ದುಬೈ: ಸುಡಾನ್ ಮೂಲದ ಯುವತಿಯೊಬ್ಬಳು ಹೊಸ ಮಾದರಿಯಲ್ಲಿ ಭಾವಿ ಪತಿಗಾಗಿ ಹುಡುಕಾಟ ನಡೆಸುತ್ತಿದ್ದಾಳೆ. ವರ ಬೇಕು ಎಂಬ ಭಿತ್ತಿ ಫಲಕವನ್ನು ಹಿಡಿದು ಸುಡಾನ್ನ ರಾಜಧಾನಿ ಖಾರ್ಟೂಮ್ನ ಬೀದಿ ಬೀದಿಯಲ್ಲಿ ಮಹಿಳೆ ಅಲೆದಾಡುತ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದೆ. ಅದರಲ್ಲಿ ಯುವತಿ ಟ್ರಾಫಿಕ್ ಸಿಗ್ನಲ್ ಬಳಿ ಭಿತ್ತಿ ಫಲಕ ಹಿಡಿದು ನಿಂತಿದ್ದಾಳೆ. ನನಗೆ ವರ ಬೇಕಿದ್ದಾನೆ. ನಾನು ಮದುವೆಯಾಗಬೇಕಿದೆ. ನಾನು ಬಹುಪತ್ನಿತ್ವ ಸ್ವೀಕರಿಸಲೂ ಸಿದ್ಧಳಾಗಿದ್ದೇನೆ ಎಂಬ ಬರಹ ಯುವತಿ ಹಿಡಿದಿರುವ ಭಿತ್ತಿ …
Read More »ವಿದ್ಯುತ್ ಕಂಬ ಏರಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ 21ರ ಯುವತಿ
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ. ಮನೆ ಜವಾಬ್ದಾರಿಯಿಂದ ಹಿಡಿದು ದೇಶವನ್ನು ಮುನ್ನೆಡೆಸುವ ಮಹತ್ತರ ಜವಾಬ್ದಾರಿವರೆಗೂ ಮಹಿಳೆಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುರುಷರಿಗೆಂದೇ ಮೀಸಲಾಗಿರುವ ವೃತ್ತಿಗಳಲ್ಲಿಯೂ ಈಗ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಈ ಮೂಲಕ ತಾವು ಯಾರಿಗೂ ಕಡಿಮೆ ಇಲ್ಲವೆಂಬುದನ್ನು ಸಾಧಿಸಿ ತೋರಿಸುತ್ತಿದ್ದಾರೆ. ಇದಕ್ಕೆ ಸ್ಪಷ್ಟ ನಿದರ್ಶನವೇ ತೆಲಂಗಾಣದ ಈ 21 ವರ್ಷದ ಯುವತಿ. ತೆಲಂಗಾಣದ ಈ ಯುವತಿ ಯಶಸ್ವಿಯಾಗಿ ಲೈಟ್ ಕಂಬ ಹತ್ತುವ …
Read More »ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಮಾಜಿ ಮುಖ್ಯಮಂತ್ರಿ B.S.Y.ಭೇಟಿ
ಬೆಂಗಳೂರು, ಮೇ 17; ಚಾಮರಾಜಪೇಟೆ ಶಾಸಕ, ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿದರು. ಮಂಗಳವಾರಯಡಿಯೂರಪ್ಪನಿವಾಸಕ್ಕೆ ಶಾಸಕ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿದರು. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹ ಈ ಸಂದರ್ಭದಲ್ಲಿ ಜೊತೆಗಿದ್ದರು. ಪುಲಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪುತ್ರಿಯ ವಿವಾಹದ ಆಮಂತ್ರಣ ನೀಡಲು ಜಮೀರ್ ಅಹ್ಮದ್ ಯಡಿಯೂರಪ್ಪ ಭೇಟಿ ಮಾಡಿದ್ದರು. ಮಂಗಳವಾರ ಬೆಳಗ್ಗೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ …
Read More »ಹಿರಿಯ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ ಸಿಎಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 2022-23 ನೇ ಸಾಲಿನ ಬಜೆಟ್ ಅನುಷ್ಠಾನ, ಆಡಳಿತಕ್ಕೆ ಚುರುಕು, ಕಡತ ವಿಲೇವಾರಿ ಹಾಗೂ ಇನ್ನಿತರೆ ವಿಷಯಗಳ ಕುರಿತು ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ, ವಿ ಸೋಮಣ್ಣ, ಜೆ ಸಿ ಮಾಧುಸ್ವಾಮಿ, ಮುನಿರತ್ನ, ಎಂ ಟಿ ಬಿ ನಾಗರಾಜ, ಡಾ. ನಾರಾಯಣಗೌಡ, ಅರಗ ಜ್ಞಾನೇಂದ್ರ, ಬೈರತಿ ಬಸವರಾಜ ಸೇರಿದಂತೆ ಎಲ್ಲ …
Read More »ಸಭಾಪತಿ ಸ್ಥಾನಕ್ಕೆ, ಇದೀಗ ಪರಿಷತ್ ಸದಸ್ಯ ರಘುನಾಥ್ ರಾವ್ ಮಲಕಾಪೂರೆ ಆಯ್ಕೆ
ಬೆಂಗಳೂರು:ವಿಧಾನ ಪರಿಷತ್ ಸಭಾಪತಿಯಾಗಿದ್ದಂತ ಬಸವರಾಜ ಹೊರಟ್ಟಿಯವರು ತಮ್ಮ ಸ್ಥಾನಕ್ಕೆ ಹಾಗೂ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯಿಂದ ತೆರವಾದಂತ ಸಭಾಪತಿ ಸ್ಥಾನಕ್ಕೆ, ಇದೀಗ ಪರಿಷತ್ ಸದಸ್ಯ ರಘುನಾಥ್ ರಾವ್ ಮಲಕಾಪೂರೆ ಅವರನ್ನು ಆಯ್ಕೆ ಮಾಡಲಾಗಿದೆ. ವಿಧಾನ ಪರಿಷತ್ ಸಭಾಪತಿಯಾಗಿದ್ದಂತ ಬಸವರಾಜ ಹೊರಟ್ಟಿಯವರು, ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನಿನ್ನೆ ಸಲ್ಲಿಸಿದ್ದರು. ಉಪ ಸಭಾಪತಿ ಇಲ್ಲದ ಕಾರಣ, ವಿಧಾನ ಪರಿಷತ್ ಕಾರ್ಯದರ್ಶಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. …
Read More »ಗ್ರಾಹಕರ ಅಚ್ಚುಮೆಚ್ಚಿನ ಹೋಂಡಾ ಶೈನ್ ಬೈಕನ್ನು ಕೇವಲ 6 ಸಾವಿರಕ್ಕೆ ಮನೆಗೆ ತರುವ ಅವಕಾಶ!
ಹೋಂಡಾ ಶೈನ್ ಬಹುತೇಕರ ಅಚ್ಚುಮೆಚ್ಚಿನ ಬೈಕ್ ಆಗಿ ಗುರುತಿಸಿಕೊಂಡಿದೆ. ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಮಾರಾಟದಲ್ಲಿ ಪ್ರಬಲವಾಗಿ ಬೆಳೆದ ಬೈಕ್ ಇದಾಗಿದೆ. ಇದುವರೆಗೆ 10 ಮಿಲಿಯನ್ಗಿಂತಲೂ ಹೆಚ್ಚು ಗ್ರಾಹಕರು ಈ ಬೈಕ್ ಅನ್ನು ಖರೀದಿಸಿದ್ದಾರೆ. ಆದರೀಗ ಈ ಬೈಕಿನ ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು, ಹೋಂಡಾ ದ್ವಿಚಕ್ರ ವಾಹನಗಳು ಈ ಬೈಕನ್ನು ಸುಲಭವಾದ ಹಣಕಾಸಿನಲ್ಲಿ ಒದಗಿಸುತ್ತಿವೆ ಮತ್ತು ಕೇವಲ 5,999 ರೂಪಾಯಿ ಡೌನ್ ಪಾವತಿಯೊಂದಿಗೆ ಹೊಸ …
Read More »ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟ ಸಿ.ಎಂ.ಇಬ್ರಾಹಿಂ; ಜೆಡಿಎಸ್ ನಾಯಕರಿಗೆ ಕಸಿವಿಸಿ
ಬೆಂಗಳೂರು: ಬೇಷರತ್ ಆಗಿ ಜೆಡಿಎಸ್ ಸೇರುತ್ತೇನೆ ಎಂದಿದ್ದ ಸಿ.ಎಂ.ಇಬ್ರಾಹಿಂ ಈಗ ಪರಿಷತ್ ಸದಸ್ಯ ಸ್ಥಾನದ ಮೇಲೆ ಕಣ್ಣಿಟ್ಟಿರುವ ವಿಚಾರ ಜೆಡಿಎಸ್ ನಾಯಕರಿಗೆ ಕಸಿವಿಸಿ ಸೃಷ್ಟಿಸಿದೆ. ಬದಲಾದ ಸನ್ನಿವೇಶದಲ್ಲಿ ಪರಿಷತ್ ಸ್ಥಾನಕ್ಕೆ ಒತ್ತಡ ಹಾಕುತ್ತಿರುವ ಇಬ್ರಾಹಿಂ, ನನಗೆ ಅವಕಾಶ ನೀಡಿದರೆ ಮುಸ್ಲಿಂ ಸಮುದಾಯಕ್ಕೆ ಒಳ್ಳೆಯ ಸಂದೇಶ ಕೊಟ್ಟಂತಾಗಲಿದೆ ಎಂಬ ದಾಳ ಉರುಳಿಸಿದ್ದಾರೆ. ಇಲ್ಲದೇ ಹೋದರೆ ಇಡೀ ಸಮುದಾಯ ಅನುಮಾನದಿಂದಲೇ ನೋಡುವಂತಾಗಲಿದೆ. ನನಗೆ ಪರಿಷತ್ ಸದಸ್ಯ ಸ್ಥಾನಕ್ಕೆ ಅವಕಾಶ ನೀಡಿ ಎಂದು ಇಬ್ರಾಹಿಂ …
Read More »ಬೇರೆಯವರ ಕೈಯಿಂದ ಕೇಕ್ ತಿನ್ನಿಸಿದ ಪ್ರಿಯಾಂಕಾ; ಡಿಕೆಶಿ ಬಗ್ಗೆ ಬಿಜೆಪಿ ಲೇವಡಿ
ದೆಹಲಿ: ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬ. ಅವರು ದೆಹಲಿಯಲ್ಲಿದ್ದುದರಿಂದ ದೆಹಲಿಯಲ್ಲಿ ಕಾಂಗ್ರೆಸ್ ಕಚೇರಿಯಲ್ಲೇ ಹುಟ್ಟುಹಬ್ಬ ಆಚರಿಸಲಾಗಿದೆ. ಈ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೂಡಾ ಹಾಜರಿದ್ದರು. ಡಿ.ಕೆ.ಶಿವಕುಮಾರ್‌ಗೆ ಕೇಕ್ ತಿನ್ನಿಸಲು ಕೇರ್ ಎತ್ತಿಕೊಂಡ ಪ್ರಿಯಾಂಕಾ ಗಾಂಧಿ, ಅದನ್ನು ಬೇರೆ ನಾಯಕರೊಬ್ಬರ ಕೈಗೆ ಕೊಟ್ಟು ಅವರಿಂದ ಡಿ.ಕೆ.ಶಿವಕುಮಾರ್‌ಗೆ ಕೇಕ್ ತಿನ್ನಿಸಿದರು. ಈ ವಿಡಿಯೋವನ್ನು ಹಂಚಿಕೊಂಡಿರುವ ರಾಜ್ಯ ಬಿಜೆಪಿ, ಡಿ.ಕೆ.ಶಿವಕುಮಾರ್ ಅವರನ್ನು ಲೇವಡಿ ಮಾಡಿದೆ. ಡಿ.ಕೆ.ಶಿವಕುಮಾರ್ ಅವರೇ, ಅವರ …
Read More »ಜಿ.ಪಂ-ತಾ.ಪಂ ಚುನಾವಣೆ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ
ಬೆಂಗಳೂರು: ರಾಜ್ಯದ ಜಿ.ಪಂ ಹಾಗೂ ತಾ.ಪಂ. ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮೇ 23ಕ್ಕೆ ಮುಂದೂಡಿದೆ. ಜಿ.ಪಂ, ತಾ.ಪಂ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಸೀಮಾ ನಿರ್ಣಯ ಆಯೋಗ ರಚನೆ ಮಾಡಿರುವುದರಿಂದ ಚುನಾವಣೆ ನಡೆಸಲು ವಿಳಂಬವಾಗುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಮೆಮೋ ಸಲ್ಲಿಸಿತ್ತು. ಅದರಂತೆ, ನ್ಯಾಯಮೂರ್ತಿ ಎಸ್.ಜಿ. ಪಂಡಿತ್ …
Read More »ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; ಚುನಾವಣಾ ಸಿದ್ದತೆ ಆರಂಭಿಸಿದ ಕೈ ಪಡೆ
ಬೆಂಗಳೂರು: ಬಿಜೆಪಿಯ ರೀತಿ ಕಾಂಗ್ರೆಸ್ ನಲ್ಲೂ ಈಗ ಚುನಾವಣಾ ಗೆಲುವಿಗೆ ಲೆಕ್ಕಾಚಾರಗಳು ಪ್ರಾರಂಭವಾಗಿದ್ದು, ಹಾಲಿ ಶಾಸಕರ ಪೈಕಿ ಕೆಲವರಿಗೆ ಈ ಬಾರಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ಗೆಲ್ಲುವ ಸಾಮರ್ಥ್ಯ ಹೊಂದಿರುವವರಿಗೆ ಮಾತ್ರ ಮಣೆ ಹಾಕಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದು, ಸೋಲುವ ಸಾಧ್ಯತೆ ಇರುವ ಹಾಲಿ ಶಾಸಕರಿಗೆ ಟಿಕೆಟ್ ಕೊಡದಿರುವ ಬಗ್ಗೆ ಚರ್ಚೆ ನಡೆದಿದೆ. ಕೆಲಸ ಮಾಡದ ಶಾಸಕರ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನಹರಿಸಲು ಮುಂದಾಗಿರುವ ನಾಯಕರು …
Read More »