ನವದೆಹಲಿ, ಮೇ. 11: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಈ ಬಾರಿಯ ದೆಹಲಿ ಭೇಟಿ ಫಲಪ್ರದ ಕೊಡುವ ಮುನ್ಸೂಚನೆ ನೀಡಿದೆ. ಸಂಪುಟ ಪುನಾರಚನೆಗೆ ಕೇಂದ್ರ ವರಿಷ್ಠರು ಗ್ರೀನ್ ಸಿಗ್ನಲ್ ಸಿಗಲಿದ್ದು, ಹಾಲಿ ಸಚಿವರಲ್ಲಿ ನಡುಕ ಹುಟ್ಟಿಸಿದೆ. ಸಚಿವ ಸ್ಥಾನ ಅಕಾಂಕ್ಷಿಗಳಲ್ಲಿ ಸಂತಸ ಮನೆ ಮಾಡಿದೆ. ಸಂಪುಟ ಪುನಾರಚನೆಯಾದರೆ ಐವರು ಸಚಿವರು ಸಚಿವಗಿರಿ ಕಳೆದುಕೊಳ್ಳಲಿದ್ದು, ಹತ್ತು ಮಂದಿ ನೂತನ ಸಚಿವರು ಬೊಮ್ಮಾಯಿ ಕ್ಯಾಬಿನೆಟ್ ಸೇರಲಿದ್ದಾರೆ. ಸಚಿವ ಸ್ಥಾನ ಅಲಂಕರಿಸುವವರ ಸಂಭಾವ್ಯ …
Read More »ಮೂಡಲಗಿ ತಾಲೂಕಿನ ಸತ್ತಿಗೇರಿ ಮಡ್ಡಿಯಲ್ಲಿ ಮಸೀದಿ (Masjid) ಮೈಕ್ ಹತ್ತಿರ ಕೇಸರಿ ಧ್ವಜ
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸತ್ತಿಗೇರಿ ಮಡ್ಡಿಯಲ್ಲಿ ಮಸೀದಿ (Masjid) ಮೈಕ್ ಹತ್ತಿರ ಕೇಸರಿ ಧ್ವಜ ಕಟ್ಟಿದ್ದಾರೆ. ಮಂಗಳವಾರ ತಡರಾತ್ರಿ ನಡೆದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ರಾತ್ರಿ ಹೊತ್ತಿಗೆ ಮಸೀದಿ ಮೇಲೆ ಕೇಸರಿ ಧ್ವಜ ಕಟ್ಟಿದ್ದಾರೆ. ಹಿಂದೂ-ಮುಸ್ಲಿಂ ಮುಖಂಡರ ಸಮ್ಮುಖದಲ್ಲಿ ಗ್ರಾಮಸ್ಥರು ಧ್ವಜವನ್ನು ಇಳಿಸಿದ್ದಾರೆ. ಗ್ರಾಮದಲ್ಲಿ ಸದ್ಯ ವಾತಾವರಣ ಶಾಂತವಿದ್ದು, ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ಈ ಗ್ರಾಮದಲ್ಲಿ ಎಲ್ಲ ಸಮುದಾಯವರು ಸೇರಿ ಒಟ್ಟು 645 ಜನರು …
Read More »ಅಂಚೆ ಇಲಾಖೆಯಿಂದ 38926 ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ: ಭಾರತೀಯ ಅಂಚೆ ವೃತ್ತವು ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಿದೆ. ಖಾಲಿ ವಿವರಗಳು ಆಸಕ್ತಿ ಹೊಂದಿರುವ ಆ ಅಭ್ಯರ್ಥಿಗಳು & ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿ ಅಧಿಸೂಚನೆಯನ್ನು ಓದಬಹುದು & ಆನ್ಲೈನ್ ಅನ್ವಯಿಸಬಹುದಾಗಿದೆ. ಅರ್ಜಿ ಶುಲ್ಕ : ಯುಆರ್ / ಒಬಿಸಿ / ಇಡಬ್ಲ್ಯೂಎಸ್ ಪುರುಷರಿಗೆ: 100 ರೂ. ಮಹಿಳಾ, ಎಸ್ಸಿ / ಎಸ್ಟಿ ಅಭ್ಯರ್ಥಿಗಳು ಮತ್ತು ವಿಕಲಚೇತನ ಅಭ್ಯರ್ಥಿಗಳು: ಶೂನ್ಯ ಪಾವತಿ ವಿಧಾನ: ಕ್ರೆಡಿಟ್ / …
Read More »ಕಾಂಗ್ರೆಸ್ಸ ಹೊಸ ತಂತ್ರಗಾರಿಕೆ: ರಾಜ್ಯದಿಂದ ಪ್ರಿಯಾಂಕಾ ಗಾಂಧಿ ಕಣಕ್ಕೆ?
ಹೈಕಮಾಂಡ್ ಮಟ್ಟದಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಳ್ಳಬೇಕಾದರೆ ಕಾಂಗ್ರೆಸ್ಸಿನಲ್ಲಿ ಗಾಂಧಿ/ ನೆಹರೂ ಕುಟುಂಬದ ಜೊತೆಗೆ ಉತ್ತಮ ನಂಟಿರಬೇಕು. ಇದು ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್‌ನಲ್ಲಿರುವ ಅಲಿಖಿತ ಕಾನೂನು. ಇದೇ ವಾರಾಂತ್ಯದಲ್ಲಿ ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ ಚಿಂತನಾ ಸಭೆ ಆಯೋಜಿಸಲಾಗಿದೆ. ಮುಂಬರುವ ಚುನಾವಣೆಗಳು, ರಾಷ್ಟ್ರಾಧ್ಯಕ್ಷರ ನೇಮಕ ಮತ್ತು ಪಕ್ಷದ ಮುಂದಿನ ಕಾರ್ಯಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಈ ಸಭೆ ಮಹತ್ವವನ್ನು ಪಡೆದುಕೊಂಡಿದೆ. ರಾಜ್ಯದಿಂದಲೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ …
Read More »545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ವಿಚಾರ; ಕಾಂಗ್ರೆಸ್ ಮಾಜಿ ಸಚಿವನ ಆಪ್ತ ಶರತ್ ಅರೆಸ್ಟ್!
ಮಂಡ್ಯ: 545ಪಿಎಸ್‌ಐಹುದ್ದೆಗಳ (PSI Recruitment) ನೇಮಕಾತಿಯಲ್ಲಿ ನಡೆದ ಅಕ್ರಮದ ಬಗ್ಗೆ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯಲ್ಲಿ ಕಲಬುರಗಿ ಜೊತೆ ಬೇರೆ ಬೇರೆ ಜಿಲ್ಲೆಗಳಲ್ಲೂ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನು ಈ ಅಕ್ರಮಕ್ಕೆ ಸಂಬಂಧಿಸಿ ಮಂಡ್ಯದ ಮಾಜಿ ಸಚಿವರ ಆಪ್ತನ್ನು ಬಂಧಿಸಲಾಗಿದೆ. ಶರತ್ ರಾಮಣ್ಣ ಎಂಬಾತನನ್ನು ಸಿಐಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶರತ್ ಮಂಡ್ಯ ಜಿಲ್ಲೆಯ ನಾಗಮಂಗಲದವನು. ಈತ ಮಾಜಿ ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ, ಮಾಜಿ …
Read More »ಸಮುದ್ರದಲ್ಲಿ ತೇಲಿ ಬಂತು ʻನಿಗೂಢ ಚಿನ್ನದ ಬಣ್ಣದ ರಥʼ!.
ಶ್ರೀಕಾಕುಳಂ (ಆಂಧ್ರಪ್ರದೇಶ): ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಸಮುದ್ರ ಬಂದರಿನಲ್ಲಿ ಅಸಾನಿ ಚಂಡಮಾರುತದ ಪ್ರಭಾವದ ನಡುವೆ ಮಂಗಳವಾರ ನಿಗೂಢವಾದ ಚಿನ್ನದ ಬಣ್ಣದ ರಥವೊಂದು ದಡ ಸೇರಿದೆ. ಇದು ಮಂಗಳವಾರ ಈ ಪ್ರದೇಶದಲ್ಲಿ ಅಸಾನಿ ಚಂಡಮಾರುತದ ಪ್ರಭಾವದ ನಡುವೆ ದಡಕ್ಕೆ ತೇಲಿ ಬಂದಿದೆ. ಈ ವೇಳೆ ದಡದಲ್ಲಿದ್ದ ಜನರು ರಥವನ್ನು ನೀರಿನಿಂದ ಎಳೆದು ದಡಕ್ಕೆ ತಂದಿದ್ದಾರೆ. ‘ಇದು ಬೇರೆ ದೇಶದಿಂದ ಬಂದಿರಬಹುದು. ನಾವು ಗುಪ್ತಚರ ಮತ್ತು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದೇವೆ’ ಎಂದು …
Read More »ಜೈಲಿನಲ್ಲಿ ಪತಿ ಕಂಡು ಕಿಂಗ್‍ಪಿನ್ ಕಣ್ಣೀರು
ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಆರೋಪಿ ದಿವ್ಯಾ ಹಾಗರಗಿ ಕಲಬುರಗಿ ಸೆಂಟ್ರಲ್ ಜೈಲು ಸೇರಿಕೊಂಡಿದ್ದು, ಕಣ್ಣೀರಾಕುತ್ತಿದ್ದಾಳೆ. ಜೈಲಿನ ಬ್ಯಾರಕ್ ಹಿಂದೆ ಇದ್ದ ಪತಿ ರಾಜೇಶ್ ಕಂಡು ದಿವ್ಯಾ ಹಾಗರಗಿ ಕಣ್ಣೀರು ಹಾಕಿದ್ದಾಳೆ. ದೂರದಿಂದಲೇ ಪತಿ ರಾಜೇಶ್‍ನನ್ನು ನೋಡ್ತಿದ್ದ ಹಾಗೆಯೇ ಕುಸಿದು ಬಿದ್ದು ಕಣ್ಣೀರು ಸುರಿಸಿದ್ದಾಳೆ. ಇತ್ತ ದಿವ್ಯಾ ಕಂಡು ಜೈಲಿನ ಬ್ಯಾರಕ್ ಹಿಂದೆಯಿಂದ ರಾಜೇಶ್ ಕೂಡ ಅತ್ತಿದ್ದಾರೆ. ಒಟ್ಟಿನಲ್ಲಿ ಅರ್ಧ ಗಂಟೆಗೂ …
Read More »ಬೆತ್ತಲೆ ಸೇವೆ ತಪ್ಪಿಸಿದ ಪೊಲೀಸರು
ಗದಗ: ಬೆಟಗೇರಿ ಹೊರವಲಯದ ನಾಗಸಮುದ್ರ ಸಮೀಪದ ದಂಡಿನ ದುರ್ಗಮ್ಮದೇವಿ ಜಾತ್ರೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಈ ವೇಳೆ ದೇಹಕ್ಕೆ ಬೇವಿನಸೊಪ್ಪು ಸುತ್ತಿಕೊಂಡು ಬೆತ್ತಲೆ ಸೇವೆ ಸಲ್ಲಿಸಲು ಮುಂದಾದ ಭಕ್ತರನ್ನು ಪೊಲೀಸರು ತಡೆದರು. ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ರಾಜ್ಯದ ಸಾವಿರಾರು ಭಕ್ತರು ಸೋಮವಾರವೇ ನಗರಕ್ಕೆ ಬಂದಿದ್ದರು. ಮಕ್ಕಳು, ಕೆಲ ಭಕ್ತರು ದೀರ್ಘ ದಂಡ ನಮಸ್ಕಾರ ಹಾಕಿ, ಹರಕೆ ತೀರಿಸಿದರು. ‘ಹರಕೆ ಹೊತ್ತಿದ್ದ ಕೆಲವು ಭಕ್ತರು ಬೆತ್ತಲೆ ಸೇವೆ …
Read More »ಎಸ್ಎಸ್ಎಲ್ಸಿ ಆಗಿದ್ರೆ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಹಾಕಿ – ಇವತ್ತು ಲಾಸ್ಟ್ ಡೇಟ್
Uttara Kannada Recruitment 2022: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉತ್ತರ ಕನ್ನಡ (WCD Uttara Kannada) ಅಧಿಕೃತ ಅಧಿಸೂಚನೆ ಮೂಲಕ ಅಂಗನವಾಡಿ ಕಾರ್ಯಕರ್ತೆ (Anganwadi Workers) ಮತ್ತು ಸಹಾಯಕಿಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದ್ದು. ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಲು ಇಂದು ಕೊನೆಯ ದಿನವಾಗಿದ್ದು, ಬೇಗ ಅರ್ಜಿ ಹಾಕಿ ಒಳ್ಳೆಯ ಕೆಲಸವನ್ನು ನಿಮ್ಮದಾಗಿಸಿಕೊಳ್ಳಿ. ಈ …
Read More »ಕರ್ತವ್ಯವೇಳೆ ಕಂಠಪೂರ್ತಿ ಕುಡಿದು ಮಲಗಿರುವ ಗ್ರಾಮಲೆಕ್ಕಾಧಿಕಾರಿ.
ಬೆಳಗಾವಿ: ಕರ್ತವ್ಯವೇಳೆ ಕಂಠಪೂರ್ತಿ ಕುಡಿದು ತಾಲೂಕು ತಹಶಿಲ್ದಾರ ಕಚೇರಿಯ ಮುಂದೆ ಗ್ರಾಮಲೆಕ್ಕಾಧಿಕಾರಿ ಅಡ್ಡಲಾಗಿ ಮಲಗಿದ ಘಟನೆ ಜಿಲ್ಲೆಯ ಸವದತ್ತಿ ತಹಶೀಲ್ದಾರ್ ಕಚೇರಿ ಎದುರು ನಡೆದಿದೆ. ತಹಶಿಲ್ದಾರ್ ಕಚೇರಿ ಎದುರು ಕಂಠಪೂರ್ತಿ ಕುಡಿದು ಮಲಗಿದ ವಿಡಿಯೋ ವೈರಲ್ ಆಗಿದೆ. ಸಂಜು ಬೆಣ್ಣಿ ಕಂಠಪೂರ್ತಿ ಕುಡಿದು ಮಲಗಿರುವ ಗ್ರಾಮಲೆಕ್ಕಾಧಿಕಾರಿ. ಮೊದಲು ಸವದತ್ತಿ ತಾಲೂಕಿನ ಗೊರವನಕೊಳ್ಳ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಆಗಿದ್ದ ಸಂಜು ಬೆಣ್ಣಿ ಅವರು ಅಲ್ಲಿಯೂ ಕರ್ತವ್ಯ ವೇಳೆ ಕಂಠಪೂರ್ತಿ ಕುಡಿಯುತ್ತಿದ್ದರು. ಈ ಹಿನ್ನೆಲೆಯಲ್ಲಿ …
Read More »