Breaking News

ಬೇಸಿಗೆ ವೇಳೆ ಪ್ರಯಾಣಿಕರ ಓಡಾಟ ಹೆಚ್ಚಿರುವ ಕಾರಣ, ದಟ್ಟಣೆ ನಿರ್ವಹಣೆಗಾಗಿ ನೈಋತ್ಯ ರೈಲ್ವೆ ವಿಶೇಷ ಸೇವೆ

ಹುಬ್ಬಳ್ಳಿ : ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆಯು ಬೆಳಗಾವಿ- ಮವೂ (Belagavi-Mau) ನಡುವೆ 6 ಟ್ರಿಪ್ ಮತ್ತು ಹುಬ್ಬಳ್ಳಿ – ಕಟಿಹಾರ್ (Hubli – Katihar) ನಡುವೆ 4 ಟ್ರಿಪ್ ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲಿದೆ. ಈ ವಿಶೇಷ ರೈಲುಗಳ ಸೇವೆ ಈ ಕೆಳಗಿನಂತಿವೆ. 1. ಬೆಳಗಾವಿ-ಮವೂ ನಡುವೆ 6 ಟ್ರಿಪ್ ವಿಶೇಷ ರೈಲು (07327/07328) ಸಂಚಾರ: ರೈಲು ಸಂಖ್ಯೆ 07327 ಏಪ್ರಿಲ್ 6 ರಿಂದ ಮೇ …

Read More »

ಸ್ನೇಹಿತೆ ಜೊತೆ ಮಾತನಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ

ಹಾವೇರಿ: ಸ್ನೇಹಿತೆಯ ಜೊತೆ ಮಾತನಾಡಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿಗಳನ್ನು ಹಾವೇರಿ ಶಹರ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ಅರುಣ್ ಬಡ್ನಿ, 24 ವರ್ಷದ ನಾಗರಾಜ್ ದೊಡ್ಡವಾಡ , 27 ವರ್ಷದ ಅಕ್ಷಯ್ ಹಾಗೂ 26 ವರ್ಷದ ಚೇತನ್ ಬಂಧಿತ ಆರೋಪಿಗಳಾಗಿದ್ದಾರೆ. ಹಲ್ಲೆ ಹಿಂದಿನ ಕಾರಣ ಇದು: ಹಾವೇರಿಯ ಖಾಸಗಿ ಕಾಲೇಜಿನ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಚೇತನ್ ಅರಗೋಳ್ ಎಂಬ ಯುವಕನನ್ನ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು. ಖಾಸಗಿ ಕಾಲೇಜ್ ವೊಂದರ …

Read More »

ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ ಎಐಸಿಸಿ ಕಾರ್ಯದರ್ಶಿ ಮಾಜಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್

ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ ಎಐಸಿಸಿ ಕಾರ್ಯದರ್ಶಿ ಮಾಜಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಖಾನಾಪೂರದ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಹುಟ್ಟುಹಬ್ಬದ ನಿಮಿತ್ಯ ಶುಭಾಶಯಗಳನ್ನು ಕೋರಿದರು ತದನಂತರದಲ್ಲಿ ಕಂದಾಯ ಇಲಾಖೆಯ ಯೋಜನೆಗಳನ್ನು ಸಾರ್ವಜನಿಕರಿಗೆ ಕೆಳಮಟ್ಟದಿಂದ ತಲುಪಲು, ರೈತರಿಗೆ ಬಡ ಮಧ್ಯಮ ವರ್ಗದ ಜನರಿಗೆ ತಲುಪಲು ಇಲಾಖೆಯ ಅಧಿಕಾರಿಗಳಿಗೆ ಸಹಕರಿಸಲು ಸೂಚನೆ …

Read More »

ಜಿಲ್ಲಾಧಿಕಾರಿ ಮೊಹ್ಮದ ರೋಷನ್ ಅವರನ್ನು ಸನ್ಮಾನಿಸಿ ಆಶೀರ್ವದಿಸಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

ಬೆಳಗಾವಿ : ಜಿಲ್ಲಾಧಿಕಾರಿ ಮೊಹ್ಮದ ರೋಷನ್ ಅವರನ್ನು ಸನ್ಮಾನಿಸಿ ಆಶೀರ್ವದಿಸಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬೆಳಗಾವಿ ಜಿಲ್ಲಾಧಿಕಾರ ಮೊಹಮ್ಮದ್ ರೋಷನ್ ಅವರಿಗೆ ಶುಕ್ರವಾರ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಗೌರವಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಬೆಳಗಾವಿ ಜಿಲ್ಲೆ ತುಂಬಾ ದೊಡ್ಡ ಜಿಲ್ಲೆ. ಇಲ್ಲಿ ಎಲ್ಲಾ ಸಂಪ್ರದಾಯದ ಮಠ, ಮಾನ್ಯಗಳು ಒಳ್ಳೆಯ ಕಾರ್ಯ ಮಾಡುತ್ತಿದೆ. ಅದರಲ್ಲಿಯೂ …

Read More »

ಬಿಸಿಲಿನ ತಾಪಮಾನ ಹೆಚ್ಚಾಗಿರುವ ಜಿಲ್ಲೆಗಳ ಅಂಗನವಾಡಿ ಕೇಂದ್ರಗಳ ಸಮಯ‌ ಬದಲಾವಣೆ

ಬಿಸಿಲಿನ ತಾಪಮಾನ ಹೆಚ್ಚಾಗಿರುವ ಜಿಲ್ಲೆಗಳ ಅಂಗನವಾಡಿ ಕೇಂದ್ರಗಳ ಸಮಯ‌ ಬದಲಾವಣೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶ ಬೆಂಗಳೂರು: ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವ ಬೆಳಗಾವಿ ವಿಭಾಗದ ವಿಜಯಪುರ ಹಾಗೂ ಬಾಗಲಕೋಟೆ, ಬೆಂಗಳೂರು ವಿಭಾಗದ ಚಿತ್ರದುರ್ಗ ಜಿಲ್ಲೆ ಹಾಗೂ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಅಂಗನವಾಡಿ ಕೇಂದ್ರಗಳ ಅವಧಿಯನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 1.30 ರವರೆಗೆ ನಿಗದಿಪಡಿಸಲಾಗಿದೆ. 3 ಅಂಗನವಾಡಿ ಕೇಂದ್ರಗಳಲ್ಲಿ ಐಸಿಡಿಎಸ್ …

Read More »

ಖೆಲೋ ಇಂಡಿಯಾ ಪ್ಯಾರಾ ಗೇಮ್ಸ್’ನ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಸುವರ್ಣಪದಕ

ಖೆಲೋ ಇಂಡಿಯಾ ಪ್ಯಾರಾ ಗೇಮ್ಸ್’ನ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಸುವರ್ಣಪದಕ ಕೆಪಿಟಿಸಿಎಲ್ ಎ ಇ. ಸಂಜೀವ್ ಹಮ್ಮಣ್ಣನವರ ಅವರನ್ನು ಸನ್ಮಾನಿಸಿದ ಸಚಿವೆ ಹೆಬ್ಬಾಳ್ಕರ್ ರಾಜಧಾನಿ ದೆಹಲಿಯಲ್ಲಿ ನಡೆದ ಖೆಲೋ ಇಂಡಿಯಾ ಪ್ಯಾರಾ ಗೇಮ್ಸ್’ನ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಸುವರ್ಣಪದಕ ಪಡೆದ ಬೆಳಗಾವಿ ಕೆಪಿಟಿಸಿಎಲ್ ಎಕ್ಸಿಕ್ಯೂಟ್ಹಿವ್ ಇಂಜಿನಿಯರ್ ಸಂಜೀವ್ ಹಮ್ಮಣ್ಣನವರ ಅವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸನ್ಮಾನಿಸಿದರು. ಬೆಳಗಾವಿಯ ಕೆಪಿಟಿಸಿಎಲ್ ನಲ್ಲಿ ಎಕ್ಸಿಕ್ಯೂಟಿವ್ (ಇಲೆಕ್ಟ್ರಿಕಲ್) …

Read More »

ವಿಕಲಚೇತನ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ!

ತುಮಕೂರು, (ಏಪ್ರಿಲ್ 03): ಸರ್ಕಾರಿ ನೌಕರನೋರ್ವ (government employee) ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಬಳಿಕ ತಾನು ಸಹ ಆತ್ಮಹತ್ಯೆ (Suiicde) ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ. ಘಟನೆ ನಡೆದ 24 ಗಂಟೆಯಲ್ಲೇ ತುಮಕೂರಿನಲ್ಲಿ (Tumakuru) ಮಹಿಳೆಯೋರ್ವಳು(Woman) ತನ್ನಿಬ್ಬರು ಮಕ್ಕಳ ಜತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಾಯಿ ವಿಜಯಲಕ್ಷ್ಮೀ(45), ಮಗಳು ಚೂಡಾಮಣಿ(23), ಪುತ್ರ ನರಸಿಂಹರಾಜು(14) ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅದಲಗೆರೆ ಗ್ರಾಮದಲ್ಲಿ ಈ ದುರಂತ ನಡೆದಿದೆಪತಿ ಮಹದೇವಯ್ಯ ಮನೆಯಲ್ಲಿ ಇಲ್ಲದಿದ್ದಾಗ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರು …

Read More »

ಜಮೀನಿನಲ್ಲಿ ಎರಡು ‌ನಾಡಬಾಂಬ್ ಪತ್ತೆ

ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಜಲ್ಲಾಪುರ ಗ್ರಾಮದಲ್ಲಿ ಎರಡು ‌ನಾಡಬಾಂಬ್ ಪತ್ತೆಯಾಗಿದೆ.ಒಂದು ನಾಡಬಾಂಬ್ ಅನ್ನು ಕಚ್ಚಿ ಶ್ವಾನ ಸಾವನ್ನಪ್ಪಿದೆ. ಪ್ರಾಣಿಗಳನ್ನು ಬೇಟೆಯಾಡಲು ಬೇಟೆಗಾರರು ನಾಡಬಾಂಬ್ ಇಟ್ಟಿರುವ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಗ್ರಾಮದ ಮಲ್ಲಿಕಾರ್ಜುನ ಗೌಡ ಎಂಬವರ ಜಮೀನಿನಲ್ಲಿ ನಾಡಬಾಂಬ್​ಗಳು ಪತ್ತೆಯಾಗಿವೆ. ನಾಡಬಾಂಬ್​ಗಳಿಗೆ ಪ್ರಾಣಿಯ ಕೊಬ್ಬು ಸವರಿದ್ದರಿಂದ ನಾಯಿ ಕಚ್ಚಿದೆ ಎನ್ನಲಾಗುತ್ತಿದೆ. ಸ್ಫೋಟಕ ಅಧಿನಿಯಮದ ಅಡಿಯಲ್ಲಿ ವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದವರು ಭೇಟಿ ನೀಡಿ …

Read More »

ಜಿಲ್ಲಾಧಿಕಾರಿ ಕಚೇರಿಯೆದುರು ನಮಾಜ್ ಮಾಡಿದ ವೃದ್ಧೆ; ಸೆಕ್ಯುರಿಟಿ ಸಸ್ಪೆಂಡ್

ನವದೆಹಲಿ, ಏಪ್ರಿಲ್ 3: ದೇಶಾದ್ಯಂತ ಸೋಮವಾರ ಈದ್ (Eid 2025) ಆಚರಿಸಲಾಗಿತ್ತು. ಇದೇ ವೇಳೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ 71 ವರ್ಷದ ಮಹಿಳೆಯೊಬ್ಬರು ‘ನಮಾಜ್’ (Namaz) ಸಲ್ಲಿಸಿದರು. ಈಗಾಗಲೇ ಉತ್ತರ ಪ್ರದೇಶ ಸರ್ಕಾರ ರಸ್ತೆಗಳು, ಫುಟ್​ಪಾತ್​ನಲ್ಲಿ ನಮಾಜ್ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಆದರೆ, ಮುನ್ನಿ ಎಂದು ಗುರುತಿಸಲಾದ ವೃದ್ಧೆ ಹಮೀರ್‌ಪುರದ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ನಮಾಜ್ ಮಾಡಿದರು. ಹೀಗಾಗಿ ಅವರ ಮೇಲೆ ಕೇಸ್ ದಾಖಲಿಸಲಾಗಿದೆ ಮತ್ತು ಆ ವೇಳೆ ಕರ್ತವ್ಯದಲ್ಲಿದ್ದ ಸೆಕ್ಯುರಿಟಿಯನ್ನು …

Read More »

ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್: ಬೆಳಗಾವಿಯ 7 ವಿದ್ಯಾರ್ಥಿಗಳು ಆಯ್ಕೆ

ಬೆಳಗಾವಿ: ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ(SGFI) ಆಯೋಜಿಸಿರುವ ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್​ಗೆ ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದ 7 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಮಣಿಪುರದ ಇಂಫಾಲ್​ನಲ್ಲಿ‌ ಏಪ್ರಿಲ್ 6ರಿಂದ ಸ್ಪರ್ಧೆ ನಡೆಯಲಿದೆ. ಕರ್ನಾಟಕದಿಂದ 20 ಕ್ರೀಡಾಪಟುಗಳು ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್​ಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ಏಳು ಮಂದಿ ಬೆಳಗಾವಿ ಜಿಲ್ಲೆಯವರಾಗಿದ್ದರೆ. ಅದರಲ್ಲೂ‌ಹಳ್ಳಿ ಪ್ರತಿಭೆಗಳೇ ಎನ್ನುವುದು ಮತ್ತೊಂದು ವಿಶೇಷ. ಈ ಏಳು ಕ್ರೀಡಾಪಟುಗಳಲ್ಲಿ ಐವರು ಕಡೋಲಿ ಗ್ರಾಮದವರು. ಕಡೋಲಿ …

Read More »