ಬೆಂಗಳೂರು, ಮೈಸೂರು, ಗದಗ ಸೇರಿದಂತೆ ಹಲವು ನಗರಗಳ ದೇಗುಲಗಳಲ್ಲಿ ಮೈಕ್ ಮೂಲಕ ಸುಪ್ರಭಾತ ಹಾಕಲಾಯಿತು. ಕೆಲವೆಡೆ ಭಕ್ತರು ಭಜನೆ ಮಾಡಿದರು. ಆದರೆ ಚಿತ್ರದುರ್ಗ, ಬಾಗಲಕೋಟೆ, ಕಲಬುರ್ಗಿ, ಕೋಲಾರ ವಿಜಯಪುರ ಸೇರಿದಂತೆ ಹಲವು ನಗರಗಳಲ್ಲಿ ದೇಗುಲಗಳ ಕಡೆಗೆ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಬರಲಿಲ್ಲ. ಹೀಗಾಗಿ ಅಭಿಯಾನವೂ ಸದ್ದು ಮಾಡಲಿಲ್ಲ. ವಿವಾದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಧಾರ್ಮಿಕ ಸ್ಥಳಗಳ ಮೈಕ್ಗಳಿಂದ ಹೊಮ್ಮುವ ಧ್ವನಿಯು ಎಷ್ಟು ಡೆಸಿಬಲ್ ಇರಬೇಕು ಎನ್ನುವ …
Read More »ಸ್ವಲ್ಪ ಹೊತ್ತು ನೋಡಿಕೊಳ್ಳಿ ಎಂದು ಯುವಕನಿಗೆ 9 ತಿಂಗಳ ಮಗು ಕೊಟ್ಟು ಮಹಿಳೆ ಪರಾರಿ!.. ಮುಂದೇನಾಯ್ತು?
ಮೈಸೂರು: ಮಹಿಳೆಯೊಬ್ಬರು 9 ತಿಂಗಳ ಮಗುವನ್ನು ಯುವಕನ ಕೈಗೆ ಕೊಟ್ಟು ನಾಪತ್ತೆಯಾಗಿದ್ದು, ಬಳಿಕ ಯುವಕ ಕಂದಮ್ಮನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾನೆ. ಮೈಸೂರಿನ ಯುವಕ ರಘು ವೈಯಕ್ತಿಕ ಕೆಲಸಕ್ಕಾಗಿ ರಾಯಚೂರಿಗೆ ತೆರಳಿದ್ದ. ಕೆಲಸ ಮುಗಿಸಿ ಮೈಸೂರಿಗೆ ಹಿಂದಿರುಗಲೆಂದು ರಾಯಚೂರಿನ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದ. ಈ ಸಂದರ್ಭದಲ್ಲಿ ಆತನ ಬಳಿ ಬಂದ ಮಧ್ಯವಯಸ್ಕ ಮಹಿಳೆಯೊಬ್ಬಳು ತನ್ನ ಬಳಿಯಿದ್ದ 9 ತಿಂಗಳ ಮಗುವನ್ನು ಆತನ ಕೈಗಿಟ್ಟು ಸ್ವಲ್ಪ ಹೊತ್ತು ನೋಡಿಕೊಳ್ಳಿ, ವಾಪಸ್ ಬರುತ್ತೇನೆ ಎಂದು …
Read More »ಪಕ್ಷದ ಬ್ಯಾನರ್ ನಂತಿದೆ ಎಂದು ಸರ್ಕಾರ ಕೊಟ್ಟ ಸೀರೆಯನ್ನ ಸಾರಾಸಗಟಾಗಿ ತಿರಸ್ಕರಿಸಿದ ಅಂಗನವಾಡಿ ಕಾರ್ಯಕರ್ತೆಯರು,
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು(Anganwadi Workers) ರಾಜ್ಯ ಸರ್ಕಾರ ನೀಡುತ್ತಿರುವ ಸೀರೆಗಳನ್ನು ತಿರಸ್ಕರಿಸಿದ್ದಾರೆ. ಪ್ರಧಾನಮಂತ್ರಿಯವರ ಬಹುಮುಖ್ಯ ಕಾರ್ಯಕ್ರಮವಾದ ಪೋಷಣ್ ಅಭಿಯಾನದಡಿ (Poshan Campaign-National Nutrition Mission) ವಿತರಿಸಲು ಮುಂದಾಗಿರುವ ಸೀರೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ನಿರಾಕರಿಸಿದ್ದಾರೆ. ಈ ಸೀರೆಗಳು ಸರ್ಕಾರದ ಪ್ರಚಾರಕ್ಕೆ ಬಳಸುವ ಬ್ಯಾನರ್ನಂತಿವೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಹೀಗಾಗಿ ಸೀರೆ ಪಡೆಯಲು ಅಂಗನವಾಡಿ ಕಾರ್ಯಕರ್ತೆಯರು ಹಿಂದೇಟು ಹಾಕಿದ್ದಾರೆ. ಸುಮಾರು 10 ಕೋಟಿ ಮೌಲ್ಯದ 2.5 ಲಕ್ಷಕ್ಕೂ ಹೆಚ್ಚು ಸೀರೆಗಳನ್ನು ರಾಜ್ಯದ …
Read More »ಉದ್ಘಾಟನೆಗೊಂಡ ಎರಡೇ ತಿಂಗಳಲ್ಲಿ ಧರೆಗುರುಳಿದ ಸ್ಟೇಡಿಯಂ ಗ್ಯಾಲರಿ!
ಬೆಂಗಳೂರು: ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಉದ್ಘಾಟನೆಗೊಂಡ ಎರಡೇ ತಿಂಗಳಲ್ಲಿ ಅಟಲ್ ಬಿಹಾರಿ ವಾಹಪೇಯಿ ಕ್ರೀಡಾಂಗಣದ ಗ್ಯಾಲರಿ ನೆಲಕ್ಕುರುಳಿದೆ. ನಾಲ್ಕು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಕ್ರೀಡಾಂಗಣವನ್ನು ಮಾರ್ಚ್ 1 ರಂದು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದರು. ನಿನ್ನೆ ಸಂಜೆ ಬೀಸಿದ ಬಿರುಗಾಳಿ ಮಳೆಗೆ ಗ್ಯಾಲರಿ ಧರೆಗುರುಳಿದೆ. ಒಂದು ಗ್ಯಾಲರಿ ಮರಗಳಲ್ಲಿ ಸಿಲುಕ್ಕಿದ್ದರೇ ಮತ್ತೊಂದು ಗ್ಯಾಲರಿ ಸೀದಾ ಧರೆಗುರುಳಿದೆ. ಗ್ಯಾಲರಿ ಹಿಂಭಾಗದಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೂ ಕಬ್ಬಿಣದ ಸರಳುಗಳು ಬಿದ್ದಿವೆ. ಗ್ರಾನೈಟ್ ಸಮೇತ …
Read More »ಬೆಳಗ್ಗಿನ ಜಾವದ ಅಝಾನ್ ಎಲ್ಲರ ನಿದ್ದೆ ಹಾಳು ಮಾಡುತ್ತದೆ.: ಚಕ್ರವರ್ತಿ ಸೂಲಿಬೆಲೆ,
ಮಂಗಳೂರು : ಪ್ರತಿ ನಾಗರಿಕನಿಗೆ ತೊಂದರೆಯಾಗದಂತೆ ನೋಡಿಕೊಳ್ಳೋದು ಸರ್ಕಾರದ ಜಬಾವ್ದಾರಿ. ಆದರೆ ದುರಾದೃಷ್ಟವಶಾತ್ ಸರ್ಕಾರ ಮುಂದೆ ಎಷ್ಟೇ ಮೊರೆ ಹೋದರೂ ಇದು ಸಾಧ್ಯವಾಗಿಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ, ರಾಜ್ಯದಲ್ಲಿ ಆಝಾನ್ ವಿರುದ್ಧ ಸುಪ್ರಭಾತ ಅಭಿಯಾನದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗ್ಗಿನ ಅಜಾನ್ ಜಾತ್ಯಾತೀತ ರಾಷ್ಟ್ರಕ್ಕೆ ಹೇಳಿ ಮಾಡಿಸಿರೋದು ಅಲ್ಲ. ಅಲ್ಲಾ ಒಬ್ಬನೇ. ದೇವರು ಬೇರೆ ಯಾರೂ ದೇವರಿಲ್ಲ ಅನ್ನೋದನ್ನು ಪ್ರತಿಯೊಬ್ಬ ಹಿಂದೂ ಕೇಳೋಕೆ ಸಾಧ್ಯ ಇಲ್ಲ. ಬೆಳಗ್ಗಿನ ಜಾವದ …
Read More »ಆಪರೇಷನ್ ಕಮಲದ ಸದ್ದು ಮತ್ತೆ ಕೇಳಿಬರುತ್ತಿದೆ
ಬೆಂಗಳೂರು,ಮೇ 9- ಇನ್ನೇನು ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಉಳಿದಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಸದ್ದು ಮಾಡಲು ಶುರುಮಾಡಿದೆ. ಹಲವು ನಾಯಕರ ಬಿಜೆಪಿ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ್ದ ಕಂದಾಯ ಸಚಿವ ಆರ್. ಅಶೋಕ್, ಇದು ಮೊದಲನೇ ಪಟ್ಟಿ, ಇನ್ನು ಮತ್ತೊಂದು ಹಂತದಲ್ಲಿ ಮತ್ತೆ ಸೇರ್ಪಡೆ ಕಾರ್ಯಕ್ರಮವಿದೆ ಎಂಬ ಸುಳಿವು ನೀಡಿದ್ದಾರೆ. ಸಹಜವಾಗಿ ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಹಳೆ ಮೈಸೂರು …
Read More »ಡಿಜಿಟಲ್ ಮೂಲಕ 78 ಲಕ್ಷ ಸದಸ್ಯತ್ವ ನೋಂದಣಿ: ರಾಜ್ಯದಲ್ಲಿ ಬಲ ಹೆಚ್ಚಿಸಿಕೊಂಡ ಕಾಂಗ್ರೆಸ್
ಬೆಂಗಳೂರು: ಕಾಂಗ್ರೆಸ್ ಆರಂಭಿಸಿರುವ ಡಿಜಿಟಲ್ ಸದಸ್ಯತ್ವ ಅಭಿಯಾನವು ರಾಜ್ಯದಲ್ಲಿ ಪಕ್ಷದ ನೈತಿಕ ಬಲ ಹೆಚ್ಚಾಗುವಂತೆ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಈಗಾಗಲೇ 78 ಲಕ್ಷಕ್ಕೂ ಅಧಿಕ ಮಂದಿ ಡಿಜಿಟಲ್ ಸದಸ್ಯತ್ವದಲ್ಲಿ ನೋಂದಣಿ ಮಾಡಿಕೊಂಡಿದ್ದು, ಈ ಸಂಖ್ಯೆ ಇನ್ನೂ ಹೆಚ್ಚುತ್ತಲೇ ಇದೆ. ದೇಶದಾದ್ಯಂತ 2.6 ಕೋಟಿ ಜನರು ಡಿಜಿಟಲ್ ಸದಸ್ಯತ್ವದಲ್ಲಿ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ ಶೇ.30ರಷ್ಟು ಭಾಗ ರಾಜ್ಯದಿಂದಲೇ ಆಗಿದೆ. ಈ ಪ್ರಕ್ರಿಯೆಯ ಮೂಲಕ, ಪಕ್ಷವು ರಾಜ್ಯದಾದ್ಯಂತ …
Read More »‘ಜೆಡಿಎಸ್’ ಮತ್ತೊಂದು ವಿಕೆಟ್ ಪತನ.? ಸ್ವ ಪಕ್ಷದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ‘ಪರಿಷತ್ ಸದಸ್ಯ’.!
ಬೆಂಗಳೂರು: ಈಗಾಗಲೇ ಜೆಡಿಎಸ್ ನಿಂದ ಹಲವರು ಹೊರ ಹೋಗಿದ್ದಾರೆ. ವಿಧಾನಸಭಾ ಚುನಾವಣೆಗೆ ( Karnataka Assembly Election ) ಒಂದು ವರ್ಷ ಬಾಕಿ ಇರುವಾಗಲೇ, ಪಕ್ಷದಿಂದ ಹೊರ ಹೋಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಸಂದರ್ಭದಲ್ಲಿಯೇ ಮತ್ತೊಬ್ಬ ವಿಧಾನ ಪರಿಷತ್ ಸದಸ್ಯ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ( HD Devegowdha ) ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( HD Kumaraswamy …
Read More »ಪ್ರಮೋದ್ ಮುತಾಲಿಕ್ ರನ್ನು ಮೊದಲು ಒದ್ದು ಒಳಗೆ ಹಾಕಬೇಕು : ಹೆಚ್.ಡಿ.ಕುಮಾರಸ್ವಾಮಿ
ಬಾಗಲಕೋಟೆ : ರಾಜ್ಯದಲ್ಲಿ ಅಜಾನ್ ವಿರುದ್ಧ ಪರ್ಯಾಯವಾಗಿ ಶ್ರೀರಾಮಸೇನೆ ಸುಪ್ರಭಾತ ಅಭಿಯಾನ ಹಮ್ಮಿಕೊಂಡಿದ್ದು, ಈ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಮೊದಲು ಮುತಾಲಿಕ್ ರಂತವರನ್ನು ಒದ್ದು ಒಳಗೆ ಹಾಕಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಶಾಂತಿ ಉಳಿಸೋದು ಕಷ್ಟವಾಗುತ್ತದೆ ಎಂದರು. ರಾಜ್ಯ ಸರ್ಕಾರ …
Read More »ಬಾದಾಮಿಯಲ್ಲಿ ಸಿದ್ದರಾಮಯ್ಯ ಎದುರಾಳಿ ಘೋಷಿಸಿದ ಎಚ್‌ಡಿಕೆ
ಬಾಗಲಕೋಟೆ, ಮೇ 09; ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬಾದಾಮಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಿದರು. ಬಾದಾಮಿ ಕ್ಷೇತ್ರದ ಹಾಲಿ ಶಾಸಕರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಸೋಮವಾರ ಎಚ್. ಡಿ. ಕುಮಾರಸ್ವಾಮಿ ಬಾದಾಮಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿದರು. 2023ರ ಚುನಾವಣೆಗೆ ಬಾದಾಮಿಯಿಂದ ಹನುಮಂತ ಮಾವಿನಮರದ್ ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದರು. 2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮೈಸೂರಿನ ಚಾಮುಂಡೇಶ್ವರಿ, ಬಾಗಲಕೋಟೆಯ ಬಾದಾಮಿ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಬಾದಾಮಿಯಲ್ಲಿ …
Read More »