Breaking News

ಹುಬ್ಬಳ್ಳಿ ಗರ್ಭಿಣಿ ಕೊಲೆ ಪ್ರಕರಣ: ಕರ್ತವ್ಯಲೋಪದಡಿ ಇಬ್ಬರು ಪೊಲೀಸ್​ ಸಿಬ್ಬಂದಿ ಅಮಾನತು, ಸಂತ್ರಸ್ತ ಕುಟುಂಬ ಭೇಟಿ ಮಾಡಿದ ಡಿಸಿ, ಶಾಸಕರು

ಹುಬ್ಬಳ್ಳಿ: ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಅನ್ಯಜಾತಿ ಯುವಕನ ಮದುವೆಯಾಗಿದ್ದಕ್ಕೆ ಗರ್ಭಿಣಿ ಮೇಲೆ ಆಕೆಯ ತಂದೆ, ಕುಟುಂಬಸ್ಥರು ಹಲ್ಲೆಗೈದು, ಭೀಕರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಮೇಲೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಠಾಣೆಯ ವಿಶೇಷ ವಿಭಾಗದ ಕಾನ್‌ಸ್ಟೇಬಲ್‌ ಸಂಗಮೇಶ ಸಾಗರ ಮತ್ತು ಬೀಟ್ ಕಾನ್‌ಸ್ಟೇಬಲ್‌ ಚಂದ್ರಕಾಂತ ರಾಥೋಡ ಅಮಾನತಾಗಿರುವ ಪೊಲೀಸ್​ ಸಿಬ್ಬಂದಿ. ಕೃತ್ಯದ ಕುರಿತು ಸರಿಯಾದ ಮಾಹಿತಿ ನೀಡದ ಕಾರಣ ಇಲಾಖೆಯ ಆಂತರಿಕ ತನಿಖೆ …

Read More »

ಖಾಸಗಿ ಟ್ರಾವೆಲ್ ಬಸ್‌ಗೆ ಕಂಟೇನರ್​​ ಲಾರಿ ಡಿಕ್ಕಿ 10 ಮಂದಿ ಸಜೀವ ದಹನ?

ಚಿತ್ರದುರ್ಗ: ಖಾಸಗಿ ಟ್ರಾವೆಲ್ ಬಸ್‌ಗೆ ಕಂಟೇನರ್​​ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು, 10 ಮಂದಿ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಹಿರಿಯೂರಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ. ಖಾಸಗಿ ಸ್ಲೀಪರ್ ಕೋಚ್ ಬಸ್​ ಬೆಂಗಳೂರಿನಿಂದ ಶಿವಮೊಗ್ಗದ ಮೂಲಕ ಗೋಕರ್ಣಕ್ಕೆ ಹೊರಟಿತ್ತು. ಈ ಸಂದರ್ಭದಲ್ಲಿ ಚಿತ್ರದುರ್ಗದ ಹಿರಿಯೂರಿನ ಜವನಗೊಂಡನಹಳ್ಳಿ ಎಂಬಲ್ಲಿ ಅಪಘಾತ ಸಂಭವಿಸಿದೆ. ಡಿಕ್ಕಿ ಬಳಿಕ ಕಂಟೇನರ್ ಲಾರಿ ಹಾಗೂ ಬಸ್​ ಎರಡೂ ಬೆಂಕಿ …

Read More »

ಪೋಕ್ಸೊ ಪ್ರಕರಣ ದಾಖಲಿಸದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಒತ್ತಡ: ಸಂಜಯ ಪಾಟೀಲ ಆರೋಪ

ಪೋಕ್ಸೊ ಪ್ರಕರಣ ದಾಖಲಿಸದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಒತ್ತಡ: ಸಂಜಯ ಪಾಟೀಲ ಆರೋಪ ಬೆಳಗಾವಿ :ಗ್ರಾಮೀಣ ಕ್ಷೇತ್ರದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕನ ವಿರುದ್ಧ ಪೋ ಕಾಯ್ದೆಯಡಿ ಪ್ರಕರಣ ದಾಖಲಿಸದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಆರೋಪಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಂಭೀರವಾಗಿ ಪ್ರಕರಣವನ್ನು ಪರಿಗಣಿಸಿ ಸಂತ್ರಸ್ತೆ ವಿದ್ಯಾರ್ಥಿನಿಗೆ …

Read More »

ಚೆನ್ನೈ ಮಾಲಾಧಾರಿ ಜೀವ ಉಳಿಸಿದ ಗೋಕಾಕ ಹೊಟೆಲ್ ಉದ್ಯಮಿ ಪ್ರಭಾಕರ ಶೆಟ್ಟಿ

ಚೆನ್ನೈ ಮಾಲಾಧಾರಿ ಜೀವ ಉಳಿಸಿದ ಗೋಕಾಕ ಹೊಟೆಲ್ ಉದ್ಯಮಿ ಪ್ರಭಾಕರ ಬೆಟ್ಟ ಏರುವಾಗ ಕುಸಿದ ವ್ಯಕ್ತಿಯ ಜೀವ ಉಳಿಸಿದ ಪ್ರಭಾಕರ ಶೆಟ್ಟಿ ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳುವ ವೇಳೆ ತೀವ್ರ ಅಸ್ವಸ್ಥಗೊಂಡಿದ್ದ ಚೆನ್ನೈಮೂಲದ ಮಾಲಾಧಾರಿಯೊಬ್ಬರಿಗೆ ಬೆಳಗಾವಿ ನಗರದ ಹೋಟೆಲ್ ಉದ್ಯಮಿ ಪ್ರಭಾಕರ ಶೆಟ್ಟಿ ಅವರುತುರ್ತು ಚಿಕಿತ್ಸೆ ನೀಡಿ ಜೀವ ಉಳಿಸಿದ ಘಟನೆ ಕೇರಳದ ನೀಲಿಮಲೆ ಬೆಟ್ಟದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆಬಂದಿದೆ. ಬೆಳಗಾವಿ ನಗರದ ಪ್ರಭಾಕರ ಶೆಟ್ಟಿ ಅವರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ …

Read More »

ಪೌರಕಾರ್ಮಿಕರಿಗೆ ಜಾಕೀಟ್ ಹಾಗೂ ಸ್ವೆಟರ್ ವಿತರಣೆ

ಪೌರಕಾರ್ಮಿಕರಿಗೆ ಜಾಕೀಟ್ ಹಾಗೂ ಸ್ವೆಟರ್ ವಿತರಣೆ ಘಟಪ್ರಭಾ:2023-24,2024-25 ನೇ ಸಾಲಿನ ನಗರಸಭೆ ನಿಧಿಯ ಶೇ.24.10 ರ ಯೋಜನೆಯಡಿಯ ಪೌರಕಾರ್ಮಿಕರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸುರಕ್ಷತಾ ಜಾಕೀಟಗಳನ್ನು ಹಾಗೂ 2025-26 ನೇ ಸಾಲಿನ ಎಸ್ಎಫ್ ಸಿ ಶೇ.24.10 ರ ಅನುಧಾನದಲ್ಲಿ ಪೌರಕಾರ್ಮಿಕರಿಗೆ ಸ್ವೆಟರ್ ಗಳನ್ನು ಘಟಪ್ರಭಾ ಪುರಸಭೆ ಧೂಪದಾಳ ಕಾರ್ಯಾಲಯದ ಆವರಣದಲ್ಲಿ ಬುಧವಾರದಂದು ಹಂಚಿಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆಯ ಪುರಸಭೆಯ ಮುಖ್ಯಾಧಿಕಾರಿಗಳು ಶ್ರೀಮತಿ.ಎಂ.ಎಸ್.ಪಾಟೀಲ ಹಿರಿಯ ಮುಖಂಡರಾದ ಡಿ ಎಮ್ …

Read More »

ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಅಂದಾಜು ರೂ. 2.17 ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಚಾಲನೆ ನೀಡಿದರು

ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಅಂದಾಜು ರೂ. 2.17 ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಚಾಲನೆ ನೀಡಿದರು ಅರ್ಜುನವಾಡ ಗ್ರಾಮದಲ್ಲಿ ಅಂದಾಜು ರೂ. 80 ಲಕ್ಷ ವೆಚ್ಚದ ವಿವಿಧ ಸಿಸಿ ರಸ್ತೆಗಳ ನಿರ್ಮಾಣ, ಕುರಣಿ ಗ್ರಾಮದಲ್ಲಿ ರೂ. 50 ಲಕ್ಷ ಹಾಗೂ ರೂ. 30 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗಳು, ಜೊತೆಗೆ ರೂ. 57 ಲಕ್ಷ ವೆಚ್ಚದ ಹೊಲಗಳಿಗೆ …

Read More »

ಮಹಾ ಸಂಸದ ಮಾನೆ,ವಿರುದ್ಧ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುವಂತೆ ಆಗ್ರಹಿಸಿ ಸಂಸದೆ ಪ್ರಿಯಾಂಕಾಗೆ ಕರವೇ ಮನವಿ

ಗೋಕಾಕ ಡಿ 24 : ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ, ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕುವ ಕುರಿತು, ಕೇಂದ್ರ ಗೃಹಸಚಿವರಿಗೆ ದೂರು ನೀಡುವಂತೆ ಆಗ್ರಹಿಸಿ ಬುಧವಾರದಂದು ನಗರದಲ್ಲಿ ಚಿಕ್ಕೋಡಿ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮನವಿ ಅರ್ಪಿಸಲಾಯಿತು. ಮಹಾರಾಷ್ಟ್ರದ ನಾಯಕರು ಕಳೆದ ಐವತ್ತು ವರ್ಷಗಳಿಂದ ಬೆಳಗಾವಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. …

Read More »

ಗೋಕಾಕದ ಸರ್ಕಾರಿ ಪಿ.ಯು. ಕಾಲೇಜಿನಲ್ಲಿ ಪ್ರತಿಭಾ ಕಾರಂಜಿ’ ಕಾರ್ಯಕ್ರಮ

ಇಂದು ಗೋಕಾಕದ ಸರ್ಕಾರಿ ಪಿ.ಯು. ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದಲ್ಲಿ ಹಮ್ಮಿಕೊಂಡ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ‘ಪ್ರತಿಭಾ ಕಾರಂಜಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದೆ. ಮಕ್ಕಳ ಸಾಂಸ್ಕೃತಿಕ, ಕಲಾತ್ಮಕ ಹಾಗೂ ಸೃಜನಶೀಲ ಪ್ರತಿಭೆಗಳ ಸಂಗಮಕ್ಕೆ ಸಾಕ್ಷಿಯಾದ ಈ ಕಾರ್ಯಕ್ರಮವು, ವಿದ್ಯಾರ್ಥಿಗಳಲ್ಲಿ ಅಡಗಿರುವ ಹಾಡು, ನೃತ್ಯ, ನಾಟಕ, ಚಿತ್ರಕಲೆ ಸೇರಿದಂತೆ ವಿವಿಧ ಪ್ರತಿಭೆಗಳನ್ನು ಗುರುತಿಸಿ, ಬೆಳೆಸುವ ಮಹತ್ವದ ವೇದಿಕೆಯಾಗಿದೆ. ಪ್ರತಿಭಾ ಕಾರಂಜಿ ಮಕ್ಕಳ ಆತ್ಮವಿಶ್ವಾಸವನ್ನು …

Read More »

ಗೋಕಾಕ ನಗರದ ಶೆಪರ್ಡ್ ಮಿಷನ್ ಆಂಗ್ಲ ಮಾದ್ಯಮ ಶಾಲೆಯ 16 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ

ಗೋಕಾಕ ನಗರದ ಶೆಪರ್ಡ್ ಮಿಷನ್ ಆಂಗ್ಲ ಮಾದ್ಯಮ ಶಾಲೆಯ 16 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾತನಾಡಿದೆ. ಈ ವೇಳೆ ಡಾ.‌ ವಿಶ್ವನಾಥ ಶಿಂಧೋಳಿಮಠ, ಶಾಲೆಯ ಅಧ್ಯಕ್ಷರಾದ ಶ್ರೀ ಸಂದೀಪ ಅನಿಗೋಳ, ಶ್ರೀ ಮಂಜುನಾಥ ಅನಿಗೋಳ, ಶ್ರೀಮತಿ ಶಾಂತಾ ಅನಿಗೋಳ ಸೇರಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

Read More »

ಚಿರತೆಗಿಟ್ಟಿದ್ದ ಬೋನಿನಲ್ಲಿ 4 ತಾಸು ಲಾಕ್ ಆದ ವ್ಯಕ್ತಿ!

ಚಾಮರಾಜನಗರ: ಕುತೂಹಲವೊಂದು ಮನುಷ್ಯನನ್ನು ಪೀಕಲಾಟಕ್ಕೆ ನೂಕಿದ ಘಟನೆ ಯಳಂದೂರು ತಾಲೂಕಿನ ಗಂಗವಾಡಿಯಲ್ಲಿ ನಡೆದಿದೆ. ಚಿರತೆಗಾಗಿ ಇಟ್ಟಿದ್ದ ಬೋನಿನಲ್ಲಿ ವ್ಯಕ್ತಿ ಸಿಲುಕಿ 4 ತಾಸು ಒದ್ದಾಡಿದ್ದಾನೆ. ಗಂಗವಾಡಿ ಗ್ರಾಮದ ಕಿಟ್ಟಿ ಎಂಬಾತನೆ ಬೋನಿನಲ್ಲಿ ಸಿಲುಕಿದ ವ್ಯಕ್ತಿ. ಗಂಗವಾಡಿ ಗ್ರಾಮದಲ್ಲಿ ಶನಿವಾರ ರಾತ್ರಿ ರಾಮಯ್ಯ ಎಂಬುವರಿಗೆ ಸೇರಿದ ಜಮೀನಿನಲ್ಲಿ ಚಿರತೆ ದಾಳಿ ನಡೆಸಿ ಮೂರು ಜಾನುವಾರುಗಳನ್ನು ಕೊಂದು ಹಾಕಿತ್ತು. ಈ ಸಂಬಂಧ ಶಾಸಕ ಎ. ಆರ್. ಕೃಷ್ಣಮೂರ್ತಿ ಕೂಡ ಸ್ಥಳಕ್ಕೆ ಭೇಟಿ ನೀಡಿ, ಚಿರತೆ …

Read More »