ಬೆಳಗಾವಿಯ ಶಿವಾಜಿ ನಗರದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯ ಬರ್ಬರ ಹತ್ಯೆ ಕೇಸ್‍ಗೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು ಇದೇ ಅಕ್ಟೋಬರ್ 19ರಂದು ಬೆಳಗಾವಿಯ ಶಿವಾಜಿ ನಗರದ 5ನೇ ಕ್ರಾಸ್‍ನ ಪ್ರಜ್ವಲ್ ಶಿವಾನಂದ ಕರಿಗಾರ ಎಂಬ 16 ವರ್ಷದ ಬಾಲಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿ ಶವವನ್ನು ಮುಚ್ಚಂಡಿ ಗ್ರಾಮದ ಬಳಿ ಹಂತಕರು ಎಸೆದು ಹೋಗಿದ್ದರು. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ …
Read More »ಹಳಿ ತಪ್ಪಿದ ಗೂಡ್ಸ್ ರೈಲಿನಿಂದ ಭಾರೀ ಅನಾಹುತ ತಪ್ಪಿದೆ.
ಹಳಿ ತಪ್ಪಿದ ಗೂಡ್ಸ್ ರೈಲಿನಿಂದ ಭಾರೀ ಅನಾಹುತ ತಪ್ಪಿದೆ. ರೈಲ್ವೆ ಗೂಡ್ಸ್ ಬೋಗಿಗಳು ಕಟ್ ಆದ ಪರಿಣಾನ ಆರು ಬೋಗಿಗಳು ಉರುಳಿಬಿದ್ದಿವೆ. ಚಲಿಸುತ್ತಿದ್ದ ವೇಳೆ ಏಕಾಏಕಿ ರೈಲ್ವೆಯ ಆರು ಬೋಗಿಗಳು ಕಟ್ ಆಗಿದ್ದು ಅದೃಷ್ಠ ವಶಾತ್ ಹೆಚ್ಚಿನ ಹಾನಿಯಾಗಿಲ್ಲ, ಯಾವುದೇ ಪ್ರಾಣ ಹಾನಿಯಾಗಿಲ್ಲ. ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಮುಳವಾಡ ರೈಲು ನಿಲ್ದಾಣ ಬಳಿ ಘಟನೆ ನಡೆದಿದ್ದು ಆರು ಬೋಗಿಗಳು ಟ್ರ್ಯಾಕ್ ನಿಂದ ಕಟ್ ಆಗಿ ಹೊರಗಡೆಗೆ ಬಿದ್ದಿವೆ. ವಿಜಯಪುರ …
Read More »ವೀರರಾಣಿ ಚನ್ನಮ್ಮ ಕಿತ್ತೂರು ಉತ್ಸವ-2022ಕ್ಕೆ ವಿದ್ಯುಕ್ತ ಚಾಲನೆ
ವೀರರಾಣಿ ಚನ್ನಮ್ಮ ಕಿತ್ತೂರು ಉತ್ಸವ-2022ಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ವೀರಜ್ಯೋತಿಯ ಸ್ವಾಗತ, ಆನೆಯ ಮೇಲೆ ವೀರಮಾತೆ ಚನ್ನಮ್ಮಾಜಿಯ ಭವ್ಯ ಮರವಣಿಗೆಗೆ ಕಿತ್ತೂರು ಕಲ್ಮಠದ ರಾಜಯೋಗಿಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ಈ ಅದ್ಭುತ ಕ್ಷಣಕ್ಕೆ ಹಲವು ಗಣ್ಯರು, ಸಾವಿರಾರು ಅಭಿಮಾನಿಗಳು ಸಾಕ್ಷಿಯಾದರು. ಹೌದು ಬೆಂಗಳೂರಿನಿಂದ ಆರಂಭವಾಗಿ ಇಡೀ ರಾಜ್ಯ ಸಂಚರಿಸಿ ಬೈಲಹೊಂಗಲದ ಚನ್ನಮ್ಮಾಜಿ ಸಮಾಧಿಯಿಂದ ಆಗಮಿಸಿದ ವೀರಜ್ಯೋತಿಯನ್ನು ಕಿತ್ತೂರು ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ಸ್ವಾಗತಿಸಲಾಯಿತು. …
Read More »ಬಸವಲಿಂಗ ಸ್ವಾಮಿಜೀಗಳು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದ ಶ್ರೀ ಬಸವಲಿಂಗ ಸ್ವಾಮಿಜೀಗಳು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ರೂಂ.ನ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅಪಪ್ರಚಾರ ಮಾಡಿದ್ದಕ್ಕೆ ಮನನೊಂದಿದ್ದರು ಎಂದು ಹೇಳಲಾಗುತ್ತಿದೆ. ಹಲವು ಜನರಿಂದ ಬೆದರಿಕೆ ಕರೆ ಕೂಡ ಬಂದಿರುವುದಾಗಿ ಡೆತ್‌ನೋಟ್‌ನಲ್ಲಿ ಬರೆದುಕೊಂಡಿದ್ದಾರೆ ಎನ್ನಲಾಗಿದೆ.
Read More »ಚನ್ನಮ್ಮ ಕಿತ್ತೂರು ಉತ್ಸವ-2022ರ ಭವ್ಯ ಮೆರವಣಿಗೆಗೆ ಚಾಲನೆ
ವೀರರಾಣಿ ಚನ್ನಮ್ಮ ಕಿತ್ತೂರು ಉತ್ಸವ-2022ಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ವೀರಜ್ಯೋತಿಯ ಸ್ವಾಗತ, ಆನೆಯ ಮೇಲೆ ವೀರಮಾತೆ ಚನ್ನಮ್ಮಾಜಿಯ ಭವ್ಯ ಮೆರವಣಿಗೆಗೆ ಕಿತ್ತೂರು ಕಲ್ಮಠದ ರಾಜಯೋಗಿಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ಈ ಅದ್ಭುತ ಕ್ಷಣಕ್ಕೆ ಹಲವು ಗಣ್ಯರು, ಸಾವಿರಾರು ಅಭಿಮಾನಿಗಳು ಸಾಕ್ಷಿಯಾದರು. ಬೆಂಗಳೂರಿನಿಂದ ಆರಂಭವಾಗಿ ಇಡೀ ರಾಜ್ಯ ಸಂಚರಿಸಿ ಬೈಲಹೊಂಗಲದ ಚನ್ನಮ್ಮಾಜಿ ಸಮಾಧಿಯಿಂದ ಆಗಮಿಸಿದ ವೀರಜ್ಯೋತಿಯನ್ನು ಕಿತ್ತೂರು ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ಸ್ವಾಗತಿಸಲಾಯಿತು. ಈ …
Read More »ಬಸ್ ಪ್ರಯಾಣ ದರ ದುಬಾರಿ: ಒಂದು ಸಾವಿರ ಪ್ರಕರಣ ದಾಖಲು
ಬೆಂಗಳೂರು: ಬಸ್ ಪ್ರಯಾಣ ದರ ದುಬಾರಿ ಆಗಿರುವುದರಿಂದ ಕಾರ್ಯಾಚರಣೆ ನಡೆಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು, ರಾಜ್ಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. ‘ಬೆಂಗಳೂರಿನಲ್ಲೇ 450 ಪ್ರಕರಣಗಳನ್ನು ದಾಖಲಿಸಲಾಗಿದ್ದು, ರಾಜ್ಯದ ವಿವಿಧೆಡೆಯೂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಒಟ್ಟಾರೆ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ್ದಾರೆ. ಪ್ರಯಾಣ ದರ ಹೆಚ್ಚಳವಷ್ಟೇ ಅಲ್ಲದೇ, ದಾಖಲೆಗಳು ಸಮರ್ಪಕವಾಗಿ ಇಲ್ಲದ ಪ್ರಕರಣಗಳೂ ಇದರಲ್ಲಿ ಸೇರಿವೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ವಿವರಿಸಿದರು. ‘ದಸರಾ …
Read More »ಹೂಡಿಕೆದಾರರ ಸಮಾವೇಶದ 5 ನಿಮಿಷದ ಕಿರುಚಿತ್ರಕ್ಕೆ ₹ 4.5 ಕೋಟಿ!
ಬೆಂಗಳೂರು: ನವೆಂಬರ್ 2ರಿಂದ 4ರವರೆಗೆ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (ಜಿಮ್) ಪ್ರದರ್ಶಿಸಲು ₹ 4.5 ಕೋಟಿ ವೆಚ್ಚದಲ್ಲಿ ಕಿರುಚಿತ್ರವೊಂದನ್ನು ನಿರ್ಮಿಸುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಯತ್ನಕ್ಕೆ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಡೆಯೊಡ್ಡಿದ್ದಾರೆ. ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳು, ಕೈಗಾರಿಕಾ ಮೂಲಸೌಕರ್ಯದ ಲಭ್ಯತೆ ಮತ್ತಿತರ ಅಂಶಗಳನ್ನು ವಿವರಿಸುವ ಐದು ನಿಮಿಷಗಳ ಕಿರುಚಿತ್ರ ನಿರ್ಮಿಸಿ, ಜಿಮ್‌ನಲ್ಲಿ ಪ್ರದರ್ಶಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ಧರಿಸಿತ್ತು. ₹ 4.5 ಕೋಟಿ …
Read More »ಸಿಪಿಐ ಉಮೇಶ್ ವಿರುದ್ಧ ಅತ್ಯಾಚಾರ ಪ್ರಕರಣ
ಚಿತ್ರದುರ್ಗ : ಚಳ್ಳಕೆರೆ ಠಾಣೆಯ ಸಿಪಿಐ ಜಿ.ಬಿ.ಉಮೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ನಿವೇಶನದ ಸಮಸ್ಯೆ ಹಿನ್ನೆಲೆ ಸಹಾಯ ಮಾಡುವ ನೆಪದಲ್ಲಿ ಯುವತಿಯೋರ್ವಳ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಸೋದರ ಮಾವನ ಮಗನಾದ ಚಳ್ಳಕೆರೆ ಠಾಣೆಯ ಸಿಪಿಐ ಜಿ.ಬಿ.ಉಮೇಶ್ ವಿರುದ್ಧವೇ ಯುವತಿ ಠಾಣೆಯಲ್ಲಿ ದೂರು ನೀಡಿದ್ದಾರೆ, ಘಟನೆ ವಿವರ : ದೂರುದಾರ ಯುವತಿಗೆ ಉಮೇಶ್ ಸೋದರ ಮಾವನ ಮಗನಾಗಬೇಕು, ಉಮೇಶ್ ಕಳೆದ ಐದು ವರ್ಷದ ಹಿಂದೆ ದಾವಣಗೆರೆಯಲ್ಲಿ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದರು …
Read More »ಬೆಳಗಾವಿ: ದೀಪಾವಳಿ ಬಟ್ಟೆ ಖರೀದಿಗೆ ಬಂದಿದ್ದ ಬಾಲಕ ಮಾಂಜಾ ದಾರಕ್ಕೆ ಬಲಿ
ಬೆಳಗಾವಿ: ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಸಿ ಊರಿಗೆ ದ್ವಿಚಕ್ರ ವಾಹನದ ಮೇಲೆ ಹೊರಟಿದ್ದಾಗ ಮಾಂಜಾ ದಾರ ಕುತ್ತಿಗೆಗೆ ಬಿಗಿದು ಐದು ವರ್ಷದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಇಲ್ಲಿಯ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ 4ಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ. ಯಮಕನಮರಡಿ ಸಮೀಪದ ಅನಂತಪುರ ಗ್ರಾಮದ ವರ್ಧನ ಈರಣ್ಣ ಬೇಲಿ(5) ಎಂಬ ಬಾಲಕ ಮೃತಪಟ್ಟಿದೆ. ಗಾಂಧಿ ನಗರದ ಹಣ್ಣಿನ ಮಾರುಕಟ್ಟೆ ಎದುರಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬಾಲಕನ ಕುತ್ತಿಗೆಗೆ ಮಾಂಜಾ …
Read More »ಪಟಾಕಿ ಸಿಡಿಸುವ ವೇಳೆ ಮುನ್ನೆಚ್ಚರಿಕೆ ಅಗತ್ಯ
ಬೆಂಗಳೂರು: ಇಂದಿನಿಂದ ಮೂರು ದಿನ ಎಲ್ಲೆಡೆ ಬೆಳಕಿನ ಹಬ್ಬದ ಸಡಗರ. ಕಳೆದ ಎರಡು ವರ್ಷಗಳಿಂದ ಕಾಣಿಸದ ಸಂಭ್ರಮ ಈ ವರ್ಷ ಎಲ್ಲೆಡೆ ಕಾಣಿಸಲಾರಂಭಿಸಿದೆ. ಮಕ್ಕಳು-ಹಿರಿಯರೆನ್ನದೆ ಎಲ್ಲ ವಯೋಮಾನದವರೂ ಮನೆಯ ಅಂಗಳ, ತಾರಸಿ ಏರಿ ಪಟಾಕಿ ಸುಡುವ ಮೂಲಕ ಹಬ್ಬವನ್ನು ಭಾರಿ ಸದ್ದು ಗದ್ದಲದೊಂದಿಗೆ ದೀಪಾವಳಿ ಆಚರಿಸಿ ಸಂಭ್ರಮಿಸುತ್ತಾರೆ. ಪಟಾಕಿ ಸಿಡಿಸುವ ವೇಳೆ ಆಗುವ ಅನನುಕೂಲ ಮತ್ತು ದುರಂತದ ಬಗ್ಗೆ ಹಿಂದಿ ನಿಂದಲೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಲೇ ಬರಲಾಗಿದೆ. ಅಜಾಗ ರೂಕತೆಯಿಂದ …
Read More »