Breaking News

ಶಾಲಾ ವಿದ್ಯಾರ್ಥಿಗಳಿಗೆಮೊಟ್ಟೆ ವಿತರಣೆಗೆ ಬ್ರೇಕ್!

ಬೆಂಗಳೂರು : ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಮೊಟ್ಟೆ ನೀಡದಿರಲು ಎನ್ ಇಪಿ ಸಮಿತಿ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ ಎನ್ನಲಾಗಿದೆ. ಶಿಕ್ಷಣ ಇಲಾಖೆಯ ಆರ್ಥಿಕ ಸಂಕಷ್ಟದಿಂದ ಶಾಲಾ ವಿದ್ಯಾರ್ಥಿಗಳಿಗೆ ಈ ಬಾರಿ ಶೂ- ಸಾಕ್ಸ್, ಬೈಸಿಕಲ್ ನೀಡಲಾಗುತ್ತಿಲ್ಲ. ಈ ನಡುವೆ ಮಧ್ಯಾಹ್ನದ ಬಿಸಿಯೂಟಕ್ಕೆ ಮಕ್ಕಳಿಗೆ ಮೊಟ್ಟೆ ನೀಡದಿರಲು ಎನ್‌ಇಪಿ ಸಮಿತಿ ಶಿಕ್ಷಣ ಇಲಾಖೆಗೆ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ. ಮೊಟ್ಟೆ ಹಾಗೂ …

Read More »

, ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ…

ಗಣಿ & ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ… ಭಾ.ಜ.ಪ ಮುಖಂಡರು, ವಿಜಯಪುರ ನಗರ ಶಾಸಕರಾದ ಸನ್ಮಾನ್ಯ ಶ್ರೀ ಬಸನಗೌಡ ಪಾಟೀಲ ಯತ್ನಾಳರವರು, ಇಂದು ಮಾನ್ಯ ಗಣಿ & ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಸನ್ಮಾನ್ಯ ಶ್ರೀ ಹಾಲಪ್ಪ ಆಚಾರ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ …

Read More »

ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಜಾಗೃತಾ ಸಭೆ

ಅಣ್ಣಿಗೇರಿ ತಾಲೂಕಿನ ಅಂಜುಮನ್ ಶಾದಿ ಮಹಲ್ ನಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಜಾಗೃತಾ ಸಭೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದೆ. ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳ ನೇತ್ರತ್ವದಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಮಾಜದ 2ಎ ಮತ್ತು ಸರಕಾರದಲ್ಲಿ ಓ.ಬಿ.ಸಿ ಮೀಸಲಾತಿಯ ಹೋರಾಟಕ್ಕೆ ಜಯವಾಗಲಿ ಎನ್ನುವ ಘೋಷಣೆಯೊಂದಿಗೆ ಈ ಸಭೆಯನ್ನು ಆಯೋಜಿಸಲಾಗಿದ್ದು, ಸಮಾಜದ ಬೆಳವಣಿಗೆಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಪಂಚಮಸಾಲಿ ಸಮುದಾಯದ ಮಕ್ಕಳ ಶಿಕ್ಷಣ ಹಾಗೂ ಯುವ …

Read More »

ಬೆಳಗಾವಿಯ ಬಿಮ್ಸ್​​ ರಾಜ್ಯಕ್ಕೆ ಪ್ರಥಮ.. ದೇಶದಲ್ಲಿ ಎಷ್ಟನೇ ಸ್ಥಾನ?

ಬೆಳಗಾವಿ: ಕಳೆದ ಎರಡು ವರ್ಷಗಳ ಹಿಂದಷ್ಟೇ ಅವ್ಯವಸ್ಥೆ ಸೇರಿ ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾಗುತ್ತಿದ್ದ ಬೆಳಗಾವಿ ಬಿಮ್ಸ್‌ ಇದೀಗ ಉತ್ತಮ ಮೂಲಸೌಕರ್ಯ, ಆಡಳಿತ ಹಾಗೂ ರೋಗಿಗಳಿಗೆ ಉತ್ತಮ ಸೌಲಭ್ಯ ಒದಗಿಸಿದ್ದಕ್ಕಾಗಿ ದೇಶದ 270ಕ್ಕೂ ಅಧಿಕ ಸರ್ಕಾರಿ ಆಸ್ಪತ್ರೆಗಳ ಪೈಕಿ 12ನೇ ಸ್ಥಾನ ಪಡೆದುಕೊಂಡಿದೆ. ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೆ ಪಾತ್ರವಾಗಿದೆ. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಲ್ಲಾಸ್ಪತ್ರೆ) ಕೋವಿಡ್ ಸೇರಿದಂತೆ ಇತರ ಸಂದರ್ಭದಲ್ಲಿ ಅವ್ಯವಸ್ಥೆ ಬಗ್ಗೆ ಸಾಕಷ್ಟು ಟೀಕೆಗೆ ಗುರಿಯಾಗುತ್ತಿತ್ತು. ಆದರೀಗ ಹದಗೆಟ್ಟ …

Read More »

ಬೆಳಗಾವಿಯಲ್ಲಿ ನಿರಂತರ ಮಳೆ ಮನೆಗಳು ಜಲಾವೃತ

ಬೆಳಗಾವಿ: ಪಶ್ಚಿಮಘಟ್ಟ ಸೇರಿ ಕುಂದಾನಗರಿ ಬೆಳಗಾವಿಯಲ್ಲಿ ನಿರಂತರ ಮಳೆಯಿಂದ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಮನೆಗಳು ಜಲಾವೃತಗೊಂಡ ನಿವಾಸಿಗಳು ಪರದಾಡುವಂತೆ ಆಗಿದೆ. ಅಲ್ಲದೇ, ನೀರು ಹೊರಗೆ ಹಾಕಲು ಹರಸಾಹಸ ಪಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೇಶವ ನಗರ, ಅನ್ನಪೂರ್ಣೇಶ್ವರಿ ನಗರದ ಮನೆಗಳಿಗೆ ನೀರು ನುಗ್ಗಿದೆ. ಕೇಶವ ನಗರದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಬಡಾವಣೆಗಳಲ್ಲಿ ಸರಿಯಾದ ಒಳ ಚರಂಡಿ ವ್ಯವಸ್ಥೆ ಮಾಡದ …

Read More »

ಧಾರಾಕಾರ ಮಳೆಗೆ ಬೈಲಹೊಂಗಲ ತಾಲೂಕಿನ ಯರಗೊಪ್ಪ ಗ್ರಾಮದಲ್ಲಿ ಮನೆಗೋಡೆ ಕುಸಿದಿದೆ.

ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಧಾರಾಕಾರ ಮಳೆಗೆ ಬೈಲಹೊಂಗಲ ತಾಲೂಕಿನ ಯರಗೊಪ್ಪ ಗ್ರಾಮದಲ್ಲಿ ಮನೆಗೋಡೆ ಕುಸಿದಿದೆ. ಹೌದು ಯರಗೊಪ್ಪ ಗ್ರಾಮದ ಜನತಾ ಪ್ಲಾಟ್‍ನಲ್ಲಿರುವ ಈರಪ್ಪ ಚಂದುಗೋಳ ಎಂಬುವರ ಮನೆಗೋಡೆ ಮಳೆಯಿಂದ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿ ಇದ್ದವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಬಿದ್ದರೂ ಸ್ಥಳಕ್ಕೆ ಪಿಡಿಒ ಸೇರಿ ಇತರೆ ಯಾವುದೇ ಅಧಿಕಾರಿಗಳು ಭೇಟಿ ನೀಡದೇ ಇರೋದು ಸಧ್ಯ ತೀವ್ರ ಟೀಕೆಗೆ ಗುರಿಯಾಗಿದೆ. ಗೋಡೆ ಬಿದ್ದ ಮನೆಯಲ್ಲೇ ಕುಟುಂಬಸ್ಥರು ವಾಸಿಸುತ್ತಿದ್ದಾರೆ. …

Read More »

ಬೆಳಗಾವಿಯ ಸ್ಮಶಾನಗಳ ದುಸ್ಥಿತಿ ಹೇಗಿದೆ ಎಂದರೆ ಮೃತರ ಅಂತ್ಯಕ್ರಿಯೆಗೆ ಹೋದವರು ಮರಳಿ ಮನೆಗೆ ಬರುತ್ತಾರೆ ಎನ್ನೋದು ಗ್ಯಾರಂಟಿ ಇಲ್ಲ

ಬೆಳಗಾವಿಯ ಸ್ಮಶಾನಗಳ ದುಸ್ಥಿತಿ ಹೇಗಿದೆ ಎಂದರೆ ಮೃತರ ಅಂತ್ಯಕ್ರಿಯೆಗೆ ಹೋದವರು ಮರಳಿ ಮನೆಗೆ ಬರುತ್ತಾರೆ ಎನ್ನೋದು ಗ್ಯಾರಂಟಿ ಇಲ್ಲ. ಕೆಲವೊಂದು ಸ್ಮಶಾನಗಳಲ್ಲಿ ರಾತ್ರಿಯಾದ್ರೆ ಬೆಳಕಿನ ವ್ಯವಸ್ಥೆ ಇಲ್ಲ, ಮತ್ತೊಂದಿಷ್ಟು ಮುಕ್ತಿಧಾಮಗಳ ಮೇಲ್ಛಾವಣಿಯ ತಗಡುಗಳು ಆಗಲೋ ಈಗಲೋ ಬೀಳುವಂತಾಗಿವೆ. ಹೌದು ನಾವು ತೋರಿಸುತ್ತಿರುವ ಈ ದೃಶ್ಯ ಶಾಹಪುರದ ಮುಕ್ತಿಧಾಮದಲ್ಲಿನ ಅವ್ಯವಸ್ಥೆಯನ್ನು. ಇಲ್ಲಿ ಮೇಲ್ಛಾವಣಿಯಲ್ಲಿ ಹಾಕಿರುವ ತಗಡುಗಳು ಸಂಪೂರ್ಣವಾಗಿ ತುಕ್ಕು ಹಿಡಿದಿವೆ. ಯಾವಾಗ ಬೀಳುತ್ತವೋ ಗೊತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೇ ಮೃತರ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು, …

Read More »

ಬಿಗ್​ಬಾಸ್ ಫೀವರ್ ಶುರು​: 9ನೇ ಸೀಸನ್​ನಲ್ಲಿ ಯಾರೆಲ್ಲ ಡೊಡ್ಮನೆ ಪ್ರವೇಶಿಸಲಿದ್ದಾರೆ? ಇಲ್ಲಿದೆ ಸಂಭವನೀಯ ಪಟ್ಟಿ​.

ಬೆಂಗಳೂರು: ಹೌದು ಸ್ವಾಮಿ… ಈ ಪದ ಕೇಳಿದರೆ ಥಟ್​ ಅಂತಾ ನೆನಪಾಗುವುದು ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​. ಈಗಾಗಲೇ ಯಶಸ್ವಿ 8 ಆವೃತ್ತಿಗಳನ್ನು ಮುಗಿಸಿದ್ದು, 9 ನೇ ಆವೃತ್ತಿಯ ಬಿಗ್​ಬಾಸ್ ಶೋಗೆ ಭರ್ಜರಿ ತಯಾರಿ ನಡೆದಿದೆ.​ ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು …

Read More »

ಎತ್ತಿನ ಕತ್ತಿನ ಭಾರಕ್ಕೆ ನೊಗವಾದ ‘ರೋಲಿಂಗ್ ಸಪೋರ್ಟ್

ಸಾಂಗ್ಲಿ: ಹಳ್ಳಿ ಕಡೆಗಳಲ್ಲಿಎತ್ತು ಯಾವಾಗಲೂ ಬಿಡುವಿಲ್ಲದ ಪ್ರಾಣಿ. ಕೃಷಿಯ ಜೊತೆಗೆ ಬಂಡಿಗಳನ್ನು ಎಳೆಯಲು ಎತ್ತನ್ನು ನಿರಂತರವಾಗಿ ಬಳಸಲಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿಎತ್ತಿನ ಗಾಡಿಗೆ ಅದರ ಸಾಮರ್ಥ್ಯ ಮೀರಿ ಹೊರೆ ಹಾಕಲಾಗುತ್ತದೆ. ಇದರ ನೇರ ಪರಿಣಾಮ ಎತ್ತಿನ ಕುತ್ತಿಗೆಯ ಮೇಲಾಗುತ್ತದೆ. ಇದರ ವಿರುದ್ಧ ಪ್ರಾಣಿ ಪ್ರಿಯರು ಆಗಾಗ್ಗೆ ಧ್ವನಿ ಎತ್ತಿದ್ದಾರೆ. ಆದರೆ, ಎತ್ತಿನ ಕತ್ತಿನ ಹೊರೆ ಮಾತ್ರ ಕಡಿಮೆಯಾಗಿಲ್ಲ. ಆದರೆ ಇದೀಗ ಎತ್ತಿನ ಭಾರ ಕಡಿಮೆ ಮಾಡುವ ಹೊಸ ಸಂಶೋಧನೆಯೊಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. …

Read More »

ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ

ಮುಂಬಯಿ : ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅನುಕ್ರಮವಾಗಿ ಲೀಟರ್‌ಗೆ 5 ಮತ್ತು ಲೀಟರ್‌ಗೆ 3 ರೂಪಾಯಿ ಇಳಿಕೆ ಮಾಡುವುದಾಗಿ ಸಿಎಂ ಏಕನಾಥ್ ಶಿಂಧೆ ಗುರುವಾರ ಘೋಷಿಸಿದ್ದಾರೆ. ಹೊಸ ಸರ್ಕಾರದ ಎರಡನೇ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ 6,000 ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದು ಮಂತ್ರಾಲಯದಲ್ಲಿ ನಡೆದ ಸಂಪುಟ ಸಭೆಯ ನಂತರ ಶಿಂಧೆ ಸುದ್ದಿಗಾರರಿಗೆ ತಿಳಿಸಿದರು.   ಬೆಲೆ ಇಳಿಕೆಯ ನಂತರ, ಮುಂಬೈನಲ್ಲಿ …

Read More »