Breaking News

15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕ’ರ ನೇಮಕಾತಿ: ‘ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು’ಗೊಳಿಸಿ, ಹೈಕೋರ್ಟ್ ಆದೇಶ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ( School Education Department ) ಕರೆಯಲಾಗಿದ್ದಂತ 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ( Karnataka Teacher Recruitment ) ಸಂಬಂಧಿಸಿದಂತೆ ಪ್ರವೇಶ ಪರೀಕ್ಷೆ, ದಾಖಲಾತಿ ಪರಿಶೀಲನೆ ಬಳಿಕ, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈ ಪಟ್ಟಿಯನ್ನು ಇದೀಗ ಕರ್ನಾಟಕ ಹೈಕೋರ್ಟ್ ನ ಏಕ ಸದಸ್ಯ ನ್ಯಾಯಪೀಠವು ರದ್ದುಗೊಳಿಸಿದೆ. ಈ ಸಂಬಂಧ ನೂರಾರೂ ಅಭ್ಯರ್ಥಿಗಳು ಹೈಕೋರ್ಟ್ ಗೆ ( Karnataka High Court …

Read More »

ಜಾರಕಿಹೊಳಿ ‘ಸಿಡಿ’ ಪ್ರಕರಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ಕೈವಾಡ : ಮಾಜಿ ಶಾಸಕ ನಾಗರಾಜ್ ಹೊಸ ಬಾಂಬ್

ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಕೈವಾಡವಿದೆ ಎಂದು ಮಾಜಿ ಶಾಸಕ ಹಾಗೂ ರಮೇಶ್ ಜಾರಕಿಹೊಳಿ ಆಪ್ತ ನಾಗರಾಜ್ ಹೊಸ ಬಾಂಬ್ ಸಿಡಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುವ ವಿಚಾರ ಗೊತ್ತಾಯ್ತು, ಈ ವಿಚಾರವನ್ನು ನಾನು 2 ಬಾರಿ ರಮೇಶ್ ಗೆ ಹೇಳಿದ್ದೆ, ಅವರು ಇಂತಹ ನೂರು ಸಿಡಿ ಬಂದರೂ ನಾನು ತಲೆಕೆಡಿಸಿಕೊಳ್ಳಲ್ಲ ಎಂದಿದ್ದರು. ಸಿಡಿ …

Read More »

ಕುಡಿಯುವುದಕ್ಕೆ ಹಣ ಕೊಟ್ಟಿಲ್ಲವೆಂದು ಪತ್ನಿಗೆ ಚಾಕು ಇರಿದ ಪತಿರಾಯ

ಬೆಂಗಳೂರು: ಕುಡಿಯುವುದಕ್ಕೆ ಹಣ ಕೊಟ್ಟಿಲ್ಲವೆಂದು ಗಂಡನನ್ನೇ ಪತ್ನಿಗೆ ಚಾಕು ಇರಿದ ಘಟನೆ ನಡೆದಿದೆ.ನಗರದ ಜಕ್ಕೂರು ಬಳಿಯ ಮುನೇಶ್ವರ ಬೀದಿಯಲ್ಲಿ ನಡೆದಿದೆ. 33 ವರ್ಷದ ಜಯಶ್ರೀ ಮೃತ ದುರ್ದೈವಿ. ಇವರಿಬ್ಬರು 15 ವರ್ಷದ ಹಿಂದೆ ವಿವಾಹವಾಗಿದ್ದರು. ಇಬ್ಬರು ಮಕ್ಕಳ ಜೊತೆ ಮುನೇಶ್ವರ ಬೀದಿಯಲ್ಲಿ ವಾಸವಾಗಿದ್ದರು. ಪ್ರತಿನಿತ್ಯ ನಾಗರಾಜ್‌ ಹಣ ನೀಡುವಂತೆ ಪದೇ ಪದೇ ಪತ್ನಿಗೆ ಪೀಡಿಸುತ್ತಿದ್ದ. ಇದರಿಂದ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಚುಚ್ಚಿದ್ದಾನೆ. ಇನ್ನು ನಾಗರಾಜ್​ ಕೂಲಿ ಕೆಲಸ …

Read More »

‘ಜೆಡಿಎಸ್’ ಅಧಿಕಾರಕ್ಕೆ ಬಂದರೆ ವಿಧವಾ ವೇತನ ಮಾಸಿಕ 2500 ರೂ.ಗೆ ಹೆಚ್ಚಳ:H.D.K

ಕೊಪ್ಪಳ : ‘ಜೆಡಿಎಸ್’ ಅಧಿಕಾರಕ್ಕೆ ಬಂದರೆ ವಿಧವಾ ವೇತನ ಮಾಸಿಕ 2500 ರೂಗೆ ಹೆಚ್ಚಳ ಮಾಡಲಾಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ಜೆಡಿಎಸ್’ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ‘ಸ್ತ್ರೀ ಶಕ್ತಿ’ ಸಂಘದ ಸಾಲಮನ್ನಾ ಮಾಡಲಾಗುತ್ತದೆ. ವಿಧವಾ ವೇತನ ಮಾಸಿಕ 2500 ರೂಗೆ ಹೆಚ್ಚಳ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ.ಸರ್ಕಾರದ ಖಜಾನೆಯನ್ನು ಕೆಲವರು ದೋಚುತ್ತಿದ್ದಾರೆ. …

Read More »

ಬೆಂಗಳೂರಿನಲ್ಲಿ ನಿಲ್ಲದ ಆರ್ಕಿಡ್ ಶಾಲೆ ಅವಾಂತರ: ಪೋಷಕರ ಮೇಲೆ ಹಲ್ಲೆ.?

ಬೆಂಗಳೂರು: ನಗರದ ಮಹಾಲಕ್ಷ್ಮೀ ಲೇಔಟ್ ನಲ್ಲಿರುವಂತ ಆರ್ಕಿಡ್ ಶಾಲೆಯ ಅವಾಂತರ ಮುಂದುವರೆದಿದೆ. ಇಂದು ಪೋಷಕರ ಸಭೆ ನಡೆಸುವುದಾಗಿ ಕರೆಸಿ, ಸಿಬ್ಬಂದಿಗಳಿಂದ ಹಲ್ಲೆ ನಡೆಸಿರೋದಾಗಿ ಹೇಳಲಾಗುತ್ತಿದೆ. ಇಂದು ಸಂಜೆ ಮಹಾಲಕ್ಷ್ಮೀ ಲೇಔಟ್ ನಲ್ಲಿರುವಂತ ಆರ್ಕಿಡ್ ಶಾಲೆಯಲ್ಲಿ ಸಿಬಿಎಸ್ಸಿ ಸಿಲಬಸ್ ಮಾನ್ಯತೆಯ ಬಗ್ಗೆ ಚರ್ಚಿಸೋದಕ್ಕಾಗಿ ಪೋಷಕರ ಸಭೆಯನ್ನು ಆಡಳಿತ ಮಂಡಳಿ ಕರೆಯಲಾಗಿತ್ತು. ಸಭೆಗೆ ಆಗಮಿಸಿದಂತ ಪೋಷಕರನ್ನು ಶಾಲೆಯ ಒಳಗಡೆ ಬಿಡದೇ, ಹೊರಗಡೆ ಶಾಲೆಯು ಸಿಬಿಎಸ್ಸಿ ಮಾನ್ಯತೆ ಪಡೆದಿದೆ ಎಂಬುದಾಗಿ ಗೇಟ್ ಮುಂದೆ ಬೋರ್ಡ್ …

Read More »

ಲಂಚ ಸ್ವೀಕರಿಸುತ್ತಿದ್ದ ಸಹಾಯಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ

ಕೋಲಾರ : ಲಂಚ ಸ್ವೀಕರಿಸುತ್ತಿದ್ದ ಮುಳಬಾಗಿಲು ಸಹಾಯಕ ಇಂಜಿನಿಯರ್ ರವೀಂದ್ರ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲಿನ ಪಂಚಾಯತ್ ರಾಜ್ ವಿಭಾಗದ ಸಹಾಯಕ ಇಂಜಿನಿಯರ್ ರವೀಂದ್ರ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಾಲಾ ಕಟ್ಟದ ಗುತ್ತಿಗೆ ಕಾಮಗಾರಿಗೆ 3 ಲಕ್ಷ ಹಣ ಬಿಡುಗಡೆಗೆ 5 % ಕಮಿಷನ್ ಗೆ ಸಹಾಯಕ ಎಂಜಿನಿಯರ್ ರವೀಂದ್ರ ಕುಮಾರ್ ಬೇಡಿಕೆಯೊಡ್ಡಿದ್ದರು. ಗುತ್ತಿಗೆದಾರ ನಾರಾಯಣ ಸ್ವಾಮಿ ಎಂಬುವವರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ …

Read More »

ನಾನು ಎಷ್ಟು ದಿನ ಬದುಕ್ತಿನೋ ಗೊತ್ತಿಲ್ಲ’ : ಮಾಜಿ ಸಿಎಂ ‘ಕುಮಾರಸ್ವಾಮಿ’

ಬೆಂಗಳೂರು : ನನಗೆ 2 ಬಾರಿ ಹೃದಯ ಚಿಕಿತ್ಸೆ ಆಗಿದೆ, ಎಷ್ಟು ದಿನ ಬದುಕ್ತಿನೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ನನ್ನ ಪರ ಜೈಕಾರ ಹಾಕುತ್ತೀರಿ ಕೂಗುತ್ತೀರಿ, ಆದ್ರೆ ಓಟು ಹಾಕುವುದಿಲ್ಲ. ಇದರಲ್ಲಿ ನಮ್ಮದು ತಪ್ಪಿದೆ, ಅಭ್ಯರ್ಥಿ ಹಾಕುವುದರಲ್ಲಿ ಎಡವಿದ್ದೇವೆ. ಕುಷ್ಟಗಿಯ ತುಕಾರಾಂ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಕನಕಗಿರಿಯ ಅಶೋಕ್ ಕೆಲಸ ನಮಗೆ …

Read More »

ಮಹದಾಯಿ ವಿಚಾರದಲ್ಲಿ ರಾಜಿ ಇಲ್ಲ: ಗೋವಾ ಸಿ.ಎಂ ಸಾವಂತ್

ಪಣಜಿ: ಮಹದಾಯಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಮತ್ತು ನದಿ ನೀರನ್ನು ಬೇರೆಡೆಗೆ ತಿರುಗಿಸದಂತೆ ರಕ್ಷಿಸಲು ತಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೋಮವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದ ಬಗ್ಗೆ ಗೋವಾ ಸುಪ್ರೀಂ ಕೋರ್ಟ್‌ನಲ್ಲಿ ಬಲವಾದ ಕಾನೂನು ನಿಲುವು ಹೊಂದಿದೆ. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ನದಿ ನೀರನ್ನು ಬೇರೆಡೆಗೆ ತಿರುಗಿಸದಂತೆ ರಕ್ಷಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಕರ್ನಾಟಕ …

Read More »

ಬೆಳಗಾವಿ ಡಿಸಿಪಿ ರವೀಂದ್ರ ಗಡಾದಿ ವರ್ಗಾವಣೆ !

ಬೆಳಗಾವಿ : ಬೆಳಗಾವಿ ನಗರ ಕಾನೂನು ಹಾಗೂ ಸುವ್ಯವಸ್ಥೆ ಉಪ ಪೋಲೀಸ್ ಆಯುಕ್ತ ರವೀಂದ್ರ ಗಡಾದಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಅವರ ಸ್ಥಾನಕ್ಕೆ ಎಚ್. ಶೇಖರ್ ಅವರನ್ನು ನೇಮಕ ಮಾಡಲಾಗಿದೆ. ರವೀಂದ್ರ ಗಡಾದಿ ಅವರನ್ನು ಡಿಸಿಪಿ ಕಮಾಂಡ್ ಸೆಂಟರ್ ಬೆಂಗಳೂರು ಇಲ್ಲಿಗೆ ವರ್ಗಾಯಿಸಲಾಗಿದೆ.

Read More »

ಬಿಜೆಪಿ ಹೈಕಮಾಂಡ್​​ ಸರ್ವೆ: 10ಕ್ಕೂ ಹೆಚ್ಚು ಹಾಲಿ ಶಾಸಕರು ಸೋಲುವ ಭೀತಿ; ಹೊಸ ತಂತ್ರ ರೂಪಿಸಲು ಚಿಂತನೆ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಭರಾಟೆ ಜೋರಾಗಿಯೇ ನಡೆಯುತ್ತಿದೆ. ಚುನಾವಣೆಗೆ ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೆ ಬಿಡುಗಡೆ ಮಾಡಿದೆ. ಇನ್ನು ಕಾಂಗ್ರೆಸ್​ ಮತ್ತು ಬಿಜೆಪಿ ಘೋಷಣೆ ಮಾಡುವುದು ಒಂದು ಬಾಕಿ ಇದೆ. ಟಿಕೆಟ್​ ಹಂಚುವ ವಿಚಾರವಾಗಿ ಕಮಲ (BJP) ಹೈಕಮಾಂಡ್​ ನಾಯಕರು ಗುಜರಾತ ಮಾದರಿ ಅನುಸರಿಸುತ್ತಾರೆ ಎಂಬ ಮಾತುಗಳು ಕೇಳಿ ಬರತ್ತಿದೆ. ಬಿಜೆಪಿ ಹೈಕಮಾಂಡ್​ ಟಿಕೆಟ್ ಹಂಚಿಕೆ ವಿಚಾರವಾಗಿ ಈಗಾಗಲೆ ಗೆದ್ದಿರುವ ಮತ್ತು ಸೋತಿರುವ ಕ್ಷೇತ್ರಗಳಲ್ಲಿ ಸ್ಟ್ರಾಟಜಿ …

Read More »