Breaking News

‘ಬೈಡನ್ ಆಹ್ವಾನದ ಮೇರೆಗೆ ಅಮೆರಿಕ ಪ್ರವಾಸ, ಜಾಗತಿಕ ವಿಚಾರಗಳ ಬಗ್ಗೆ ನಮ್ಮ ಚರ್ಚೆ’ ಅಂದ್ರು ಮೋದಿ

Spread the love

ನವದೆಹಲಿ: ಬೈಡೆನ್ ಅಮೆರಿಕ ಅಧ್ಯಕ್ಷರಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಅಮೆರಿಕಾ ಪ್ರವಾಸ ಕೈಗೊಳ್ತಿದ್ದಾರೆ. ಇಂದು ಅಮೆರಿಕಾಕ್ಕೆ ಹೊರಡಲಿರುವ ಮೋದಿ, ಕ್ವಾಡ್‌ ಶೃಂಗ ಸಮ್ಮೇ​ಳನ, ವಿಶ್ವ​ಸಂಸ್ಥೆ 76ನೇ ವಾರ್ಷಿಕ ಸಾಮಾನ್ಯ ಸಭೆ​ಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಜೋ ಬೈಡೆನ್‌ ಜತೆ ದ್ವಿಪಕ್ಷೀಯ ಮಾತು​ಕತೆಯನ್ನೂ ನಡೆಸಲಿದ್ದಾರೆ. ಹೀಗಾಗಿ ಮೋದಿ-ಬೈಡೆನ್ ಭೇಟಿ ಮಹತ್ವ ಪಡೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಮಾಹಿತಿ ನೀಡಿರುವ ಪ್ರಧಾನಿ ಮೋದಿ..ಭೇಟಿ ವೇಳೆ ಗ್ಲೋಬಲ್ ಪಾರ್ಟನರ್​​ಶಿಪ್​​ ಬಗ್ಗೆ ಸಮಗ್ರವಾಗಿ ಅಧ್ಯಕ್ಷ ಜೋ ಬೈಡನ್​ ಜೊತೆ ಚರ್ಚಿಸುತ್ತೇನೆ. ಪರಸ್ಪರ ಆಸಕ್ತಿ ವಿಷಯಗಳ ಜೊತೆಗೆ ಗ್ಲೋಬಲ್ ಸಮಸ್ಯೆ ಮತ್ತು ಪ್ರಾದೇಶಿಕ ವಿಚಾರಗಳ ಬಗ್ಗೆ ವಿನಿಮಯ ಮಾಡಿಕೊಳ್ಳುವುದು.

ಜೊತೆಗೆ ಯುಎಸ್​ಎ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್​ ಅವರ ಭೇಟಿಯನ್ನೂ ಕೂಡ ಎದುರು ನೋಡುತ್ತಿದ್ದೇನೆ. ಹ್ಯಾರಿಸ್ ಜೊತೆ ಜಾಗತಿಕ ವಿಚಾರಗಳು ಮತ್ತು ಎರಡು ದೇಶಗಳ ಪರಸ್ಪರ ಸಹಕಾರದ ಬಗ್ಗೆ ಚರ್ಚೆಯಾಗಲಿದೆ.

ಜೊತೆಗೆ ಅಧ್ಯಕ್ಷ ಜೋ ಬೈಡನ್ ನೇತೃತ್ವದಲ್ಲಿ ನಡೆಯಲಿರುವ ಕ್ವಾಡ್​ ಶೃಂಗಸಭೆಯಲ್ಲೂ ಭಾಗಿಯಾಗಲಿದ್ದೇನೆ. ಇದೇ ಮೊದಲ ಬಾರಿಗೆ ಕ್ವಾಡ್​​ ಲೀಡರ್​ಗಳ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲಿದ್ದೇನೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಶಾಲೆ ಮೇಲೆ ಅದೇನ ಪ್ರೀತಿ..ಅದೇನ ಅಭಿಮಾನ.

Spread the loveದಿನ ಬೆಳಗಾದರೆ ಶತಮಾನೋತ್ಸವ ಆಚರಿಸಿಕೊಳ್ಳಲು ಸನ್ನದ್ಧವಾಗಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳವಿ… ಊರಿನ ಹಿರಿಯರು..ಹಳೆಯ ವಿದ್ಯಾರ್ಥಿಗಳು.. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ