ಮಹಿಳೆ ಅಪಹರಣ ಕೇಸ್: ಎಸ್‌ಐಟಿ ಪೊಲೀಸರಿಂದ ‘ಭವಾನಿ ರೇವಣ್ಣ ಕಾರು ಚಾಲಕ’ನಿಗೆ ಸಮನ್ಸ್ ಜಾರಿ

ಬೆಂಗಳೂರು: ಸಂತ್ರಸ್ತ ಮಹಿಳೆ ಕಿಡ್ನ್ಯಾಪ್ ಕೇಸಲ್ಲಿ ಜೈಲು ಸೇರಿ, ಮಾಜಿ ಸಚಿವ ಹೆಚ್.ಡಿ ರೇವಣ್ಣ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಬೆನ್ನಲ್ಲೇ ಅವರ ಪತ್ನಿ ಭವಾನಿ ರೇವಣ್ಣ ಕಾರು ಚಾಲಕನಿಗೆ ಎಸ್‌ಐಟಿ ಅಧಿಕಾರಿಗಳು ಸಮನ್ಸ್ ಜಾರಿಗೊಳಿಸಿದ್ದಾರೆ. ಸಂತ್ರಸ್ತ ಮಹಿಳೆ ಕಿಡ್ನ್ಯಾಪ್ ಕೇಸಿಗೆ ಸಂಬಂಧಿಸಿದಂತೆ ಎಸ್‌ಐಟಿ ಪೊಲೀಸರಿಂದ ಈಗಾಗಲೇ ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣ ಅವರ ಕಾರು ಚಾಲಕ ಅಜಿತ್ ಗೆ ಸಮನ್ಸ್ ನೀಡಲಾಗಿತ್ತು.

Read More »

ಕಾಂಗ್ರೆಸ್ ಪಕ್ಷವು ಭಾರತದ ಸಾಮರ್ಥ್ಯಕ್ಕೆ ಅನ್ಯಾಯ ಮಾಡಿದೆ; ಪ್ರಧಾನಿ ಮೋದಿ ಆರೋಪ

ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಪಶ್ಚಿಮ ದೆಹಲಿಯ ದ್ವಾರಕಾದಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದರು. 60 ವರ್ಷಗಳಿಂದ ಕಾಂಗ್ರೆಸ್​ ಪಕ್ಷವು ಭಾರತದ ಸಾಮರ್ಥ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

Read More »

RTO ಅಧಿಕಾರಿಗಳಿಂದ ಬಸ್ ಸೀಜ್. ಗದಗದಲ್ಲಿ ಆಂಧ್ರ ಪ್ರವಾಸಿಗರ ಪರದಾಟ!

ಗದಗ: ಹೈದರಾಬಾದ್, ಕರ್ನಾಟಕ, ಗೋವಾ ತಮಿಳುನಾಡು ರಾಜ್ಯ ಪ್ರವಾಸಕ್ಕೆ ಹೊರಟಿದ್ದ ಬಸ್ಸನ್ನು ಗದಗ ಆರ್ ಟಿಓ ಅಧಿಕಾರಿಗಳು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಬಸ್ಸಿನಲ್ಲಿದ್ದ ಮಕ್ಕಳು, ಮಹಿಳೆಯರು ಸೇರಿದಂತೆ 49 ಪ್ರವಾಸಿಗರು ಗದಗ ಆರ್ ಟಿಓ ಕಚೇರಿ ಬಳಿಯೇ ರಾತ್ರಿ ಕಳೆದ ಘಟನೆ ಬೆಳಕಿಗೆ ಬಂದಿದೆ. ಬಸ್ಸಿನ ದಾಖಲೆ ಪತ್ರಗಳು ಸರಿಯಾಗಿ ಇರದ ಕಾರಣ ಹೆದ್ದಾರಿಯಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಅಧಿಕಾರಿಗಳು ಆಂಧ್ರಪ್ರದೇಶದ ಬಸ್ಸನ್ನು ತಪಾಸಣೆ ನಡೆಸಿದ್ದಾರೆ ಈ ವೇಳೆ ಬಸ್ಸಿನ ದಾಖಲೆ …

Read More »

2A ಮೀಸಲಾತಿ ಕೋರಿ ಮತ್ತೆ ಪಂಚಮಸಾಲಿ ಹೋರಾಟ:

ಧಾರವಾಡ : ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ೨ಎ ಮೀಸಲಾತಿ ಕೊರಿ ನಡೆಯುತ್ತಿದ್ದ ಹೋರಾಟವನ್ನು ಮತ್ತೆ ಮುಂದುವರಿಸುವ ಸಂಬಂಧ ನಾಳೆ (ಗುರುವಾರ) ರಂದು ಮಧ್ಯಾಹ್ನ 3 ಗಂಟೆಗೆ ಜೋಯಿಡಾ ತಾಲೂಕಿನ ಸುಕ್ಷೇತ್ರ ಉಳವಿಯಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷರಾದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

Read More »

ಮುರುಡೇಶ್ವರದಲ್ಲಿ ಪ್ರವಾಸಿಗರ ದಂಡು; ಅಗತ್ಯ ಸೌಲಭ್ಯ ಇಲ್ಲದೆ ಜನರ ಪರದಾಟ

ಭಟ್ಕಳ: ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರವಾಸಿತಾಣ ಮುರುಡೇಶ್ವರಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಏರುತ್ತಿದ್ದರೂ ಪ್ರವಾಸೋದ್ಯಮ ಇಲಾಖೆ ಅಗತ್ಯ ಮೂಲಸೌಕರ್ಯದ ಸೌಲಭ್ಯ ಒದಗಿಸಿದ ಕಾರಣ ಪ್ರವಾಸಿಗರು ಪರದಾಡುವಂತಾಗಿದೆ. ಮುರುಡೇಶ್ವರಲ್ಲಿನ ಪ್ರಕೃತಿದತ್ತ ಸೌಂದರ್ಯವನ್ನು ವೀಕ್ಷಿಸುವುದೇ ಒಂದು ಸುಂದರ ಅನುಭವ. ಈಶ್ವರನ ದೇವಸ್ಥಾನ, ಬೃಹದಾಕಾರದ ರಾಜಗೋಪುರ, ಬೃಹದಾಕಾರದ ಈಶ್ವರನ ಮೂರ್ತಿ, ಸುಂದರರಾಮೇಶ್ವರ ದೇವಸ್ಥಾನ, ಪಂಚ ಶಿವಕ್ಷೇತ್ರ ಆದ ಬಗ್ಗೆ ಈಶ್ವರನ ಬೃಹಾದಾಕಾರದ ಮೂರ್ತಿಯ ಕೆಳಭಾಗದ ಗುಹೆಯೊಳಗಿನ ಸುಂದರ ಚಿತ್ರಣ, …

Read More »

ಓದು ಬರಹ ಬರದಿದ್ದರೂ ಪರೀಕ್ಷೆಯಲ್ಲಿ 622 ಅಂಕ! ಯಾದಗಿರಿ ನ್ಯಾಯಾಲಯದಲ್ಲಿ ಜವಾನನಾಗಿ ನೇಮಕ

ಕೊಪ್ಪಳ/ಬಾಗಲಕೋಟೆ: ಯಾದಗಿರಿ ನ್ಯಾಯಾಲಯದಲ್ಲಿ ಜವಾನನಾಗಿ ನೇಮಕಗೊಂಡಿರುವ ಕೊಪ್ಪಳ ನಗರದ ಪ್ರಭು ಲೋಕರೆಗೆ ಓದು-ಬರಹ ಬಾರದಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 622 ಅಂಕ ಗಳಿಸಿದ್ದು ಹೇಗೆ ಎಂಬ ಚರ್ಚೆ ಆರಂಭವಾಗಿದೆ. ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ಕೊಪ್ಪಳ ಠಾಣೆಗೆ ಜಿಲ್ಲಾ ನ್ಯಾಯಾಲಯದ ಸಿವಿಲ್ ಮತ್ತು ಜೆಎಂಎಫ್​ಸಿ ನ್ಯಾಯಾಧೀಶರು ದೂರು ನೀಡಿದ್ದಾರೆ.   ಏಳನೇ ತರಗತಿ ವಿದ್ಯಾರ್ಹತೆ ಮೇಲೆ ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ಸ್ಕ್ಯಾವೆಂಜರ್ ಆಗಿ ನೇಮಕಗೊಂಡಿದ್ದ ಪ್ರಭು, ಏ.22ರಂದು ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ …

Read More »

ಇನ್ಮುಂದೆ ಇರಲ್ಲ ಟೆಸ್ಟ್ ಡ್ರೈವ್! ಡ್ರೈವಿಂಗ್ ಲೈಸೆನ್ಸ್’ನ ನಿಯಮದಲ್ಲಿ ಭಾರಿ ಬದಲಾವಣೆ – ಜೂನ್ 1 ರಿಂದ ಜಾರಿ

ಬೆಂಗಳೂರು: ಚಾಲನಾ ಪರವಾನಗಿ ಮತ್ತು ತರಬೇತಿಗೆ ಸಂಬಂಧಿಸಿದ ನಿಯಮಗಳಲ್ಲಿ ಸರ್ಕಾರ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಹೊಸ ನಿಯಮಗಳು ಜೂನ್ 1, 2024 ರಿಂದ ಜಾರಿಗೆ ಬರುತ್ತವೆ. ಹೀಗಾಗಿ ಇನ್ನು ಮುಂದೆ ಆರ್ ಟಿಒ ಕಚೇರಿಗೆ ಹೋಗಿ ಟೆಸ್ಟ್ ಡ್ರೈವ್ ಮಾಡಬೇಕಿಲ್ಲ. ಹೊಸ ನಿಯಮಗಳಲ್ಲಿ ಯಾವ ಬದಲಾವಣೆಗಳು ಬರಲಿವೆ ಎಂಬುದನ್ನು ಇಲ್ಲಿ ತಿಳಿಯಿರಿ.   ಹೊಸ ನಿಯಮಗಳ ಪ್ರಕಾರ ಇನ್ನು ಮುಂದೆ ಆರ್‌ಟಿಒ ಕಚೇರಿಗೆ ಚಾಲನಾ ಪರೀಕ್ಷೆಗೆ ಹೋಗಬೇಕಾಗಿಲ್ಲ. ಆರ್‌ಟಿಒ ಕಚೇರಿ …

Read More »

ಹುಬ್ಬೇರಿಸುವಂತೆ ಮಾಡಿದ ವಸತಿ ಶಾಲೆ ಎಸ್ಸೆಸ್ಸೆಲ್ಸಿ ಫಲಿತಾಂಶ

ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ನಡೆಯುವ ವಸತಿ ಶಾಲೆಗಳಲ್ಲಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ಶೇ.96 ಲಿತಾಂಶ ಪ್ರಕಟವಾಗಿದ್ದು, ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲವೆಂದು ತೋರಿಸಿವೆ. ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವಿಲ್ಲ, ಉತ್ತಮ ಶಿಕ್ಷಕರಿಲ್ಲ, ಅತಿಥಿ ಶಿಕ್ಷಕರಲ್ಲಿಯೇ ಶಾಲೆಗಳನ್ನು ನಡೆಸಲಾಗುತ್ತಿದೆ. ಮೂಲ ಸೌಕರ್ಯದ ಕೊರತೆ ಇದೆ ಎಂಬ ಹತ್ತಾರು ಕಾರಣಗಳನ್ನು ನೀಡಿ ಸರ್ಕಾರಿ ಶಾಲೆಗಳನ್ನು ದೂಷಿಸಲಾಗುತ್ತದೆ. ಅದೆಲ್ಲ ಸವಾಲುಗಳನ್ನು ಮೆಟ್ಟಿ ನಿಂತಿರುವ ವಸತಿ ಶಾಲೆಗಳು ಶೇ,96 ಲಿತಾಂಶ ನೀಡಿರುವುದು …

Read More »

ರಾಮೇಶ್ವರಂ ಕೆಫೆ ಬಾಂಬ್‌ ಸ್ಪೋಟ ಪ್ರಕರಣ : ಹುಬ್ಬಳ್ಳಿಯಲ್ಲಿ ಇಬ್ಬರು ಸಹೋದರರು ಸೇರಿ 11 ಜನರು ʻNIAʼ ವಶಕ್ಕೆ

ಹುಬ್ಬಳ್ಳಿ : ರಾಮೇಶ್ವರಂ ಬಾಂಬ್‌ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ ಐಎ ಅಧಿಕಾರಿಗಳು ಹುಬ್ಬಳ್ಳಿಯಲ್ಲಿ ಇಬ್ಬರು ಸಹೋದರು ಸೇರಿದಂತೆ 11 ಜನರನ್ನು ವಶಕ್ಕೆ ಪಡೆದು ವಿಚಾರಣ ನಡೆಸಿದೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಂತ ಶೋಯೇಬ್ ಅಬ್ದುಲ್ ಮಿರ್ಜಾ ಎಂಬಾತನ ನಿವಾಸದ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳಿಕ ಎನ್‌ ಐಎ ಅಧಿಕಾರಿಗಳು ಶೋಯೇಬ್‌ ಮಿರ್ಜಾ ಹಾಗೂ ಆತನ ಸಹೋದರ ಅಜೀದ್‌ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಹುಬ್ಬಳ್ಳಿಯ …

Read More »