Breaking News

ಹಬ್ಬದ ಸಂದರ್ಭವೆಂದು ದರ ಏರಿಸಿದರೆ ಪರ್ಮಿಟ್ ರದ್ದು; ಸಾರಿಗೆ ಸಂಸ್ಥೆಗಳಿಗೆ ರಾಮುಲು ಎಚ್ಚರಿಕೆ

ಬೆಂಗಳೂರು: ದಸರಾ ಸಂದರ್ಭದಲ್ಲಿ ಬೆಂಗಳೂರಿನಿಂದ‌ ಬೇರೆ ಬೇರೆ ಊರುಗಳಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಅಧಿಕ ದರ ವಿಧಿಸುವ ಖಾಸಗಿ ಸಾರಿಗೆ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಈಗ ಸಾರಿಗೆ ಇಲಾಖೆ ಮುಂದಾಗಿದೆ. ಈ ಬಗ್ಗೆ ಅಧಿಕೃತ ಟ್ವೀಟ್ ಮಾಡಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು, ನಿಗದಿತ ದರಕ್ಕಿಂತ ಹೆಚ್ಚಿನ ಹಣ ಕೀಳುವ ಸಾರಿಗೆ ಸಂಸ್ಥೆಗಳ‌ ಪರ್ಮಿಟ್ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.   ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಿಗೆ ತೊಂದರೆ …

Read More »

ನಾಗರ ಹಾವಿಗೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ಉರಗ ರಕ್ಷಕ!

ಶಿವಮೊಗ್ಗ: ನಾಗರ ಹಾವೊಂದಕ್ಕೆ ಮುತ್ತಿಡಲು ಹೋಗಿ ಉರಗ ರಕ್ಷಕನೊಬ್ಬ ತುಟಿಗೆ ಕಚ್ಚಿಸಿಕೊಂಡಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯ ಅಲೆಕ್ಸ್‌ ಎಂಬವರೇ ನಾಗರಹಾವಿನಿಂದ ಕಚ್ಚಿಸಿಕೊಂಡವರು. ಹಾವನ್ನು ಹಿಡಿದು ಅದಕ್ಕೆ ಮುತ್ತಿಡಲು ಮುಂದಾಗಿದ್ದ ತಕ್ಷಣ ಹಾವು ತಿರುಗಿ ತುಟಿಗೆ ಕಚ್ಚಿದೆ.   ಭದ್ರಾವತಿಯ ಅಲೆಕ್ಸ್‌ ಹಾಗೂ ರೋನಿ ಎಂಬುವರು ಉರಗ ರಕ್ಷಣೆಯಲ್ಲಿ ತೊಡಗಿಕೊಂಡಿದ್ದು, ಇತ್ತೀಚೆಗೆ ಭದ್ರಾವತಿಯ ಬೊಮ್ಮನಕಟ್ಟೆ ಮದುವೆ ಮನೆಯಲ್ಲಿ ಎರಡು ನಾಗರ ಹಾವುಗಳು ಒಟ್ಟಿಗೆ ಕಾಣಿಸಿಕೊಂಡಿವೆ. ಈ ವೇಳೆ ಹಾವು ಹಿಡಿದು …

Read More »

ಪೊಲೀಸರೇ. 6 ತಿಂಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ; ಪೊಲೀಸರಿಗೆ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

ಚಾಮರಾಜನಗರ: ಕಾಂಗ್ರೆಸ್ ಪಕ್ಷವು ದೇಶವ್ಯಾಪಿ ನಡೆಸಲು ಉದ್ದೇಶಿಸಿರುವ ಭಾರತ್ ಜೋಡೋ ಯಾತ್ರೆ ಶುರುವಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಲ್ಲಿ ಬೃಹತ್‌ ಸಮಾವೇಶ ನಡೆಯುತ್ತಿದೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.     ಕಾಂಗ್ರೆಸ್‌ ಭಾರತ್‌ ಜೋಡೋ ಯಾತ್ರೆ ಕಿಡಿಗೇಡಿಗಳು ಪೋಸ್ಟರ್‌ ಅನ್ನು ಹರಿದು ಹಾಕಿದ ವಿಚಾರವಾಗಿ ಮಾತನಾಡಿ, ನಮ್ಮ ಪೋಸ್ಟರ್‌ಗಳನ್ನು ಹರಿದು ಹಾಕುತ್ತಿದ್ದಾರೆ. ಇದೇ ರೀತಿ ಮಾಡಿದ್ರೆ ಬಿಜೆಪಿಯವರು ಓಡಾಡದ ರೀತಿ ಮಾಡುತ್ತೇವೆ ಎಂದು ಎಚ್ಚರಿಕೆ …

Read More »

ಮಾತನಾಡಲು ಅವಕಾಶವಿಲ್ಲ, ಪಾದಯಾತ್ರೆ ಬಿಟ್ಟು ನಮಗೆ ಬೇರೆ ದಾರಿಯಿಲ್ಲ; ರಾಹುಲ್ ಗಾಂಧಿ

ಚಾಮರಾಜನಗರ: ನಮ್ಮ ವಿಚಾರಗಳನ್ನು ಹೇಳಲು ಅವಕಾಶವಿಲ್ಲ. ಸಂಸತ್ತಿನಲ್ಲಿ ಮಾತನಾಡುವಾಗ ಮೈಕ್ ಬಂದ್ ಮಾಡಲಾಗುತ್ತದೆ, ವಿಧಾನಸಭೆಗಳಲ್ಲೂ ಮಾತನಾಡಲು ಅವಕಾಶವಿಲ್ಲ. ಆದ್ದರಿಂದ ಪಾದಯಾತ್ರೆ ಬಿಟ್ಟು ಬೇರೆ ದಾರಿ ನಮಗಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.   ಗುಂಡ್ಲುಪೇಟೆಯ ಮೂಲಕ ಶುಕ್ರವಾರ ರಾಜ್ಯ ಪ್ರವೇಶಿಸಿದ ‘ಭಾರತ್ ಜೋಡೋ ಯಾತ್ರೆ’ಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಈ ಯಾತ್ರೆ ದೇಶದ ಧ್ವನಿ. ಇಲ್ಲಿ ನಾನೊಬ್ಬನೇ ಅಲ್ಲ.‌ ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ಅವರ ಕಷ್ಟಗಳನ್ನು …

Read More »

ದಸರಾ ಹಿನ್ನೆಲೆ KSRTCಯಿಂದ 2000 ಹೆಚ್ಚುವರಿ ಬಸ್ ಸೇವೆ

ಬೆಂಗಳೂರು: ಕೋವಿಡ್ ನಂತರ ಅದ್ಧೂರಿಯಾಗಿ ನಡೆಯುತ್ತಿರುವ ಮೈಸೂರು ದಸರಾ ಮಹೋತ್ಸವದ ನಿಮಿತ್ತ ರಾಜ್ಯದ ಹಾಗೂ ದೇಶದ ವಿವಿಧ ಕಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಜೊತೆಗೆ ರಜೆಗಳ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವಿಶೇಷ ಸಾರಿಗೆ ಬಸ್ ಸೇವೆಗಳನ್ನು ಒದಗಿಸಿದ್ದು, ಕಳೆಗುಂದಿರುವ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿದೆ ಕರ್ನಾಟಕ ಸಾರಿಗೆ (ವೇಗದೂತ) ರಾಜಹಂಸ, ಸ್ವೀಪರ್, ಐರಾವತ, ಐರಾವತ ಕ್ಲಬ್ …

Read More »

ಬಂಡೀಪುರ ಮೂಲಕ ರಾಜ್ಯಕ್ಕೆ ರಾಹುಲ್ ಗಾಂಧಿಎಂಟ್ರಿ

ಚಾಮರಾಜನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬಂಡೀಪುರ ಅರಣ್ಯ ಪ್ರದೇಶದ ಮೂಲಕ ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆ. ರಾಹುಲ್ ಗಾಂಧಿ ಅವರನ್ನು ರಾಜ್ಯ ಕಾಂಗ್ರೆಸ್​​ ನಾಯಕರು ಕೆಕ್ಕನಹಳ್ಳ ಚೆಕ್ ಪೋಸ್ಟ್ ಬಳಿ ತೆರಳಿ ಸ್ವಾಗತಿಸಿದ್ದಾರೆ‌‌. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಂ.ಬಿ‌. ಪಾಟೀಲ್, ಆರ್.ವಿ. ದೇಶಪಾಂಡೆ, ವೀರಪ್ಪ ಮೊಯಿಲಿ, ಕೆ‌.ಜೆ. ಜಾರ್ಜ್ ಸೇರಿದಂತೆ ಹತ್ತು ಹಲವು ನಾಯಕರುಗಳು ಭಾಗಿಯಾಗಿದ್ದಾರೆ. ಗುಂಡ್ಲುಪೇಟೆಯ ಹಂಗಳ ಗ್ರಾಮದ …

Read More »

ಭಾರತ್ ಜೋಡೋ ಯಾತ್ರೆ ಹುಚ್ಚರ ಜಾತ್ರೆ: ಗುಂಡ್ಲುಪೇಟೆ ಶಾಸಕ

ಚಾಮರಾಜನಗರ: ಭಾರತ್ ಜೋಡೋ ಯಾತ್ರೆ ಹುಚ್ಚರ ಜಾತ್ರೆ ಆಗಿದೆ. ಇದೊಂದು ಹುಚ್ಚನ ಮದುವೆ ಇದ್ದಂತೆ ಎಂದು ಗುಂಡ್ಲುಪೇಟೆ ಬಿಜೆಪಿ ಶಾಸಕ ಸಿ.ಎಸ್.ನಿರಂಜನ ಕುಮಾರ್ ಲೇವಡಿ ಮಾಡಿದ್ದಾರೆ. ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರಿಗೆ ಈಗ ಫೇಸ್ ವ್ಯಾಲ್ಯೂ ಇಲ್ಲ. ಜನರಿಗೆ ಈಗಾಗಲೇ ಅವರ ಕ್ಷಮತೆ ಬಗ್ಗೆ ಅರ್ಥವಾಗಿದೆ. ಇವರ ಕೈಯಲ್ಲಿ ದೇಶ ನಡೆಸಲು ಆಗ್ತಾ ಇಲ್ಲ ಎಂಬುದು ಗೊತ್ತಾಗಿದೆ. ಅವರ ಯಾತ್ರೆಯಿಂದ ಬಿಜೆಪಿಗೆ ಯಾವುದೇ ರೀತಿ ನಷ್ಟ ಇಲ್ಲ …

Read More »

ಬೆಳಗಾವಿಯ VTUಗೆ ನೂತನ ಕುಲಪತಿ: VC ಆಗಿ ವಿದ್ಯಾಶಂಕರ ನೇಮಕ

ಬೆಳಗಾವಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ನೂತನ ಕುಲಪತಿ ಆಗಿ ಡಾ. ವಿದ್ಯಾಶಂಕರ ಎಸ್ ನೇಮಕಗೊಂಡಿದ್ದಾರೆ. ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಆದೇಶದ ಮೇರೆಗೆ ಡಾ. ವಿದ್ಯಾಶಂಕರ ಅವರು ಮೂರು ವರ್ಷಗಳ ಅವಧಿಗೆ ವಿಟಿಯು ಕುಲಪತಿ ಆಗಿ ನೇಮಕಗೊಂಡಿದ್ದಾರೆ.

Read More »

ಕೋಣೆಯಲ್ಲಿ ಕೂಡಿ ಹಾಕಿ ಬಾಲಕಿ ಮೇಲೆ ಗ್ಯಾಂಗ್​ರೇಪ್​: ಮೂವರು ಆರೋಪಿಗಳು ಅಂದರ್

ಸಿಮ್ಡೆಗಾ (ಜಾರ್ಖಂಡ್): ಜೂನ್ 5 ರಂದು 14 ವರ್ಷದ ಬುಡಕಟ್ಟು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜಾರ್ಖಂಡ್‌ನ ಕೊಲೆಬಿರಾ ಪೊಲೀಸರು ಮಂಗಳವಾರ ಮೂವರನ್ನು ಬಂಧಿಸಿದ್ದಾರೆ. ಬಾಲಕಿಯನ್ನು ಹೊಟ್ಟೆನೋವು ಎಂದು ಸದರ್ ಆಸ್ಪತ್ರೆಗೆ ಕರೆದೊಯ್ದ ನಂತರ ಅತ್ಯಾಚಾರ ಎಸೆಗಿರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೂನ್ 5 ರಂದು ಆಕಾಶ್ ಟೆಟೆ, ಅಮನ್ ಡುಂಗ್‌ಡಂಗ್ ಮತ್ತು ಬನ್ಸ್ ಬಹಲ್ ಎಂಬುವರು ಸ್ನೇಹಿತರೊಂದಿಗೆ ಕೋಣೆಗೆ ಬೀಗ ಹಾಕಿ …

Read More »

ಕ್ಯಾಂಪ್ ನಲ್ಲಿ ನಡೆದ ಸುಧೀರ ಕಾಂಬಳೆ ಕೊಲೆ ಆರೋಪಿಗಳು ಅರೆಸ್ಟ್

ಬೆಳಗಾವಿ: ಕ್ಯಾಂಪ್ ನಲ್ಲಿ ನಡೆದ ಸುಧೀರ ಕಾಂಬಳೆ ಕೊಲೆ ಆರೋಪಿಗಳು ಅರೆಸ್ಟ್; ಹೆಂಡತಿ, ಮಗಳೇ ಹಂತಕರು  ಇಲ್ಲಿನ ಕ್ಯಾಂಪ್ ಪ್ರದೇಶದಲ್ಲಿ ಸುಧೀರ ಕಾಂಬಳೆ ಎಂಬುವವರನ್ನು ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.   ಮೃತ ಸುಧೀರ್ ಪತ್ನಿ ರೋಹಿಣಿ ಸುಧೀರ ಕಾಂಬಳೆ, ಪುತ್ರಿ ಸ್ನೇಹಾ ಹಾಗೂ ರೋಹಿಣಿಯ ಸ್ನೇಹಿತ ಅಕ್ಷಯ ಮಹಾದೇವ ವಿಠಕರ ಬಂಧಿತರು.  ಸೆಪ್ಟಂಬರ್ 16 ಹಾಗೂ 17ರ ನಡುವಿನ ಅವಧಿಯಲ್ಲಿ ಕ್ಯಾಂಪ್ ನ ಮದ್ರಾಸ್ …

Read More »