ಕುಂದಾಪುರ: ವಿದೇಶಗಳಲ್ಲಿ ಯುದ್ಧ, ನೆರೆ, ಪ್ರಾಕೃತಿಕ ವಿಪತ್ತು, ಕೊರೊನಾದಂತಹ ಸಂಕಷ್ಟ ಮಯ ಸಂದರ್ಭಗಳಲ್ಲಿ ಅಲ್ಲಿ ನೆಲೆಸಿರುವ ರಾಜ್ಯದ ಜನರು, ವಿದ್ಯಾರ್ಥಿಗಳಿಗೆ ತುರ್ತು ನೆರವಾಗಲು ಸ್ಥಾಪನೆಯಾಗಿರುವ ಅನಿವಾಸಿ ಭಾರತೀಯ ಸಮಿತಿ (ಎನ್‌ಆರ್‌ಐ ಫೋರಂ)ಗೆ ನಾಲ್ಕು ವರ್ಷಗಳಿಂದ ಉಪಾಧ್ಯಕ್ಷರೇ ಇಲ್ಲ. ಈ ಸಮಿತಿಗೆ ಮುಖ್ಯಮಂತ್ರಿಗಳು ಅಧ್ಯಕ್ಷರು. ಇದರ ಕಾರ್ಯಭಾರವೆಲ್ಲ ಉಪಾಧ್ಯಕ್ಷ ರದ್ದೇ ಆಗಿರುತ್ತದೆ. ಎಲ್ಲವನ್ನು ಮುಖ್ಯಮಂತ್ರಿ ಯವರೇ ನಿಭಾಯಿಸಲು ಅಸಾಧ್ಯ. ಆದ್ದರಿಂದ ಉಪಾಧ್ಯಕ್ಷರ ಹುದ್ದೆಯೇ ಪ್ರಮುಖ. ಭರ್ತಿ ನಾಲ್ಕು ವರ್ಷ ಉಡುಪಿ ಮೂಲದ ಆರತಿ …
Read More »ಗ್ರಾಮ ದೇವತೆಗೆ ಉಡಿ ತುಂಬುವಾಗ ದಲಿತರಿಗೆ ಬಹಿಷ್ಕಾರ
ಬೆಳಗಾವಿ: ಗ್ರಾಮ ದೇವತೆಗೆ ಉಡಿ ತುಂಬುವಾಗ ದಲಿತರಿಗೆ ಬಹಿಷ್ಕಾರ ಹಾಕಿದ ಆರೋಪ ಕೇಳಿ ಬಂದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶುಕ್ರವಾರ ಗ್ರಾಮ ದೇವತೆ ಜಾತ್ರೆಯಲ್ಲಿ ಉಡಿ ತುಂಬುವ ಕಾರ್ಯಕ್ರಮವಿತ್ತು. ಈ ಸಂದರ್ಭದಲ್ಲಿ ದಲಿತ ಸಮುದಾಯದ ಮಹಿಳೆಯರಿಗೆ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಲ್ಲದೇ ದಲಿತರ ಹಣೆಗೆ ಅಂಗಾರ, ಭಂಡಾರ ಹಚ್ಚದ ಬಗ್ಗೆಯೂ ಆರೋಪ ಕೇಳಿ ಬಂದಿದೆ.ಅಲ್ಲದೇ ದಲಿತ ಸಮುದಾಯದವರಿಗೆ ಜಾತಿ ನಿಂದನೆ …
Read More »ಯೋಧ ಕೊಲ್ಲಾಪುರ ಜಿಲ್ಲೆಯ ಜಾಧವ ಪ್ರಶಾಂತ ಶಿವಾಜಿ ಅವರ ಪಾರ್ಥಿವ ಶರೀರಕ್ಕೆ ಅನೇಕ ಗಣ್ಯರು ಅಂತಿಮ ನಮನ
ಬೆಳಗಾವಿ: ಸಿಯಾಚಿನ್ ಗ್ಲೇಷಿಯರ್‌ನಲ್ಲಿ ನಡೆಯುತ್ತಿದ್ದ ಆಪರೇಷನ್ ಮೇಘದೂತ ಕಾರ್ಯಾಚರಣೆ ಸಂದರ್ಭದಲ್ಲಿ ಹುತಾತ್ಮರಾದ ಮರಾಠ ಲಘು ಪದಾತಿದಳದ ಯೋಧ ಕೊಲ್ಲಾಪುರ ಜಿಲ್ಲೆಯ ಜಾಧವ ಪ್ರಶಾಂತ ಶಿವಾಜಿ ಅವರ ಪಾರ್ಥಿವ ಶರೀರಕ್ಕೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು. ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ ಆಗಮಿಸಿದ ಪಾರ್ಥಿವ ಶರೀರವನ್ನು ಬರಮಾಡಿಕೊಂಡು ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಅಂತಿಮ ನಮನ ಸಲ್ಲಿಸಿದ ಬಳಿಕ ಯೋಧನ ಪಾರ್ಥಿವ ಶರೀರವನ್ನು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆ ಗಡಹಿಂಗ್ಲಜ್ …
Read More »ಮಹಿಳಾ ಶೌಚಾಲಯಕ್ಕೆ ವ್ಯಕ್ತಿಯೊಬ್ಬ ಒಳಗಡೆ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡು ಹುಚ್ಚಾಟ
ಬೆಳಗಾವಿ: ನಗರದ ಕನ್ನಡ ಸಾಹಿತ್ಯ ಭವನ ಆವರಣದಲ್ಲಿರುವ ಮಹಿಳಾ ಶೌಚಾಲಯಕ್ಕೆ ವ್ಯಕ್ತಿಯೊಬ್ಬ ಒಳಗಡೆ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡು ಹುಚ್ಚಾಟ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ನಗರದ ಚೆನ್ನಮ್ಮ ವೃತ್ತದಲ್ಲಿರುವ ಸಾಹಿತ್ಯ ಭವನದ ಆವರಣದಲ್ಲಿ ಮಹಿಳಾ ಶೌಚಾಲಯಕ್ಕೆ ನುಗ್ಗಿದ ವ್ಯಕ್ತಿ ಕಿತ್ತೂರು ತಾಲೂಕಿನ ಖೋದಾನಪುರ ಮೂಲದವನು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಹುಚ್ಚಾಟ ಪ್ರದರ್ಶನ ಮಾಡುತ್ತಿದ್ದವನನ್ನು ವಶಕ್ಕೆ ಪಡೆದುಕೊಂಡರು. ನಡೆದಿದ್ದೇನು? ಇಂದು ಬೆಳಗ್ಗೆ 7 ಗಂಟೆಗೆ ವ್ಯಕ್ತಿಯೊಬ್ಬ ಸಾಹಿತ್ಯ ಭವನದಲ್ಲಿರುವ ಶೌಚಾಲಯಕ್ಕೆ …
Read More »ಕಾ ರಾಜಾನನ್ನು ನೋಡಲು ರಾಣೇಬೆನ್ನೂರಿಗೆ ಬಂದ ಹರ್ಷನ ಕುಟುಂಬ
ಹಾವೇರಿ: ಶಿವಮೊಗ್ಗದ ಹಿಂದೂ ಹುಲಿ ಹರ್ಷನ ಕುಟುಂಬವು ಕಾ ರಾಜಾನನ್ನು ನೋಡಲು ರಾಣೇಬೆನ್ನೂರಿಗೆ ಆಗಮಿಸಿದ್ದರು. ಈ ವೇಳೆ ಹರ್ಷನನ್ನೆ ನೋಡಿದಷ್ಟು ಸಂತೋಷವಾಯಿತು ಎಂದು ಸಂತೋಷ ವ್ಯಕ್ತಪಡಿಸಿದರು. 021 ಡಿಸೆಂಬರ್ 4 ರಂದು ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ(ರಿ) ರಾಣೇಬೆನ್ನೂರ ಇವರ ವತಿಯಿಂದ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಒಂದು ಹೋರಿಯನ್ನು ಸುಮಾರು 9 ಲಕ್ಷ ರೂ.ಗೆ ತಂದು ಅದಕ್ಕೆ ರಾಣೇಬೆನ್ನೂರ ಕಾ ರಾಜಾ ಎಂಬ ಹೆಸರನ್ನು ನಾಮಕರಣ ಮಾಡಿದ್ದಾರೆ. ಅದನ್ನು ಕೊಬರಿ …
Read More »ಕಾಲೇಜಿಗೆ ಟೋಪಿ ಹಾಕಿ ಬಂದ ವಿದ್ಯಾರ್ಥಿ ಮೇಲೆ ಹಲ್ಲೆ: ಪ್ರಿನ್ಸಿಪಾಲ್ ಸೇರಿ 7 ಮಂದಿ ಮೇಲೆ FIR
ಬಾಗಲಕೋಟೆ: ಕಾಲೇಜಿಗೆ ಟೋಪಿ ಹಾಕಿಕೊಂಡು ಬಂದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದ ಆರೋಪದ ಮೇಲೆ ಕಾಲೇಜು ಪ್ರಿನ್ಸಿಪಾಲ್, ಪಿಎಸ್‍ಎ, ಕಾನ್ಸ್‍ಟೇಬಲ್ ಸೇರಿ ಏಳು ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಫೆಬ್ರವರಿ 18 ರಂದು ತೇರದಾಳ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ನವೀದ್ ಥರಥರಿ ಮುಸ್ಲಿಂ ಟೋಪಿ ಹಾಕಿಕೊಂಡು ಕಾಲೇಜಿಗೆ ಬಂದಿದ್ದನು. ಈ ಹಿನ್ನೆಲೆ ಅವನ ಮೇಲೆ ಹಲ್ಲೆ ಮಾಡಲಾಗಿತ್ತು. ಇದನ್ನು ಖಂಡಿಸಿ ನವೀದ್ ಥರಥರಿ ನ್ಯಾಯಾಲಯದ ಮೊರೆ …
Read More »ಮೂಡಲಗಿ: ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಉದ್ಘಾಟನೆ
ಮೂಡಲಗಿ: ‘ರಡ್ಡಿ ಸಮುದಾಯದ ಜನರು ದೇವಸ್ಥಾನದ ಜೊತೆಗೆ ಶಾಲೆ, ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ಸಮುದಾಯ ಭವನಗಳನ್ನು ನಿರ್ಮಿಸುವ ಮೂಲಕ ಸಮಗ್ರ ಸಮಾಜದ ಹಿತಕಾಯಬೇಕು’ ಎಂದು ಶಾಸಕ ರಾಮಲಿಂಗಾರಡ್ಡಿ ಅವರು ಹೇಳಿದರು. ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಉದ್ಘಾಟನೆ, ಕಳಸಾರೋಹ ಸಮಾರಂಭದಲ್ಲಿ ಮಾತನಾಡಿದ ಅವರು, ರಡ್ಡಿ ಸಮಾಜಕ್ಕೆ ದೊರಕಬೇಕಾದ ಸೌಲಭ್ಯ, ಅವಕಾಶಗಳ ಪಡೆಯುವ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಒಗ್ಗಟ್ಟಿನ ಮೂಲಕ ಮಾಡಬೇಕು ಎಂದರು. …
Read More »ಹುಕ್ಕೇರಿ: ವಿಜೃಂಭಣೆಯ ಲಕ್ಷ್ಮೀದೇವಿ ಜಾತ್ರೆ
ಹುಕ್ಕೇರಿ: ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಶುಕ್ರವಾರ ಮಹಾಲಕ್ಷ್ಮೀ (ಮಲೆವ್ವ)ದೇವಿ ಮತ್ತು ದುರ್ಗಾದೇವಿ ಜಾತ್ರೆ ವಿಜೃಂಭಣೆಯಿಂದ ಜರುಗಿತು. ಗ್ರಾಮದ ಜಡಿಸಿದ್ಧೇಶ್ವರ ಆನಂದಾಶ್ರಮದಿಂದ ಪ್ರಮುಖ ಬೀದಿಗಳ ಮೂಲಕ ಮಹಾಲಕ್ಷ್ಮೀದೇವಿ ಮಂದಿರದವರೆಗೆ ಮೆರವಣಿಗೆಯಲ್ಲಿ ಬಂದರು. ನಂತರ ದೇವಿಗೆ ಉಡಿ ತುಂಬುವುದು ಮತ್ತು ಮಹಿಳೆಯರಿಗೆ ಉಡಿ ತುಂಬುವ (ಬೊಟ್ಟು ಕೊಡುವ) ಕಾರ್ಯಕ್ರಮ ಜರುಗಿತು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ದೇವಿಯ ದರ್ಶನ ಪಡೆದರು. ಸಚಿವರ ಭೇಟಿ: ಶುಕ್ರವಾರ ಮುಂಜಾನೆ ಅರಣ್ಯ, ಆಹಾರ ಖಾತೆ ಸಚಿವ ಉಮೇಶ್ …
Read More »ಬೆಳಗಾವಿ: ಹಿಂದೂ-ಮುಸ್ಲಿಮರಿಂದ ಉರುಸ್ ಆಚರಣೆ
ಬೆಳಗಾವಿ: ಇಲ್ಲಿನ ಪೊಲೀಸ್ ಕೇಂದ್ರಸ್ಥಾನದಲ್ಲಿರುವ ಹಜರತ್ ಸೈಯದ್ ಕೈಸರಶಾಹ್‌ವಲಿ ದರ್ಗಾದಲ್ಲಿ ಮೂರು ದಿನಗಳವರೆಗೆ ನಡೆಯಲಿರುವ ಉರುಸ್‌ಗೆ ಚಾಲನೆ ದೊರೆತಿದೆ. ಈ ಪರಿಸರದಲ್ಲಿ ದರ್ಗಾ ಭಾವೈಕ್ಯತೆ ಕೇಂದ್ರವಾಗಿ ಗುರುತಿಸಿಕೊಂಡಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಕಳೆದೆರಡು ವರ್ಷ ಸಾಂಕೇತಿಕವಾಗಿ ಉರುಸ್ ಆಚರಿಸಲಾಗಿತ್ತು. ಕೊರೊನಾ ಪರಿಣಾಮ ತಗ್ಗಿದ್ದರಿಂದ ಈ ಬಾರಿ ಹಿಂದೂ-ಮುಸ್ಲಿಮರು ಒಟ್ಟಾಗಿ ಸೇರಿ ಸಡಗರದಿಂದ ಉರುಸ್ ಆಚರಿಸಿದರು. ಭಾವೈಕ್ಯದ ಸಂದೇಶ ರವಾನಿಸಿದರು. ಶುಕ್ರವಾರ ರಾತ್ರಿಯಿಂದಲೇ ವಿದ್ಯುತ್ ದೀಪಗಳ ಅಲಂಕಾರದಿಂದ ದರ್ಗಾ ಝಗಮಗಿಸುತ್ತಿದ್ದು, ಹಿಂದೂ-ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ …
Read More »ಜಾತಿ ಲೆಕ್ಕಾಚಾರ, ಬಿಜೆಪಿ ಚುನಾವಣಾ ತಂತ್ರ: ಜಗ್ಗೇಶ್ಗೆ ಬಂಪರ್, ರಾಮಮೂರ್ತಿಗೆ ಅರ್ಧಚಂದ್ರ | ಪ್ರಬಲ ಒಕ್ಕಲಿಗ ಸಮುದಾಯಕ್ಕೂ ಸಮಾಧಾನ
ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ವಿಷಯದಲ್ಲಿ ಬಿಜೆಪಿ ಎರಡು ಅಚ್ಚರಿ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪಕ್ಷದ ರಾಜ್ಯ ಕೋರ್ ಕಮಿಟಿ ಕಳುಹಿಸಿದ್ದ ಪಟ್ಟಿಯಲ್ಲಿ ಇಲ್ಲದ ಹೆಸರು ಸೇರಿಸಿ, ಮತ್ತೊಂದು ಹೆಸರು ಕೈಬಿಡುವ ಮೂಲಕ ರಾಜ್ಯದ ಶಿಫಾರಸಿಗೆ ಮನ್ನಣೆಯಿಲ್ಲ ಎನ್ನುವುದನ್ನು ದೃಢಪಡಿಸಿದ್ದಾರೆ. ಪಕ್ಷದ ವರಿಷ್ಠರ ಈ ನಡೆಯಲ್ಲಿ ಎಲ್ಲ ಜಾತಿಗಳಿಗೆ ಆದ್ಯತೆ ನೀಡಲಾಗುವುದು ಎಂಬ ಸಂದೇಶ ರವಾನೆ, ಮುಂಬರುವ ಚುನಾವಣೆಗಳ ತಂತ್ರಗಾರಿಕೆಯಿದೆ ಎಂದು ಮೂಲಗಳು ವಿಶ್ಲೇಷಿಸಿವೆ. ಹಣಕಾಸು ಸಚಿವೆ …
Read More »