ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಮಹಾರಾಷ್ಟ್ರ ಸರ್ಕಾರಕ್ಕೆ ಬಹುಮತ ಸಾಬೀತು ಮಾಡಲು ಸೂಚನೆ ನೀಡುವಂತೆ ಮನವಿ ಮಾಡಿದ್ದಾಗಿ ವರದಿಯಾಗಿದೆ. ಮಹಾವಿಕಾಸ್ ಆಘಾಡಿ ಮೈತ್ರಿ ಸರ್ಕಾರದಲ್ಲಿ ಬಿರುಕು ಉಂಟಾಗಿರುವ ಬೆನ್ನಲ್ಲೇ ಇಂದು ಬೆಳಗ್ಗೆ ದೆಹಲಿ ಪ್ರವಾಸ ಕೈಗೊಂಡಿದ್ದ ಫಡ್ನವೀಸ್, ಗೃಹ ಸಚಿವ ಅಮಿತ್ ಶಾ ಹಾಗೂ …
Read More »ರೈತ, ಮಣ್ಣು ಹಾಗೂ ಎತ್ತುಗಳ ನಡುವಿನ ಅನನ್ಯ ಸಂಬಂಧವೇ ಮಣ್ಣೆತ್ತಿನ ಅಮವಾಸ್ಯೆ:
ಉತ್ತರ ಕರ್ನಾಟಕ ವಿಶಿಷ್ಟ ಸಂಪ್ರದಾಯಗಳ ಆಚರಣೆಗೆ ಹೆಸರುವಾಸಿ. ಅದರಲ್ಲೂ ರೈತಾಪಿ ವರ್ಗದವರು ಪ್ರಕೃತಿಯಲ್ಲಿ ದೈವತ್ವವನ್ನು ಕಾಣುತ್ತಾರೆ. ತಮ್ಮ ಬದುಕಿಗೆ ಆಸರೆಯಾಗುವ ಎತ್ತುಗಳನ್ನು ಪ್ರೀತಿಯಿಂದ ಪೂಜಿಸಿ ಸಂಭ್ರಮಿಸುವ ಹಬ್ಬವೇ ಮಣ್ಣೆತ್ತಿನ ಅಮವಾಸ್ಯೆ. ಇಂತಹ ವಿಶಿಷ್ಠವಾದ ಹಬ್ಬವೇ ಮಣ್ಣಿನ ಮಕ್ಕಳು ಬಸವನಾಡು ವಿಜಯಪುರದಲ್ಲಿ ಸಂಭ್ರಮದಿಂದ ಆಚರಿಸಿದರು. .ನಮ್ಮ ದೇಶ ಹಬ್ಬ ಹರಿದಿನಗಳ ನಾಡು. ಇಲ್ಲಿ ಸಂಸ್ಕೃತಿ ಸಂಸ್ಕಾರಗಳಿಗೆ ವಿಶೇಷ ಮಹತ್ವವಿದೆ. ನಾವೆಲ್ಲ ಕಲ್ಲು ಮಣ್ಣಿನಲ್ಲಿ, ಪ್ರಕೃತಿ ಯಲ್ಲಿ ದೈವತ್ವವನ್ನು ಕಾಣುತ್ತೇವೆ. ಮಣ್ಣಿನಿಂದ ಎತ್ತುಗಳನ್ನು …
Read More »T.C.ಕೊಡಲು ರೈತನಿಂದ ಲಂಚ ಪಡೆಯುತ್ತಿದ್ದ ಲೈನ್ ಮನ್ ಎಸಿಬಿ ಬಲೆಗೆ
ಅಕ್ರಮ ಸಕ್ರಮ ಯೋಜನೆಯಡಿ ಟಿಸಿ ಕೊಡಲು ರೈತನಿಂದ ಲಂಚ ಪಡೆಯುತ್ತಿದ್ದ ಲೈನ್ ಮನ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಮರಗೂರ ಕ್ರಾಸ್ ಬಳಿಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಲೈನ್ ಮನ್ ಸಂಜೀವ ಶಿವಲಿಂಗಪ್ಪ ಅಂಬಿ ಬಂಧಿತ ಆರೋಪಿ. ರೈತನಿಗೆ ಟಿಸಿ ಕೊಡಲು ಬರೋಬ್ಬರಿ 25 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದ. ಮರಗೂರ ಕ್ರಾಸ್ ಬಳಿಯ ಬಸ್ ನಿಲ್ದಾಣದಲ್ಲಿ ರೈತನಿಂದ ಹಣ ಪಡೆಯುವ ವೇಳೆ ಎಸಿಬಿ …
Read More »ಟಾರ್ಗೆಟ್ 150 ಗುರಿ ತಲುಪಲ್ಲ: ಬಿಜೆಪಿ ಹೈಕಮಾಂಡ್ಗೆ ಆಂತರಿಕ ಸಮೀಕ್ಷಾ ವರದಿಗಳ ಆಘಾತ
ಕೇಸರಿ ನಾಯಕರು ಹೋದಲ್ಲಿ ಬಂದಲ್ಲಿ 150 ಸೀಟು ಗೆಲ್ಲುತ್ತೇವೆ ಎಂದು ಭಾಷಣ ಮಾಡುತ್ತಿದ್ದಾರೆ. ಆದರೆ, ಅಂದುಕೊಂಡಷ್ಟು ಬಿಜೆಪಿಗೆ ಗೆಲುವು ಸುಲಭವಲ್ಲ ಎನ್ನುವ ಮಾಹಿತಿ ಇದೀಗ ಮತ್ತೊಮ್ಮೆ ಹೊರ ಬಂದಿದೆ. ಬಿಜೆಪಿಯೇ ನಡೆಸಿದ ಆಂತರಿಕ ಸಮೀಕ್ಷೆಯ ಪ್ರಕಾರ ಪಕ್ಷಕ್ಕೆ ಬಹುಮತ ಕಷ್ಟವಂತೆ.. ಬೆಂಗಳೂರು : ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಾಧ್ಯತೆಗಳಿಗೆ ಪೂರಕವಲ್ಲದ ಸಮೀಕ್ಷಾ ವರದಿಗಳು ಬಿಜೆಪಿ ಹೈಕಮಾಂಡ್ ಕೈ ಸೇರಿವೆ. ದಕ್ಷಿಣ ಭಾರತದ ಹೆಬ್ಬಾಗಿಲಿನಲ್ಲಿ ಮತ್ತೊಮ್ಮೆ ಕಮಲ ಧ್ವಜ …
Read More »ನೂತನ ಲೋಕಾಯುಕ್ತರಿಂದ ಸಬ್‌ರಿಜಿಸ್ಟರ್ ಕಚೇರಿ ಮೇಲೆ ದಾಳಿ
ಬೆಂಗಳೂರು, ಜೂನ್ 28: ನೂತನ ಲೋಕಾಯುಕ್ತರಾಗಿ ಅಧಿಕಾರವನ್ನು ವಹಿಸಿಕೊಂಡಿರುವ ನ್ಯಾ. ಬಿ. ಎಸ್. ಪಾಟೀಲ್ ಕಾರ್ಯಾಚರಣೆಗೆ ಇಳಿದಿದ್ದಾರೆ. ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಡೆಯುತ್ತಿದ್ದ ವ್ಯಾಪಕ ಭ್ರಷ್ಟಾಚಾರದ ವಿರುದ್ದ ಸಮರ ಸಾರಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವ್ಯಾಪಕ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಸೇರಿದಂತೆ 10 ಉಪ ನೋಂದಣಾಧಿಕಾರಿಗಳ ಕಚೇರಿಗಳ ಮೇಲೆ ಲೋಕಾಯುಕ್ತ ನ್ಯಾ. ಬಿ. ಎಸ್. ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. …
Read More »ಪ್ರಿಯಕರನ ಜೊತೆ ಲವ್ವಿಡವ್ವಿ: ಬೆಡ್ ರೂಮಿನಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಕ್ಕೆ ಪತಿಯ ಕೊಲೆ
ಪ್ರಿಯತಮನ ಜೊತೆ ಲವ್ವಿಡವ್ವಿ ಮಾಡುವಾಗ ಮಹಿಳೆಯೊಬ್ಬಳು ತನ್ನ ಪತಿಯ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಬೆಡ್‍ರೂಮಿನಲ್ಲಿ ಸಿಕ್ಕಿಬಿದ್ದ ಘಟನೆ ತುಮಕೂರಿನ ನಗರದ ಶಿರಾಗೇಟ್‍ನ ಹೊಂಬಯ್ಯನ ಪಾಳ್ಯದಲ್ಲಿ ನಡೆದಿದೆ.ವಿದ್ಯಾ ಪತಿಯನ್ನೇ ಕೊಲೆ ಮಾಡಿದ ಪತ್ನಿ. ಮದುವೆಯಾಗಿ ಮಕ್ಕಳಿದ್ದರೂ ವಿದ್ಯಾಗೆ ಪಡ್ಡೆ ಹುಡುಗರ ಹುಚ್ಚು ಜೋರಾಗಿತ್ತು ಎನ್ನಲಾಗಿದೆ. ಪತಿ ಇಲ್ಲದ ಸಮಯ ನೋಡಿ ವಿದ್ಯಾ ಯುವಕ ಸತೀಶ್ ಅಲಿಯಾಸ್ ಜಾಕಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಪತಿ ಕೆಲಸಕ್ಕೆಂದು ಮುಂಬೈಗೆ ಹೋದಾಗ …
Read More »ಇಡಿ ನೋಟಿಸ್, ಪಾರ್ಟಿ ಮೀಟಿಂಗ್: ದೆಹಲಿಗೆ ಹೊರಟ ಡಿ.ಕೆ .ಶಿ.
ಬೆಂಗಳೂರು: ಇಡಿ ನೋಟಿಸ್ ಮತ್ತು ಪಕ್ಷದ ಸಭೆಗಳಲ್ಲಿ ಭಾಗಿಯಾಗುವ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೆಹಲಿಗೆ ಹೊರಟಿದ್ದಾರೆ. ಇದಕ್ಕೂ ಮೊದಲು ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ನಮ್ಮ ಪಕ್ಷದ ಸಭೆಯಿದೆ. ಭಾರತ ಜೋಡು ಅಭಿಯಾನದ ಬಗ್ಗೆ ಸಭೆಯಿದೆ. ಇನ್ನೂ ಹಲವಾರು ವಿಚಾರಗಳು ಅಲ್ಲಿ ಚರ್ಚೆಯಾಗುತ್ತದೆ ಎಂದರು. ಇಡಿ ಕೇಸ್ ಇದೆ, ನನಗೆ ನೋಟಿಸ್ ಕೊಟ್ಟಿದ್ದಾರೆ. ಒಂದನೇ ತಾರೀಕು ವಿಚಾರಣೆಗೆ ಹಾಜರಾಗಬೇಕಿದೆ, ಅದಕ್ಕೆ ಈಗ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು …
Read More »ಕೇಂದ್ರ ಸಚಿವ ಸೊಮಪ್ರಕಾಶ ಊಟ ಮಾಡಬೇಕಿದ್ದ ದಲಿತರ ಮನೆಯಲ್ಲಿಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್‍ಸಿ ಚನ್ನರಾಜ ಹಟ್ಟಿಹೊಳಿ ಭಾವಚಿತ್ರದ ಕ್ಯಾಲೆಂಡರ್
ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ 8ವರ್ಷ ಪೂರೈಸುದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸೊಮಪ್ರಕಾಶ ಊಟ ಮಾಡಬೇಕಿದ್ದ ದಲಿತರ ಮನೆಯಲ್ಲಿ ‘ಕೈ’ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರದ ಕ್ಯಾಲೆಂಡರ್ ಕಂಡು ಬಿಜೆಪಿ ನಾಯಕರು ಧಂಗಾಗಿದ್ದಾರೆ. ಮಾಧ್ಯಮಗಳು ಅದನ್ನು ಚಿತ್ರೀಕರಿಸಲು ಪ್ರಾರಂಭಿಸುತ್ತಲೇ ಬಿಜೆಪಿ ಕಾರ್ಯಕರ್ತರು ಕ್ಯಾಲೆಂಡರ್‍ನ್ನು ತೆರವು ಮಾಡಿದ್ದಾರೆ. ಕೇಂದ್ರ ಸರಕಾರಕ್ಕೆ ಈಗ 8ವರ್ಷದ ಸಂಭ್ರಮ. ಈ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆಯ ರಾಜ್ಯ ಖಾತೆಯ ಸಚಿವ …
Read More »40% ಕಮಿಷನ್ ಆರೋಪ: ಮಾಹಿತಿ ನೀಡಲು ಗುತ್ತಿಗೆದಾರರ ಸಂಘಕ್ಕೆ ಪ್ರಧಾನಿ ಕಾರ್ಯಾಲಯದ ಕರೆ
ಬೆಂಗಳೂರು: ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ 40% ಕಮಿಷನ್ ಆರೋಪ ಇದೀಗ ಮತ್ತೊಂದು ತಿರುವು ಪಡೆದಿದೆ. ಈ ಬಗ್ಗೆ ಸ್ವತಃ ಪ್ರಧಾನಿ ಕಾರ್ಯಾಲಯ ಮಾಹಿತಿ ಕೇಳಿದ್ದು, ಹಲವರಿಗೆ ನಡುಕ ಶುರುವಾಗಿದೆ. 40% ಕಮೀಷನ್ ಆರೋಪ ಮಾಡಿದ್ದ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣಗೆ ಮಾಹಿತಿ ನೀಡಲು ಪ್ರಧಾನಿ ಕಚೇರಿಯಿಂದ ಸೂಚನೆ ಬಂದಿದೆ. ನಮ್ಮ ಅಧಿಕಾರಿಗಳು ಸಂಪರ್ಕಿಸುತ್ತಾರೆ. ಭ್ರಷ್ಟಾಚಾರದ ದಾಖಲೆ ನೀಡುವಂತೆ ಪ್ರಧಾನಿ ಕಚೇರಿಯಿಂದ ಕರೆ ಮಾಡಲಾಗಿದೆ ಎನ್ನಲಾಗಿದೆ. ಮೋದಿ …
Read More »ಸಿದ್ದರಾಮಯ್ಯ ಅಮೃತ ಮಹೋತ್ಸವ: ಕಾಂಗ್ರೆಸ್ ನಾಯಕರಿಗೆ ನಡುಕ ಆರಂಭ!
ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಎಪ್ಪತ್ತೈದನೇ ವರ್ಷದ ( ಅಮೃತ ಮಹೋತ್ಸವ ) ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅವರ ಆಪ್ತ ಬಣ ಸಂಚಾಲನ ಸಮಿತಿ ರಚನೆ ಮಾಡಿರುವುದು ಕಾಂಗ್ರೆಸ್ ವಲಯದಲ್ಲಿ ಡವಡವ ಸೃಷ್ಟಿಸಿದೆ. ಆ. 3 ರಂದು ದಾವಣೆಗೆರೆಯಲ್ಲಿ ಆಯೋಜಿಸಿರುವ ಈ ಅಮೃತ ಮಹೋತ್ಸವ ಕಾರ್ಯಕ್ರಮ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ವೇದಿಕೆ ಎಂದೇ ಕಾಂಗ್ರೆಸಿಗರು ವಿಶ್ಲೇಷಣೆ ನಡೆಸುತ್ತಿದ್ದಾರೆ. ಮೈಸೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಅಹಿಂದ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದ್ದಕ್ಕೆ …
Read More »