ಜೂನ್ 25 1975ರಲ್ಲಿ ಇಂಧಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ದೇಶದಲ್ಲಿ ಹೇರಿದ್ದ ತುರ್ತು ಪರೀಸ್ಥಿತಿಯ ಕರಾಳ ಸತ್ಯವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಬಿಜೆಪಿ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ಎಂಬಿ ಜಿರಲಿ ಹೇಳಿದ್ದಾರೆ. ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಎಂ.ಬಿ ಜಿರಲಿ ರವರು, 1975ರಲ್ಲಿ ದೇಶದಲ್ಲಿ ಹೇರಲಾಗಿದ್ದ ತುರ್ತು ಪರೀಸ್ಥಿತಿಯನ್ನು ಕುರಿತಂತೆ ಬೇಸರ ವ್ಯಕ್ತಪಡಿಸಿದರು. ಜೂನ್ 25, 1975ರಲ್ಲಿ …
Read More »ವಿದ್ಯಾರ್ಥಿಗಳು ಇಂದಿನ ತಾಂತ್ರಿಕ ಯುಗದಲ್ಲಿ ಮೊಬೈಲ್‍ನಿಂದ ದೂರವಿರಬೇಕು: ವಿದ್ಯಾರ್ಥಿಗಳು ಇಂದಿನ ತಾಂತ್ರಿಕ ಯುಗದಲ್ಲಿ ಮೊಬೈಲ್‍ನಿಂದ ದೂರವಿರಬೇಕು
ಗುರಿ ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ, ವಿದ್ಯಾರ್ಥಿಗಳು ಇಂದಿನ ತಾಂತ್ರಿಕ ಯುಗದಲ್ಲಿ ಮೊಬೈಲ್‍ನಿಂದ ದೂರವಿರಬೇಕು. ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಲು ಮುಂದಾಗಬೇಕು ಎಂದು ಮಾಜಿ ವಿಧಾನಪರಿಷತ ಸದಸ್ಯ ಮಹಾಂತೇಶ ಕವಟಗಿಮಠ ತಿಳಿಸಿದರು. ಚಿಕ್ಕೋಡಿಯ ಕೆಎಲ್‍ಇ ಇಂಜನಿಯರಿಂಗ್ ಕಾಲೇಜಿನಲ್ಲಿ ಪದವಿ ಪೂರ್ವ ವಿಜ್ಞಾನ ವಿಭಾಗದ ವಿಧ್ಯಾರ್ಥಿಗಳ ಸ್ವಾಗತ ಸಮಾರಂಭಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಅವರು ಇಡೀ ದೇಶಕ್ಕೆ ಸಿಇಟಿ ಪರಿಚಯಿಸಿದ ಹೆಮ್ಮೆ ನಮ್ಮ ರಾಜ್ಯಕ್ಕೆ ಸಲ್ಲುತ್ತೆ.ವಿಧ್ಯಾರ್ಥಿಗಳು ನಿರಂತರವಾಗಿ …
Read More »ಬಾಳ ಠಾಕ್ರೆ ತರ ಅವ್ರ ಮಗ ಇಲ್ಲ, ನನಗೆ ಗೊಟ್ಟಿದಷ್ಟು ಮಹಾರಾಷ್ಟ್ರ ಬಗ್ಗೆ ಯಾರಿಗೂ ಗೊತ್ತಿಲ್ಲ: ಸಂಜಯ್ ಪಾಟೀಲ್
ಉದ್ಧವ್ ಠಾಕ್ರೆ ಭಾವನಾತ್ಮ ವ್ಯಕ್ತಿ. ಅವರಿಗೆ ರಾಜಕೀಯ ಗೊತ್ತಿಲ್ಲ. ಹೀಗಾಗಿ ಇದನ್ನು ಶರದ್ ಪವಾರ್ ಸರಿಯಾಗಿ ಉಪಯೋಗ ತಿಳಿದುಕೊಳ್ಳುತ್ತಿದ್ದಾರೆ. 50 ಶಾಸಕರು ಹೋದವರಲ್ಲಿ 10 ಜನ ಪಕ್ಷೇತರರು ಹೋಗಿದ್ದಾರೆ. ಅದರಲ್ಲಿ ಶರದ್ ಪವಾರ್ ಕಟ್ಟಾ ಬೆಂಬಲಿಗರಿದ್ದಾರೆ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ತಮ್ಮ ಸ್ವಾರ್ಥಕ್ಕಾಗಿ, ಅಧಿಕಾರ ಬರುತ್ತಿದೆ, ಮುಖ್ಯಮಂತ್ರಿ ಆಗಬೇಕು …
Read More »ಗ್ರೇಡ್ 1 ಮತ್ತು ಗ್ರೇಡ್ 2 ತಹಸಿಲ್ದಾರ ವರ್ಗಾವಣೆಗೊಳಿಸಿ ಸರಕಾರ ಆದೇಶ
, ಬೆಂಗಳೂರು – ಬೆಳಗಾವಿ ಜಿಲ್ಲೆಯ ಕೆಲವರು ಸೇರಿದಂತೆ ಒಟ್ಟೂ 39 ತಹಸಿಲ್ದಾರರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಇವರಲ್ಲಿ ಮೂವರನ್ನು ಸಾರ್ವಜನಿಕರ ದೂರಿನ ಮೇರೆಗೆ ಸೇವೆಯಿಂದ ಹಿಂದಕ್ಕೆ ಪಡೆಯಲಾಗಿದೆ. ಗ್ರೇಡ್ 1 ಮತ್ತು ಗ್ರೇಡ್ 2 ತಹಸಿಲ್ದಾರರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆಗೊಳಿಸಿ ಶುಕ್ರವಾರ ಸರಕಾರ ಆದೇಶ ಹೊರಡಿಸಿದೆ. ರಾಮದುರ್ಗ ತಹಸಿಲ್ದಾರ ರುಕ್ಮಿಣಿ ದಂಡೇಕರ್, ಕಲಬುರಗಿ ಜಿಲ್ಲೆ ಕಾಳಗಿ ತಹಸಿಲ್ದಾರ ರಾಜಕುಮಾರ ಜಾಧವ ಹಾಗೂ ರಾಯಚೂರು …
Read More »ರಾಜ್ಯದ 56 ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ
ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಣ ಎಕ್ಕುಂಡಿ ಸೇರಿದಂತೆ ರಾಜ್ಯದ 56 ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ವರ್ಗಾವಣೆ ಮಾಡಲಾಗಿದ್ದು, ಶಿಕ್ಷಣಾಧಿಕಾರಿ ಇಲ್ಲವೇ ತತ್ಸಮಾನ ಹುದ್ದೆಗಳಿಗೆ ನಿಯುಕ್ತಿಗೊಳಿಸಲಾಗಿದೆ. ಖಾನಾಪುರ ಬಿಇಒ ಲಕ್ಷ್ಮಣ ಎಕ್ಕುಂಡಿ ಅವರನ್ನು ಮುನಿರಾಬಾದ್ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಹಿರಿಯ ಉಪನ್ಯಾಸಕರನ್ನಾಗಿ ವರ್ಗಾಯಿಸಲಾಗಿದೆ. ಚಿಕ್ಕೋಡಿಯ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ದೀಪಕ್ ಕುಲಕರ್ಣಿ ಅವರನ್ನು ಧಾರವಾಡ …
Read More »ಸಣ್ಣ ರಾಜ್ಯಗಳು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿವೆ: ಸತೀಶ ಜಾರಕಿಹೊಳಿ
ಬೆಳಗಾವಿ: ‘ಸಣ್ಣ ರಾಜ್ಯಗಳು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆ ಬಗ್ಗೆ ಸಚಿವ ಉಮೇಶ ಕತ್ತಿ ನೀಡಿದ ಹೇಳಿಕೆಗೆ, ಇಲ್ಲಿ ಸುದ್ದಿಗಾರರಿಗೆ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ರಾಜ್ಯ 3 ಕೋಟಿಗಿಂತ ಅಧಿಕ ಜನಸಂಖ್ಯೆ ಹೊಂದಿದ್ದರೆ ಮತ್ತೊಂದು ರಾಜ್ಯ ರಚಿಸಲು ವಿಶೇಷ ಮಸೂದೆ ಹೊರತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ …
Read More »ಬೆಳಗಾವಿ: ಕನ್ನಡ ಫಲಕ ಕಿತ್ತು ಹಾಕುವುದಾಗಿ ಎಚ್ಚರಿಕೆ ನೀಡಿದವರ ವಿರುದ್ಧ ಎಫ್‌ಐಆರ್
ಬೆಳಗಾವಿ: ಬೆಳಗಾವಿಯಲ್ಲಿನ ಕನ್ನಡ ಬಾವುಟ, ಫಲಕಗಳನ್ನು ಕಿತ್ತು ಹಾಕುತ್ತೇವೆ ಎಂದು ಪೋಸ್ಟ್ ಹಾಕಿದ, ರಾಯಲ್ ಬೆಳಗಾಂವಕರ್ (royal_belgavkar)_ಎನ್ನುವ ಇನ್ಸ್‌ಟಾಗ್ರಾಮ್ ಖಾತೆ ಹೋಲ್ಡರ್ ವಿರುದ್ಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ‘ಜೂನ್ 27ರೊಳಗೆ ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕಬೇಕು. ಇಲ್ಲದಿದ್ದರೆ ಬೆಳಗಾವಿಯಲ್ಲಿ ಒಂದೇ ಒಂದು ಕನ್ನಡ ಬಾವುಟ, ಕನ್ನಡ ಫಲಕ ಇರಲು ಬಿಡುವುದಿಲ್ಲ. ತಲ್ವಾರ್ ರೆಡಿ ಮಾಡಿಕೊಳ್ಳಿ. ಇದು ಮನವಿಯಲ್ಲ. ಎಚ್ಚರಿಕೆ’ ಎಂಬ ಪೋಸ್ಟ್ ಮಾಡಿ, ಬೆಳಗಾವಿಯಲ್ಲಿ ಭಾಷಾ …
Read More »ಅಪ್ಡೇಟ್ ಆದ ಮತದಾರರ ಪಟ್ಟಿಯ ಹೆಸರು ಆನ್ಲೈನ್ನಲ್ಲಿ ಹುಡುಕುವುದು ಹೇಗೆ?
ಮತದಾರರ ಪಟ್ಟಿ ಅಪ್ಡೇಟ್ ಆದ ನಂತರ ಆನ್‌ಲೈನ್ ಮೂಲಕ ಹೆಸರು ಕಂಡುಹಿಡಿಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ಹಂತಹಂತವಾಗಿ ವಿವರಿಸಲಾಗಿದೆ.ಭಾರತ ಚುನಾವಣಾ ಆಯೋಗವು (Election Commission Of India) ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಲು ಮತದಾರರಿಗೆ ಆನ್‌ಲೈನ್ ಮತ್ತು ತಡೆರಹಿತ ಸೌಲಭ್ಯವನ್ನು ಒದಗಿಸುತ್ತದೆ. ಹುಡುಕಾಟ ನಡೆಸಲು ಮೊದಲ ಹೆಸರು, ಕೊನೆಯ ಹೆಸರು, ವಿಧಾನಸಭಾ ಕ್ಷೇತ್ರ, ಲಿಂಗ ಇತ್ಯಾದಿ ವಿವರಗಳು ಅಗತ್ಯವಿದೆ. ಅದಕ್ಕೆ ಬದಲಾಗಿ, ಈ ಹುಡುಕಾಟವನ್ನು ನಡೆಸಲು EPIC …
Read More »ಟೋಲ್) ಶೇ 20ರಷ್ಟು ಹೆಚ್ಚಳ
ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ ಹಾಗೂ ಅತ್ತಿಬೆಲೆ ರಸ್ತೆ ಬಳಕೆ ಶುಲ್ಕವನ್ನು (ಟೋಲ್) ಶೇ 20ರಷ್ಟು ಹೆಚ್ಚಳ ಮಾಡಲಾಗಿದ್ದು, ಜುಲೈ 1ರಿಂದ ಪರಿಷ್ಕೃತ ಶುಲ್ಕ ಜಾರಿಗೆ ಬರಲಿದೆ. ಈ ಶುಲ್ಕವು 2023ರ ಜೂನ್ 30ರವರೆಗೆ ಜಾರಿಯಲ್ಲಿರಲಿದೆ’ ಎಂದು ಬೆಂಗಳೂರು ಎಲಿವೇಟೆಡ್ ಟೋಲ್‌ವೇ ಕಂಪನಿ ಅಧಿಕಾರಿಯೊಬ್ಬರು ತಿಳಿಸಿದರು. ‘ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್ ಸಿಟಿ ಹಾಗೂ ಅತ್ತಿಬೆಲೆ ಎರಡೂ ಟೋಲ್‌ಗೇಟ್‌ಗಳಿಗೂ ಪರಿಷ್ಕೃತ ಶುಲ್ಕ ಅನ್ವಯವಾಗಲಿದೆ’ ಎಂದು ಹೇಳಿದರು. ಶುಲ್ಕ ಹೆಚ್ಚಳಕ್ಕೆ ವಿರೋಧ: ಸಿಲ್ಕ್ …
Read More »ಶಿವಸೇನಾ ಕಾರ್ಯಕರ್ತರ ಪ್ರತಿಭಟನೆ ಸಾಧ್ಯತೆ; ‘ಮಹಾ’ ಪೊಲೀಸರಿಂದ ಮುನ್ನೆಚ್ಚರಿಕೆ
ಮುಂಬೈ: ಶಿವಸೇನಾ ಶಾಸಕ ಏಕನಾಥ ಶಿಂಧೆ ಹಾಗೂ ಅವರ ಬೆಂಬಲಿಗರ ಬಂಡಾಯದಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ. ಇದರಿಂದ ಆಕ್ರೋಶಗೊಂಡಿರುವ ಶಿವಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು, ರಾಜ್ಯದಾದ್ಯಂತ ಮುನ್ನೆಚ್ಚರಿಕೆಯ ಸೂಚನೆ ನೀಡಲಾಗಿದೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಿಂಧೆ ಬೆಂಬಲಿಗರ ಫ್ಲೆಕ್ಸ್ ಬೋರ್ಡ್‌ಗಳ ಮೇಲೆ ಸೇನಾ ಕಾರ್ಯಕರ್ತರು ದಾಳಿ ನಡೆಸಿರುವ ಹಲವು ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ಎಲ್ಲ ಜಿಲ್ಲೆಗಳ ಉನ್ನತಾಧಿಕಾರಿಗಳಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು …
Read More »