Breaking News

ಮೈಸೂರು ದಸರಾ: ಸೆ.28, 29 ರಂದು ಪ್ರಾಯೋಗಿಕ ಡ್ರೋನ್‌ ಶೋ ಪ್ರದರ್ಶನ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಡ್ರೋನ್‌ ಶೋ ಪ್ರಾಯೋಗಿಕ ಪ್ರದರ್ಶನವನ್ನು ಸೆ.28 ಮತ್ತು 29ರಂದು ನಡೆಸಲು ಸಮಯ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು. ದಸರಾ ಮಹೋತ್ಸವದ ವಿದ್ಯುತ್‌ ದೀಪಾಲಂಕಾರಕ್ಕೆ ಸಂಬಂಧಿಸಿದಂತೆ ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಡ್ರೋನ್‌ ಶೋ ಜೊತೆಗೆ ದಸರಾ ವಿದ್ಯುತ್‌ ದೀಪಾಲಂಕಾರ ಹಾಗೂ ಡ್ರೋನ್‌ ಶೋ ಕಾರ್ಯಕ್ರಮ …

Read More »

ದರೋಡೆ, ಸಾಮಾಜಿಕ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ಪೊಲೀಸರ ಗುಂಡಿನ ದಾಳಿ!

ದರೋಡೆ, ಸಾಮಾಜಿಕ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ಪೊಲೀಸರ ಗುಂಡಿನ ದಾ ಳಿ! ಬೆಳಗಾವಿ ಜಿಲ್ಲೆಯ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಆರೋಪಿ ರಮೇಶ ಕಿಲ್ಲಾರ ಮೇಲೆ ಗುಂಡಿನ ದಾಳಿ ಇಂದು ಬೆಳಗಿನಜಾವ 6ಗಂಟೆಗೆ ಬಂಧನ ಮಾಡುವಾಗ ಘಟನೆ ಪೊಲೀಸ್ ಪೇದೆಗೆ ಚಾ* ಕುವಿನಿಂದ ಪರಾರಿಗೆ ಯತ್ನಸಿ, ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ಆರೋಪಿ ಷರೀಫ್ ದಫೇದಾರ್ ಎಂಬ ಪೊಲೀಸ್ ಪೇದೆಗೆ ಚಾಕು ಇರಿದು ಪರಾರಿಗೆ ಯತ್ನ ಈ …

Read More »

ಹಾವೇರಿ: ರಿಪೇರಿಯಾಗದ ಜಲ ಶುದ್ಧೀಕರಣ ಘಟಕ; ರೋಗಗಳಿಗೆ ತುತ್ತಾಗುತ್ತಿರುವ ಜನ

ಹಾವೇರಿ: ಜಲ ಶುದ್ಧೀಕರಣ ಘಟಕದ ರಿಪೇರಿ ಹಿನ್ನೆಲೆಯಲ್ಲಿ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಬಗ್ಗೆ ನಗರಸಭೆಯು ಸೂಚನೆ ನೀಡಿತ್ತು. ಅಲ್ಲದೆ, ಇದೇ 13ರಿಂದ 17ರ ವರೆಗೆ ನದಿಯ ನೀರನ್ನು ಶುದ್ದೀಕರಣಗೊಳಿಸದೆ, ನೇರವಾಗಿ ಪೂರೈಕೆ ಮಾಡುವ ಕಾರಣ ಅದನ್ನು ಕುಡಿಯಲು ಬಳಿಸದಂತೆ ಎಚ್ಚರಿಕೆ ನೀಡಿತ್ತು. ಆದರೆ ಇಂದಿಗೂ ನಗರಸಭೆಯು ಜಲ ಶುದ್ಧೀಕರಣ ಘಟಕದ ರಿಪೇರಿ ಮಾಡುವಲ್ಲಿ ವಿಫಲವಾಗಿದೆ. ಪರಿಣಾಮ, ಶುದ್ಧೀಕರಣಗೊಳ್ಳದ ನೀರು ಬಳಸಿ, ಹಲವು ರೋಗಗಳನ್ನು ಅನುಭವಿಸುವಂತಾಗಿದೆ ಎಂದು ಹಾವೇರಿ ನಗರದ ನಿವಾಸಿಗಳು …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ.. ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲ್ಲೂಕಿನ ಮಲಾಮರಡಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ …

Read More »

ಘಟಪ್ರಭಾ ಪೋಲೀಸ್ ಠಾಣೆಯಲ್ಲಿ ಶ್ರೀ ಸತ್ಯ ನಾರಾಯಣ ಪೂಜೆ ನೆರವೇರಿಸಿದ ಪೋಲೀಸ್ ಇನ್ಸ್ಪೆಕ್ಟರ್ ಎಚ್ ಡಿ ಮುಲ್ಲಾ,

ಘಟಪ್ರಭಾ ಪೋಲೀಸ್ ಠಾಣೆಯಲ್ಲಿ ಶ್ರೀ ಸತ್ಯ ನಾರಾಯಣ ಪೂಜೆ ನೆರವೇರಿಸಿದ ಪೋಲೀಸ್ ಇನ್ಸ್ಪೆಕ್ಟರ್ ಎಚ್ ಡಿ ಮುಲ್ಲಾ, ಬೆಳಗಾವಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸುದ್ದಿ ಮಾಡಿದ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು ಒಂದು ಕಡೆ ಆದರೆ ಘಟಪ್ರಭಾದ ಪೋಲೀಸ್ ಠಾಣೆಯಲ್ಲಿ ಶ್ರೀ ಸತ್ಯ ನಾರಾಯಣ ಪೂಜೆಯನ್ನು ನೆರವೇರಿಸಿದ ಪೋಲೀಸ್ ಇನ್ಸ್ಪೆಕ್ಟರ್ ಎಚ್ ಡಿ ಮುಲ್ಲಾ, ರಾಷ್ಟ್ರೀಯ ಭಾವೈಕ್ಯತೆಯ ಭಾವನೆ ಬೆಳೆಸುವದರೊಂದಿಗೆ ಘಟಪ್ರಭಾದ ನಾಗರಿಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಘಟಪ್ರಭಾ ಪೋಲೀಸ್ …

Read More »

ರಾಹುಲ್‌ ಗಾಂಧಿ ರ್‍ಯಾಲಿಯಲ್ಲಿ ಸಿಎಂ ಸಿದ್ದರಾಮಯ್ಯ, ಸಂಪುಟದ ಸಚಿವರು ಭಾಗಿ

ರಾಹುಲ್‌ ಗಾಂಧಿ ರ್‍ಯಾಲಿಯಲ್ಲಿ ಸಿಎಂ ಸಿದ್ದರಾಮಯ್ಯ, ಸಂಪುಟದ ಸಚಿವರು ಭಾಗಿ ಬಿಹಾರ ಚುನಾವಣಾ ಪ್ರಚಾರ ಅಖಾಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ , ಲೋಕೋಪಯೋಗಿ ಇಲಾಖೆ ಸಚಿವ ಸೀಶ್‌ ಜಾರಕಿಹೊಳಿ ಅವರು ಸೇರಿದಂತೆ ರಾಜ್ಯ ಸಂಪುಟದ ಅನೇಕ ಸಚಿವರು ಬಿಹಾರದ ಸಿವಾನ್‌ ಜಿಲ್ಲೆಯಲ್ಲಿ ನಡೆಯುತ್ತಿರುವ ವೋಟರ್‌ ಅಧಿಕಾರ್‌ ಯಾತ್ರೆಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಶುಕ್ರವಾರ ಪಾಲ್ಗೊಂಡರು. ಶುಕ್ರವಾರ ಬೆಂಗಳೂರಿನಿಂದ ಉತ್ತರಪ್ರದೇಶದ ಗೋರಖ್‌ಪುರಕ್ಕೆ ವಿಶೇಷ ವಿಮಾನದಲ್ಲಿ ತೆರಳಿರುವ ಅವರು ಅಲ್ಲಿಂದ …

Read More »

ಐನಾಪೂರ ಗ್ರಾಮದ ಕಾರಿಮಠ ವಸತಿ ಪ್ರದೇಶದ ವಾಲ್ಮೀಕಿ ನಾಯಕ ಸಮುದಾಯದವರಿಂದ ಸನ್ಮಾನ

ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಇಂದು ಸನ್ಮತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿನೋದ್ ಬರಗಾಲೆ ಅವರ ನಿವಾಸಕ್ಕೆ ಭೇಟಿ ನೀಡಿ, ಸಂಸ್ಥೆಯ ವತಿಯಿಂದ ಸನ್ಮಾನ ಸ್ವೀಕರಿಸಲಾಯಿತು. ನಂತರ ಐನಾಪೂರ ಗ್ರಾಮದ ಕಾರಿಮಠ ವಸತಿ ಪ್ರದೇಶದ ವಾಲ್ಮೀಕಿ ನಾಯಕ ಸಮುದಾಯದವರಿಂದಲೂ ಸನ್ಮಾನ ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಶ್ರೀ ಭರಮಗೌಡ (ರಾಜು) ಕಾಗೆ ಅವರು ಉಪಸ್ಥಿತರಿದ್ದರು.

Read More »

ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಸಂಯುಕ್ತ ಆಶ್ರಯದಲ್ಲಿ, ಅಮೃತ 2.0 ಯೋಜನೆಯಡಿಯಲ್ಲಿ,

ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಬರುವ ಕಾಗವಾಡ ವಿಧಾನಸಭಾ ಕ್ಷೇತ್ರದ ಶೇಡಬಾಳ ಗ್ರಾಮದ ಬಸವಣ್ಣ ದೇವಾಲಯ ಆವರಣದಲ್ಲಿ‌ ಇಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪೌರಾಡಳಿತ ನಿರ್ದೇಶನಾಲಯದ ಸಂಯುಕ್ತ ಆಶ್ರಯದಲ್ಲಿ, ಅಮೃತ 2.0 ಯೋಜನೆಯಡಿಯಲ್ಲಿ, ಅಂದಾಜು ₹43.67 ಕೋಟಿ ವೆಚ್ಚದಲ್ಲಿ, ಕೃಷ್ಣಾ ನದಿ ಮೂಲದಿಂದ ಕಾಗವಾಡ, ಶೇಡಬಾಳ ಮತ್ತು ಉಗಾರ ಖುರ್ದ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ 2ನೇ ಹಂತದ ಮಹತ್ವಾಕಾಂಕ್ಷಿ ಕಾಮಗಾರಿಯ ಭೂಮಿಪೂಜೆಯನ್ನು …

Read More »

ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮ

ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಬೆಳಗಾವಿ ಮರಾಠಾ ಲಘು ಪದಾತಿ ದಳದ ಬ್ರಿಗೇಡಿಯರ್ ಶ್ರೀ ಜಾಯ್‌ದೀಪ್ ಮುಖರ್ಜಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ತದನಂತರ ಬೆಳಗಾವಿ ಸೈನಿಕ ವಸತಿ ಶಾಲೆಗೆ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಬಸವರಾಜ ಹುಳ್ಳೇರ, ಶ್ರೀ ಅಮೀತ ಜಾಧವ, ಶ್ರೀ ಸಂಜೀವ ಅಕ್ಕಿ, ಶ್ರೀ ಪಂಕಜ ಮಹಾರಿಯಾ ಉಪಸ್ಥಿತರಿದ್ದರು.

Read More »

ನಿವೃತ್ತಿ ಹೊಂದಲು ಕೇವಲ ಮೂರು ದಿನ ಬಾಕಿ ಇರುವಾಗಲೇ ಹಿರಿಯ ಐಪಿಎಸ್ ಅಧಿಕಾರಿ ನಿಧನ ಹೊಂದಿರುವ ಘಟನೆ ನಡೆದಿದೆ. 

ನಿವೃತ್ತಿ ಹೊಂದಲು ಕೇವಲ ಮೂರು ದಿನ ಬಾಕಿ ಇರುವಾಗಲೇ ಹಿರಿಯ ಐಪಿಎಸ್ ಅಧಿಕಾರಿ ನಿಧನ ಹೊಂದಿರುವ ಘಟನೆ ನಡೆದಿದೆ.   ಕೇರಳದ ಎಡಿಜಿಪಿ ಮಹಿಪಾಲ್ ಯಾದವ್ ನಿಧನರಾಗಿದ್ದಾರೆ. ಮಹಿಪಾಲ್ ಅವರ ಆರೋಗ್ಯ ಸ್ಥಿತಿ ವಿಷಮಿಸಿದ್ದರಿಂದ, ಅವರ ಕುಟುಂಬದ ಸದಸ್ಯರು ಅವರನ್ನು ತವರು ರಾಜ್ಯ ರಾಜಸ್ಥಾನಕ್ಕೆ ಕರೆದೊಯ್ದು ಜೈಪುರದ ಆಸ್ಪತ್ರೆಗೆ ದಾಖಲಿಸಿದ್ದರು. ತಮ್ಮ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್‌ ಪದಕಕ್ಕೆ ಭಾಜನರಾಗಿದ್ದ ಮಹಿಪಾಲ್ ಯಾದವ್, ಕೇರಳ ಅಬಕಾರಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಅವರು ವೈದ್ಯಕೀಯ …

Read More »