Breaking News

ಅವರು BJP ಗೆ ಕರೆಯುತ್ತಿದ್ದಾರೆ, ನಾನು ಹೋಗಲ್ಲ: ಕೇಜ್ರಿವಾಲ್‌

ಹೊಸದಿಲ್ಲಿ: “ನಾನು ಬಿಜೆಪಿಗೆ ಸೇರಬೇಕು ಎಂದು ಆಹ್ವಾನ ನೀಡುತ್ತಿದ್ದಾರೆ. ಆದರೆ ನಾನು ಹೋಗುವುದೇ ಇಲ್ಲ’ ಹೀಗೆಂದು ದಿಲ್ಲಿ ಸಿಎಂ ಮತ್ತು ಆಪ್‌ ಸಂಚಾಲಕ ಅರವಿಂದ ಕೇಜ್ರಿವಾಲ್‌ ಬಿಜೆಪಿಗೆ ಸವಾಲು ಹಾಕಿದ್ದಾರೆ. ಪಕ್ಷದ ಶಾಸಕರನ್ನು ಖರೀದಿ ಮಾಡಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿರುವಂತೆಯೇ ಅವರು ಈ ಮಾತುಗಳನ್ನಾಡಿದ್ದಾರೆ.   ಹೊಸದಿಲ್ಲಿಯ ಕಿರಾರಿ ಎಂಬಲ್ಲಿ ಶಾಲೆಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಕೇಜ್ರಿವಾಲ್‌ ಮಾತನಾಡಿದರು. “ಅವರು (ಬಿಜೆಪಿ) ನನ್ನ ವಿರುದ್ಧ ಏನೂ …

Read More »

ದಿಲ್ಲಿ ಹೋರಾಟಕ್ಕೆ ಕಾಂಗ್ರೆಸ್‌ ತಯಾರಿ

ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಆರೋಪಿಸಿ ದಿಲ್ಲಿಯಲ್ಲಿ ಹೋರಾಟ ಕ್ಕಿಳಿಯಲು ನಿರ್ಧರಿಸಿರುವ ರಾಜ್ಯ ಕಾಂಗ್ರೆಸ್‌ ಫೆ. 7ರಂದು ಸಂಸತ್‌ ಭವನದ ಎದುರು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದೆ. ಜತೆಗೆ, “ನನ್ನ ತೆರಿಗೆ ನನ್ನ ಹಕ್ಕು” ಅಭಿಯಾನಕ್ಕೂ ಬೆಂಬಲ ಸೂಚಿಸಿದೆ.   ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರದ ಕೂಗೆಬ್ಬಿಸಿದ ಸಂಸದ ಡಿ.ಕೆ. ಸುರೇಶ್‌ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ಇದರಿಂದ ಪಕ್ಷಕ್ಕಾಗಿರುವ ಮುಜುಗರವನ್ನೂ ತಪ್ಪಿಸಬೇಕಾದ ಅನಿವಾರ್ಯಕ್ಕೆ ಕಾಂಗ್ರೆಸ್‌ ಸಿಲುಕಿದೆ. ಅಲ್ಲದೆ ಲೋಕ ಸಭೆ …

Read More »

SSLC ಪರೀಕ್ಷೆಗೆ ಈ ಬಾರಿಯೂ 50:30:20 ಸೂತ್ರ

ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಕಾಠಿನ್ಯ ಮಟ್ಟವನ್ನು 50:30:20 ಮಾದರಿಯಲ್ಲಿ ಮುಂದುವರಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ತೀರ್ಮಾನಿಸಿದೆ. ಈ ವರ್ಷ ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆಗಳ ಅವಕಾಶವಿದ್ದು, ಈ ಮೂರು ಪರೀಕ್ಷೆಗಳಲ್ಲಿಯೂ ಇದೇ ಮಾದರಿ ಅನುಸರಣೆಯಾಗಲಿದೆ. ಶೇ. 50ರಷ್ಟು ಸುಲಭ, ಶೇ. 30ರಷ್ಟು ಸಾಧಾರಣ ಮತ್ತು ಶೇ. 20ರಷ್ಟು ಕಠಿನ ಅಥವಾ ಅನ್ವಯಿಕ ಪ್ರಶ್ನೆಗಳು 2023-24ರ ಸಾಲಿನ ಎಸೆಸೆಲ್ಸಿ ಪ್ರಶ್ನೆಪತ್ರಿಕೆಗಳಲ್ಲಿ ಇರಲಿವೆ. ಈ …

Read More »

42 ಸಿಮ್‌ಕಾರ್ಡ್‌ಅಕ್ರಮವಾಗಿ ಖರೀದಿಸಿ ಸಿಕ್ಕಿಬಿದ್ದ ಯುವಕರು

ಕುಟುಂಬದ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ 42 ಸಿಮ್‌ಕಾರ್ಡ್‌ಗಳನ್ನು ಸಂಗ್ರಹಿಸಿಕೊಂಡು ಬೆಂಗಳೂರು ಕಡೆ ಪ್ರಯಾಣಿಸುತ್ತಿದ್ದ ಐವರನ್ನು ಧರ್ಮಸ್ಥಳ ಪೊಲೀಸರು ರವಿವಾರ ಪತ್ತೆಹಚ್ಚಿದ್ದಾರೆ. ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಓರ್ವ ಅಪ್ರಾಪ್ತ ವಯಸ್ಕನಾಗಿದ್ದಾನೆ. ಇಷ್ಟು ಸಂಖ್ಯೆಯ ಸಿಮ್‌ ಪಡೆದುಕೊಂಡಿರುವುದರ ಹಿಂದೆ ದುರುದ್ದೇಶವಿದೆಯೇ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ವೃತ್ತಿಯಲ್ಲಿ ದುಬಾೖಯಲ್ಲಿ ಟ್ರೇಡಿಂಗ್‌ ಕೆಲಸ ಮಾಡುತ್ತಿದ್ದ ಬಿಕಾಂ ಪದವೀಧರ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಅಕ್ಬರ್ ಆಲಿ (24), ಬೆಳ್ತಂಗಡಿಯ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮನ್‌ ಆಗಿದ್ದ …

Read More »

ನನ್ನ ರಾಮನನ್ನು ಬಿಜೆಪಿಗೆ ಬಿಟ್ಟುಕೊಡುವುದಿಲ್ಲ. ಶಶಿ ತರೂರ್

ನವದೆಹಲಿ: ರಾಮ ಮಂದಿರದ ಸಮರ್ಪಣಾ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸದಿರುವ ಬಗ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದರೆ ಕಾಂಗ್ರೆಸ್ ದೇವರನ್ನು ಕೈಬಿಡುತ್ತಿದೆ ಎಂದರ್ಥವಲ್ಲ ಎಂದು ತರೂರ್ ಹೇಳಿದ್ದಾರೆ.   ಇಂಡಿಯಾ ಟುಡೆ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತರೂರ್, “ಬಾಲ್ಯದಿಂದಲೂ ರಾಮನನ್ನು ಪ್ರಾರ್ಥಿಸುತ್ತಿರುವವನಾಗಿ ನಾನು ನನ್ನ ರಾಮನನ್ನು ಬಿಜೆಪಿಗೆ ಒಪ್ಪಿಸಲು ಹೋಗುವುದಿಲ್ಲ. ಬಿಜೆಪಿಯು ರಾಮನ ಮೇಲೆ ಯಾವುದೇ ಹಕ್ಕುಸ್ವಾಮ್ಯವನ್ನು ಹೊಂದಿದೆ ಅಥವಾ ದೈವಿಕತೆಯ ಯಾವುದೇ ಅಭಿವ್ಯಕ್ತಿಯನ್ನು …

Read More »

“ಕಿತ್ತೂರು ಕೋಟೆ’ಯತ್ತ ನಿರ್ಲಕ್ಷ್ಯ

ಕಿತ್ತೂರು: ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ವೀರರಾಣಿ ಚನ್ನಮ್ಮಳ ಕೋಟೆ ಅಭಿವೃದ್ಧಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಕೋಟೆ ಪ್ರವೇಶಿಸುತ್ತಿದ್ದಂತೆ ಸಹಿಸಲಾಗದಷ್ಟು ಕೊಳೆತು ನಾರುವ ಕಸದ ವಾಸನೆ ಮೂಗಿಗೆ ಬಡಿಯುತ್ತದೆ. ಸಾರ್ವಜನಿಕರು, ಅಂಗಡಿಕಾರರು ತಾಜ್ಯ ವಸ್ತುಗಳನ್ನು ಕೋಟೆ ಮುಂಭಾಗ ಎಸೆಯುತ್ತಿರುವ ಪರಿಣಾಮ ಗಬ್ಬೆದ್ದು ನಾರುತ್ತಿದೆ. ಇತಿಹಾಸ ಸಾರುವ ಕಂದಕಗಳು ಕಸ ಕಡ್ಡಿ, ಸಾರಾಯಿ ಬಾಟಲಿಗಳಿಂದ ತುಂಬಿ ತುಳುಕುತ್ತಿವೆ. ನನೆಗುದಿಗೆ ಬಿದ್ದ ಧ್ವನಿ-ಬೆಳಕು: 2011ರಲ್ಲಿ ಕೋಟೆಯ ಆವರಣದಲ್ಲಿ ಎರಡು ಕೋಟಿ ರೂ. …

Read More »

ಚನ್ಮಮ್ಮನ ಕಿತ್ತೂರು ಶಕ್ತಿ ಕೇಂದ್ರವಾಗಲಿ: ಶ್ರೀಬಸವ ಜಯ ಮೃತ್ಯುಂಜಯ ಸ್ವಾಮಿ

ಕಿತ್ತೂರು: ಐತಿಹಾಸಿಕ ಚನ್ಮಮ್ಮನ ಕಿತ್ತೂರು ಕರ್ನಾಟಕದ ಶಕ್ತಿ ಕೇಂದ್ರವಾಗಬೇಕು. ರಾಣಿ ಕಿತ್ತೂರು ಚನ್ನಮ್ಮನ ಲಿಂಗೈಕ್ಯ ಜ್ಯೋತಿಯು ಕೇವಲ ಲಿಂಗಾಯತ ಸಮಾಜದ ಜ್ಯೋತಿಯಾಗಬಾರದು, ಇಡಿ ರಾಜ್ಯದ 7 ಕೋಟಿ ಕನ್ನಡಿಗರ ಜ್ಯೋತಿಯಾಗಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮಿಗಳು ಹೇಳಿದರು.   ವೀರ ಮಹಿಳೆ ಕಿತ್ತೂರ ರಾಣಿ ಚನ್ನಮ್ಮನವರ 195 ನೇ ಪುಣ್ಯಸ್ಮರಣೋತ್ಸವದ ನಿಮಿತ್ತ ರಾಣಿ ಚನ್ನಮ್ಮನವರ ತವರು ಮನೆ ಕಾಕತಿಯಿಂದ ಆಗಮಿಸಿದ ಲಿಂಗೈಕ್ಯ ಜ್ಯೋತಿಯನ್ನು …

Read More »

ಭರವಸೆಯ ಭವಿಷ್ಯಕ್ಕಾಗಿ ಫೆ. 16ರಂದು ದೂರದೃಷ್ಟಿಯ ಬಜೆಟ್ ಮಂಡನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಜೆ ದಿನ ಭಾನುವಾರ ಕೂಡ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವಭಾವಿ ಸಭೆ ನಡೆಸಿದ್ದಾರೆ. ಭರವಸೆಯ ಭವಿಷ್ಯಕ್ಕಾಗಿ ದೂರ ದೃಷ್ಟಿ ಬಜೆಟ್ ಮಂಡಿಸುವುದಾಗಿ ಸಿಎಂ ತಿಳಿಸಿದ್ದಾರೆ. ಫೆಬ್ರವರಿ 16ರಂದು ಮಂಡಿಸುವ ಬಜೆಟ್ ಹಿನ್ನಲೆಯಲ್ಲಿ ಕಳೆದ ಎರಡು ವಾರದಿಂದ ಪೂರ್ವಭಾವಿ ಸಭೆ ನಡೆಸುತ್ತಿರುವ ಸಿಎಂ ಭಾನುವಾರ ಕೂಡ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಪ್ರಗತಿಪರ ಹಾಗೂ ಸದೃಢ ಬಜೆಟ್ ಸಿದ್ದತೆಗೆ ಅಂಕಿ ಅಂಶಗಳ ಆಳಕ್ಕೆ ಇಳಿದಿದ್ದೇನೆ. ಅಧಿಕಾರಿಗಳೊಂದಿಗೆ …

Read More »

ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದ ಪ್ರಲ್ಹಾದ್‌ ಜೋಶಿ

ಹುಬ್ಬಳ್ಳಿ: ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀಮದ್ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳನ್ನು ಭಾನುವಾರ ಭೇಟಿಯಾಗಿ, ಆಶೀರ್ವಾದ ಪಡೆದರು. ಹಾವೇರಿ ಜಿಲ್ಲೆ ಬಂಕಾಪುರದ ಆರಳೆಲೆ ಹಿರೇಮಠದಲ್ಲಿ ಜರುಗಿದ ಲಿಂಗೈಕ್ಯ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಸುವರ್ಣ ಸ್ಮರಣೋತ್ಸವದಲ್ಲಿ ಚರಿತಾಮೃತ ಕೃತಿ ಬಿಡುಗಡೆ ಮಾಡಿ, ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದರು.   ದೇಶದಲ್ಲಿ ಸಾಂಸ್ಕೃತಿಕ ಪುನರುತ್ಥಾನ ಈ ವೇಳೆ ರಂಭಾಪುರಿ ಶ್ರೀಗಳು ಮಾತನಾಡಿ, …

Read More »

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ವರಿಷ್ಠರು ಸಮ್ಮತಿಸಿದ್ದಾರೆ: ಕೆ. ಸುಧಾಕರ್

ಚಿಕ್ಕಬಳ್ಳಾಫುರ: ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಮಾಜಿ ಸಚಿವ ಡಾ.ಕೆ ಸುಧಾಕರ್ (K Sudhakar)​ ಪಕ್ಷದ ಚಟುವಟಿಕೆಗಳಲ್ಲಿ ಅಷ್ಟೊಂದು ಆಕ್ಟಿವ್​ ಆಗಿ ಇರಲ್ಲಿಲ್ಲ. ಆದರೆ ಕೆ. ಸುಧಾಕರ್​ ಇತ್ತೀಚಿಗೆ ಕೇಂದ್ರ ಗೃಹ ಸಚಿವಅಮಿತ್​ ಶಾ(Amit Shah) ಅವರನ್ನು ಭೇಟಿಯಾಗಿದ್ದರು. ದೆಹಲಿ ಪ್ರವಾಸ ಮುಗಿಸಿ ರಾಜ್ಯಕ್ಕೆ ಆಗಮಿಸಿದ ಬಳಿಕ ಸುಧಾಕರ್​ ಚಿಕ್ಕಬಳ್ಳಾಪುರದಲ್ಲಿ (Chikkaballapur) ಮಿಂಚಿನ ಸಂಚಾರ ಆರಂಭಿಸಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನೂ 2-3 ತಿಂಗಳು ಬಾಕಿ ಇದ್ದು, ಈಗಾಗಲೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. …

Read More »