Breaking News

ಪಂಚಮಸಾಲಿ 2A ಮೀಸಲಾತಿ ಹೋರಾಟಕ್ಕೆ ಸಚಿವ ಉಮೇಶ್‌ ಕತ್ತಿ ಬೆಂಬಲ

ಚಿಕ್ಕೋಡಿ: ಪಂಚಮಸಾಲಿ 2A ಮೀಸಲಾತಿ ಹೋರಾಟಕ್ಕೆ ಸಚಿವ ಉಮೇಶ್‌ ಕತ್ತಿ ಬೆಂಬಲ ಸೂಚಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರ್ಜುನವಾಡ ಗ್ರಾಮದಲ್ಲಿ ನಡೆದ ಪಂಚಮಸಾಲಿ ಹೋರಾಟದ ಪಾದಯಾತ್ರೆಯಲ್ಲಿ ಭಾಗವಹಿಸಿದ ಸಚಿವರು ಪಂಚಮಸಾಲಿ ಹೋರಾಟಕ್ಕೆ ನನ್ನ ಬೆಂಬಲ ಇರುವುದಾಗಿ ಘೋಷಿಸಿದ್ದಾರೆ ಉಮೇಶ್ ಕತ್ತಿ ಬಣಜಿಗ ಸಮುದಾಯಕ್ಕೆ ಸೇರಿದವರಾದರೂ ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಭಾಗವಹಿಸಿದ್ದಕ್ಕೆ ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ಹೋರಾಟವನ್ನುದ್ದೇಶಿಸಿ ಮಾತನಾಡಿದ ಸಚಿವ ಉಮೇಶ್ ಕತ್ತಿ, ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಕೊಡಿಸುವ …

Read More »

ಸರ್ಕಾರಿ ಇಲಾಖೆಯಲ್ಲಿ ಲಂಚ ಇಲ್ಲದೇ ಕೆಲಸ ನಡೆಯಲ್ಲ; ಭ್ರಷ್ಟಾಚಾರಕ್ಕೆ ಮೋದಿ ಬೆಂಬಲ – ಸಿದ್ದು ಆರೋಪ

ಹಾಸನ: ಇಂದು ಯಾವುದೇ ಸರ್ಕಾರಿ ಇಲಾಖೆಯ ಕಚೇರಿಗಳಿಗೆ ಹೋದರೂ ಲಂಚವಿಲ್ಲದೇ ಕೆಲಸ ನಡೆಯೋದಿಲ್ಲ. ಹೀಗಿದ್ದೂ ಪ್ರಧಾನಿ ನರೇಂದ್ರ ಮೋದಿ ಅವರೇ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಅರಸೀಕೆರೆ ತಾಲ್ಲೂಕಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರೇ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ. ಕೆಂಪಣ್ಣ ಅವರು ಪತ್ರ ಬರೆದು ಒಂದು ವರ್ಷ ಆಯ್ತು. ಇವತ್ತಿನವರೆಗೂ ಪ್ರಧಾನಿ ಕ್ರಮ ತೆಗೆದುಕೊಂಡಿಲ್ಲ. ಈ ಹಿಂದೆಯೂ ನಾ ಕಾವೂಂಗ್, ನಾ ಕಾನೇದೊಂಗಾ ಅಂತ ಪ್ರಧಾನಮಂತ್ರಿ ಹೇಳಿದ್ರು. …

Read More »

ಸಂಕೇಶ್ವರ ಹೊರ ವಲಯದ ಹೈವೇ ಬಳಿ ಬಾವಿಯಲ್ಲಿ ಶವ ಪತ್ತೆ

ಸಂಕೇಶ್ವರ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಬೈ ಪಾಸ್ ರಸ್ತೆಯ ಬಳಿ ಇರುವ ಬಾವಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ರವಿವಾರ ಬೆಳಿಗ್ಗೆ ವರದಿಯಾಗಿದೆ. ಸಂಕೇಶ್ವರ ನಗರದ ಹೊರ ವಲಯದಲ್ಲಿ ಹಾಯ್ದು ಹೋಗಿರುವ ಪುನಾ ಬೆಂಗಳೂರು ರಾಷ್ಟ್ರೀಯ ಬೈಪಾಸ್ ರಸ್ತೆಯಲ್ಲಿ ಇರುವ ಡಾ. ಸಚೀನ ಪಾಟೀಲ ಅವರ ಜಮೀನಿನಲ್ಲಿರುವ ಬಾವಿಯಲ್ಲಿ ವ್ಯಕ್ತಿಯೊರ್ವರ ಮೃತದೇಹವು ಇಂದು ಬೆಳಿಗ್ಗೆ ಪತ್ತೆಯಾಗಿದೆ. ಈ ವ್ಯಕ್ತಿಯು ಮೂಲತಃ ನಿಪ್ಪಾಣಿ ಪಟ್ಟಣದವನು ಎಂದು ತಿಳಿದು ಬಂದಿದೆ. …

Read More »

ಆಪರೇಶನ್ ಚೀತಾಗೆ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದ್ದು ಕಾರ್ಯಾಚರಣೆ ಮಾತ್ರ ವಿಫಲ ,ಸಾರ್ವಜನಿಕರ ಆಕ್ರೋಶ

ಕಳೆದ 1 ತಿಂಗಳಿನಿಂದ ಬೆಳಗಾವಿಯಲ್ಲಿ ನಡೆಯುತ್ತಿದ್ದ ಆಪರೇಷನ್ ಚೀತಾ ಕೊನೆಗೂ ಫೇಲ್ ಆಗಿದೆ. ಇಂದು 30ನೇ ದಿನದ ಕಾರ್ಯಾಚರಣೆ ನಡೆದಿದ್ದು. ಕೊನೆಯ ದಿನ ಕಾರ್ಯಾಚರಣೆ ಎಂಬ ನಿಟ್ಟಿನಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಯಿಂದ ಭರ್ಜರಿ ಕೋಂಬಿಂಗ್ ನಡೆದರೂ ಚಿರತೆ ಮಾತ್ರ ಪತ್ತೆಯಾಗಿಲ್ಲ. ಹೌದು ಕುಂದಾನಗರಿ ಬೆಳಗಾವಿಯಲ್ಲಿ ಚಾಲಾಕಿ ಚಿರತೆಯ ಕಣ್ಣಾಮುಚ್ಚಾಲೆ ಮುಂದುವರೆದಿದೆ. ಕಳೆದ ಅಗಷ್ಟ 5ರಂದು ಪ್ರತ್ಯಕ್ಷವಾಗಿದ್ದ ಚಿರತೆ ಇಡೀ ಬೆಳಗಾವಿ ಜನತೆಯ ನಿದ್ದೆಗೆಡಿಸಿದೆ.   30 ದಿನಗಳಿಂದ …

Read More »

ಮಹಿಳೆಯ ಜೊತೆ ದುರ್ನಡತೆ: ಶಾಸಕ ಲಿಂಬಾವಳಿ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಮಹಿಳೆಯ ವಿರುದ್ಧ ಬಳಸಿರುವ ಪದ ಹಾಗೂ ಅವರ ದುರ್ನಡತೆ ಬಿಜೆಪಿಯ ಹೀನಾಯ ಸಂಸ್ಕೃತಿಯನ್ನು ಎತ್ತಿ ತೋರುತ್ತದೆ. ಮಹಿಳೆಯ ಮೇಲೆ ದೌರ್ಜನ್ಯ ಹಾಗೂ ಅತ್ಯಂತ ಕೆಟ್ಟ ಪದ ಬಳಸಿರುವ ಅರವಿಂದ್ ಲಿಂಬಾವಳಿ ಕೂಡಲೇ ಮಹಿಳೆಯ ಬಳಿ ಕ್ಷಮೆ ಕೇಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಭಾನುವಾರ ಕಾಂಗ್ರೆಸ್ ಕಚೇರಿಯಲ್ಲಿ ನಗರ ಪ್ರಚಾರ ಸಮಿತಿಯಿಂದ ಪ್ರತಿಭಟನೆ ನಡೆಸಿ ಹಾಗೂ ಪ್ರತಿಕೃತಿ ದಹಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ …

Read More »

ಬೆಂಗಳೂರಲ್ಲಿ ಬಸ್ ಚಾಲಕನ ಮೇಲೆ ಟ್ರಾಫಿಕ್ ಸಿಬ್ಬಂದಿ ಹಲ್ಲೆ: ದೂರು ದಾಖಲು

ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್ ಚಾಲಕನ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ ನಡೆಸಿರುವ ಪ್ರಕರಣ ಶನಿವಾರ ತಡರಾತ್ರಿ ನಗರದ ಕಾರ್ಪೊರೇಷನ್ ಬಸ್ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ. ರಾತ್ರಿ 11 ಗಂಟೆ ಸುಮಾರಿಗೆ ಕಾರ್ಪೊರೇಷನ್ ಬಳಿ ಸಾಗರದಿಂದ ತಿರುವಣ್ಣಾಮಲೈಗೆ ಹೋಗುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಡ್ರೈವರ್ ಪ್ರಕಾಶ್, ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಕಾರ್ಪೋರೇಷನ್ ಬಳಿ ಬಸ್ ನಿಲ್ಲಿಸಿದ್ದರು. ಈ ವೇಳೆ ಹಿಂದೆ ಎರಡು ಮೂರು ಬಸ್​​ಗಳು ಬಂದು ನಿಂತಿವೆ. …

Read More »

ಸಿಇಟಿ ಗೊಂದಲಕ್ಕೆ ತೆರೆ; ಪುನರಾವರ್ತಿತ ವಿದ್ಯಾರ್ಥಿಗಳಿಗೆ ಹೈಕೋರ್ಟ್‌ ಸಿಹಿ

ಬೆಂಗಳೂರು: ಪ್ರಸಕ್ತ ಸಾಲಿನ ಸಿಇಟಿ ಗೊಂದಲಕ್ಕೆ ತೆರೆ ಎಳೆದಿರುವ ಹೈಕೋರ್ಟ್‌, 2022ನೇ ಸಾಲಿನ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ದಿಂದ ಅವಕಾಶ ವಂಚಿತರಾಗುವ ಆತಂಕದಲ್ಲಿದ್ದ 2020-21ನೇ ಸಾಲಿನ ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳ ಪರ ತೀರ್ಪು ನೀಡಿದೆ.   2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ವೃತ್ತಿಪರ ಕೋರ್ಸ್‌ಗಳ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಲಾಗದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2022 ಜು. 30ರಂದು ಹೊರ ಡಿಸಿದ್ದ ಟಿಪ್ಪಣಿಯನ್ನು ಹೈಕೋರ್ಟ್‌ ರದ್ದು …

Read More »

ರಾಯಬಾಗದಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿದ ಹದಿನೈದು ಕುರಿಗಳು ಸ್ಥಳದಲ್ಲೇ ಸಾವು…!

ಚಿಕ್ಕೋಡಿ: ರೈಲು ಹಳಿಯಲ್ಲಿ ಹೋಗುತ್ತಿದ್ದ ಕುರಿಗಳ ಮೇಲೆ ರೈಲು ಹರಿದ ಪರಿಣಾಮ 15 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಬೆಳಗಾವಿಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ರೈಲು ನಿಲ್ದಾಣದ ಹೊರವಲಯದಲ್ಲಿರುವ ರೈಲ್ವೆ ಗೇಟ್ ಬಳಿ ಅವಘಡ ಸಂಭವಿಸಿದೆ. ಚಿಂಚಲಿ ಪಟ್ಟಣದ ವಸಂತ ಜಾವೇದಾರ್ ಎಂಬುವವರಿಗೆ ಸೇರಿದ 15 ಕುರಿಗಳು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಕುರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ …

Read More »

ಗಣೇಶ್ ಚತುರ್ಥಿ ನಿಮಿತ್ತ ಅನ್ನ ಸಂತರ್ಪಣೆ ಮಾಡಿದ ಸಾಯನ್ನವರ ದಂಪತಿಗಳು

  ಗೋಕಾಕ:ನಾಡಿನೆಲ್ಲೆಡೆ ಗಣೇಶನ ಅಬ್ಬರ ಜೋರಾಗಿದೆ ಸುಮಾರು ಎರಡು ವರ್ಷ ಕೊವಿಡ ಮಹಾಮಾರಿಯ ಕಾರಣ ಎಲ್ಲೆಡೆ ಗಣೇಶ್ ಉತ್ಸವ ಅಷ್ಟೊಂದು ಅದ್ದೂರಿಯಾಗಿ ನಡೆದಿರಲಿಲ್ಲ ಇನ್ನು ಇತ್ತಿಚ್ಚ್ಚಿಗೆ ಎಲ್ಲೆಡೆ ಸಂಭ್ರಮಕ್ಕೆ ಪರವಾನಿಗೆ ಸಿಕ್ಕಿದ್ದಕ್ಕೆ ಎಲ್ಲರೂ ಗಣೇಶ್ ನ ಆಗಮನ ವನ್ನಾ ಜೋರಾಗಿ ಅದ್ದುರಿಯಾಗಿ ಮಾಡಿಕೊಂಡಿದ್ದಾರೆ   ಅದೇರೀತಿ ಗೋಕಾಕ ನಗರದ ಎಪಿಎಂಸಿ ಮಾಜಿ ನಿರ್ದೇಶಕರು ಶ್ರೀ ಬಸವರಾಜ ಸಾಯನ್ನವರ ದಂಪತಿಗಳು ಮಹಾಲಿಂಗೇಶ್ವರ ನಗರದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ವನ್ನಾ ಹಮ್ಮಿ ಕೊಂಡಿದ್ದಾರೆ …

Read More »

ಒಂದೇ ಕುಟುಂಬದ ಮೂವರ ಸಾವು: ಪತ್ನಿ, ಮಗನ ಕುತ್ತಿಗೆ ಹಿಸುಕಿ ಕೊಂದು ಆತ್ಮಹತ್ಯೆ

ಬೆಂಗಳೂರು: ಕೋಣನಕುಂಟೆ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ಸಾವು ಹೇಗಾಯಿತೆಂಬ ಪ್ರಾಥಮಿಕ ಮಾಹಿತಿಯನ್ನು ಕಲೆಹಾಕಿದ್ದಾರೆ. ‘ಚುಂಚನಕಟ್ಟೆ ಎಸ್‌ಬಿಐ ಲೇಔಟ್ ನಿವಾಸಿ ಮಹೇಶ್ ಕುಮಾರ್ (44), ಪತ್ನಿ ಜ್ಯೋತಿ (29) ಹಾಗೂ ಮಗ ನಂದೀಶ್ ಗೌಡ (9) ಅವರ ಮೃತದೇಹಗಳು ಆಗಸ್ಟ್ 18ರಂದು ಮನೆಯಲ್ಲಿ ಪತ್ತೆಯಾಗಿದ್ದವು. ಮೂವರ ಸಾವು ನಿಗೂಢವಾಗಿತ್ತು. ತನಿಖೆ ಕೈಗೊಂಡಾಗ ಕೊಲೆ ನಡೆದಿರುವುದು ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು …

Read More »