣಿಜ್ಯ ಜಾಹೀರಾತು ಪ್ರಸಾರಕ್ಕೆ ಬಳಕೆ ಮಾಡುವ ಮೂಲಕ ಆದಾಯಗಳಿಸಲು ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ. ಅವಳಿ ನಗರದಲ್ಲಿ 300ಕ್ಕೂ ಹೆಚ್ಚಿರುವ ಆಟೋ ಟಿಪ್ಪರ್‌ಗಳಲ್ಲಿ ಈಗಾಗಲೇ ಆಡಿಯೋ ಸಂದೇಶವನ್ನು ಪ್ರಸಾರ …

Read More »

ನಟ ದರ್ಶನ್​ ಅಭಿಮಾನಿಗಳಿಂದ ರಮ್ಯಾಗೆ ಅವಹೇಳನ ಪ್ರಕರಣ; ಆರೋಪಿಗಳಿಗೆ ಷರತ್ತುಬದ್ಧ ಜಾಮೀನು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಲ್ಲಿ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅಲಿಯಾಸ್​ ದಿವ್ಯ ಸ್ಪಂದನಾ ಅವರನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಅವಹೇಳನಕಾರಿ ಪದಗಳಿಂದ ನಿಂದಿಸಿದ ಆರೋಪದಲ್ಲಿ ಬಂಧನಕ್ಕೆ ಗುರಿಯಾಗಿದ್ದ ಆರು ಮಂದಿ ಆರೋಪಿಗಳಿಗೆ ಹೈಕೋರ್ಟ್​ ಜಾಮೀನು ಮತ್ತು ಒಬ್ಬರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಬಂಧಿತರಾದ ಕೆ. ಪ್ರಮೋದ್, ಮಂಜುನಾಥ್​, ಸಿ.ವೈ.ರಾಜೇಶ್​, ಟಿ.ಓಬಣ್ಣ, ಕೆ.ಎಂ.ಗಂಗಾಧರ್, ಚಿನ್ಮಯ್ ಶೆಟ್ಟಿ ಜಾಮೀನು …

Read More »

ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಟೂರ್ನಮೆಂಟ್‌

ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡಾ. ಪುನೀತ್ ರಾಜ್‌ಕುಮಾರ್ ಗೋಕಾಕ ವಾರ್ಡ್‌ವೈಸ್ ಕ್ರಿಕೆಟ್ ಟೂರ್ನಮೆಂಟ್‌ನ ರೋಚಕ ಪಂದ್ಯಾವಳಿಯನ್ನು ಇಂದು ತಂದೆಯವರು ಹಾಗೂ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ಅವರೊಂದಿಗೆ ವೀಕ್ಷಿಸಿ, ಉತ್ಸಾಹಭರಿತ ಕ್ಷಣಗಳನ್ನು ಆನಂದಿಸಿದೆವು.

Read More »

ಸತೀಶ ಅಣ್ಣ ಆಲ್ ಇಂಡಿಯಾ ಓಪನ್ ಫೈಡೆ ರಾಪಿಡ್ ರೇಟಿಂಗ್ ಚೆಸ್ ಟೂರ್ನಮೆಂಟ್” ಅಕ್ಟೋಬರ್ 25 ಮತ್ತು 26ರಂದು

ಅಕ್ಟೋಬರ್ 25 ಮತ್ತು 26ರಂದು ಬೆಳಗಾವಿಯ ಮಹಾವೀರ ಭವನದಲ್ಲಿ ನಡೆಯಲಿರುವ “ಸತೀಶ ಅಣ್ಣ ಆಲ್ ಇಂಡಿಯಾ ಓಪನ್ ಫೈಡೆ ರಾಪಿಡ್ ರೇಟಿಂಗ್ ಚೆಸ್ ಟೂರ್ನಮೆಂಟ್” ಕುರಿತು ಇಂದು ಪತ್ರಿಕಾಗೋಷ್ಠಿ ನಡೆಸಿ ಟ್ರೋಫಿ ಅನಾವರಣ ಮಾಡಿದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ.. ಸತೀಶ ಅಣ್ಣ ಫ್ಯಾನ್ಸ್ ಕ್ಲಬ್ ಹಾಗೂ ಬೆಳಗಾವಿ ಜಿಲ್ಲಾ ಚೆಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಲಾದ ಈ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಎಲ್ಲಾ ಚೆಸ್ ಪ್ರೇಮಿಗಳನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ.

Read More »

ತಾವೇ ವ್ಯಕ್ತಿಗೆ ವಿಮೆ ಮಾಡಿಸಿ ಹತ್ಯೆ ಮಾಡಿ ಅಪಘಾತದ ನಾಟಕ: ಆರೋಪಿಗಳು ಅಂದರ್

ಹಾವೇರಿ: ಜಮೀನು, ಮನೆ, ವಿಮೆ ಹಣಕ್ಕಾಗಿ ವ್ಯಕ್ತಿಯ‌ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಹೊರಟ ಕಿಡಿಗೇಡಿಗಳನ್ನು ಬಂಧಿಸಲಾಗಿದೆ. ಸೆಪ್ಟೆಂಬರ್​ 27ರಂದು ರಟ್ಟಿಹಳ್ಳಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಕೊಲೆ ಮಾಡಲಾಗಿತ್ತು. 38 ವರ್ಷದ ಬಸವರಾಜ್​ ಪುಟ್ಟಪ್ಪನವರ್ ಕೊಲೆಗೀಡಾದ ವ್ಯಕ್ತಿ. ಬಸವರಾಜ್ ಮಾವ ರಾಘವೇಂದ್ರ ಮಾಳಗೊಂಡರ, ಸಿದ್ದನಗೌಡ ಹಲಗೇರಿ, ಪ್ರವೀಣ ಮತ್ತು ಲೋಕೇಶ್​ ಆರೋಪಿಗಳು. ಈ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣದ ಆರಂಭದಲ್ಲಿ ಮೃತ ಬಸವರಾಜ್ ಸಾವಿನ ಬಗ್ಗೆ …

Read More »

ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ

ಬೆಂಗಳೂರು: ತನ್ನಿಬ್ಬರು ಮಕ್ಕಳನ್ನು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಗುಂಟೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ನಡೆದಿದೆ. ಬೃಂದಾ (4) ಹಾಗೂ ಭುವನ್ (1) ಕೊಲೆಗೀಡಾದ ಮಕ್ಕಳು. ವಿಜಯಲಕ್ಷ್ಮಿ (35) ಆತ್ಮಹತ್ಯೆ ಮಾಡಿಕೊಂಡ ತಾಯಿ. ಗುರುವಾರ ರಾತ್ರಿ ವಿಜಯಲಕ್ಷ್ಮಿ ಅವರ ಸಹೋದರಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ರಾಯಚೂರಿನವರಾದ ವಿಜಯಲಕ್ಷ್ಮಿ ಹಾಗೂ ರಮೇಶ್ ಐದು ವರ್ಷದ ಹಿಂದೆ …

Read More »

DCC ಬ್ಯಾಂಕ್ ಚುನಾವಣೆ: ನಾಮಪತ್ರ ಸಲ್ಲಿಸಿದ ಸವದಿ, ಕಾಗೆ

ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ರಾಜು ಕಾಗೆ ಹಾಗೂ ನಾನು ಕೂಡಿ ಒಂದು ಬಣ ಮಾಡಿದ್ದೇವೆ. ನಮ್ಮಲ್ಲಿಗೆ ಬರುವವರನ್ನು ಸ್ವಾಗತಿಸುತ್ತೇವೆ. ಹೋಗುತ್ತೇವೆ ಎನ್ನುವವರಿಗೆ ಧನ್ಯವಾದ ಸಲ್ಲಿಸುತ್ತೇವೆ ಎನ್ನುವ ಮೂಲಕ ನಾವು ರೇಸ್​​ನಲ್ಲಿದ್ದೇವೆ ಎಂಬ ಸಂದೇಶವನ್ನು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. ಪ್ರತಿದಿನ ಘಟಾನುಘಟಿ ನಾಯಕರು ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದು, ಇಂದು ಶುಕ್ರವಾರ ಅಥಣಿ ತಾಲೂಕಿನಿಂದ ಲಕ್ಷ್ಮಣ ಸವದಿ, ಕಾಗವಾಡ ತಾಲೂಕಿನಿಂದ ರಾಜು ಕಾಗೆ ತಮ್ಮ ಉಮೇದುವಾರಿಕೆ …

Read More »

ಶಾಲೆ ಮೇಲೆ ಅದೇನ ಪ್ರೀತಿ..ಅದೇನ ಅಭಿಮಾನ.

ದಿನ ಬೆಳಗಾದರೆ ಶತಮಾನೋತ್ಸವ ಆಚರಿಸಿಕೊಳ್ಳಲು ಸನ್ನದ್ಧವಾಗಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳವಿ… ಊರಿನ ಹಿರಿಯರು..ಹಳೆಯ ವಿದ್ಯಾರ್ಥಿಗಳು.. ಯುವಕರು ಸೇರಿಕೊಂಡು.. ನಾಡಿಗೆ ಮಾದರಿ ಆಗುವ ನಿಟ್ಟಿನಲ್ಲಿ… ಅತ್ಯಂತ ಹುರುಪು ಮತ್ತು ಉತ್ಸಾಹದಿಂದ..ಮೂರು ದಿನಗಳ ಅದ್ಧೂರಿ ಕಾರ್ಯಕ್ರಮ… ಊರ ಜನರು ಶಾಲೆ ಮೇಲೆ ಅದೇನ ಪ್ರೀತಿ..ಅದೇನ ಅಭಿಮಾನ.. ಅಂತೀರಾ…ನಿಮ್ಮ ಕಡೆ ಹಳ್ಯಾಗ ಊರು ದೇವರ ಜಾತ್ರೆಗೆ ಈಡಿ ಊರಿಗೆ ಊರೇ… ಪಟ್ಟಿ ಕೂಡಿಸಿ ಊರ ಸಿಂಗಾರ ಮಾಡಿ…. ಖುಷಿ ಅನುಭವಿಸುವ ಹಾಗೆ.. …

Read More »

ಮೂಡಲಗಿ ವಲಯದ ಅತಿಥಿ ಶಿಕ್ಷಕರ ವೇತನ ವಿತರಿಸಿದ ಸರ್ವೋತ್ತಮ ಜಾರಕಿಹೊಳಿ*

ಗೋಕಾಕ-* ಧಾರವಾಡ ವಲಯದಲ್ಲಿಯೇ ಮೂಡಲಗಿ ಶೈಕ್ಷಣಿಕ ವಲಯದ ಸಾಧನೆಯನ್ನು ಮೆಚ್ಚುವಂತಹದ್ದು, ಅದರಲ್ಲಿಯೂ ಅತಿಥಿ ಶಿಕ್ಷಕರನ್ನು ಇಟ್ಟುಕೊಂಡು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಸ್ಥಳೀಯ ಲಕ್ಷ್ಮೀ ಎಜ್ಯುಕೇಷನ್ ಟ್ರಸ್ಟ್ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿಯವರು ಹೇಳಿದರು. ಇಲ್ಲಿನ ಎನ್ಎಸ್ಎಫ್ ಕಚೇರಿಯಲ್ಲಿ ಶ್ರೀಮತಿ ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ‌ ಮೆಮೋರಿಯಲ್ ಟ್ರಸ್ಟ್ ಆಯೋಜಿಸಿದ್ದ ಮೂಡಲಗಿ ವಲಯದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರಿಗೆ ಗೌರವ ಸಂಭಾವನೆ …

Read More »