ಬೆಳಗಾವಿಯ ಬಸವನಕುಡಚಿಯ ಹೊಲಗದ್ದೆಯಲ್ಲಿರುವ ಬಳ್ಳಾರಿ ನಾಲೆಯ ಸೇತುವೆ ಕಾಮಗಾರಿಯು ಅತ್ಯಂತ ತ್ವರಿತವಾಗಿ ನಡೆಯುತ್ತಿದೆ. ಪ್ರತಿ ವರ್ಷ ಮಳೆಯ ಆರ್ಭಟಕ್ಕೆ ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದ್ದು, ಪ್ಲಾಸ್ಟಿಕ್ ಬಾಟಲಿಗಳು ನಾಲಾದಲ್ಲಿ ಜಲಾವೃತವಾಗಿವೆ. ಇಂಜೆಕ್ಷನ್ ಸೂಜಿ ಗದ್ದೆಯಲ್ಲಿ ಹರಡಿ ರೈತರ ಕಾಲಿಗೆ ಚುಚ್ಚುತ್ತಿದೆ. ಗ್ರಾಮಸ್ಥರು ಕಳೆದ 20 ವರ್ಷಗಳಿಂದ ಹಲವು ಬಾರಿ ದೂರು ನೀಡಿದರೂ ಆಡಳಿತ ಗಮನಕ್ಕೆ ತಂದರೂ ಕೂಡ ಯಾವುದೇ ಕೆಲಸವಾಗಿಲ್ಲ. ಹೀಗಾಗಿ ಕುಡಚಿ ಗ್ರಾಮದಲ್ಲಿ ಶಾಸಕ ಅನಿಲ್ ಬೆನಕೆ …
Read More »ಎಪ್ರೀಲ್ ಅಂತ್ಯಕ್ಕೆ ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ: ಶ್ರೀಮಂತ ಪಾಟೀಲ್
ಕಳೆದ ಅನೇಕ ವರ್ಷಗಳಿಂದ ಕಾಗವಾಡ ತಾಲೂಕಿನ ಸಾವಿರಾರು ರೈತರ ಜೀವನಾಡಿಯಾಗಿರುವ ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆ ಬರುವ ಏಪ್ರಿಲ್ ತಿಂಗಳದ ಕೊನೆವರೆಗೆ ಚಾಲನೆಗೊಳ್ಳಲಿದೆ ಎಂದು ಮಾಜಿ ಸಚಿವರು ಹಾಗೂ ಕಾಗವಾಡ ಕ್ಷೇತ್ರ ಶಾಸಕ ಶ್ರೀಮಂತ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಒಂದು ಕಾರ್ಯಕ್ರಮದಲ್ಲಿ ಇನ್ ನ್ಯೂಸ್ ವಾಹಿನಿಗೆ ಮಾಹಿತಿ ನೀಡುವಾಗ ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆಯಿಂದ ಬರಡ ಭೂಮಿಗೆ ನೀರು ಹರಿಸಲಾಗುವುದು ಎಂದು …
Read More »ಬೆಳಗಾವಿಗೆ ಮಂಜೂರಾಗಿದ್ದ ಕರ್ನಾಟಕ ರಾಜ್ಯ ಗ್ರಾಹಕರ ಆಯೋಗ ಪೀಠ ಕಲಬುರಗಿಯಲ್ಲಿ ಕಾರ್ಯಾರಂಭ ಮಾಡಿರುವುದು ದುರ್ದೈವ
ಬೆಳಗಾವಿಗೆ ಮಂಜೂರಾಗಿದ್ದ ಕರ್ನಾಟಕ ರಾಜ್ಯ ಗ್ರಾಹಕರ ಆಯೋಗ ಪೀಠ ಕಲಬುರಗಿಯಲ್ಲಿ ಕಾರ್ಯಾರಂಭ ಮಾಡಿರುವುದು ದುರ್ದೈವದ ಸಂಗತಿ ಎಂದು ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ತಿಳಿಸಿದ್ದಾರೆ. ಬೆಳಗಾವಿಗೆ ಯಾವುದೇ ಒಂದು ಸರಕಾರಿ ಯೋಜನೆ ಪಡೆಯಬೇಕೆಂದರೆ ಹೋರಾಟದ ಮೂಲಕವೆ ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಎಟಿ ಪೀಠ ಸ್ಥಾಪನೆ ಮಾಡುವಾಗ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಳಾಂತರವಾಗುವಾಲು ಹೋರಾಟ, ಬೆಳಗಾವಿಗೆ ಏಮ್ಸ್ ಬರಬೇಕೆಂದು ಹೋರಾಟ ನಡೆಸಲಾಗುತ್ತಿದೆ. ಇದರ ನಡುವೆಯೇ ಬೆಳಗಾವಿಗೆ ಮಂಜೂರಾಗಿದ್ದ …
Read More »ಕರ್ನಾಟಕದ ಉಪಲೋಕಾಯುಕ್ತರಾಗಿರುವ , ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್
ಬೆಂಗಳೂರು : ಕರ್ನಾಟಕದ ಉಪಲೋಕಾಯುಕ್ತರಾಗಿರುವ , ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ ಅವರು ಬುಧವಾರ ಬೆಳಗ್ಗೆ ನೂತನ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ರಾಜ್ಯ ಸರಕಾರ ಬಿ.ಎಸ್. ಪಾಟೀಲ್ ಅವರಿಗೆ ಪದೋನ್ನತಿ ನೀಡಿದ್ದು,ಸರಕಾರದ ಶಿಫಾರಸಿಗೆ ರಾಜ್ಯಪಾಲರಾದ ಗೆಹಲೋಟ್ ಅವರು ಸಹಿ ಹಾಕಿದ್ದಾರೆ. ಬುಧವಾರ ಬೆಳಗ್ಗೆ 9.45 ಕ್ಕೆ ರಾಜ ಭವನದಲ್ಲಿ 9 ನೇ ಲೋಕಾಯುಕ್ತರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಾಯುಕ್ತರಾಗಿದ್ದ ಪಿ. ವಿಶ್ವನಾಥ್ ಶೆಟ್ಟಿ ನಿವೃತ್ತಿ ಘೋಷಿಸಿದ ಬಳಿಕ ಸ್ಥಾನ ತೆರವಾಗಿತ್ತು.
Read More »ಸ್ನೇಹಿತನ ಬರ್ತ್ ಡೇಗೆ ಕ್ಯಾಂಡಲ್ ತರಲು ಹೋದವನ ಮೇಲೆ ಹಲ್ಲೆ
ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಯುವಕನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ತಡರಾತ್ರಿ ನಡೆದಿದೆ. ಅರುಣ್ ಹಲ್ಲೆಗೊಳಗಾದ ವ್ಯಕ್ತಿ. ಅರುಣ್ ಸ್ನೇಹಿತನ ಬರ್ತ್ ಡೇ ಅಂಗವಾಗಿ ಕ್ಯಾಂಡಲ್ ತರಲು ಹೋಗಿದ್ದ. ಬಾಗೇಪಲ್ಲಿಯ ಮುಖ್ಯ ರಸ್ತೆಯ ಬಾರ್ ಬಳಿ ತನ್ನ ಸ್ನೇಹಿತ ರವಿ ನೋಡಿ ಮಾತನಾಡಲು ಬೈಕ್ ನಿಲ್ಲಿಸಿದ್ದಾನೆ. ಈ ವೇಳೆ ರವಿ ಜೊತೆ ಸಲುಗೆಯಿಂದ ಅವಾಚ್ಯ ಶಬ್ದ ಬಳಸಿ ಮಾತನಾಡಿದ್ದನ್ನು ಕಂಡ ರವಿಯ …
Read More »ವಟ ಸಾವಿತ್ರಿ ವ್ರತದ ಮಂಗಳಕರವಾದ ದಿನ ಪೂಜೆ ಸಲ್ಲಿಸಿದ ಶಶಿಕಲಾ ಜೊಲ್ಲೆ
ವಟ ಸಾವಿತ್ರಿ ವ್ರತದ ಮಂಗಳಕರವಾದ ದಿನವಾದ ಇಂದು ನಿಪ್ಪಾಣಿ ತಾಲೂಕಿನ ಭಿವಶಿ ಗ್ರಾಮದಲ್ಲಿ, ಸುಮಂಗಲಿಯರ ಜೊತೆಗೂಡಿ ಆಲದ ಮರಕ್ಕೆ ಶಾಸ್ತ್ರೋಕ್ತವಾಗಿ *ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಯವರು ಪೂಜೆ ಸಲ್ಲಿಸಿದರು.. ಇದೇ ಸಂಧರ್ಭದಲ್ಲಿ ಮಾತನಾಡಿ ಸಚಿವೆ ಜೊಲ್ಲೆ ಪತಿ-ಪತ್ನಿಯರ ನಡುವಿನ ಪವಿತ್ರ ಬಾಂಧವ್ಯದ ಶ್ರೇಷ್ಠತೆಯನ್ನು ಬಿಂಬಿಸುವ, ಸಂಸಾರದೊಂದಿಗೆ ಪಾರಮಾರ್ಥಿಕ ಚಿಂತನೆಯನ್ನು ಬೋಧಿಸುವ ವಿಶೇಷ ಆಚರಣೆ ಇದಾಗಿದೆ. ಹೀಗಾಗಿ ಪತಿಯ ಆಯುಷ್ಯ, ಆರೋಗ್ಯ ವೃದ್ಧಿಯಾಗಿ …
Read More »777 ಚಾರ್ಲಿ’ ಸಿನಿಮಾ ನೋಡಿ ಕಣ್ಣೀರಿಟ್ಟ ಸಿಎಂ
ಸಿಎಂ ಬಸವರಾಜ ಬೊಮ್ಮಾಯಿ ಸ್ವಭಾವತಃ ಮೃದು ವ್ಯಕ್ತಿತ್ವವುಳ್ಳ ಭಾವುಕ ಜೀವಿ. ಸಿನಿಮಾ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಬಗ್ಗೆ ಅಪಾರ ಪ್ರೀತಿ, ಗೌರವುಳ್ಳ ಸಿಎಂ ನಿನ್ನೆ ಒರಾಯಿನ್ ಮಾಲ್‌ನಲ್ಲಿ ‘777 ಚಾರ್ಲಿ’ ಸಿನಿಮಾ ವೀಕ್ಷಿಸಿದ್ದಾರೆ. ಪ್ರಾಣಿ ಪ್ರೇಮಿ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿ, ಕೆಲವು ತಿಂಗಳ ಹಿಂದಷ್ಟೆ ತಮ್ಮ ಮುದ್ದಿನ ನಾಯಿಯನ್ನು ಕಳೆದುಕೊಂಡಿದ್ದರು. ತಮ್ಮ ಪ್ರೀತಿಯ ನಾಯಿ ತೀರಿಕೊಂಡ ದಿನ ಕುಟುಂಬ ಸದಸ್ಯನನ್ನು ಕಳೆದುಕೊಂಡಂತೆ ಕಣ್ಣೀರು ಹಾಕಿದ್ದ ಸಿಎಂ, ನಿನ್ನೆ …
Read More »ಹೊಸ ಕಾರ್ಮಿಕ ನೀತಿ ಬಂದ್ರೆ ವಾರಕ್ಕೆ 4 ದಿನ ಕೆಲಸ, ಉಳಿತಾಯ ಜಾಸ್ತಿ!
ಬೆಂಗಳೂರು, ಜೂ. 14: ಪ್ರತಿ ದಿನ 12 ತಾಸು ಕೆಲಸ.. ನಾಲ್ಕು ದಿನಕ್ಕೆ ವಾರದ 48 ಗಂಟೆ ಕೆಲಸ ಮಾಡಿದ್ರೆ ಸಾಕು, ಉಳಿದ ಮೂರು ದಿನ ರಜೆ! ಹೊಸ ಕಾರ್ಮಿಕ ನೀತಿಯನ್ನು ಜಾರಿಗೆ ತರಲು ಕೇಂದ್ರ ಕಾರ್ಮಿಕ ಸಚಿವಾಲಯ ಮುಂದಾಗಿದೆ. ಅಂದಹಾಗೆ ಜುಲೈ 1 ನೇ ತಾರೀಖಿನಿಂದ ಈ ಹೊಸ ಕಾರ್ಮಿಕ ನೀತಿ ಜಾರಿಗೆ ಬರಲಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಈ ಹೊಸ ಕಾರ್ಮಿಕ ನೀತಿ ಜಾರಿಗೆ …
Read More »ಲಾಡ್ಜ್ ನಲ್ಲಿ ಕತ್ತು ಹಿಸುಕಿ ಪ್ರೇಯಸಿಯನ್ನು ಕೊಂದು ಪರಾರಿಯಾದ ಪ್ರಿಯಕರ
ಬೆಂಗಳೂರು: ಪ್ರೇಯಸಿಯನ್ನು ಪ್ರಿಯಕರನೇ ಉಸಿರುಗಟ್ಟಿಸಿ ಕೊಲೆಗೈದಿರುವ ಘಟನೆ ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಒಡಿಶಾ ಮೂಲದ ದೀಪ ಪದಮ್(32) ಕೊಲೆ ಯಾದ ಮಹಿಳೆ. ಕೃತ್ಯ ಎಸಗಿದ ಆರೋಪಿ ಅನ್ಮಲ್ ರತನ್ ಕಂದರ್‌ಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಆರೋಪಿ ಅನ್ಮಲ್ ರತನ್ ಕಂದರ್ ಕೆಲ ವರ್ಷಗಳ ಹಿಂದೆ ದೀಪಾಲಿ ಎಂಬಾಕೆಯನ್ನು ಒಡಿಶಾದಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಆರೋಪಿ ಬಾಟಾ ಶೋರೂಮ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ದಂಪತಿ ಬೆಂಗಳೂರಿನ …
Read More »40 ದಿನದ ಮಗು ರಾತ್ರೋರಾತ್ರಿ ಆಸ್ಪತ್ರೆಯ ಆವರಣದಲ್ಲೇ ಪತ್ತೆ
ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ತಾಯಿಯ ಮಡಿಲಿನಿಂದ ಅಪಹರಣವಾಗಿದ್ದ 40 ದಿನದ ಮಗು ರಾತ್ರೋರಾತ್ರಿ ಆಸ್ಪತ್ರೆಯ ಆವರಣದಲ್ಲೇ ಪತ್ತೆಯಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಕಪ್ಪು ಬಣ್ಣದ ವ್ಯಕ್ತಿ ಮಡಿಲಿನಲ್ಲಿದ್ದ ಮಗುವನ್ನು ಅಪಹರಿಸಿಕೊಂಡು ಹೋಗಿದ್ದ ಎಂದು ಮಗುವಿನ ತಾಯಿ ದೂರಿದ್ದಳು. ವಿದ್ಯಾನಗರ ಠಾಣೆಯಲ್ಲೂ ಮಗು ಅಪಹರಣ ಪ್ರಕರಣ ದಾಖಲಾಗಿತ್ತು. ಮಗುವಿನ ಪತ್ತೆಗೆ ಮಹಾನಗರ ಪೊಲೀಸ್ ಆಯುಕ್ತರು ಮೂರು ವಿಶೇಷ ತಂಡಗಳನ್ನು ನಿಯೋಜಿಸಿದ್ದರು. ಇದೆಲ್ಲ ಬೆಳವಣಿಗೆ ಕಂಡು ಅಪಹರಣಕಾರರು …
Read More »