Breaking News

ಹೊಲಕ್ಕಾಗಿ ದಾಯಾದಿ ಜಗಳ ಕೊಲೆಯಲ್ಲಿ ಪರ್ಯಾವಸನ……

Spread the love

ಮೂಡಲಗಿ – ಗೇಣುದ್ದ ಹೊಲಕ್ಕಾಗಿ ದಾಯಾದಿ ಜಗಳ ಕೊಲೆಯಲ್ಲಿ ಪರ್ಯಾವಸನಗೊಂಡಿದೆ.
ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ತಾಲೂಕು ಪಂಚಾಯಿತಿ ಮಾಜಿ ಸದಸ್ಯ  ಚಿಂತಾಮಣಿ ರಾಮಪ್ಪ ಮೇಟಿ ( 55) ಕೊಲೆಯಾದವರು. ಅವರ ಅಣ್ಣನ ಮಗ ಗೋಪಾಲ ಭೀಮಪ್ಪ ಮೇಟಿ – (35) ಆರೋಪಿ.
  ಬೆಳೆ ಸಂರಕ್ಷಣೆಗಾಗಿ ಲೈಸನ್ಸ್ ಪಡೆದಿದ್ದ ಬಂದೂಕಿನಿಂದ ಕೊಲೆಗೈಯಲ್ಲಾಗಿದೆ. ಎರಡು ನಳಿಕೆಯ ಬಂದೂಕಿನಿಂದ ನೇರವಾಗಿ ಎದೆಗೆ ಗುಂಡಿಕ್ಕಲಾಗಿದ್ದು, ಎರಡು ಗುಂಡುಗಳು ಎದೆಯೊಳಗೆ ತೂರಿ ಹೋಗಿದೆ. ಚಿಂತಾಮಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
 ಚಿಕಿತ್ಸೆಗಾಗಿ ಗೋಕಾಕ ಸರಕಾರಿ ಆಸ್ಪತ್ರೆಗೆ ಒಯ್ದಾಗ ಈಗಾಗಲೆ ಮೃತ ಪಟ್ಟಿದ್ದಾನೆಂದು ಘೋಷಿಸಲಾಯಿತು.
 ಚಿಂತಾವಣಿ ರಾಮಪ್ಪ ಅವರ ಮನೆಯ ಹಿಂದಿನ ಹೊಲದಲ್ಲಿ ರೆಂಟಿ ಹೊಡೆಯುವಾಗ  ಘಟನೆ ನಡೆದಿದೆ. ಕೇವಲ ಒಂದು ಟ್ರಾಕ್ಟರ್ ಹಾಯಬಹುದಾದಷ್ಟು ಜಾಗದ ಸಲುವಾಗಿ ವಿವಾದವಿತ್ತು.
 ಆರೋಪಿ ಪರಾರಿಯಾಗಿದ್ದು ಪೊಲೀಸರು ಶೋಧ ನಡೆಸಿದ್ದಾರೆ.

Spread the love

About Laxminews 24x7

Check Also

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಮೂಡಲಗಿಯಲ್ಲಿ ಯಶಸ್ವಿಯಾದ ನೂರು ಮೀಟರ್ ಉದ್ದದ ತಿರಂಗಾ ಯಾತ್ರೆ

Spread the loveಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಮೂಡಲಗಿಯಲ್ಲಿ ಯಶಸ್ವಿಯಾದ ನೂರು ಮೀಟರ್ ಉದ್ದದ ತಿರಂಗಾ ಯಾತ್ರೆ ಸೈನಿಕರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ