ಬೆಂಗಳೂರು,- ಅಧಿಕಾರದಲ್ಲಿದ್ದಾಗ ವೀರಶೈವ- ಲಿಂಗಾಯತ ಎಂದು ಸಮಾಜ ಒಡೆಯೋಕೆ ಹೋಗಿ ಕೈಸುಟ್ಟು ಕೊಂಡಿದ್ದೀರಾ. ಈಗ ಆರ್ಯ- ದ್ರಾವಿಡ ಎಂದು ಒಡೆದು ಮತ್ತೊಮ್ಮೆ ಕೈಸುಟ್ಟುಕೊಳ್ಳುತ್ತಿದ್ದಿರಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕುಡುಚಿ ಶಾಸಕ ಪಿ.ರಾಜೀವ್ ತಿರುಗೇಟು ನೀಡಿದ್ದಾರೆ. ಆರ್ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ವರು ಭಾರತೀಯರಲ್ಲ ಎಂದು ಹೇಳಿ ಸಿದ್ದರಾಮಯ್ಯ ಆರ್ಎಸ್ಎಸ್ ಸ್ವಯಂಸೇವಕರು ಮತ್ತು ಕಾರ್ಯಕರ್ತರ ಭಾವನೆಗೆ ನೋವು ತಂದಿದ್ದಾರೆ. ಅಂಬೇಡ್ಕರ್ರವರ ¿ಹೂ ಈಸ್ ಶೂದ್ರ¿ …
Read More »ಮೇ 31ರಂದು ವಿಶ್ವ ತಂಬಾಕು ರಹಿತ ದಿನ
ಹುಬ್ಬಳ್ಳಿ: ನಗರದ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿರುವ ಲ್ಯಾಮಿಂಗ್ಟನ್ ಬಾಲಕ ಮತ್ತು ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಆರೋಗ್ಯ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಲ್ಯಾಮಿಂಗ್ಟನ್ ಪ್ರೌಢಶಾಲೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ, ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಮೇ 31ರಂದು ಮಧ್ಯಾಹ್ನ 2 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ …
Read More »ಡಾ.ರಾಜ್ಕುಮಾರ್ ಅಕಾಡೆಮಿಯಿಂದ 8 ಮಂದಿ U.P.S.C. ಪಾಸ್:
ಕೇಂದ್ರ ಲೋಕಸೇವಾ ಆಯೋಗ (UPSC) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ಪರೀಕ್ಷೆಯನ್ನು ನಡೆಸಿತ್ತು. 2021ನೇ ಸಾಲಿನ ಈ ಪರೀಕ್ಷೆಯ ಫಲಿತಾಂಶ ಇಂದು ( ಮೇ 30) ಪ್ರಕಟವಾಗಿದೆ. ಈ ಅತ್ಯುನ್ನತ ಪರೀಕ್ಷೆಯಲ್ಲಿ ದೇಶದ ಸುಮಾರು 685 ಮಂದಿ ತೇರ್ಗಡೆಯಾಗಿದ್ದಾರೆ. 2021ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಕರ್ನಾಟಕದಿಂದ 27 ಮಂದಿ ತೇರ್ಗಡೆಯಾಗಿದ್ದರ ಬಗ್ಗೆ ಇದೂವರೆಗೂ ಮಾಹಿತಿ ಸಿಕ್ಕಿದೆ. ವಿಶೇಷ ಅಂದರೆ ಇವರಲ್ಲಿ ಡಾ.ರಾಜ್ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ತರಬೇತಿ …
Read More »ಮದುವೆಯಲ್ಲಿ ಹೂವಿನ ಹಾರದ ಬದಲು ಹಾವಿನ ಹಾರ ಹಾಕಿದ ವಧು ವರ !!
ಮಹಾರಾಷ್ಟ್ರದಲ್ಲಿ ವನ್ಯಜೀವಿ ಇಲಾಖೆ ಅಧಿಕಾರಿಗಳು ಮದುವೆಯಲ್ಲಿ ಹಾವಿನ ಹಾರವನ್ನು ಬದಲಾಯಿಸಿದರು.ಇತ್ತೀಚಿಗೆ ವಧು ವರರು ವಿಷ್ಟವಾಗಿ ಮದುವೆಯಾಗುವುದನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ ಮತ್ತು ನೋಡುತ್ತಿರುತ್ತೇವೆ. ಇದೇ ರೀತಿಯಾಗಿ ಇಲ್ಲಿ ವಧು ವರರು ವಿಷ್ಟವಾಗಿ ಮದುವೆಯಾಗಿದ್ದಾರೆ. ನಾವು ಸಾಮಾನ್ಯವಾಗಿ ಹಾವುಗಳಿಗೆ ಭಯ ಪಡುತ್ತವೆ ಆದರೆ ಇವರು ಮದುವೆಗೆ ಹಾವುಗಳನ್ನು ಬಳಸಿದ್ದಾರೆ ಹೇಗೆ ಇಲ್ಲಿದೆ ಓದಿ ಹಾವುಗಳು ಭಯಾನಕ ಜೀವಿಗಳು. ಗಾತ್ರ ಅಥವಾ ತಳಿ ಯಾವುದೇ ಇರಲಿ, ಅವುಗಳನ್ನು ಕಂಡರೆ ಭಯವಾಗುತ್ತದೆ. ಹಾವುಗಳನ್ನು …
Read More »PSI ಪರೀಕ್ಷೆಯಲ್ಲಿ ಅಕ್ರಮ: ಒಂದೂವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ ಶಾಂತಿಬಾಯಿ ಕೊನೆಗೂ ಅರೆಸ್ಟ್! ಗಂಡನೂ ಸಿಕ್ಕಿಬಿದ್ದ
: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿನ ಅಕ್ರಮ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಶಾಂತಿಬಾಯಿ ದಂಪತಿ ಕೊನೆಗೂ ಸಿಕ್ಕಿಬಿದ್ದಿದ್ದಾರೆ. 2021ರ ಅಕ್ಟೋಬರ್ 3ರಂದು ನಡೆದ 545 ಎಸ್ಐ ನೇಮಕಾತಿಗೆ ರಾಜ್ಯದಲ್ಲಿ 92 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿತ್ತು. ಲಿಖಿತ ಪರೀಕ್ಷೆ ಬಳಿಕ ಅಕ್ರಮ ನಡೆದಿರುವ ಕುರಿತು ದೂರುಗಳು ದಟ್ಟವಾಗಿ ಕೇಳಿಬಂದ ಹಿನ್ನೆಲೆ ಏಪ್ರಿಲ್ 7ರಂದು ಅಕ್ರಮ ಕುರಿತು ಸಿಐಡಿ ತನಿಖೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಆದೇಶಿಸಿದರು. ಎಫ್ಐಆರ್ ದಾಖಲಿಸಿಕೊಂಡು ತನಿಖೆ …
Read More »ಯತ್ನಾಳ್ರಂತೆ ನನಗೂ ಸಚಿವರನ್ನಾಗಿ ಮಾಡ್ತೀವಿ ಎಂದು ಹಣ ಕೇಳಿದ್ರು:ರೇಣುಕಾಚಾರ್ಯ ಹೊಸ ಬಾಂಬ್
ದಾವಣಗೆರೆ: ಬಸನಗೌಡ ಯತ್ನಾಳ್ರಂತೆ ನನಗೂ ಸಚಿವರನ್ನಾಗಿ ಮಾಡ್ತೀವಿ ಎಂದು ಬ್ರೋಕರ್ಗಳು ಹಣ ಕೇಳಿದ್ರು ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ನನಗೂ ಕೂಡ ಹಲವು ಬ್ರೋಕರ್ಸ್ಗಳು ಬಂದು ಹಣ ನೀಡಿ ನಿಮ್ಮನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದರು. ನನಗೆ ಅವರು ಗೊತ್ತು ಇವರು ಗೊತ್ತು ಎಂದು ಹೇಳಿಕೊಂಡಿದ್ದರು. ಆದರೆ ಬಿಜೆಪಿಯಲ್ಲಿ ಸಚಿವ ಸ್ಥಾನ ಮಾರಟಕ್ಕೆ ಇಲ್ಲ ಎಂದು ಹೇಳಿ ಛೀಮಾರಿ …
Read More »‘ಆರ್ಎಸ್ಎಸ್ ನಪುಂಸಕ ಅಲ್ಲ. ಇಡೀ ದೇಶದ ಜನರೇ ಕಾಂಗ್ರೆಸ್ ಅನ್ನು ನಪುಂಸಕ ರೀತಿ ಮಾಡಿಟ್ಟಿದ್ದಾರೆ
ಬೆಳಗಾವಿ: ‘ತಮ್ಮ ಅಧಿಕಾರದ ಅವಧಿಯಲ್ಲಿ ಎಂದೂ ರೈತರ ಅಭಿವೃದ್ಧಿಗಾಗಿ ಶ್ರಮಿಸದ ಕಾಂಗ್ರೆಸ್, ಗೋಹತ್ಯೆ ಮಾಡುವವರಿಗೆ ಬೆಂಬಲ ನೀಡಿದೆ. ಹಾಗಾಗಿಯೇ ರೈತರ ಶಾಪ ತಟ್ಟಿದ್ದು, ಮುಂಬರುವ ದಿನಗಳಲ್ಲಿ ಆ ಪಕ್ಷ ಅಧಿಕಾರಕ್ಕೆ ಬಾರದು’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರಿಗೆ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರೂಪಿಸಿತ್ತು. …
Read More »ರಾಯಬಾಗ ತಾಲ್ಲೂಕಿನ ಕುಡಚಿಯ ಗಜಾನನ ಬಾಲೆ ಯುಪಿಎಸ್ಸಿ ಪರೀಕ್ಷೆಯಲ್ಲಿ 319ನೇ ರ್ಯಾಂಕ್
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕುಡಚಿಯ ಗಜಾನನ ಬಾಲೆ ಯುಪಿಎಸ್ಸಿ ಪರೀಕ್ಷೆಯಲ್ಲಿ 319ನೇ ರ್ಯಾಂಕ್ ಗಳಿಸಿದ್ದಾರೆ. 2019ನೇ ಸಾಲಿನ ಪರೀಕ್ಷೆಯಲ್ಲಿ ಅವರು 663ನೇ ರ್ಯಾಂಕ್ ಗಳಿಸಿದ್ದರು. ಭಾರತೀಯ ಅಂಚೆ ಸೇವಾ ಇಲಾಖೆಯಲ್ಲಿ ದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ನಡುವೆಯೂ ಪ್ರಯತ್ನ ಮುಂದುವರಿಸಿ ಫಲಿತಾಂಶ ಸುಧಾರಿಸಿಕೊಂಡಿದ್ದಾರೆ. ಹೋದ ಬಾರಿ ಐದನೇ ಸಲ ಪರೀಕ್ಷೆ ಬರೆದಿದ್ದರು. 6ನೇ ಬಾರಿಗೆ ಹೆಚ್ಚಿನ ಸಾಧನೆ ತೋರಿದ್ದಾರೆ. ಐಎಎಸ್ ಅಥವಾ ಐಪಿಎಸ್ ನಿರೀಕ್ಷೆಯಲ್ಲಿದ್ದಾರೆ.
Read More »ಬೆಳಗಾವಿಯಲ್ಲಿ ಭುಗಿಲೆದ್ದ ಮಸೀದಿ ವಿವಾದಕ್ಕೆ ಮಾತನಾಡಿದಬೆಳಗಾವಿಯ ಮಾಜಿ ಶಾಸಕ ಫಿರೋಜ್ ಸೇಠ್
ಬೆಳಗಾವಿಯಲ್ಲಿ ಭುಗಿಲೆದ್ದ ಮಸೀದಿ ವಿವಾದಕ್ಕೆ ಬೆಳಗಾವಿಯ ಮಾಜಿ ಶಾಸಕ ಫಿರೋಜ್ ಸೇಠ್ ಮಾತನಾಡಿ ಸಮಸ್ಯೆ ಎಲ್ಲಕಡೆಯು ಇದೆ ಆದ್ರೆ ನಾವು ಸುಮಾರು ಕಡೆ ಮಂದಿರ ಗಳನ್ನ ಕೇಡವಿದ್ದರೆ, ಹಾಗೂ ಅವರು ಬೆಂಕಿ ಹಚ್ಚುವ ಪ್ರಯತ್ನ ಮಾಡಿದರೆ ನಾವು ಪ್ರೀತಿಯಿಂದ ಇರುತ್ತೇವೆ. ನಾವು ಯಾವುದೇ ಕಾರಣಕ್ಕೂ ಕೋಮು ಗಲಭೆಗೆ ಪ್ರಚೋದನೆ ಮಾಡಲ್ಲ ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ . ವಿವಾದ ನಡೆದ ಜಾಗ 900sqft ಗಿಂತಲೂ ಕಡಿಮೆ ಇದೆ ಇವಾಗ ಆಶ್ರಯ …
Read More »ಬೈಲಹೊಂಗಲ ಪಟ್ಟಣದ ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ U.P.S.C.PASS ದೇಶಕ್ಕೆ 250ನೇ ರ್ಯಾಂಕ್
UPSC exam 2022: ಯುಪಿಎಸ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಯುವತಿ ದೇಶದಲ್ಲಿಯೇ 250ನೇ ರ್ಯಾಂಕ್ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾಳೆ. ಬೈಲಹೊಂಗಲ ಪಟ್ಟಣದ ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ ಯುಪಿಎಸ್ಸಿ ಪಾಸ್ ಆದ ಯುವತಿ. ದೇಶಕ್ಕೆ 250ನೇ ರ್ಯಾಂಕ್ ಬಂದಿದ್ದರೆ ರಾಜ್ಯಕ್ಕೆ 10ನೇ ರ್ಯಾಂಕ್ ಬಂದಿರೋ ಸಾಹಿತ್ಯ. ಸತತ ಆರು ವರ್ಷಗಳಿಂದ ಪ್ರಯತ್ನ ಮಾಡಿದ್ದ ಯುವತಿ ದೆಹಲಿಯಲ್ಲಿ ಒಂದು ವರ್ಷ ತರಬೇತಿ ಪಡೆದಿದ್ದರು. ಕಠಿಣ …
Read More »