ಚಿಕ್ಕಮಗಳೂರು: ಕಾಡಾನೆಗಳ ಹಾವಳಿಯಿಂದ ಬೇಸತ್ತಿರುವ ಮಲೆನಾಡು ಜನರಿಗೆ ಪ್ರತಿನಿತ್ಯ ಕಾಡು ಪ್ರಾಣಿಗಳ ಜೊತೆ ಹೋರಾಟ ಮಾಡಿ ಬದುಕುವುದೇ ಒಂದು ಸಾಹಸವಾಗಿದೆ. ಪ್ರತಿನಿತ್ಯ ಕಾಡಾನೆಗಳು ಕಾಫಿ ತೋಟ, ಅಡಿಕೆ ತೋಟ, ಬಾಳೆ ತೋಟಗಳಿಗೆ ನುಗ್ಗಿ ದಾಂಧಲೆ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳನ್ನು ನಾಶ ಮಾಡಿ ಹೋಗುತ್ತಿವೆ. ಪರಿಣಾಮ ರೈತರು ಪ್ರತಿನಿತ್ಯ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಇದಕ್ಕೆ ಇಂದಿನ ಘಟನೆ ಕೂಡ ಹೊರತಾಗಿಲ್ಲ. ಕಾಡಾನೆಯೊಂದು ಮನೆಯೊಳಗೆ ನುಗ್ಗಲು ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ …
Read More »ಬಿಜೆಪಿ ಜನಾಕ್ರೋಶಯಾತ್ರೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಾರ್ಕೋಲ್ ಬೀಸಿದ ಕೇಸರಿ ಕಲಿಗಳು
ಬಾಗಲಕೋಟೆ : ಬಿಜೆಪಿ ಜನಾಕ್ರೋಶಯಾತ್ರೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಾರ್ಕೋಲ್ ಬೀಸಿದ ಕೇಸರಿ ಕಲಿಗಳು ಬಾಗಲಕೋಟೆಯಲ್ಲಿ ಗುರುವಾರ ನಡೆದ ಬಿಜೆಪಿಯ ಜನಾಕ್ರೋಶ ಯಾತ್ರೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಾರ್ಕೋಲು ಬೀಸುವುದರ ಮೂಲಕ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಬಾಗಲಕೋಟೆ ಬಸವೇಶ್ವರ ವೃತ್ತದಲ್ಲಿ ನಡೆದ ಜನಾಕ್ರೋಶ ಯಾತ್ರೆ ವೇದಿಕೆ ಮೇಲೆ ಬಿಜೆಪಿ ಮುಖಂಡರು ಬಾರ್ಕೋಲು ಹಿಡಿದು ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಚಾಟಿ ಬೀಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ …
Read More »ಬಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಗಟ್ಟಿಯಾಗಿ ಬ್ಯಾಂಕ್ ಮುನ್ನಡೆದಿದೆ
ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್ ಈ ಒಂದು ವರ್ಷದಲ್ಲಿ 33.11 ಕೋಟಿ ರೂ. ನಿವ್ವಳ ಲಾಭ ಹಾಗೂ 303 ಕೋಟಿ ರೂ. ಶೇರು ಹೊಂದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬ್ಯಾಂಕು ವರ್ಷದಿಂದ ವರ್ಷಕ್ಕೆ ಪ್ರಗತಿಯಲ್ಲಿ ಮುನ್ನಡೆಯುತ್ತಿದೆ. ಅತಿ ಹೆಚ್ಚಿನ ಲಾಭ ಗಳಿಸುವ ಮೂಲಕ ರೈತರು ಹಾಗೂ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ನಾನು ಅಧ್ಯಕ್ಷನಾಗಿ ಅಧಿಕಾರ …
Read More »ಪಾರ್ಟಿ ಮಾಡಲು ಕುರಿ ಕೊಡದ ಕುರಿಗಾಯಿಗಳ ಮೇಲೆ ಮಾರಣಾಂತಿಕ ಹ*ಲ್ಲೆ
ಪಾರ್ಟಿ ಮಾಡಲು ಕುರಿ ಕೊಡದ ಕುರಿಗಾಯಿಗಳ ಮೇಲೆ ಮಾರಣಾಂತಿಕ ಹಲ್ಲೆ! ಮೂವರು ಕುರಿಗಾರರ ಮೇಲೆ ಹ*ಲ್ಲೆ ಏಳು ಜನ ದುಷ್ಕರ್ಮಿಗಳಿಂದ ಹಲ್ಲೆಗೈದು ಪರಾರಿ* ಜಮೀನಿನಲ್ಲಿ ಬೀಡುಬಿಟ್ಟಿದ್ದ ಕುರಿ ಕಳ್ಳತನಕ್ಕೆ ಬಂದಿದ್ದ ಖದೀಮರ ಗ್ಯಾಂಗ್ ಪಾರ್ಟಿ ಮಾಡಲು ಕುರಿ ಕೊಡಿ ಎಂದು ಕುರಿಗಾಯಿಗಳಿಗೆ ಧಮ್ಕಿ ಹಾಕಿರೋ ಖದೀಮರು ಕುರಿ ಕೊಡದೇ ಇದ್ದಾಗ ಏಕಾಏಕಿ ಹಲ್ಲೆಗೈದು ಪರಾರಿ ಬೆಳಗಾವಿ ಹೊರವಲಯದ ಮಜ್ಜಗಾವಿಯಲ್ಲಿ ಸಂಜೆ ನಡೆದ ಘಟನೆ ಗಾಯಾಳು ಕುರಿಗಾರರು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ …
Read More »ಸವದತ್ತಿ ಗುಡ್ಡದ ಮೇಲಿಂದ ಉರುಳಿದ ಬಂಡೆಗಳು ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ ಸಾವು, ಸಂಭ್ರಮ ಮನೆಯಲ್ಲಿ ಶೋಕ
ಬೆಳಗಾವಿ: ಗರಸು ತೆಗೆಯುವಾಗ ಗುಡ್ಡದ ಮೇಲಿನ ಬೃಹತ್ ಬಂಡೆಗಳು ಉರುಳಿ ಬಿದ್ದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸವದತ್ತಿ ತಾಲೂಕಿನ ಯಡ್ರಾವಿ ಗ್ರಾಮದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ 1 ಜೆಸಿಬಿ ಹಾಗೂ ಟ್ರ್ಯಾಕ್ಟರ್ ಕೂಡ ಸಂಪೂರ್ಣ ನಜ್ಜುಗುಜ್ಜಾಗಿವೆ. ಯಡ್ರಾವಿ ಗ್ರಾಮದ ಅರ್ಜುನ ಚುಳಕಿ (50) ಮಣ್ಣಿನಡಿ ಸಿಲುಕಿ ಮೃತ ವ್ಯಕ್ತಿ. ಗುರುವಾರ ಬೆಳಗ್ಗೆ ಮಣ್ಣಿನಡಿ ಸಿಲುಕಿದ್ದ ಮೃತದೇಹವನ್ನು ಹೊರ ತೆಗೆಯಲಾಗಿದೆ. ಮಕ್ಕಳ ಮದುವೆ ಸಿದ್ಧತೆಯಲ್ಲಿದ್ದ ಅರ್ಜುನ: ಇದೇ ಶನಿವಾರ ಅರ್ಜುನ ಅವರ …
Read More »ಮೆಟ್ರೋ ಕಾಮಗಾರಿ ವೇಳೆ ವಯಾಡೆಕ್ಟ್ ಉರುಳಿ ಆಟೋ ಚಾಲಕ ಸಾವು
ಬೆಂಗಳೂರು: ಮೆಟ್ರೋ ಕಾಮಗಾರಿ ಸಂದರ್ಭದಲ್ಲಿ ಸಂಭವಿಸಿದ ದುರಂತದಲ್ಲಿ ಆಟೋ ಚಾಲಕ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೃತ ಖಾಸೀಂ ಸಾಬ್ ಅವರ ಮಾವ ಸೈಯ್ಯದ್ ಖಾದರ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ. ವಯಾಡೆಕ್ಟ್ ಸಾಗಿಸುತ್ತಿದ್ದ ಲಾರಿ ಚಾಲಕ, ಕಾಮಗಾರಿ ವಹಿಸಿಕೊಂಡಿದ್ದ ಕಂಪನಿಯ ಮ್ಯಾನೇಜರ್ ಹಾಗೂ ಗುತ್ತಿಗೆದಾರನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 281 (ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿಯಾಗಿ ವಾಹನ ಚಾಲನೆ) ಹಾಗೂ 106 …
Read More »ಜೋಡಿ ಕೊಲೆ ಪ್ರಕರಣದ ಆರೋಪಿಯೊಬ್ಬ ಪೊಲೀಸರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೊಬ್ಬ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾನೆ.
ಚಿಕ್ಕೋಡಿ(ಬೆಳಗಾವಿ): ಕಳೆದ ಭಾನುವಾರ ಅಥಣಿ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ತಾಯಿ-ಮಗನನ್ನು ಕತ್ತು ಹಿಸುಕಿ, ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳಲ್ಲಿ ಓರ್ವ ಪೊಲೀಸರನ್ನು ಕಂಡು ಹೆದರಿ ಓಡಿಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನೋರ್ವ ಆತ್ಮಹತ್ಯೆಯಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯ ವಿವರ: ಏಪ್ರಿಲ್ 13ರಂದು ಕೊಡಗಾನೂರು ಗ್ರಾಮದಲ್ಲಿನ ತೋಟದ ವಸತಿ ಪ್ರದೇಶದಲ್ಲಿ ಚಂದ್ರವ್ವ ಅಪ್ಪಾರಾಯ ಇಚೇರಿ (62) ಹಾಗೂ ವಿಠ್ಠಲ್ ಅಪ್ಪರಾಯ ಇಚೇರಿ (42) ಎಂಬ ತಾಯಿ ಮತ್ತು ಮಗನನ್ನು ಕೊಲೆಗೈದ ದುಷ್ಕರ್ಮಿಗಳು ಶವಗಳನ್ನು ಕಬ್ಬಿನ …
Read More »ಕೇಂದ್ರ ಸರ್ಕಾದಿಂದ ಬಡವರ ರಕ್ತ ಕುಡಿಯುವ ಕೆಲಸ ಆಗುತ್ತಿದೆ.
ಬೆಂಗಳೂರು: ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಬಿಜೆಪಿಯ ಜನಾಕ್ರೋಶ ಪ್ರತಿಭಟನೆಗೆ ಪ್ರತಿಯಾಗಿ, ನಗರದ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ನಿಂದ ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಬೆಲೆ ನಿರಂತರ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಎಲ್ಪಿಜಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಕೇಂದ್ರದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದರು. ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದರು. ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ …
Read More »ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಪಂಚಮಸಾಲಿ ಟ್ರಸ್ಟ್ ಸಭೆ ಶಿಫ್ಟ್…..
ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಪಂಚಮಸಾಲಿ ಟ್ರಸ್ಟ್ ಸಭೆ ಶಿಫ್ಟ್….. ಏ. 19 ರಂದು ಕೂಡಲಸಂಗಮದಲ್ಲಿ ಸಭೆ – ಅಮರೇಶ್ ನಾಗೂರ ಹುಬ್ಬಳ್ಳಿಯಲ್ಲಿ ಏ. 20ರಂದು ಕೂಡಲಸಂಗಮ ಪಂಚಮಸಾಲಿ ಜಗದ್ಗುರು, ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಪಂಚಮಸಾಲಿ ಟ್ರಸ್ಟ್ ನಿಂದ ನಡೆಯಬೇಕಿದ್ದ ಸಭೆಯನ್ನು ಏ.19ಕ್ಕೆ ಕೂಡಲಸಂಗಮದಲ್ಲಿ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಹುಬ್ಬಳ್ಳಿಯಲ್ಲಿ ನಿಗದಿಯಾಗಿದ್ದ ಪಂಚಮಸಾಲಿ ಟ್ರಸ್ಟ್ ಸಭೆಯ ದಿನಾಂಕ, ಸ್ಥಳ ಬದಲಾಯಿಸಿ ಕೂಡಲಸಂಗಮಕ್ಕೆ ಶಿಫ್ಟ್ ಮಾಡಲಾಗಿದೆ. ಈ ಕುರಿತು …
Read More »ಮಲೆ ಮಹದೇಶ್ವರ ದೇಗುಲದಲ್ಲಿ ₹3.26 ಕೋಟಿ ರೂಪಾಯಿ ಕಾಣಿಕೆ ಸಂಗ್ರಹ
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಹುಂಡಿ ಹಣ ಎಣಿಕೆ ನಡೆದಿದ್ದು, 3.26 ಕೋಟಿ ರೂ. ಸಂಗ್ರಹವಾಗಿದೆ. ಇದು ಕಳೆದ 35 ದಿನಗಳಲ್ಲಿ ಸಂಗ್ರಹವಾದ ಕಾಣಿಕೆ ಎಂಬುದು ಗಮನಾರ್ಹ. ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ರಾತ್ರಿ 10ರ ತನಕವೂ ಹುಂಡಿ ಎಣಿಕೆ ನಡೆದಿತ್ತು. ಈ ಕುರಿತು ಪ್ರಾಧಿಕಾರದ ಕಾರ್ಯದರ್ಶಿ ರಘು ಮಾತನಾಡಿ, “ಅಮಾವಾಸ್ಯೆ, ಸರ್ಕಾರಿ ರಜಾ ದಿನ, ಯುಗಾದಿ ಜಾತ್ರೆ, ವಿವಿಧ …
Read More »