ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ಗಳು ಬಳಸುತ್ತಿರುವ ಬ್ರಿಟಿಷರ ಕಾಲದ ಕ್ಯಾಪ್ಗಳ ಬದಲಾವಣೆಯ ಚರ್ಚೆಗಳು ಚಾಲ್ತಿಯಲ್ಲಿರುವಾಗ, ಅನ್ಯ ರಾಜ್ಯಗಳಲ್ಲಿ ಪೊಲೀಸ್ ಕಾನ್ಸ್ಟೇಬಲ್ಗಳು ಧರಿಸುತ್ತಿರುವ ಟೋಪಿಗಳ ಮಾದರಿಗಳನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವೀಕ್ಷಿಸಿದ್ದಾರೆ. ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಇಂದು ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಭೆ ನಡೆಸಿದ ಅವರು, ಮಹಾರಾಷ್ಟ್ರ, ದೆಹಲಿ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪೊಲೀಸ್ ಕಾನ್ಸ್ಟೇಬಲ್ಗಳು ಬಳಸುತ್ತಿರುವ ಕ್ಯಾಪ್ಗಳನ್ನು ಪರಿಶೀಲಿಸಿದರು. …
Read More »ಧಾರವಾಡದಲ್ಲಿ ಸರ್ಕಾರಿ ಕಚೇರಿ ಆವರಣದಲ್ಲಿಯೇ ಕಳ್ಳರ ಕೈಚಳಕತೋರಿದ ಖದೀಮರು….. ಶ್ರೀಗಂಧ ಮರ ಕದ್ದುಕೊಂಡು ಹೋದ ಚಾಲಾಕಿ ಕಳ್ಳರು
ಧಾರವಾಡದಲ್ಲಿ ಸರ್ಕಾರಿ ಕಚೇರಿ ಆವರಣದಲ್ಲಿಯೇ ಕಳ್ಳರ ಕೈಚಳಕತೋರಿದ ಖದೀಮರು….. ಶ್ರೀಗಂಧ ಮರ ಕದ್ದುಕೊಂಡು ಹೋದ ಚಾಲಾಕಿ ಕಳ್ಳರು ಇತ್ತಚ್ಚೆಗೆ ಧಾರವಾಡ ಸರ್ಕಾರಿ ಕ್ವಾಟರ್ಸ ಸೇರಿ ಕಚೇರಿ ಆವರಣದಲ್ಲಿರೋ ಶ್ರೀ ಗಂಧ ಮರಗಳಿಗೆ ರಕ್ಷಣೆ ಇಲ್ಲದಂತಾಗಿರುವುದರ ಜತೆಗೆ ಕಳ್ಳರಿಗೂ ಕಾನೂನಿ ಭಯಯು ಇಲ್ಲದಂತಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಜಿಲ್ಲಾ ಡಿಡಿಎಲ್ಆರ್ ಕಚೇರಿ ಆವರಣದಲ್ಲಿನ ಶ್ರೀಗಂಧ ಕದ್ದುಕೊಂಡು ಚಾಲಾಕಿ ಕಳ್ಳರು ಪರಾರಿಯಾಗಿದ್ದಾರೆ. ಹೌದು ಧಾರವಾಡದ ಭೂಮಾಪನಾ ಇಲಾಖೆ (ಡಿಡಿಎಲ್ಆರ್) ಆವರಣದಲ್ಲಿದ್ದ ಮೂರು ಶ್ರೀಗಂಧದ …
Read More »ಯುದ್ಧೋಪಾದಿಯಲ್ಲಿ ಕೋಟೆ ಕೆರೆ ನಾಲೆಯ ಸ್ವಚ್ಛತೆ ಶಾಸಕ ಆಸೀಫ್ ಸೇಠ್ ಮತ್ತು ನಗರಸೇವಕರಿಂದ ಪರಿಶೀಲನೆ
ಯುದ್ಧೋಪಾದಿಯಲ್ಲಿ ಕೋಟೆ ಕೆರೆ ನಾಲೆಯ ಸ್ವಚ್ಛತೆ ಶಾಸಕ ಆಸೀಫ್ ಸೇಠ್ ಮತ್ತು ನಗರಸೇವಕರಿಂದ ಪರಿಶೀಲನೆ ಮಾನ್ಸೂನ್ ಸಮಯದಲ್ಲಿ ನಿರ್ಮಾಣವಾದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಇಂದು ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಅವರು ಬೆಳಗಾವಿ ಕೋಟೆ ಕೆರೆಗೆ ಭೇಟಿ ನೀಡಿ ಬ್ಲಾಕೇಜ್ ಸ್ವಚ್ಛತೆಗಾಗಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ಪರಿಶೀಲನೆ ನಡೆಸಿದರು. ಇಂದು ಬೆಳಗಾವಿಯ ಉತ್ತರ ಶಾಸಕ ಆಸೀಫ್ ಸೇಠ್ ಅವರು ಬೆಳಗಾವಿಯ ಕೋಟೆ ಕೆರೆಗೆ ಭೇಟಿ ನೀಡಿ ಬೃಹತ್ ನಾಲೆ ಶುದ್ಧಿಕರಣಕ್ಕಾಗಿ …
Read More »ಮೂಡಲಗಿ ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿ ಸಿದ್ದರಾಮ ಸ್ವಾಮೀಜಿಯವರ ನಡೆಯ ಕುರಿತು ಭಕ್ತರಲ್ಲಿ ಉಂಟಾಗಿದ್ದ ಗೊಂದಲವು ಸುಖಾಂತ್ಯ ಕಂಡಿದೆ.
ಗೋಕಾಕ: ಮೂಡಲಗಿ ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿ ಸಿದ್ದರಾಮ ಸ್ವಾಮೀಜಿಯವರ ನಡೆಯ ಕುರಿತು ಭಕ್ತರಲ್ಲಿ ಉಂಟಾಗಿದ್ದ ಗೊಂದಲವು ಸುಖಾಂತ್ಯ ಕಂಡಿದೆ. ನಗರದ ಶೂನ್ಯ ಸಂಪಾದನ ಮಠದಲ್ಲಿ ಗುರುವಾರ ಸಂಜೆ ನಾನಾ ಶ್ರೀಗಳೊಂದಿಗೆ ಕ್ಷೇತ್ರದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿವಾಪೂರ (ಹ) ದ ಅಡವಿ ಸಿದ್ದೇಶ್ವರ ಶ್ರೀಗಳ ತಪ್ಪು ಕಾಣದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮಠದಲ್ಲಿಯೇ ಮುಂದುವರಿಯಲು ಅಡವಿಸಿದ್ದರಾಮ ಸ್ವಾಮೀಜಿಗೆ ಅವಕಾಶ …
Read More »ಮನೆ ಬಿದ್ದು ಹಾನಿ; ಪಟ್ಟಣ ಪಂಚಾಯಿತಿ ಸದಸ್ಯೆಯಿಂದ ಪರಿಶೀಲನೆ
ಮನೆ ಬಿದ್ದು ಹಾನಿ; ಪಟ್ಟಣ ಪಂಚಾಯಿತಿ ಸದಸ್ಯೆಯಿಂದ ಪರಿಶೀಲನೆ ಮಳೆಯ ಅಬ್ಬರಕ್ಕೆ ಖಾನಾಪೂರ ಪಟ್ಟಣದ ಮನೆಯೊಂದು ಬಿದ್ದು ಹಾನಿಯುಂಟಾಗಿದ್ದು, ಪಟ್ಟಣ ಪಂಚಾಯಿತಿ ಸದಸ್ಯೆ ಮೇಘಾ ಕುಂದರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಖಾನಾಪೂರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂಬರ್ 15 ರಲ್ಲಿ ಮಳೆಯ ಅಬ್ಬರಕ್ಕೆ ಮನೆಯೊಂದು ಬಿದ್ದು ಹಾನಿಯಾಗಿದ್ದು ಯಾವುದೇ ರೀತಿಯ ಪ್ರಾಣಹಾನಿ ಆಗಿಲ್ಲ ಈ ಕುರಿತು ಪಟ್ಟಣ ಪಂಚಾಯಿತಿ ಸದಸ್ಯೆ ಮೇಘಾ ಕುಂದರಗಿ ಅವರು ಮಾಹಿತಿ …
Read More »ಹಾಲಿವುಡ್ ಕ್ರೈಂ ಸ್ಟೋರಿ ನೋಡಿ ದರೋಡೆ;ಶಾಲೆ ನಡೆಸುತ್ತಿದ್ದವನ ಕ್ಯಾಸಿನೋ ಚಟಕ್ಕೆ ಬಿಗ್ ರಾಬರಿ;ಪಾರ್ಟ್ ಒಂದೇ ಹೀಗಾದರೆ ಪಾರ್ಟ್ 2 ಅದ್ಹೇಂಗೋ?
ಹಾಲಿವುಡ್ ಕ್ರೈಂ ಸ್ಟೋರಿ ನೋಡಿ ದರೋಡೆ;ಶಾಲೆ ನಡೆಸುತ್ತಿದ್ದವನ ಕ್ಯಾಸಿನೋ ಚಟಕ್ಕೆ ಬಿಗ್ ರಾಬರಿ;ಪಾರ್ಟ್ ಒಂದೇ ಹೀಗಾದರೆ ಪಾರ್ಟ್ 2 ಅದ್ಹೇಂಗೋ? ಇದು ಬೇಲಿಗೆ ಎದ್ದು ಹೊಲ ಮೆಯ್ದೆ ಕಥೆಯಾಗಿದೆ. ಬ್ಯಾಂಕ್ ಕಳ್ಳತನ ಪ್ರಕರಣವನ್ನ ವಿಜಯಪುರ ಪೊಲೀಸರು ಭೇದಿಸಿದ್ದಾರೆ. ವಿಶೇಷ ಅಂದ್ರೆ ಈ ಕಳ್ಳತನ ಮಾಡಿದ್ದು ಬೇರಾರು ಅಲ್ಲ ಅದೇ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಖದೀಮ. ರಾಜ್ಯದಲ್ಲೇ ಅತ್ಯಂತ ದೊಡ್ಡ ಕಳ್ಳತನ ಪ್ರಕರಣ ಇದಾಗಿದೆ. ಇನ್ನೂ ಎಸ್ …
Read More »ಎಸ್ ಪಿ ಲಕ್ಷ್ಮಣ ನಿಂಬರಗಿಯವರಿಗೆ ಪುಸ್ತಕದ ಕಾಣಿಕೆ ನೀಡಿ ಅಭಿನಂದಿಸಿದ ಸಚಿವ ಎಂ.ಬಿ.ಪಾಟೀಲ
ಎಸ್ ಪಿ ಲಕ್ಷ್ಮಣ ನಿಂಬರಗಿಯವರಿಗೆ ಪುಸ್ತಕದ ಕಾಣಿಕೆ ನೀಡಿ ಅಭಿನಂದಿಸಿದ ಸಚಿವ ಎಂ.ಬಿ.ಪಾಟೀಲ ಕಳೆದ ತಿಂಗಳು ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ನಡೆದ ಕೆನರಾ ಬ್ಯಾಂಕ್ ದರೋಡೆ ಪ್ರಕರಣ, ರಾಜ್ಯದ ಇತಿಹಾಸದಲ್ಲಿಯೇ ಅತಿದೊಡ್ಡ ಡಕಾಯಿತಿ ಪ್ರಕರಣವಾಗಿ, ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಇದನ್ನು ಬೇಧಿಸುವಲ್ಲಿ ಯಶಸ್ವಿಯಾದ ವಿಜಯಪುರ ಪೊಲೀಸರ ಕಾರ್ಯಕ್ಕೆ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಶ್ಲಾಘಿಸಿದ್ದಾರೆ. ವಿಜಯಪುರ ಜಿಲ್ಲೆಯ ಪೋಲಿಸ್ ಅಧಿಕಾರಿಗಳು ತಮ್ಮ ಚುರುಕಿನ ಕಾರ್ಯಾಚರಣೆಯಿಂದ ರಾಜ್ಯದ ಜನತೆಯ …
Read More »ಚಲಿಸುತ್ತಿರುವಾಗಲೇ ಕಳಚಿದ ಸರ್ಕಾರಿ ಬಸ್ ಚಕ್ರ
ಗದಗ, ಜೂನ್ 27: ಜಿಲ್ಲೆಯ ಶಿರಹಟ್ಟಿಯ ಬಳಿ ಬೆಳ್ಳಟ್ಟಿಯಿಂದ ಶಿರಹಟ್ಟಿಗೆ ತೆರಳುತ್ತಿದ್ದ ಬಸ್ನ (Bus) ಮುಂಭಾಗದ ಚಕ್ರ ಚಲಿಸುದ್ದ ವೇಳೆಯೇ ಕಳಚಿಕೊಂಡಿರುವಂತಹ ಘಟನೆ ನಡೆದಿದೆ. ಅದೃಷ್ಟವಶಾತ್, ಚಾಲಕನ ಸಮಯಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಕೋಟಾ ಬಸ್ಗಳ ಬಳಕೆಯ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಹೊಸ ಬಸ್ಗಳನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.
Read More »ಸಾಲದ ಹಣಕ್ಕಾಗಿ ವ್ಯಕ್ತಿಯನ್ನ ಒತ್ತೆ ಇಟ್ಟುಕೊಂಡ ಸಾಲಗಾರ
ವಿಜಯಪುರ, ಜೂನ್ 27: ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಸಾಲದ (Debt) ಹಣ (money) ವಸೂಲಿ ಮಾಡುವ ನೆಪದಲ್ಲಿ ವ್ಯಕ್ತಿಯನ್ನು ಒತ್ತೆಯಾಗಿಟ್ಟುಕೊಂಡಿರೋ ಗಂಭೀರ ಆರೋಪ ಕೇಳಿ ಬಂದಿದೆ. ಸಾಲ ಪಡೆದ ಹಣ ನೀಡದೇ ಇದ್ದ ಕಾರಣಕ್ಕೆ ಕಳೆದ 27 ದಿನಗಳಿಂದ ದೇವರಹಿಪ್ಪರಗಿ ತಾಲೂಕಿನ ಪಡಗಾನೂರು ಗ್ರಾಮದ ಉದಯಕುಮಾರ ಬಾವಿಮನಿ ಎಂಬುವವರನ್ನು ಬಸವನಬಾಗೇವಾಡಿ ಪಟ್ಟಣದ ನಿವಾಸಿ ಪ್ರಭಾಕರ ಢವಳಗಿ ಎಂಬುವವರು ಕೂಡಿಟ್ಟುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಇತ್ತ ಉದಯಕುಮಾರನನ್ನು ಬಿಡಿಸಲು ಕುಟುಂಬಸ್ಥರು ಪರದಾಡುತ್ತಿದ್ದಾರೆ.ಉದಯಕುಮಾರ ಬೆಂಗಳೂರಿನಲ್ಲಿ ಖಾಸಗಿ ಶಾಲಾ …
Read More »20ಕ್ಕೂ ಹೆಚ್ಚು ಮಕ್ಕಳ ಮೇಲೆ ಹುಚ್ಚುನಾಯಿ ದಾಳಿ
ಮೈಸೂರು: ಸುಮಾರು 20ಕ್ಕೂ ಹೆಚ್ಚು ಮಕ್ಕಳಿಗೆ ಹುಚ್ಚುನಾಯಿ ಕಚ್ಚಿರುವ ಘಟನೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ ಗುರುವಾರ ನಡೆದಿದೆ. ಕೊಪಗೊಂಡ ಗ್ರಾಮಸ್ಥರು ಒಂದು ಹುಚ್ಚುನಾಯಿಯನ್ನು ಕೊಂದು ಹಾಕಿದ್ದಾರೆ. ಹುಲ್ಲಹಳ್ಳಿ ನಿವಾಸಿಗಳು ಹುಚ್ಚುನಾಯಿ ಹಾವಳಿಯಿಂದ ಬೇಸತ್ತಿದ್ದಾರೆ. ಇನ್ನೂ ಎರಡು ನಾಯಿಗಳು ಭೀತಿ ಹುಟ್ಟಿಸುತ್ತಿರುವುದಾಗಿ ತಿಳಿದು ಬಂದಿದೆ. ಹುಚ್ಚುನಾಯಿ ಕಚ್ಚಿ ಬಸವ ಸಾವು: ಇತ್ತೀಚೆಗೆ ಮೈಸೂರಿನ ಮೇಟಗಳ್ಳಿ ದೇವಾಲಯದ ಬಸವ ಹುಚ್ಚುನಾಯಿ ಕಚ್ಚಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿತ್ತು.ಕೆಲವು ದಿನಗಳ ಹಿಂದೆ ಬಸವನಿಗೆ ಹುಚ್ಚುನಾಯಿ ಕಚ್ಚಿದೆ. ಸ್ಥಳೀಯರು ಸೇರಿ …
Read More »
Laxmi News 24×7